ಮತ್ತೆ ಪ್ಲಾಸ್ಟಿಕ್‌ ಧ್ವಜಗಳ ಹಾರಾಟ

Team Udayavani, Aug 1, 2018, 11:05 AM IST

blore-2.jpg

ಬೆಂಗಳೂರು: ಪ್ಲಾಸ್ಟಿಕ್‌ ಧ್ವಜಗಳಿಗೆ ದೇಶಾದ್ಯಂತ ನಿಷೇಧ ಹೇರಿ ವರ್ಷಗಳೇ ಕಳೆದಿವೆ. ಇದರ ಜತೆಗೆ ರಾಜ್ಯದಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಮೇಲೆ ನಿರ್ಬಂಧವೂ ಜಾರಿಯಲ್ಲಿದೆ. ಇಷ್ಟಾಗ್ಯೂ, ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿದ್ದಂತೆ ಪ್ಲಾಸ್ಟಿಕ್‌ ಧ್ವಜಗಳ ಹಾವಳಿ ಮತ್ತೆ ವಕ್ಕರಿಸತೊಡಗಿದೆ.

ನಗರದ ಬಹುತೇಕ ಮಾರುಕಟ್ಟೆ, ಹೋಲ್‌ಸೇಲ್‌ ಹಾಗೂ ರಿಟೈಲ್‌ ಮಳಿಗೆಗಳಲ್ಲಿ, ಮಾಲ್‌ಗ‌ಳಲ್ಲಿ, ರಸ್ತೆ ಬದಿಯ ಅಂಗಡಿಗಳಲ್ಲಿ ಮಾರಾಟ ಆರಂಭವಾಗಿದೆ. ಮುಖ್ಯವಾಗಿ ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ರಸ್ತೆ ಬದಿಯ ವ್ಯಾಪಾರಿಗಳು ಗೊಂಚಲು ಗೊಂಚಲಾಗಿ ಪ್ಲಾಸ್ಟಿಕ್‌ ಧ್ವಜಗಳನ್ನು ಹಿಡಿದುಕೊಂಡು ಮಾರಾಟ ಮಾಡಲಾರಂಭಿಸಿದ್ದಾರೆ. ಇದಕ್ಕೆ ಆರಂಭದಲ್ಲೇ ಬಿಬಿಎಂಪಿ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕಡಿವಾಣ ಹಾಕಬೇಕಾಗಿದೆ.

ಪ್ಲಾಸ್ಟಿಕ್‌ ಧ್ವಜಗಳನ್ನು ಗುಜರಾತ್‌, ಆಂಧ್ರಪ್ರದೇಶ, ತಮಿಳುನಾಡಿನಿಂದ ನಗರದ ರೀಟೇಲ್‌ ಹಾಗೂ ಹೋಲ್‌ಸೇಲ್‌ ವ್ಯಾಪಾರಿಗಳು ತರಿಸಿಕೊಳ್ಳುತ್ತಾರೆ. ರಾಷ್ಟ್ರ ಪ್ರೇಮದ ಹೆಸರಿನಲ್ಲಿ ಅನೇಕರು ಪುಟ್ಬಾತ್‌ಗಳಲ್ಲಿ ಸಿಗುವ ಕೇಸರಿ, ಬಿಳಿ, ಹಸಿರು ಬಣ್ಣದ ಪ್ಲಾಸ್ಟಿಕ್‌ ಧ್ವಜವನ್ನು ಕೊಂಡುಕೊಳ್ಳುತ್ತಾರೆ. ಅದನ್ನು ತಮ್ಮ ವಾಹನಗಳ ಮೇಲೆ ಹಾಕಿಕೊಂಡು ತಿರುಗಾಡುವುದು, ಮನೆಗಳ ಮುಂಭಾಗದಲ್ಲಿ ಹಾಕುವುದು.ಅಲಂಕಾರಿಕ ವಸ್ತುಗಳಾಗಿ ಬಳಸುವುದು ಜತೆಗೆ ಕೆಲವರು ಕೈಗಳಲ್ಲಿ ಹಿಡಿದು ಮೆರವಣಿಗೆಯನ್ನೂ ಹೋಗುತ್ತಾರೆ. ಈ ಧ್ವಜಕ್ಕೆ ಕಳಪೆ ದರ್ಜೆಯ ಪ್ಲಾಸ್ಟಿಕ್‌ ಬಳಸುವುದರಿಂದ ಅದರ ಆಯಸ್ಸು ಒಂದು ದಿನ ಮಾತ್ರ. ಬೆಳಗ್ಗೆ ಕೊಂಡಾಗ ದೇಶ ಪ್ರೇಮ ಹಾಗೂ ಗೌರವದ
ಸಂಕೇತವಾಗಿದ್ದ ಈ ಪ್ಲಾಸ್ಟಿಕ್‌ ಧ್ವಜಗಳು ಸಂಜೆಯಾಗುತ್ತಿದ್ದಂತೆ ರಸ್ತೆ ಬದಿ, ಕಸದ ಬುಟ್ಟಿಗಳಲ್ಲಿ, ಚರಂಡಿಗಳಲ್ಲಿ ಕಾಣುತ್ತವೆ. ಅದರಲ್ಲೂ ನಗರದ ಮಾಣಿಕ್‌ ಷಾ ಪರೇಡ್‌ ಸೇರಿದಂತೆ ವಿವಿಧೆಡೆಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ನಂತರ ಆ ಪ್ರದೇಶಗಳ ಸುತ್ತಮುತ್ತ ರಾಶಿಗಟ್ಟಲೆ ಪ್ಲಾಸ್ಟಿಕ್‌ ಧ್ವಜಗಳು ಬಿದ್ದಿರುತ್ತವೆ.

ದಂಡ ಹಾಕಲಾಗುವುದು: ಬಿಬಿಎಂಪಿ ಪ್ಲಾಸ್ಟಿಕ್‌ ನಿಗ್ರಹ ಕಾರ್ಯಾಚರಣೆಯಲ್ಲಿ ಪ್ಲಾಸ್ಟಿಕ್‌ ಧ್ವಜವೂ ಸೇರಿದೆ. ರಸ್ತೆ ಬದಿ ಹಾಗೂ ಜಂಕ್ಷನ್‌ಗಳಲ್ಲಿ ಮಾರಾಟ ಮಾಡುವವರನ್ನು ಹಿಡಿದು ಅವರ ಮಾಲೀಕರಿಗೆ ದಂಡ ಹಾಕಲಾಗುವುದು. ಅಥವಾ ಆ ವ್ಯಾಪಾರಿಯ ವಹಿ ವಾಟಿನ ಆಧಾರದ ಮೇಲೆ ನೂರು ಅಥವಾ
ಸಾವಿರ ರೂ ಪಾಯಿ ದಂಡ ಹಾಕಿ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗುವುದು ಎಂದು ಬಿಬಿಎಂಪಿ ಜಂಟಿ ಆಯುಕ್ತ ಸಫ‌ìರಾಜ್‌ ಖಾನ್‌ ತಿಳಿಸಿದ್ದಾರೆ. ರಾಷ್ಟ್ರೀಯ ಹಬ್ಬಗಳು ಹತ್ತಿರ ಬರುತ್ತಿದಂತೆ ಮಳಿಗೆಗಳಲ್ಲಿ ಪ್ಲಾಸ್ಟಿಕ್‌ ಧ್ವಜ ಹಾವಳಿ ಹೆಚ್ಚಾಗುತ್ತದೆ. ಧ್ವಜಕ್ಕೆಂದೇ ಪ್ರತ್ಯೇಕವಾಗಿ ಯಾವ ಕಾನೂನು
ಸಿದ್ಧಪಡಿಸಿಲ್ಲ. ಪ್ಲಾಸ್ಟಿಕ್‌ ದಾಳಿಯಲ್ಲಿಯೇ ಅದನ್ನು ವಶಪಡಿಸಿಕೊಳ್ಳುತ್ತೇವೆ. ಬೀದಿ ಬದಿಯ ವ್ಯಾಪಾರಿಗಳ ಸಭೆಯಲ್ಲಿ ಧ್ವಜವನ್ನು ಮಾರಾಟ ಮಾಡದಂತೆ ಸೂಚನೆ ನೀಡಲಾಗುತ್ತದೆ. ಸಾರ್ವಜನಿಕರಿಗೆ ಕೊಂಡುಕೊಳ್ಳದಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಸದ್ಯದಲ್ಲೇ ಹಾಕಿಕೊಳ್ಳುತ್ತೇವೆ ಎಂದೂ ಅವರು ಹೇಳಿದ್ದಾರೆ.

ಜಂಕ್ಷನ್‌ಗಳಲ್ಲಿ ಪ್ಲಾಸ್ಟಿಕ್‌ ಧ್ವಜ ಮಾರಾಟ ಮಾಡುವವರು,
ಕೊಳ್ಳುವವರನ್ನು ಎಚ್ಚರಿಸಬೇಕು. ಯಾವುದೇ ಸಮಾರಂಭದಲ್ಲಿ ಬಳಸುತ್ತಿದ್ದರೇ ನೇರವಾಗಿ ವಶಕ್ಕೆ
ಪಡೆಯಬೇಕು. ಸಾರ್ವಜನಿಕರು ಪ್ಲಾಸ್ಟಿಕ್‌ ಧ್ವಜ ತಿರಸ್ಕರಿಸಬೇಕಿದೆ.
   ಯಲ್ಲಪ್ಪ ರೆಡ್ಡಿ, ಪರಿಸರವಾದಿ

10 ರೂ. ಒಂದು ಬಾವುಟ ಮಾರಾಟ ಮಾಡಿದರೆ ನಮಗೆ 5
ರೂ. ಲಾಭ ಬರುತ್ತದೆ. ಸಿಗ್ನಲ್‌ಗಳಲ್ಲಿಯೇ ಮಾರಾಟ ಜೋರಿರುತ್ತದೆ. ಈ ಬಾರಿ ಪ್ಲಾಸ್ಟಿಕ್‌ ಧ್ವಜದ ಜತೆಗೆ
ಪಾಲಿಸ್ಟರ್‌ ಬಟ್ಟೆಯ ಹಾಗೂ ಲೋಹದ ಚಿಕ್ಕ ಚಿಕ್ಕ ಲಾಂಛನಗಳನ್ನು ಮಾರಾಟ ಮಾಡುತ್ತಿದ್ದೇವೆ.
    ಬಸವರಾಜ. ವ್ಯಾಪಾರಿ 

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.