ಫ್ಲೆಕ್ಸ್ ಅಳವಡಿಕೆ, ರಾಜಮನೆತನಕ್ಕೆ ವಂಚನೆ: ಎಫ್ಐಆರ್ ದಾಖಲು
Team Udayavani, Sep 14, 2017, 3:21 PM IST
ಬೆಂಗಳೂರು: ದಿವಂಗತ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಅವರೊಂದಿಗೆ ಏಳುವರೆ ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿರುವುದಾಗಿ ಹೇಳಿ ಅರಮನೆ ಮೈದಾನದಲ್ಲಿ ಜಾಹೀರಾತು ಪ್ರದರ್ಶನ ಮಾಡುತ್ತಿದ್ದ ಆರೋಪದಲ್ಲಿ ಏಳು ಜನರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು ಅರಮನೆ ಜನರಲ್ ಮ್ಯಾನೇಜರ್ ಪಾಂಡಿಯನ್ ನೀಡಿದ ದೂರು ಆಧರಿಸಿ ಅಶ್ರಫ್ ಅಲಿ, ಮಧು ಆಚಾರ್ಯ,
ಅಬ್ದುಲ್ ರೆಹಮಾನ್, ರಜನಿ.ಸಿ ಭಟ್, ಚಂದ್ರಶೇಖರ್ ಸ್ವಾಮೀಜಿ ಹಾಗೂ ಗಿರೀಶ್ ಕಾಮತ್ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪ್ರಕರಣದ ಮೊದಲನೇ ಆರೋಪಿಯಾಗಿರುವ ಅಶ್ರಫ್ ಅಲಿ, 2014ರ ಫೆ.2ರಂದು ಪ್ರಮೋದಾ ದೇವಿ ಒಡೆಯರ್ ಅವರ ಬಳಿ ಬಂದು ಲೈಸನ್ಸ್ ಅಗ್ರಿಮೆಂಟ್ ತೋರಿಸಿದ್ದರು. ಅದರಲ್ಲಿ, 2012ರ ಜು.18ರಂದು ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮತ್ತು ನನ್ನ ಮಧ್ಯೆ ಒಂದು ಅಗ್ರಿಮೆಂಟ್ ಆಗಿದೆ. ಅರಮನೆ ಮೈದಾನದಲ್ಲಿ ಜಾಹೀರಾತು ಫಲಕಗಳನ್ನು ಅಳವಡಿಸಲು ಅನುಮತಿ ನೀಡಿ
ಒಡೆಯರ್ ಸಹಿ ಮಾಡಿದ್ದಾರೆ. ಅದಕ್ಕಾಗಿ ಏಳುವರೆ ಕೋಟಿ ರೂ. ಪಡೆದಿದ್ದಾರೆ ಎಂದು ಹೇಳಿದ್ದರು. ಅದಕ್ಕೆ ಪ್ರಮೋದಾ ದೇವಿ ಅವರು, ಅಗ್ರಿಮೆಂಟ್‌ನ ಅಸಲು ಪ್ರತಿಗಳನ್ನು ತೋರಿಸುವಂತೆ ಅಶ್ರಫ್ ಅಲಿ ಅವರಲ್ಲಿ ಕೇಳಿದ್ದರು. ಇದಕ್ಕೆ ಅಸಲಿ ದಾಖಲೆ ಒದಗಿಸಲಿಲ್ಲ. ಈ ಬಗ್ಗೆ ಕೋರ್ಟ್‌ನಲ್ಲಿ ಖಾಸಗಿ ಅರ್ಜಿ ಸಲ್ಲಿಕೆಯಾಗಿತ್ತು.
ವಿಚಾರಣೆ ನಡೆಸಿದ ಕೋರ್ಟ್ ಹೈಗ್ರೌಂಡ್ಸ್ ಠಾಣೆ ಪೊಲೀಸರಿಗೆ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.