ಸರಳ ವಿಮರ್ಶೆಗೆ ‘ಮಾಸ್ತಿಯೇ ಮಾದರಿ’
Team Udayavani, Jun 26, 2017, 11:25 AM IST
ಬೆಂಗಳೂರು: ವಿಮರ್ಶೆಗಳು ಸಂಕೀರ್ಣತೆಯಿಂದ ಸರಳೀಕರಣದತ್ತ ಮುಖಮಾಡುವ ಅವಶ್ಯಕತೆ ಇದೆ ಎಂದು ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜು ತಿಳಿಸಿದರು. ನಗರದ ಹೋಟೆಲ್ ವುಡ್‌ಲ್ಯಾಂಡ್‌ನಲ್ಲಿ ಭಾನುವಾರ ಡಾ.ಮಾಸ್ತಿ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ “ಮಾಸ್ತಿ ಪ್ರಶಸ್ತಿ’ ಸ್ವೀಕರಿಸಿ ಅವರು ಮಾತನಾಡಿದರು.
ನಾನೂ ಸೇರಿದಂತೆ ಬಹುತೇಕ ಸಾಹಿತಿಗಳ ವಿಮರ್ಶೆಗಳು ಸಂಕೀರ್ಣವಾಗಿರುತ್ತವೆ. ಇದರಿಂದ ಅವು ಜನಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಹಾಗಾಗಿ, ಸಾಧ್ಯವಾದಷ್ಟು ಸರಳೀಕೃತವಾಗಿ ವಿಮರ್ಶೆ ಬರೆಯುವುದನ್ನು ರೂಢಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮಗೆ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರ ವಿಮರ್ಶೆ ಮಾದರಿ ಎಂದರು.
ಮಾಸ್ತಿ ಮಾಸ್ಟರ್ ಫಿಗರ್: ಸಾಹಿತಿ ಡಾ.ಟಿ.ವಿ. ವೆಂಕಟಾಚಲ ಶಾಸಿ ಮಾತನಾಡಿ, ಮಾಸ್ತಿ ಅವರು ಉತ್ತಮ ಸಣ್ಣಕಥೆಗಾರ, ಕವಿ, ಕಾಂದಂಬರಿಕಾರ ಮತ್ತು ವಿಮರ್ಶಕ ಎನ್ನುವುದಕ್ಕಿಂತ ಅವರೊಬ್ಬ ಶ್ರೇಷ್ಠ ವ್ಯಕ್ತಿ ಎನ್ನುವುದು ಸೂಕ್ತ. ಸಾಹಿತ್ಯ ಕ್ಷೇತ್ರದವರಿಗೆಲ್ಲಾ ಮಾಸ್ತಿ “ಮಾಸ್ಟರ್ ಫಿಗರ್’ ಎಂದು ಶ್ಲಾ ಸಿದರು.
ಪ್ರೊ.ಜಿ.ಎಚ್. ನಾಯಕ ಮಾತನಾಡಿ, ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮೂವರಾದ ಕುವೆಂಪು, ದಾ.ರಾ. ಬೇಂದ್ರೆ ಮತ್ತು ಶಿವರಾಮ ಕಾರಂತ ಅವರಿಗಿಂತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಿರಿಯರು. ಕುವೆಂಪು ಅವರಿಗೆ 1958ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿದರೆ, ಮಾಸ್ತಿ ಅವರಿಗೆ 1983ರಲ್ಲಿ ಘೋಷಿತವಾಯಿತು.
ಮಾಸ್ತಿರವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಕಿಸಿಕೊಟ್ಟ ಚಿಕ್ಕವೀರ ರಾಜೇಂದ್ರ ಕಾದಂಬರಿ 1956ರಲ್ಲಿ ರಚನೆಯಾಗಿತ್ತು. ಹೀಗಾಗಿ, ಕುವೆಂಪು ನಂತರ ಮಾಸ್ತಿ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು. ಆದರೆ, ಮಾಸ್ತಿಯವರಿಗೆ ಏಕೆ ಬೇಂದ್ರೆ ಮತ್ತು ಕಾರಂತರ ನಂತರ ಜ್ಞಾನಪೀಠ ನೀಡಲಾಯಿತು? ಎಂಬುದು ಈಗಲೂ ನನ್ನನ್ನು ಕಾಡುತ್ತದೆ ಎಂದರು.
ಪ್ರೊ.ಅ.ರಾ. ಮಿತ್ರ, ನೀಳಾದೇವಿ ಅವರಿಗೆ ಮಾಸ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕರ್ಕಿ ಕೃಷ್ಣಮೂರ್ತಿ ಅವರಿಗೆ “ಮಾಸ್ತಿ ಕಥಾ ಪುರಸ್ಕಾರ’, ಡಾ.ಬಾಲಾಸಾಹೇಬ ಲೋಕಾಪುರ ಅವರಿಗೆ “ಮಾಸ್ತಿ ಕಾದಂಬರಿ ಪುರಸ್ಕಾರ’ ಹಾಗೂ ಚಂದ್ರ ಪುಸ್ತಕ ಮತ್ತು ಕಣ್ವ ಪ್ರಕಾಶನ ಸಂಸ್ಥೆಗಳಿಗೆ “ಮಾಸ್ತಿ ಪುರಸ್ಕಾರ’ ನೀಡಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ, ನ್ಯಾಷನಲ್ ಕಾಲೇಜು ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಎ.ಎಚ್. ರಾಮರಾವ್ ಹಾಗೂ ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥನ್ ಉಪಸ್ಥಿತರಿದ್ದರು.
ಜ್ಞಾನಪೀಠ ಮೊದಲು ಯಾರಿಗೆ ಸಿಗಬೇಕಿತ್ತು?: ಪ್ರೊ.ಜಿ.ಎಚ್. ನಾಯಕ ಮಾತನಾಡಿ, ಕನ್ನಡದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಮೂವರಾದ ಕುವೆಂಪು, ದಾ.ರಾ. ಬೇಂದ್ರೆ ಮತ್ತು ಶಿವರಾಮ ಕಾರಂತ ಅವರಿಗಿಂತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹಿರಿಯರು. ಕುವೆಂಪು ಅವರಿಗೆ 1958ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿದರೆ, ಮಾಸ್ತಿ ಅವರಿಗೆ 1983ರಲ್ಲಿ ಘೋಷಿತವಾಯಿತು.
ಮಾಸ್ತಿರವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆಕಿಸಿಕೊಟ್ಟ ಚಿಕ್ಕವೀರ ರಾಜೇಂದ್ರ ಕಾದಂಬರಿ 1956ರಲ್ಲಿ ರಚನೆಯಾಗಿತ್ತು. ಹೀಗಾಗಿ, ಕುವೆಂಪು ನಂತರ ಮಾಸ್ತಿ ಅವರಿಗೆ ಜ್ಞಾನಪೀಠ ಸಿಗಬೇಕಿತ್ತು. ಆದರೆ, ಮಾಸ್ತಿಯವರಿಗೆ ಏಕೆ ಬೇಂದ್ರೆ ಮತ್ತು ಕಾರಂತರ ನಂತರ ಜ್ಞಾನಪೀಠ ನೀಡಲಾಯಿತು? ಎಂಬುದು ಈಗಲೂ ನನ್ನನ್ನು ಕಾಡುತ್ತದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.