ಮತದಾನ ಜಾಗೃತಿಗೆ ಫ್ಲಾಷ್ ಮಾಬ್!
Team Udayavani, Apr 4, 2019, 3:00 AM IST
ಬೆಂಗಳೂರು: ನಗರದ ಜನತೆಗೆ ಮತದಾನ ಜಾಗೃತಿ ಮೂಡಿಸಲು ಬಿಬಿಎಂಪಿ ಫ್ಲಾಷ್ ಮಾಬ್ ಎಂಬ ವಿಭಿನ್ನ ಕಾರ್ಯಕ್ರಮ ರೂಪಿಸಿದೆ.
ಮತದಾನ ಕುರಿತು ಬೀದಿ ನಾಟಕ, ಧ್ಯೇಯ ಗೀತೆ, ಭಿತ್ತಿಪತ್ರದಂತಹ ಸಾಂಪ್ರದಾಯಿಕ ಪ್ರಚಾರ ವಿಧಾನಗಳೊಂದಿಗೆ ಪಾಶ್ಚಿಮಾತ್ಯ ಶೈಲಿಯ ಪ್ರಚಾರದ ಚಟುವಟಿಕೆಗಳನ್ನು ಪಾಲಿಕೆ ನಡೆಸಲಿದ್ದು, ಏ.6 ಮತ್ತು 7ರಂದು ಸಂಜೆ 4ರಿಂದ 7 ಗಂಟೆವರೆಗೆ, ಬಿಎಂಎಸ್ ತಾಂತ್ರಿಕ ವಿದ್ಯಾಲಯದ ಸಹಯೋಗದಲ್ಲಿ ಫ್ಲಾಷ್ ಮಾಬ್ ಹಮ್ಮಿಕೊಳ್ಳಲಾಗಿದೆ.
ಈ ತಿಳಿವಳಿಕೆ ಕಾರ್ಯಕ್ರಮದಲ್ಲಿ ಬಿಎಂಎಸ್ ತಾಂತ್ರಿಕ ವಿದ್ಯಾಲಯದ ನೂರಾರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಚರ್ಚ್ ಸ್ಟ್ರೀಟ್, ಕೋರಮಂಗಲದ ಫೋರಂ ಮಾಲ್ ಹಾಗೂ ಜಯನಗರ 4ನೇ ಬಡಾವಣೆಯಲ್ಲಿರುವ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ವಿದ್ಯಾರ್ಥಿಗಳು ಫ್ಲಾಷ್ ಮಾಬ್ ಅಡಿ ಪ್ರಚಾರದ ಚಟುವಟಿಕೆ ನಡೆಸಲಿದ್ದಾರೆ.
ಏ.12ರಿಂದ 14ವರೆಗೆ ಬಿಎಂಎಸ್ ತಾಂತ್ರಿಕ ವಿದ್ಯಾಲಯದ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ “ಉತ್ಸವ’ದ ಅಂಗವಾಗಿ ಈ ಫ್ಲಾಷ್ ಮಾಬ್ ಹಮ್ಮಿಕೊಳ್ಳಲಾಗಿದೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ ಮೂಡಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ.
ಪ್ರತಿ ವರ್ಷ ಉತ್ಸವದ ಅಂಗವಾಗಿ ವಿವಿಧ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿತ್ತು. ಈ ಬಾರಿ ಚುನಾವಣೆ ಇರುವುದರಿಂದ ಫ್ಲಾಷ್ ಮಾಬ್ ಮೂಲಕ ಜನರಿಗೆ ಮತದಾನ ಅರಿವು ಮೂಡಿಸಲಾಗುತ್ತಿದೆ ಎಂದು ವಿದ್ಯಾಲಯದ ಎನ್‌ಎಸ್‌ಎಸ್ ಯೋಜನಾ ಅಧಿಕಾರಿ ಹಡಗಲಿ ಅಶೋಕ್ “ಉದಯವಾಣಿ’ಗೆ ತಿಳಿಸಿದ್ದಾರೆ.
ಫ್ಲಾಷ್ ಮಾಬ್‌ನಲ್ಲಿ ಏನಿರುತ್ತೆ?: ಇಲ್ಲಿ, ಪ್ರಚಾರ ಗೀತೆ ಹಾಗೂ 2 ದೇಶ ಭಕ್ತಿ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ. ಜತೆಗೆ, ರಾಜ್ಯದ ಚುನಾವಣಾ ಗೀತೆ ಎಂದೇ ಬಿಂಬಿತವಾಗಿರುವ “ಮಾಡಿ ಮಾಡಿ ಮತದಾನ’ ಗೀತೆಗೂ ಹೆಜ್ಜೆ ಹಾಕಲಿದ್ದಾರೆ. ಏ.15ರೊಳಗಾಗಿ ನಗರದಲ್ಲಿರುವ ವಿವಿಧ ಮಾಲ್‌ಗಳಲ್ಲಿ ಫ್ಲಾಷ್ ಮಾಬ್ ನಡೆಸಲು ಪಾಲಿಕೆ ಚಿಂತನೆ ನಡೆಸಿದೆ.
ಫ್ಲಾಷ್ ಮಾಬ್ ಎಂದರೇನು?: ಜನಸಂದಣಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ಜನರು ತಮ್ಮ ಪಾಡಿಗೆ ತಾವು ಚಟುವಟಿಕೆಯಲ್ಲಿ ತೊಡಗಿರುವ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಸಂಗೀತವೊಂದಕ್ಕೆ ಒಬ್ಬ ವ್ಯಕ್ತಿ ನೃತ್ಯ ಮಾಡಲು ಆರಂಭಿಸುತ್ತಾನೆ. ಸ್ವಲ್ಪ ಸಮಯದ ನಂತರ ಮತ್ತೂಬ್ಬ ವ್ಯಕ್ತಿ ನೃತ್ಯ ಮಾಡಲು ಆರಂಭಿಸುತ್ತಾನೆ. ಹೀಗೆ ಒಬ್ಬೊಬ್ಬರಾಗಿ ನೃತ್ಯ ಮಾಡಲು ಆರಂಭಿಸಿ ಒಂದು ತಂಡವಾಗಿ ಬದಲಾಗುವುದೇ ಫ್ಲಾಷ್ ಮಾಬ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.