ಬೀದಿ ಬದಿ ವ್ಯಾಪಾರಿಗಳಿಗೆ ಆಹಾರ ಕಿಟ್
Team Udayavani, Jun 11, 2021, 2:09 PM IST
ಚಂದಾಪುರ: ಕೊರೊನಾ ಸಂಕಷ್ಟಕ್ಕೆ ಬೀದಿಬದಿವ್ಯಾಪಾರಿಗಳು ಹಾಗೂ ಗಾರ್ಮೆಂಟ್ಸ ಕಾರ್ಮಿಕರು ಹೆಚ್ಚು ಸಂಕಷ್ಟಕ್ಕೆ ಒಳಗಾಗಿದ್ದಾರೆಅವರು ಹಸಿವಿನಿಂದ ಬಳಲಬಾರದು ಎಂದುಆಹಾರ ಕಿಟ್ ವಿತರಣೆ ಮಾಡಲಾಗುತ್ತಿದೆಎಂದು ಶಾಸಕ ಎಂ.ಕೃಷ್ಣಪ್ಪ ಹೇಳಿದರು.
ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲ್‌ವೃತ್ತದಲ್ಲಿ ಮಾಜಿ ಬಿಬಿಎಂಪಿ ಸದಸ್ಯಶ್ರೀನಿವಾಸ್ ರೆಡ್ಡಿ ಸಹಕಾರದೊಂದಿಗೆ ಹಮ್ಮಿಕೊಂಡಿದ ಬೀದಿಬದಿ ವ್ಯಾಪಾರಿಗಳಿಗೆಹಾಗೂ ಗಾರ್ಮೆಂಟ್ಸ್ ಕಾರ್ಮಿಕರಿಗೆತರಕಾರಿ ಹಾಗೂ ಆಹಾರ ಕಿಟ್ ವಿತರಣೆಗೆಚಾಲನೆ ನೀಡಿ ಮಾತನಾಡಿದರು.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಪರಪ್ಪನ ಅಗ್ರಹಾರ, ನಾಗನಾಥಪುರದಹಾಗೂ ಕೂಡ್ಲು ಭಾಗದಲ್ಲಿ ಗಾರ್ಮೆಂಟ್ಸ…ಹೆಚ್ಚಾಗಿದ್ದು ಈ ಭಾಗದಲ್ಲಿ ಮಹಿಳಾ ಕಾರ್ಮಿಕರು ಹೆಚ್ಚಾಗಿದ್ದಾರೆ.
ಬೀದಿ ಬದಿ ವ್ಯಾಪಾರಿಗಳು ಹೆಚ್ಚಾಗಿದ್ದು ಬಡತನ ರೇಖೆಗಿಂತ ಕೆಳಗೆಸಾಕಷ್ಟು ಕುಟುಂಬಗಳು ಇವೆ. ಇಂಥಕುಟುಂಬಗಳನ್ನು ಗುರುತಿಸಿ ಅವರಿಗೆಶ್ರೀನಿವಾಸ್ ರೆಡ್ಡಿ ಅವರು ತರಕಾರಿ ಕಿಟ್‌ಹಾಗೂ ಆಹಾರ ಪದಾರ್ಥಗಳ ಕಿಟ್ ವಿತರಣೆಮಾಡುತ್ತಿದ್ದಾರೆ ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಿಂಗಸಂದ್ರ ವಾರ್ಡಿನ ಬಿಬಿಎಂಪಿ ಮಾಜಿಸದಸ್ಯ ಶ್ರೀನಿವಾಸ್ ರೆಡ್ಡಿ ಮಾತನಾಡಿ, ನಮ್ಮಬೆಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರವುಗ್ರಾಮೀಣ ಪ್ರದೇಶಗಳಿಂದ ಕೂಡಿದ್ದುನೂರಹತ್ತು ವಿಲೇಜ್ ವ್ಯಾಪ್ತಿಗೆ ಬರುತ್ತದೆಇಲ್ಲಿ ನಗರ ಪ್ರದೇಶಗಳಿಗಿಂತ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದ್ದು ಬಹುತೇಕ ವಲಸೆಕಾರ್ಮಿಕರು ಹಾಗೂ ಬಡವರು ಹೆಚ್ಚಿನಪ್ರಮಾಣದಲ್ಲಿ ಇದ್ದಾರೆ ಆದ್ದರಿಂದ ಆಹಾರ ,ತರಕಾರಿ ಕಿಟ್ ಹಾಗೂ ಪ್ರತಿದಿನ ಊಟದಪ್ಯಾಕೆಟ್ ನೀಡುವ ಮೂಲಕ ನಮ್ಮಕ್ಷೇತ್ರದಲ್ಲಿ ಹಸಿವು ಮುಕ್ತ ವಾರ್ಡ್ ಮಾಡುವುದೇ ನಮ್ಮ ಗುರಿಯಾಗಿದೆ ಎಂದರು.
ಕೋನಪ್ಪ ಅಗ್ರಹಾರ ಜಿಪಂ ಮಾಜಿ ಸದಸ್ಯೆರಾಜೇಶ್ವರಿ, ಬಿಜೆಪಿ ಮುಖಂಡರಾದ ಎಚ್.ವಿ.ಶ್ರೀನಿವಾಸ್, ಸಿಂಗಸಂದ್ರ ವಾರ್ಡಿನ ಬಿಜೆಪಿಯುವ ಮುಖಂಡ ಪರಪ್ಪನ ಅಗ್ರಹಾರದಅಂಬರೀಶ್, ಶ್ರೀನಿವಾಸ್ ಮೂರ್ತಿ,ನಾಗನಾಥಪುರ ಮುನಿರಾಜ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.