ಫ್ಲಾಟ್ ಆಸೆ ತೋರಿಸಿ 100 ಕೋಟಿ ವಂಚನೆ
Team Udayavani, Jan 4, 2019, 6:41 AM IST
ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ಫ್ಲಾಟ್ ಕೊಡಿಸುವುದಾಗಿ ಸಾವಿರಾರು ಜನರಿಂದ 100 ಕೋಟಿ ರೂ.ಗಿಂತಲೂ ಹೆಚ್ಚು ಹಣ ಪಡೆದು ವಂಚಿಸಿದ ಮಂಗಳೂರು ಮೂಲದ ಅವಿನಾಶ್ ಪ್ರಭು ಎಂಬಾತನನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ಫ್ಲಾಟ್‌ಕೊಡಿಸುವುದಾಗಿ ಆಸೆ ತೋರಿಸಿ ಹಣ ಸಂಗ್ರಹಿಸಿದ್ದ ಆರೋಪಿ ಸ್ಕೈಲೈನ್ ಕನ್‌ಸ್ಟ್ರಕ್ಷನ್ ಹೌಸಿಂಗ್ ಪ್ರೈ.ಲಿನ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಪ್ರಭು, ಬೆಂಗಳೂರಿನ ವಿವಿಧ ಭಾಗಗಳಲ್ಲಿ 11 “ಕಲ್ಮನೆ ಕಾಫಿ ಔಟ್‌ಲೆಟ್’ಗಳು, ಬೆಂಗಳೂರು, ಮಂಗಳೂರು, ಚೆನೈ, ಕನಕಪುರ ಸೇರಿ ನಗರದ ಹಲವು ಭಾಗಗಳಲ್ಲಿ ಕೋಟ್ಯಂತರ ರೂ. ಮೌಲ್ಯದ ಜಮೀನು ಖರೀದಿಸಿರುವುದು ತನಿಖೆ ವೇಳೆ ಪತ್ತೆಯಾಗಿದೆ.
ಆರೋಪಿ ಅವಿನಾಶ್ ಪ್ರಭು, ಫ್ಲಾಟ್ ನೀಡುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದಾನೆ ಎಂದು ಆರೋಪಿಸಿ ಕ್ರಿಸ್ಟೋಫರ್ ರೀಗಲ್ ಎಂಬುವವರು ದೂರು ನೀಡಿದ್ದರು. ಈ ಕುರಿತು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ವರ್ಗಾವಣೆಯಾದ ಬಳಿಕ ತನಿಖೆ ಚುರುಕುಗೊಳಿಸಿದ ಸಿಸಿಬಿ ಡಿಸಿಪಿ ಗಿರೀಶ್ ನೇತೃತ್ವದ ತಂಡ, ಆರೋಪಿ ಅವಿನಾಶ್ ಪ್ರಭುನನ್ನು ಬಂಧಿಸಿದೆ.
ಜತೆಗೆ, ಆತನ ಬಳಿಯಿದ್ದ ಒಂದು ರೇಂಜ್ ರೋವರ್, ಅಡಿ ಹಾಗೂ ಇನೋವಾ ಕಾರನ್ನು ಜಪ್ತಿ ಮಾಡಿಕೊಂಡಿದೆ. ತಲೆ ಮರೆಸಿಕೊಂಡಿರುವ ಆತನ ಸಹೋದರ ಧೀರಜ್ ಪ್ರಭು ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ನಗರ ಪೊಲೀಸ್ ಆಯುಕ್ತ ಟಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.
28 ಎಕರೆ ಜಮೀನು ಖರೀದಿ: ಆರೋಪಿ ಅವಿನಾಶ್ ಹಾಗೂ ಆತನ ಸಹೋದರ ಕೆ.ನಾರಾಯಣಪುರ ಬಳಿ ಸ್ಕೈಲೈನ್ ಔರಾ, ಹೊರಮಾವುನಲ್ಲಿ ಸ್ಕೈಲೈನ್ ರಿಟ್ರೀಟ್, ಹೆಣ್ಣೂರು ಮುಖ್ಯರಸ್ತೆಯ ಸ್ಕೈಲೈನ್ ಅಕೇಶಿಯಾ, ರೆಸ್ಟ್ ಹೌಸ್ ರಸ್ತೆಯ ಸ್ಕೈಲೈನ್ ಲ್ಲಾ ಮಾರಿಯಾ, ಯಲಹಂಕ ಬಳಿ ಸ್ಕೈಲೈನ್ ವಾಟರ್ ಫ್ರಂಟ್-78 ಮಂಗಳೂರಿನಲ್ಲಿ ಸ್ಕೈಲೈನ್ ಬ್ಲೂಬೇರಿ, ಮತ್ತು ಬೆಸ್ಟ್ ಹೌಸ್ ಹೆಸರುಗಳಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ ಫ್ಲ್ಯಾಟ್ ನೀಡುವುದಾಗಿ ತಿಳಿಸಿ ಇದುವರೆಗೂ 200ಕ್ಕೂ ಅಧಿಕ ಮಂದಿಯಿಂದ 100 ಕೋಟಿ.ರೂಗಳಿಗೂ ಅಧಿಕ ಹಣ ಸಂಗ್ರಹಿಸಿದ್ದಾರೆ.
ಜನರಿಂದ ಸಂಗ್ರಹಿಸಿದ ಹಣದಲ್ಲಿ ಕೆಂಗೇರಿಯಲ್ಲಿ 5 ಎಕರೆ, ಅಲ್ಲಾಳಸಂದ್ರ ಬಳಿ 3 ಎಕರೆ, ಹೆಣ್ಣೂರು ಬಳಿ 3 ಎಕರೆ, ಕನಕಪುರ ಬಳಿ 7 ಎಕರೆ, ಮಂಗಳೂರಿನಲ್ಲಿ 8.5 ಎಕರೆ, ಚೆನ್ನೈನ ನೆಲ್ಸನ್ ಮಾಣಿಕ್ಯಂ ರಸೆಯಲ್ಲಿ ಅರ್ಧ ಎಕರೆ ಸೇರಿದಂತೆ ಬೆಂಗಳೂರು ಹಾಗೂ ಹೊರ ರಾಜ್ಯಗಳಲ್ಲಿ ಆರೋಪಿಯು ಜಮೀನು ಖರೀದಿಸಿದ್ದಾನೆ. ಜತೆಗೆ ಬೆಂಗಳೂರಿನ 11 ಕಡೆ ಇರುವ ಕ್ಮಲನೆ ಕಾಫಿ ಲೇಔಟ್‌ಗಳಲ್ಲಿ ಹಣ ಹೂಡಿಕೆ ಮಾಡಿರುವುದು ತನಿಖೆ ವೇಳೆ ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ
ವಂಚನೆ ಹೇಗೆ?: ಸ್ಕೈಲೈನ್ ಔರಾ ಸೇರಿ ವಿವಿಧ ಕನ್‌ಸ್ಟ್ರಕ್ಷನ್ ಕಂಪನಿಗಳ ಹೆಸರಲ್ಲಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿ ಫ್ಲಾಟ್ ನೀಡುವುದಾಗಿ ಜನರಿಗೆ ಹೇಳುತ್ತಿದ್ದ ಆರೋಪಿತ ಸಹೋದರರು, ಜನರಿಂದ ಫ್ಲಾಟ್‌ಗೆ ನೀಡಬೇಕಾಗಿರುವ ಮೊತ್ತದ ಶೇ.90ರಷ್ಟ ಹಣವನ್ನು ಮುಂಗಡವಾಗಿ ಪಡೆಯುತ್ತಿದ್ದರು. ಅದಕ್ಕೆ ಪ್ರತಿಯಾಗಿ ಅಪಾರ್ಟ್‌ಮೆಂಟ್ ನಿರ್ಮಾಣ ಕಾಮಗಾರಿಯನ್ನು ತೋರಿಸುತ್ತಿದ್ದರು.
ಇದಾದ ಬಳಿಕ ನಿಯಮಗಳನ್ನು ಉಲ್ಲಂ ಸಿ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸಿ ಕಾನೂನು ತೊಡಕುಗಳು ಉಂಟಾಗುವುಂತೆ ನೋಡಿಕೊಳ್ಳುತ್ತಿದ್ದರು. ಬಳಿಕ ಹಣ ನೀಡಿದವರು ಫ್ಲಾಟ್ ನೀಡುವಂತೆ ಕೇಳಿದರೆ, ಕಾನೂನು ತೊಡಕುಗಳ ಬಗ್ಗೆ ಹೇಳಿ ತಪ್ಪಿಸಿಕೊಳ್ಳುತ್ತಿದ್ದರು. ಹಣ ವಾಪಾಸ್ ನೀಡುವಂತೆ ಕೇಳಿದರೂ ನೆಪಗಳನ್ನು ಹೇಳುತ್ತಿದ್ದರು. ಇದೇ ಮಾದರಿಯಲ್ಲಿ ಸಂಗ್ರಹಿಸಿದ ಹಣವನ್ನು ಜಮೀನು ಖರೀದಿಗೆ ತೊಡಗಿಸುತ್ತಿದ್ದರು. ಹಲವು ವರ್ಷಗಳಿಂದ ಇದೇ ಮಾದರಿಯ ವಂಚನೆ ಮಾಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಮೋಸ ಹೋದವರು ದೂರು ನೀಡಬಹುದು: ಆರೋಪಿಗಳ ವಿರುದ್ಧ ಸದ್ಯ ಇಬ್ಬರು ದೂರು ನೀಡಿದ್ದು, ತನಿಖೆ ಮುಂದುವರಿಸಲಾಗಿದೆ. ಆರೋಪಿಗಳು ಇನ್ನೂ ಹಲವರಿಗೆ ವಂಚಿಸಿರುವ ಸಾಧ್ಯತೆಯಿದೆ. ವಂಚನೆಗೊಳಗಾದವರು ಸಿಸಿಬಿಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cold Weather: ಬೀದರ್, ವಿಜಯಪುರ ಗಡಗಡ: 5-6 ಡಿ.ಸೆ.ಗೆ ತಾಪಮಾನ ಇಳಿಕೆ?
Danger Spot-1: ಹೊಸೂರು ಮುಖ್ಯರಸ್ತೆ ಸಮೀಪ ನಡೆದಾಡುವುದೂ ಅಪಾಯಕಾರಿ!
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Aishwarya Gowda ವಿರುದ್ದ ಬಲವಂತದ ಕ್ರಮ ಬೇಡ: ಪೊಲೀಸರಿಗೆ ಕೋರ್ಟ್ ಸೂಚನೆ
MUST WATCH
ಹೊಸ ಸೇರ್ಪಡೆ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
Podcast;ನಾನು ದೇವರಲ್ಲ,ತಪ್ಪು ಮಾಡಿದ್ದೇನೆ: ಪ್ರಧಾನಿ ಹೇಳಿಕೆ ಡ್ಯಾಮೇಜ್ ಕಂಟ್ರೋಲ್ ಎಂದ ಕೈ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.