ಅಧಿಕ ಭಾರದ ವಾಹನಗಳಿಗಿಲ್ಲ ಕಡಿವಾಣ
Team Udayavani, Feb 19, 2022, 12:46 PM IST
ಬೆಂಗಳೂರು: ನಿಗದಿಗಿಂತ ಅಧಿಕ ಭಾರದ ವಾಹನಗಳ ನಿರಂತರ ಸಂಚಾರ ಕೂಡ ರಸ್ತೆಗಳು ಮತ್ತು ಎತ್ತರಿಸಿದ ರಸ್ತೆಗಳು ಹಾಳಾಗಲುಕಾರಣವಾಗುತ್ತವೆ. ಆದರೆ, ಹೀಗೆ ಅತಿ ಭಾರ ಹೊತ್ತೂಯ್ಯುವ ವಾಹನಗಳನ್ನು ನಿಯಂತ್ರಿಸುವ ತಂತ್ರಜ್ಞಾನದ ನಮ್ಮಲ್ಲಿ ಇಲ್ಲ. ಇದ್ದರೂ ಅದನ್ನು ಬಳಸಿಕೊಳ್ಳುವ ಇಚ್ಛಾಶಕ್ತಿ ಇಲ್ಲ!
ಮ್ಯಾನ್ಯುವಲ್ ಆಗಿ ಸಾರಿಗೆ ಇಲಾಖೆಯು ಆಗಾಗ್ಗೆ ನಿಗದಿಗಿಂತ ಅತಿ ಭಾರ ಹೊತ್ತೂಯ್ಯುವ ವಾಹನಗಳವಿರುದ್ಧ ಕಾರ್ಯಾಚರಣೆ ನಡೆಸುತ್ತದೆ.ಆದರೆ, ನಿರಂತರವಾಗಿ ಈ ಮಾದರಿಯವಾಹನಗಳ ಮೇಲೆ ಕಣ್ಗಾವಲಿಡುವ ಯಾವುದೇ ತಂತ್ರಜ್ಞಾನ ಇಲ್ಲ. ಟೋಲ್‌ಗಳಲ್ಲಿ ಇಂತಹ ವ್ಯವಸ್ಥೆ ಇದ್ದರೂ, ಅದರ ಬಳಕೆ ಆಗುತ್ತಿಲ್ಲ. ಹಾಗಾಗಿ, ರಾಜಾರೋಷವಾಗಿ ಕಾರ್ಯಾಚರಣೆ ಮಾಡುತ್ತವೆ. ಟನ್‌ಗಟ್ಟಲೆ ಹೆಚ್ಚುವರಿ ಭಾರ ಹೊತ್ತು ಸಂಚರಿಸುತ್ತವೆ.
ಇದು ರಸ್ತೆಗಳು ಅದರಲ್ಲೂ ಫ್ಲೈಓವರ್‌ಗಳ ಮೇಲೆ ಒತ್ತಡ ಹೆಚ್ಚಲು ಕಾರಣವಾಗುತ್ತವೆ. ಫ್ಲೈಓವರ್ ಪ್ರವೇಶಮಾಡುವಾಗಲೇ ವೇಯಿಂಗ್ ಬ್ರಿಡ್ಜ್ ಅಥವಾ ತೂಕವನ್ನುಸೂಚಿಸುವ ಮಾಪನ ವ್ಯವಸ್ಥೆಕಲ್ಪಿಸಬೇಕು. ಒಂದು ವೇಳೆನಿಗದಿಗಿಂತ ಹೆಚ್ಚಿನ ತೂಕದವಾಹನಗಳು ಆ ವೇಯಿಂಗ್ ಬ್ರಿಡ್ಜ್ ಮೇಲೆ ಬರುತ್ತಿದ್ದಂತೆ ಎಚ್ಚರಿಕೆ ಗಂಟೆ ಅಥವಾ ಕೆಂಪು ದೀಪ ಹೊತ್ತುವಂತಿರಬೇಕು.
ಇದರ ನಿರ್ವಹಣೆಗಾಗಿಯೇ ಒಬ್ಬ ಸಿಬ್ಬಂದಿಯನ್ನು ಅಲ್ಲಿ ನಿಯೋಜಿಸಬೇಕು. ಇದು ನಗರದ ಪ್ರವೇಶದ್ವಾರಗಳಿಗೆ ಸಂಪರ್ಕ ಕಲ್ಪಿಸುವ ಎಲ್ಲ ಎತ್ತರಿಸಿದರಸ್ತೆಗಳಲ್ಲಿ ಅಳವಡಿಸುವ ಅವಶ್ಯಕತೆ ಇದೆ ಎಂದುಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊ.ಚಂದ್ರಕಿಶನ್ ಅಭಿಪ್ರಾಯಪಡುತ್ತಾರೆ.
“ನಗರದ ಒಳಗಡೆ ಈ ಅತಿ ಭಾರದ ವಾಹನಗಳಸಂಚಾರವನ್ನು ಸಾಮಾನ್ಯವಾಗಿ ನಿರ್ಬಂಧಿಸಲಾಗಿರುತ್ತದೆ. ಆದರೆ, ಹೊರವಲಯಗಳಲ್ಲಿ ಸಂಪರ್ಕಕಲ್ಪಿಸುವ ಸೇತುವೆಗಳನ್ನು ಪ್ರವೇಶಿಸುವಾಗ ಇವುಗಳಅವಶ್ಯಕತೆ ಇದೆ. ಆರಂಭದಲ್ಲಿ ಸಂಚಾರದಟ್ಟಣೆಮತ್ತಿತರ ಕಾರಣಗಳಿಂದ ಕಿರಿಕಿರಿ ಅನಿಸಬಹುದು.ಆದರೆ, ರಸ್ತೆಗಳ ಬಾಳಿಕೆ ಮತ್ತು ಗುಣಮಟ್ಟ ಕಾಯ್ದುಕೊಳ್ಳಲು ಇದರ ಅಗತ್ಯವಿದೆ. ಸುಧಾರಿತತಂತ್ರಜ್ಞಾನಗಳಿಂದ ಕ್ಷಣಾರ್ಧದಲ್ಲೇ ಪ್ರತಿ ಸರಕುವಾಹನಗಳ ತೂಕ ಅಳೆಯಬಹುದಾಗಿದೆ’ ಎಂದು ಅವರು ಸ್ಪಷ್ಟಪಡಿಸುತ್ತಾರೆ.
ತಂತ್ರಜ್ಞಾನ ಬಳಕೆಯಾಗಲಿ; ಸಾರಿಗೆ ಇಲಾಖೆ: ಮ್ಯಾನ್ಯುವಲ್ ಆಗಿ ಪ್ರತಿಯೊಂದು ವಾಹನಗಳಮೇಲೆ ನಿಗಾ ಇಡುವುದು ಅಸಾಧ್ಯ. ಇದೇಕಾರಣಕ್ಕೆ ನಗರದ ಹೊರ ವಲಯಗಳಲ್ಲಿರುವ ಟೋಲ್‌ಗೇಟ್‌ಗಳಲ್ಲಿ “ವೇ ಇನ್ ಮೋಷನ್’ (WIM) ಯಂತ್ರಗಳನ್ನು ಅಳವಡಿಸಬೇಕು ಎಂಬ ನಿರ್ದೇಶನ ಇದೆ. ಇವುಗಳ ಅಳವಡಿಕೆ ಕೆಲವು ಕಡೆ ಆಗಿದೆ; ಇನ್ನು ಹಲವೆಡೆ ಆಗಿಲ್ಲ. ಈಗಾಗಲೇ ಯಂತ್ರಗಳನ್ನು ಅಳವಡಿಸಿದ್ದರೂ ಅಧಿಕ ಭಾರದ ವಾಹನಗಳ ತೂಕ ಮಾಡಲಾಗುತ್ತಿಲ್ಲ. ಒಂದು ವೇಳೆ ಈ ನಿಯಮ ಪಾಲನೆ ವ್ಯವಸ್ಥಿತವಾಗಿಆದರೆ, ರಸ್ತೆಗಳು ಹಾಳಾಗದಂತೆ ತಡೆಯಬಹುದು ಎಂದು ಸಾರಿಗೆ ಇಲಾಖೆ ಹೆಚ್ಚುವರಿ ಆಯುಕ್ತ(ಕಾರ್ಯಾಚರಣೆ) ನರೇಂದ್ರ ಹೋಳ್ಕರ್ ತಿಳಿಸುತ್ತಾರೆ.
“ಪ್ರತಿ ರಸ್ತೆಗಳ ಮೇಲೆ ಎಷ್ಟು ಭಾರ ಹೊತ್ತ ವಾಹನಗಳು ಸಂಚರಿಸಬೇಕು ಎಂಬುದನ್ನು ಆಯಾ ರಸ್ತೆಗಳ ಆರಂಭದಲ್ಲೇ ಫಲಕಗಳನ್ನು ಅಳವಡಿಸಲಾಗಿರುತ್ತದೆ. ಅದನ್ನು ಆಧರಿಸಿ ಸಾರಿಗೆ ಇಲಾಖೆಯು ಅಧಿಕ ಭಾರದ ವಾಹನಗಳ ವಿರುದ್ಧ ಕಾರ್ಯಾಚರಣೆ ಮಾಡುತ್ತದೆ. ಪ್ರತಿ ವರ್ಷ ಸರಾಸರಿ 2,500-3,000 ವಾಹನಗಳ ವಿರುದ್ಧ ಪ್ರಕರಣಗಳು ದಾಖಲಾಗುತ್ತವೆ’ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಏನಾಗುತ್ತೆ? :
ಒಂದು ವೇಳೆ ಅಧಿಕ ಭಾರದ ವಾಹನಗಳು ನಿರಂತರವಾಗಿ ಫ್ಲೈಓವರ್‌ಗಳು ಅಥವಾ ರಸ್ತೆಗಳ ಮೇಲೆ ಸಂಚರಿಸುವುದರಿಂದ ಅವಧಿಗಿಂತ ಮೊದಲೇರಸ್ತೆಗಳು ಹಾಳಾಗುತ್ತವೆ. ಗುಂಡಿ ಬೀಳುವುದು, ಬಿರುಕು ಬಿಡಲುಕಾರಣವಾಗುತ್ತವೆ. ಇನ್ನು ಫ್ಲೈಓವರ್‌ಗಳಲ್ಲಿ ಕೇಬಲ್‌ಗಳು ಡ್ಯಾಮೇಜ್‌ಆಗುತ್ತವೆ. ಕಾಂಕ್ರೀಟ್ ಹಾಳಾಗ ಬಹುದು. ತುಮಕೂರು ರಸ್ತೆಯ ಪೀಣ್ಯಬಳಿಯ ಫ್ಲೈಓವರ್ ಬಾಳಿಕೆ 60 ರಿಂದ 100 ವರ್ಷ ಇತ್ತು. ಆದರೆ, 12 ವರ್ಷಕ್ಕೇ ಅದು ಹಾಳಾಗಿದೆ. ಇದಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.
–ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.