ಒತ್ತುವರಿಗೆ “ಬೆಂದ’ಕಾಳೂರು ಅರಣ್ಯ


Team Udayavani, Mar 11, 2019, 6:30 AM IST

ottuvari.jpg

ಹೊತ್ತಿ ಉರಿಯುತ್ತಿರುವ ಬಂಡೀಪುರದ ಕಾಡ್ಗಿಚ್ಚು ಈಗ ಚಾಮುಂಡಿ ಬೆಟ್ಟಕ್ಕೆ ಹಬ್ಬಿದೆ. ಈಚೆಗೆ ಇಲ್ಲಿನ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಜೈವಿಕ ಉದ್ಯಾನದಲ್ಲೂ ಕಾಣಿಸಿಕೊಂಡಿತ್ತು. ಇದರ ಬೆನ್ನಲ್ಲೇ ಬೆಂಗಳೂರು ನಗರ ಮತ್ತು ಗ್ರಾಮಾಂತರದಲ್ಲಿ 31 ಸಾವಿರ ಹೆಕ್ಟೇರ್‌ಗೂ ಅಧಿಕ ಅರಣ್ಯ ಇದೆ. ಅದರಲ್ಲಿ ಸಂರಕ್ಷಿತ, ವನ್ಯಧಾಮಗಳೂ ಸೇರಿವೆ. ಹಾಗಿದ್ದರೆ, ಅವುಗಳು ಎಷ್ಟು ಸುರಕ್ಷಿತ? ಇಲ್ಲಿನ ಅರಣ್ಯ ಪ್ರದೇಶಕ್ಕೂ ಬೆಂಕಿ ತನ್ನ ಕೆನ್ನಾಲಿಗೆ ಚಾಚಿದರೆ ಏನು ಗತಿ? ಇಂತಹ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ನಿಟ್ಟಿನಲ್ಲಿ ಬೆಳಕುಚೆಲ್ಲುವ ಪ್ರಯತ್ನ ಈ ಬಾರಿಯ “ಸುದ್ದಿಸುತ್ತಾಟ’…

ಉದ್ಯಾನ ನಗರಿ ಮತ್ತು ಅದಕ್ಕೆ ಹೊಂದಿಕೊಂಡಂತೆ 31 ಸಾವಿರ ಹೆಕ್ಟೇರ್‌ಗೂ ಅಧಿಕ ಅರಣ್ಯ ಪ್ರದೇಶ ಇದೆ. ಅದಕ್ಕೆ ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಗಳು ತುಂಬಾ ಕಡಿಮೆ. ಬೆಂಕಿ ಕಾಣಿಸಿಕೊಂಡರೂ ಕೇಂದ್ರಭಾಗವಾಗಿರುವುದರಿಂದ ಅದರ ತೀವ್ರತೆ ಬಂಡೀಪುರದಷ್ಟು ಭೀಕರ ಆಗದಿರಬಹುದು. ಆದರೆ, ಅದಕ್ಕಿಂತ ಅಪಾಯಕಾರಿಯಾದ ಭೀತಿಯನ್ನು ಇಲ್ಲಿನ ಅರಣ್ಯ ಪ್ರದೇಶ ಎದುರಿಸುತ್ತಿದೆ.

ಅದು- “ಒತ್ತುವರಿ’! ಬಂಡೀಪುರದ ಕಾಡ್ಗಿಚ್ಚು ತಣ್ಣಗಾದ ನಂತರ ಅಲ್ಲಿ ಮತ್ತೆ ಹಸಿರು ಚಿಗುರೊಡೆಯುತ್ತದೆ. ಪುನಃ ಅದನ್ನು ಅರಸಿ ಪ್ರಾಣಿ-ಪಕ್ಷಿಗಳೂ ಬರುತ್ತವೆ. ಆದರೆ ನಗರದ ಅರಣ್ಯ ಪ್ರದೇಶ ಒತ್ತುವರಿಯಲ್ಲಿ ಇದು ಸಾಧ್ಯವಿಲ್ಲ. ನೈಸರ್ಗಿಕ ಕಾಡಿನ ಬದಲಿಗೆ ಅಲ್ಲಿ ಕಾಂಕ್ರೀಟ್‌ ಕಾಡು ಹುಟ್ಟಿಕೊಳ್ಳುತ್ತದೆ. ಇದರೊಂದಿಗೆ ಭವಿಷ್ಯದಲ್ಲಿ ಆ ಭಾಗ ಶಾಶ್ವತವಾಗಿ ಹಸಿರಿನಿಂದ ವಂಚಿತವಾಗುತ್ತದೆ. ಅವಲಂಬಿತ ಜೀವಿಗಳೂ ಕಣ್ಮರೆ ಆಗುತ್ತವೆ. ಇತ್ತೀಚಿನ ದಶಕಗಳಲ್ಲಿ ಈ ಒತ್ತುವರಿ ತೀವ್ರ ಸ್ವರೂಪದಲ್ಲಾಗುತ್ತಿದೆ.

ಅರಣ್ಯ ಪ್ರದೇಶಗಳಲ್ಲಿ ಒತ್ತುವರಿ ಸಾಮಾನ್ಯ. ಕೃಷಿ, ತೋಟ, ಸೂರಿನಂತಹ ಉದ್ದೇಶಗಳಿಗೆ ಒತ್ತುವರಿ ನಡೆಯುತ್ತದೆ. ಹಾಗಾಗಿ, ಅಷ್ಟಾಗಿ ತೊಂದರೆ ಆಗದಿರಬಹುದು. ಆದರೆ, ಬೆಂಗಳೂರಿನಂತಹ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶಗಳ ಒತ್ತುವರಿ ಜಾಗದಲ್ಲಿ ಬಹುತೇಕ ದೊಡ್ಡ ಕಟ್ಟಡಗಳು, ಕೈಗಾರಿಕೆಗಳೇ ತಲೆಯೆತ್ತುತ್ತವೆ. ಆದ್ದರಿಂದ ಇದರ ಪರಿಣಾಮವೂ ಭಿನ್ನವಾಗಿರುತ್ತದೆ.

ಒತ್ತುವರಿಯಲ್ಲಿ ಖಾಸಗಿ ಮತ್ತು ಸರ್ಕಾರಿ ಎಂಬ ಎರಡು ಪ್ರಕಾರಗಳಿವೆ. ಖಾಸಗಿ ವ್ಯಕ್ತಿಗಳು ಹಲವು ವರ್ಷಗಳಿಂದ ಒಂದೇ ಕಡೆ ಇದ್ದು, ನಂತರ ಆ ಜಾಗವನ್ನು ಬೇರೊಬ್ಬರಿಗೆ ಮಾರಾಟ ಮಾಡುತ್ತಾರೆ. ಆ ಮೂಲಕ ಅಲ್ಲಿ ಭೂಮಾಫಿಯಾ ಹುಟ್ಟಿಕೊಳ್ಳುತ್ತದೆ. ಇನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಸತಿ, ಕೈಗಾರಿಕೆ ಸೇರಿದಂತೆ ಹಲವು ಯೋಜನೆಗಳಿಗಾಗಿ ಅರಣ್ಯ ಭೂಮಿಯನ್ನು ಬಳಸುತ್ತವೆ.

ಉದಾಹರಣೆಗೆ ನಗರದಲ್ಲಿ ಜಕ್ಕೂರು ಏರೋ ಡ್ರ್ಯಾಂ ಬಳಿ ಫ್ಲೈಓವರ್‌, ಕಾಡುಗೋಡಿ ಮೀಸಲು ಅರಣ್ಯದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ, ಬೆಂಗಳೂರು ವಿಶ್ವವಿದ್ಯಾಲಯ ಸೇರಿದಂತೆ ಮತ್ತಿತರ ಉದ್ದೇಶಗಳಿಗೆ ಅರಣ್ಯ ಬಳಕೆ ಆಗಿದೆ. ಇದಕ್ಕೆ ಕಾನೂನಿನಲ್ಲೂ ಅವಕಾಶ ಇದೆ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 11 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ಇದ್ದು, ಅದರಲ್ಲಿ 3 ಸಾವಿರ ಹೆಕ್ಟೇರ್‌ ಒತ್ತುವರಿ ಆಗಿದೆ.

550ರಿಂದ 600 ಒತ್ತುವರಿ ಪ್ರಕರಣಗಳು ವಿವಿಧ ಹಂತಗಳಲ್ಲಿ ಇವೆ. ಕಳೆದ ವರ್ಷ 250 ಎಕರೆಯಷ್ಟು ಭೂಮಿ ಒತ್ತುವರಿದಾರರಿಂದ ಖುಲಾಸೆ ಆಗಿದೆ. ನಗರಕ್ಕೆ ಪ್ರಗತಿ ಮತ್ತು ಪ್ರಕೃತಿ ಎರಡೂ ಮುಖ್ಯ. ಆದರೆ, ನಮ್ಮ ಆದ್ಯತೆ ಬರೀ ಪ್ರಗತಿಗೆ ಸೀಮಿತವಾಗುತ್ತಿದೆ. ಹಾಗಾಗಿ, ಒತ್ತುವರಿ ಮಾತ್ರವಲ್ಲ; ಅಭಿವೃದ್ಧಿಯೂ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ವಾಯು, ಜಲ, ಶಬ್ದ ಮಾಲಿನ್ಯದಿಂದ ಅರಣ್ಯವನ್ನು ಅವಲಂಬಿಸಿದ ಪ್ರಾಣಿ-ಪಕ್ಷಿಗಳು ಮರೆಯಾಗಿವೆ. ಈ “ಮಿಸ್ಸಿಂಗ್‌ ಲಿಂಕ್‌’ ಹಲವು ಅನಾಹುತಗಳಿಗೆ ಕಾರಣವಾಗುತ್ತಿದೆ.

ಅತಿಯಾದ ತಾಪಮಾನವೂ ಪೂರಕ: ಅತಿಯಾದ ತಾಪಮಾನ ಕೂಡ ಅರಣ್ಯ ಪ್ರದೇಶದಲ್ಲಿನ ಬೆಂಕಿ ತೀವ್ರವಾಗಿ ಹೊತ್ತಿಕೊಳ್ಳಲು ಅನುವುಮಾಡಿಕೊಡುತ್ತದೆ. ಈ ದೃಷ್ಟಿಯಿಂದ ನಗರದ ಪ್ರಸ್ತುತ ಉಷ್ಣಾಂಶ ಅದಕ್ಕೆ ಪೂರಕವಾಗಿದ್ದು, ಬೇಸಿಗೆಗೂ ಮೊದಲೇ ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌ ಆಸುಪಾಸು ಇದೆ. ಉಷ್ಣಾಂಶ ಹೆಚ್ಚಾಗಿದ್ದಾಗ, ಹುಲ್ಲು ಒಣಗುವುದರ ಜತೆಗೆ ಭೂಮಿಯ ಒಳಗೆ ತೇವಾಂಶ ಕೂಡ ಕಡಿಮೆ ಆಗುತ್ತದೆ.

ಆಕಸ್ಮಿಕ ಬೆಂಕಿ ತಗುಲಿದಾಗ, ವೇಗವಾಗಿ ಅದು ಹಬ್ಬುತ್ತದೆ ಹಾಗೂ ನಂದಿಸಲು ಹರಸಾಹಸ ಮಾಡಬೇಕಾಗುತ್ತದೆ ಎಂದು ಹವಾಮಾನ ತಜ್ಞರು ತಿಳಿಸುತ್ತಾರೆ. ಆದರೆ, ಅರಣ್ಯದಲ್ಲಿ ಸಾಮಾನ್ಯವಾಗಿ ಒಣಹವೆ, ಅರೆಒಣಹವೆ ಹಾಗೂ ಯಾವಾಗಲೂ ಹಸಿರಿನಿಂದ ಕೂಡಿರುವುದು ಸೇರಿದಂತೆ ಮೂರು ಪ್ರಕಾರಗಳಿವೆ. ನಗರದ ಅರಣ್ಯ ಪ್ರದೇಶ ಬಹುತೇಕ ನಿರಂತರ ಹಸಿರಿನಿಂದ ಕೂಡಿದ ಗುಣಲಕ್ಷಣ ಹೊಂದಿದೆ.

ಒಂದು ಎಲೆ ಹಣ್ಣಾಗಿ ಉದುರುವಷ್ಟರಲ್ಲಿ ಮತ್ತೂಂದು ಎಲೆ ಚಿಗುರೊಡೆದಿರುತ್ತದೆ. ನೆಲದ ಮೇಲೆ ಕೂಡ ಒಣಪ್ರದೇಶ ಇರಲು ಬಿಡುವುದಿಲ್ಲ. ಹಾಗಾಗಿ, ಬೆಂಕಿ ಸಾದ್ಯತೆಗಳೂ ತುಂಬಾ ಕಡಿಮೆ. ಕಾಡುಗೋಡಿ ಮೀಸಲು ಅರಣ್ಯ ಮತ್ತು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಒಣಹವೆಯಿಂದ ಕೂಡಿದ ಅರಣ್ಯವನ್ನು ಕಾಣಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸುತ್ತಾರೆ.

ಬೆಂಕಿ ನಂದಿಸಲು ಇಲ್ಲ ಅತ್ಯಾಧುನಿಕ ಸೌಲಭ್ಯ: ಕಾಡ್ಗಿಚ್ಚು ನಂದಿಸಲು ಬೆಂಗಳೂರು ಸೇರಿದಂತೆ ರಾಜ್ಯದ ಯಾವುದೇ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಸಾಮಗ್ರಿಗಳು ಇಲ್ಲ ಎನ್ನಲಾಗಿದೆ. ಎಂಟು-ಹತ್ತು ಅಡಿ ಎತ್ತರದಿಂದ ಉರಿಯುವ ಕಾಡ್ಗಿಚ್ಚು ನಂದಿಸಲು ನೀರು, ರಾಸಾಯನಿಕ ಅಂಶಗಳನ್ನು ಒಳಗೊಂಡ ಫೋಮ್‌ನಿಂದ ಸಾಧ್ಯವಿಲ್ಲ. ಅಷ್ಟಕ್ಕೂ ಅಗ್ನಿಶಾಮಕ ವಾಹನವನ್ನು ಕಾಡಿನೊಳಗೆ ಕೊಂಡೊಯ್ಯಲೂ ಆಗದು. ಅತ್ಯಾಧುನಿಕ ಯಂತ್ರಗಳ ಅವಶ್ಯಕತೆ ಇದೆ.

ಸಾಮಾನ್ಯವಾಗಿ ವಿದೇಶಗಳಲ್ಲಿ ಕಾಡಿನ ಬೆಂಕಿ ನಂದಿಸಲು ಬ್ಲೋವರ್‌ ಯಂತ್ರ, ಹೆಲಿಕಾಪ್ಟರ್‌ಗಳು, ಪ್ರತ್ಯೇಕ ಅಗ್ನಿಶಾಮಕ ಎಂಜಿನ್‌ಗಳನ್ನು ಬಳಸಲಾಗುತ್ತದೆ. ಇಲ್ಲಿ ಅಂತಹ ಸೌಲಭ್ಯಗಳಿಲ್ಲ. ಅಷ್ಟೇ ಅಲ್ಲ, ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅವರಿಗೆ ನೀಡುವ ಮೂಲ ಸೌಕರ್ಯಗಳಿಗೂ ಕೊರತೆ ಇದೆ. ಉಪ ವಲಯ ಅರಣ್ಯಾಧಿಕಾರಿಗೂ ಒಂದು ಜೀಪ್‌ ವ್ಯವಸ್ಥೆ ಕೂಡ ಇಲ್ಲ. ಇನ್ನು ಕೆಳಗಿನ ಸಿಬ್ಬಂದಿಗೆ ದೂರದ ಮಾತು. ಅವರಿಗೆ ನೀಡಿದ ಶಸ್ತ್ರಾಸ್ತ್ರಗಳು ಓಬೇರಾಯನ ಕಾಲದ್ದಾಗಿವೆ ಎಂದು ಅಧಿಕಾರಿಯೊಬ್ಬರು ಆರೋಪಿಸುತ್ತಾರೆ.

ಕಾಂಕ್ರೀಟ್‌ ಕಾಡಿನ ನಡುವೆಯೂ ಉದ್ಯಾನ ನಗರಿ ಮತ್ತು ಸುತ್ತಲಿನ ವ್ಯಾಪ್ತಿಯಲ್ಲಿ 31 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ಇದೆ.  ಹೌದು, ಅರಣ್ಯ ಇಲಾಖೆ ಮೂಲಗಳ ಪ್ರಕಾರ ಬೆಂಗಳೂರು ನಗರದಲ್ಲಿ 11 ಸಾವಿರ ಹಾಗೂ ಗ್ರಾಮಾಂತರದಲ್ಲಿ 20 ಸಾವಿರ ಹೆಕ್ಟೇರ್‌ ಅರಣ್ಯ ಪ್ರದೇಶ ಇದೆ. ಇಲ್ಲಿ ಪಶ್ಚಿಮಘಟ್ಟದಲ್ಲಿ ಸಿಗುವ ವೈವಿಧ್ಯಮಯ ಸಸ್ಯ ಪ್ರಭೇದಗಳು, ಬಂಡೀಪುರದಲ್ಲಿರುವಂತೆ ದೊಡ್ಡ ಸಸ್ತನಿಗಳು ಇಲ್ಲದಿರಬಹುದು.

ಆದರೆ, ದಕ್ಷಿಣ ಏಷಿಯಾದಲ್ಲೇ ಅಪರೂಪದ ಕಾಡುಪಾಪ, ವಿದೇಶಿ ಹಕ್ಕಿಗಳಿಗೆ ಸೂರು ಒದಗಿಸುವ ನಿಸರ್ಗ ಸಂಪತ್ತು ಇಲ್ಲಿದೆ. ಜತೆಗೆ ಎರಡು ಬೃಹತ್‌ ಉದ್ಯಾನಗಳು, ಬಡಾವಣೆಗಳಿಗೆ ಒಂದರಂತೆ 250 ಉದ್ಯಾನಗಳಿವೆ. ಇವು ನಗರದ ಶ್ವಾಸಕೋಶಗಳಾಗಿ ಕಾರ್ಯನಿರ್ವಹಿಸುತ್ತಿವೆ. ಈ ಮೂಲಕ ನಗರದಲ್ಲಿ ಪರಿಸರ ಜೈವಿಕ ಸಮತೋಲನವನ್ನು ಕಾಯ್ದುಕೊಳ್ಳಲಾಗುತ್ತಿದೆ. ಅದರ ಸಂಕ್ಷಿಪ್ತ ವಿವರ ಇಲ್ಲಿದೆ. 

* ಬೆಂಗಳೂರು ನಗರ ವ್ಯಾಪ್ತಿಯ ಒಟ್ಟು ಅರಣ್ಯ ಪ್ರದೇಶ – 11,000 ಹೆಕ್ಟೇರ್‌. (ಸಂರಕ್ಷಿತ  - 7000 ಹೆಕ್ಟೇರ್‌, ಡೀಮ್ಡ್ 4000 ಹೆಕ್ಟೇರ್‌)

* ಬೆಂಗಳೂರು ನಗರ ವ್ಯಾಪ್ತಿಯ ಪ್ರಮುಖ ಅರಣ್ಯಗಳು- ಮಾರಸಂದ್ರ ಮೀಸಲು, ಜಾರಕಬಂಡೆ ಕಾವಲ್‌, ತುರಹಳ್ಳಿ ಕಿರು ಅರಣ್ಯ, ಮಂಡೂರು ಜ್ಯೋತಿಪುರ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ, ರಾಜ್ಯ ಅರಣ್ಯ ಸೇರಿ 8ಕ್ಕೂ ಅಧಿಕ ಸಂರಕ್ಷಿತ ಅರಣ್ಯಗಳು.

* ಪ್ರಮುಖ ಪ್ರಾಣಿ ಪಕ್ಷಿ ಪ್ರಬೇಧಗಳು – ನವಿಲು, ನರಿ, ಜಿಂಕೆ, ಕೃಷ್ಣಮೃಗ, ಕರಡಿ, ಕಾಡುಪಾಪ, ಮೊಸಳೆ.

* ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಒಟ್ಟು ಅರಣ್ಯ ಪ್ರದೇಶ 20,000 ಹೆಕ್ಟೇರ್‌.

* ಪ್ರಮುಖ ಪ್ರಾಣಿ, ಪಕ್ಷಿ ಪ್ರಭೇದಗಳು- ಚಿರತೆ, ಆನೆ, ಕಾಡು ಹಂದಿ, ನವಿಲು, ನರಿ, ಜಿಂಕೆ, ಕೃಷ್ಣಮೃಗ, ಕರಡಿ, ಕಾಡುಪಾಪ, ಮೊಸಳೆ.

* ಗ್ರಾಮಂತರ ವ್ಯಾಪ್ತಿಯ ಪ್ರಮುಖ ಅರಣ್ಯ ಪ್ರದೇಶಗಳು- ಹಾರೋಹಳ್ಳಿ, ಎಸ್‌.ಎಸ್‌.ಘಾಟಿ, ದೇವನಹಳ್ಳಿ ದಿಬ್ಬಗಿರಿ, ನೆಲಮಂಗಲ, ಕೋರಮಂಗಲ ಹೊರವಲಯ, ತಾತನೂರು, ಹೊಸಕೋಟೆ, ದೊಡ್ಡ ಹಾಲಹಳ್ಳಿ ಸೇರಿ 56 ಸಂರಕ್ಷಿತ ಅರಣ್ಯಗಳು.

* ಗ್ರಾಮಾಂತರ ವ್ಯಾಪ್ತಿಯಲ್ಲಿ ಹೆಚ್ಚು ಔಷಧೀಯ ಸಸ್ಯಗಳನ್ನು ಬೆಳಸಲು ಆದ್ಯತೆ ನೀಡಲಾಗಿದೆ.

ಹಿಂದಿನ ಬೆಂಕಿ ಅವಘಡಗಳು: ನಗರದಲ್ಲಿ ಬಹುಪಾಲು ಹೆಚ್ಚಿನ ತೇವಾಂಶದ ವಾತಾವರಣ, ಹಸಿರು ಹುಲ್ಲಿನ ಹೊದಿಕೆ ಇರುವುದರಿಂದ ಬೆಂಗಳೂರು ಅರಣ್ಯ ವ್ಯಾಪ್ತಿಯಲ್ಲಿ ದೊಡ್ಡಮಟ್ಟದ ಬೆಂಕಿ ಅವಘಡಗಳು ತೀರಾ ಕಡಿಮೆ. ಅಲ್ಲಲ್ಲಿ ಕಿಡಿಗೇಡಿಗಳು ಬೆಂಕಿ ಹಚ್ಚಿ ಅರಣ್ಯ ನಾಶ ಮಾಡಿದ ಘಟನೆಗಳು ನಡೆಯುತ್ತಿರುತ್ತವೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ತುರಹಳ್ಳಿಯಲ್ಲಿ ಆಗಾಗ ಬೆಂಕಿ ಕಾಣಿಸಿಕೊಳ್ಳುತ್ತದೆ. ಇನ್ನು ಕಾಡ್ಗಿಚ್ಚು ಸಂಭವಿಸಿದರೂ ಒಣ ಪ್ರದೇಶ ಕಡಿಮೆ ಇರುವುದರಿಂದ ಸೀಮಿತ ವ್ಯಾಪ್ತಿಯಲ್ಲಿಯೇ ಅದನ್ನು ತಡೆಗಟ್ಟಬಹುದು. ಇನ್ನು ಸರ್ಕಾರಿ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸಂಭಂವಿಸುವ ಬೆಂಕಿ ಅವಘಡಗಳಿಗೆ ಅಲ್ಲಿನ ಭದ್ರತಾ ವೈಫ‌ಲ್ಯವೇ ಕಾರಣ ಎನ್ನುತ್ತಾರೆ ಅರಣ್ಯ ಇಲಾಖೆ ಅಧಿಕಾರಿಗಳು.

ಬೇಸಿಗೆ ಸಿದ್ಧತೆ ಹೇಗಿದೆ?: ಬೆಂಗಳೂರು ನಗರ ಹಾಗೂ ಗ್ರಾಮಂತರ ವ್ಯಾಪ್ತಿಯಲ್ಲಿ ಬೇಸಿಗೆ ಎದುರಿಸಲು ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ವಿಭಾಗಗಳಲ್ಲೂ ಬೇಸಿಗೆ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸುಮಾರು 20 ಕಿ.ಮೀ ಹಾಗೂ ಗ್ರಾಮಂತರ ವ್ಯಾಪ್ತಿಯಲ್ಲಿ 50 ಕಿ.ಮೀ ಬೆಂಕಿ ರೇಖೆ ನಿರ್ಮಿಸಲಾಗಿದೆ. ಜತೆಗೆ ಅರಣ್ಯ ಪಕ್ಕದ ಗ್ರಾಮಗಳ ಜನರನ್ನು ವಿಶ್ವಾಸಕ್ಕೆ ತೆದು ಕೊಳ್ಳಲು ಸಭೆ, ಬೀದಿ ನಾಟಕ, ಕರಪತ್ರ ಹಂಚಿಕೆ ಮಾಡಲಾಗಿದೆ. ಈ ಮೂಲಕ ಯಾವುದೇ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡರೂ ಸಾರ್ವಜನಿಕರು ಮಾಹಿತಿ ನೀಡಿದರೆ ಶೀಘ್ರವಾಗಿ ನಂದಿಸಲು ಸಿಬ್ಬಂದಿಗೆ ಸಹಕಾರಿಯಾಗುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ತಿಳಿಸಿದರು.

ಗ್ರಾಮಂತರಕ್ಕೆ ನೀಲಗಿರಿ ತೋಪಿನ ಕಾಟ: ಬೆಂಗಳೂರು ಗ್ರಾಮಂತರ ವ್ಯಾಪ್ತಿಯ ದೊಡ್ಡಬಳ್ಳಾಪುರ, ಹೆಸರಘಟ್ಟ, ನೆಲಮಂಗಲ, ದೇವನಹಳ್ಳಿ ಬಳಿಯ ಅರಣ್ಯ ಪ್ರದೇಶಗಳ ಸುತ್ತ ಖಾಸಗಿ ಜಮೀನಿನಲ್ಲಿ ನೀಲಗಿರಿ ತೋಪುಗಳು ಹೆಚ್ಚಿದ್ದು, ಅಲ್ಲಿ ಬೇಸಿಗೆ ಅವಧಿಯಲ್ಲಿ ಹೆಚ್ಚು ಬೆಂಕಿ ಅವಘಡಗಳು ಸಂಭವಿಸುತ್ತವೆ. ಆ ಬೆಂಕಿಯು ಪಕ್ಕದ ಅರಣ್ಯಕ್ಕೆ ವ್ಯಾಪಿಸುವ ಸಾಧ್ಯತೆ ಇರುತ್ತದೆ. ಕಳೆದ ತಿಂಗಳು ಬಾಗಲೂರಿನ ಮಾವಳ್ಳಿಪುರ ಜಾರಕಬಂಡೆ ಕಾವಲ್ ಅರಣ್ಯ ಪ್ರದೇಶದಲ್ಲಿ ಖಾಸಗಿ ನೀಲಗಿರಿ ತೋಪು ಸೇರಿದಂತೆ ಸುಮಾರು 30 ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಹೀಗಾಗಿ, ಈ ತೋಟಗಳಿಂದ ಒಂದಿಷ್ಟು ಅಂತರ ಕಾಯ್ದುಕೊಂಡರೆ, ಅರಣ್ಯದಲ್ಲಿ ಬಹುಪಾಲು ಬೆಂಕಿ ಅವಘಡ ತಪ್ಪಿಸಬಹುದು. ಇನ್ನು ತೋಪುಗಳ ಸುತ್ತ ನಿಗಾ ವಹಿಸಲು ಕಾವಲು ಸಿಬ್ಬಂದಿ ಹಾಗೂ ತೋಪಿನ ಮಾಲೀಕರಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಉಪ ಅರಣ್ಯ ಸಂರಕ್ಷಣಾಧಿಕಾರಿ ಭೈರಾರೆಡ್ಡಿ ತಿಳಿಸಿದರು.

ಸಿಬ್ಬಂದಿ ಕೊರತೆ: ಬೆಂಗಳೂರು ನಗರಕ್ಕೆ ಹೋಲಿಸಿದರೆ ಗ್ರಾಮಾಂತರ ವ್ಯಾಪಿಯಲ್ಲಿ ಅರಣ್ಯ ಸಿಬ್ಬಂದಿ ಕೊರತೆ ಇದೆ. ಗ್ರಾಮಂತರ ಉಪ ಅರಣ್ಯಕ್ಕೆ ಒಟ್ಟು 90 ಕಾಯಂ ಸಿಬ್ಬಂದಿ ಮಂಜೂರಾಗಿದ್ದು, ಆ ಪೈಕಿ 44 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಿಂದ ಸಿಬ್ಬಂದಿ ಕೊರತೆ ಕಾಡುತ್ತಿದೆ.

-ನಗರ ವ್ಯಾಪ್ತಿಯ ಒಟ್ಟು ಸಿಬ್ಬಂದಿ    200
-ಕಾಯಂ ಸಿಬ್ಬಂದಿ    120 
-ದಿನಗೂಲಿ ನೌಕರರು    80 
-ಬೇಸಿಗೆ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿ    8
-ಗ್ರಾಮಾಂತರ ವ್ಯಾಪ್ತಿಯಲ್ಲಿ ಒಟ್ಟು ಸಿಬ್ಬಂದಿ    44
-ಬೇಸಿಗೆ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿ    27 

ಬಹುತೇಕ ಸಂದರ್ಭದಲ್ಲಿ ಒತ್ತುವರಿದಾರರೇ ಅರಣ್ಯ ಪ್ರದೇಶಕ್ಕೆ ಬೆಂಕಿ ಹಾಕುತ್ತಾರೆ. ಇದಕ್ಕೆ ಕಡಿವಾಣ ಹಾಕಬೇಕಾದರೆ, ಅರಣ್ಯ ಇಲಾಖೆಗೆ ಸಮರ್ಪಕ ಸಿಬ್ಬಂದಿ ನೇಮಿಸಬೇಕು. ಇಲಾಖೆಯು ಸ್ಥಳೀಯರನ್ನು ಒಳಗೊಂಡ ಗ್ರಾಮೀಣ ಅರಣ್ಯ ಸಮಿತಿಗಳನ್ನು ರಚಿಸಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ, ಇರುವ ಅರಣ್ಯವೂ ಕಂಡವರ ಪಾಲಾಗಲಿದೆ.
-ಡಾ.ಟಿ.ವಿ.ರಾಮಚಂದ್ರ, ಪರಿಸರ ವಿಜ್ಞಾನಗಳ ಕೇಂದ್ರ, ಐಐಎಸ್ಸಿ

ಬೆಂಗಳೂರಿನಂತ ಮಹಾನಗರಗಳಲ್ಲಿ ಒತ್ತುವರಿಯು ಮಲೆನಾಡಿನಂತೆ ಬಡತನದಿಂದಲೋ ಅಥವಾ ಜೀವನ ಕಟ್ಟಿಕೊಳ್ಳಲೋ ಆಗುವುದಿಲ್ಲ. ನಗರದ ಪರಿಸರ ಪ್ರೇಮಿಗಳು ಒಗ್ಗಟ್ಟಿನಿಂದ ವಿರೋಧಿಸಿದಾಗ ಒತ್ತುವರಿಗೆ ಒಂದಿಷ್ಟು ಕಡಿವಾಣ ಹಾಕಬಹುದು. ಜತೆಗೆ ಎಲ್ಲರೂ ಕಾಡನ್ನು ಪಾರಂಪರಿಕ ವಸ್ತು ರೀತಿ ಕಂಡಾಗ ಮಾತ್ರ ಅದನ್ನು ಉಳಿಸಿಕೊಳ್ಳಲು ಸಾಧ್ಯ. ಇನ್ನು ಅರಣ್ಯ ಇಲಾಖೆ ಸಿಬ್ಬಂದಿ ವೈಜ್ಞಾನಿಕ ಮುಂಜಾಗ್ರತಾ ಕ್ರಮವಹಿಸಿ, ಸ್ಥಳೀಯರ ವಿಶ್ವಾಸಗಳಿಸಿದರೆ ಅರಣ್ಯದಲ್ಲಿ ಬೆಂಕಿ ಅವಘಡಗಳನ್ನು ತಪ್ಪಿಸಬಹುದು.
-ಕೃಪಾಕರ್‌ ಸೇನಾನಿ, ವನ್ಯಜೀವಿ ಛಾಯಾಗ್ರಾಹಕರು

ಬೆಂಗಳೂರು ಗ್ರಾಮಂತರ ವ್ಯಾಪ್ತಿಯ ಅರಣ್ಯದಲ್ಲಿ ಬೆಂಕಿ ಅವಘಡ ಸಂಭವಿಸದಂತೆ ಅಗತ್ಯ ಮುಂಜಾಗ್ರತೆ ಕೈಗೊಳ್ಳಲಾಗಿದೆ. ಇದಕ್ಕಾಗಿ ಅರಣ್ಯದ ಸುತ್ತಲ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತಗೆದುಕೊಳ್ಳಲು ಸಭೆ, ಬೀದಿನಾಟಕ, ಮಾಹಿತಿ ಪತ್ರ ಹಂಚಿಕೆಯಂತಹ ಕ್ರಮಕೈಗೊಳ್ಳಲಾಗಿದೆ. ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗದೇ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಸಂಪರ್ಕಿಸಿ ಅವರೊಟ್ಟಿಗೆ ಸಹಕರಿಸಬೇಕು.
-ಭೈರಾರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ, ಬೆಂ.ಗ್ರಾಮಾಂತರ

* ವಿಜಯಕುಮಾರ ಚಂದರಗಿ/ ಜಯಪ್ರಕಾಶ್‌ ಬಿರಾದಾರ್‌

ಟಾಪ್ ನ್ಯೂಸ್

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

Ranji Trophy: ಇನ್ನಿಂಗ್ಸ್‌ ನ ಎಲ್ಲಾ 10 ವಿಕೆಟ್‌ ಕಿತ್ತು ಅನ್ಶುಲ್‌ ಕಾಂಬೋಜ್‌ ದಾಖಲೆ

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು

ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-munirathna

Bengaluru: ಮುನಿರತ್ನ ವಿರುದ್ಧ ಹನಿಟ್ರ್ಯಾಪ್‌ ಕೇಸ್‌: ಪಿಐ ಸೆರೆ

8-bng

Infosys ಪ್ರಶಸ್ತಿ 2024ಕ್ಕೆ ಕರ್ನಾಟಕದವರೂ ಸೇರಿ 6 ಸಾಧಕರ ಆಯ್ಕೆ

7-r-ashok

Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್‌. ಅಶೋಕ್‌

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

Road mishap: ಗೂಡ್ಸ್‌ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್‌ ಕಾನ್‌ಸ್ಟೇಬಲ್ ಸಾವು

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

11-bantwala

Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು

8

Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.