ವಿದೇಶಿ ಮರಳು ಮುಕ್ತ ಮಾರಾಟಕ್ಕೆ ಅವಕಾಶ
Team Udayavani, Jun 15, 2018, 6:10 AM IST
ಬೆಂಗಳೂರು: ರಾಜ್ಯದಲ್ಲಿ ಮರಳಿನ ಕೊರತೆ ನೀಗಿಸಲು ವಿದೇಶದಿಂದ ಆಮದು ಮಾಡಿಕೊಳ್ಳಲು ಖಾಸಗಿ ಸಂಸ್ಥೆಗಳಿಗೆ ಅನುಮತಿ ನೀಡಲಾಗುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ರಾಜಶೇಖರ್ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 30 ಮಿಲಿಯನ್ ಮೆಟ್ರಿಕ್ ಟನ್ ಮರಳಿನ ಬೇಡಿಕೆ ಇದೆ. ನೈಸರ್ಗಿಕವಾಗಿ 3.5 ಮಿಲಿಯನ್ ಮೆಟ್ರಿಕ್ ಟನ್ ಮರಳು ದೊರೆಯುತ್ತಿದ್ದು, 23 ಮಿಲಿಯನ್ ಮೆಟ್ರಿಕ್
ಟನ್ ಎಂ.ಸ್ಯಾಂಡ್ ಲಭ್ಯವಿದೆ. 3.5 ಮಿಲಿಯನ್ ಮೆಟ್ರಿಕ್ ಟನ್ ಮರಳಿನ ಕೊರತೆ ಇದೆ. ಅದನ್ನು ನೀಗಿಸಲು ವಿದೇಶಿ ಮರಳು ಆಮದು ಮಾಡಿಕೊಳ್ಳಲಾಗುತ್ತಿದ್ದು, ಉತ್ತಮ ಗುಣಮಟ್ಟದ ಮರಳು ಆಮದು ಮಾಡಿಕೊಳ್ಳುವುದರಿಂದ ಬೇಡಿಕೆ ಕಡಿಮೆಯಾಗುವ ವಿಶ್ವಾಸ ಇದೆ ಎಂದು ಹೇಳಿದರು.
ಎಂ.ಸ್ಯಾಂಡ್‌ಗೆ ಬೇಡಿಕೆ ಹೆಚ್ಚುತ್ತಿದ್ದರೂ ನೈಸರ್ಗಿಕ ಮರಳಿಗೆ ಸಾಕಷ್ಟು ಬೇಡಿಕೆ ಇರುವುದರಿಂದ ವಿದೇಶದಿಂದ
ಆಮದು ಮಾಡಿಕೊಳ್ಳಲಾಗಿದ್ದು, ಎಂಎಸ್‌ಐಎಲ್ ಮೂಲಕ ಮಾರಾಟ ಮಾಡಲಾಗುತ್ತಿದೆ. ಅಕ್ರಮ ಮರಳುಗಾರಿಕೆ ತಡೆಯಲು ಇಲಾಖೆ ಸಾಕಷ್ಟು ಬಿಗಿ ಕ್ರಮಕೈಗೊಂಡಿದೆ. ಅಕ್ರಮ ಮರಳು ಸಂಗ್ರಹ ಮತ್ತು ಸಾಗಣೆ ಮಾಡಿದರೆ ವಾಹನ ಜಪ್ತಿ ಮಾಡಲಾಗುತ್ತದೆ ಎಂದರು.
ಕರಾವಳಿಯಲ್ಲಿ ಪರಿಸರಕ್ಕೆ ಹಾನಿಯಾಗದಂತೆ ಸಿಆರ್‌ಝಡ್ ಪ್ರದೇಶದಲ್ಲಿ 61 ಮರಳು ದಿಬ್ಬಗಳನ್ನು ತೆರವುಗೊಳಿಸಲು ಮತ್ತು ಇದರಿಂದ ಬರುವ ಮರಳನ್ನು ಕಾಮಗಾರಿಗಳಿಗೆ ಉಪಯೋಗಿಸಿಕೊಳ್ಳಲು 390 ಸಾಂಪ್ರದಾಯಿಕ ಮರಳು ತೆಗೆಯುವ ವ್ಯಕ್ತಿಗಳಿಗೆ ಅನುಮತಿ ನೀಡಲಾಗಿದೆ ಎಂದರು.
ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ 1,427 ಹುದ್ದೆಗಳು ಮಂಜೂರಾಗಿದ್ದು, 403 ಹುದ್ದೆಗಳು ಮಾತ್ರ ಭರ್ತಿಯಾಗಿವೆ. ಸಿಬ್ಬಂದಿ ಕೊರತೆ ನೀಗಿಸಲು ಶೀಘ್ರವೇ 137 ಭೂವಿಜ್ಞಾನಿಗಳು, 48 ಕಿರಿಯ ಎಂಜಿನೀಯರ್‌ಗಳು, 63 ಪ್ರಥಮ ದರ್ಜೆ ಸಹಾಯಕರು ಹಾಗೂ ಒಬ್ಬರು ಕೆಮಿಸ್ಟ್ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.
ಮುಜರಾಯಿ ವ್ಯಾಪ್ತಿಗೆ ಮಠಗಳಿಲ್ಲ
ಬೆಂಗಳೂರು: ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಮಠಗಳನ್ನು ಸೇರಿಸುವ ಪ್ರಸ್ತಾಪ ಇಲ್ಲ ಎಂದು ನೂತನ ಮುಜರಾಯಿ ಸಚಿವ ರಾಜಶೇಖರ ಪಾಟೀಲ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಮಠಗಳ ವಿಷಯದಲ್ಲಿ ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಮುಜರಾಯಿ ಇಲಾಖೆಗಳ ದೇವಸ್ಥಾನಗಳಿಂದ ಪ್ರತಿ ವರ್ಷ 700 ರಿಂದ 800 ಕೋಟಿ ರೂ.ಆದಾಯ ಬರುತ್ತದೆ. ದೇವಾಲಯಗಳಿಂದ ಬರುವ ಆದಾಯವನ್ನು ಆ ದೇವಾಲಯಗಳ ಅಭಿವೃದಿಟಛಿಗೆ ಬಳಸಲು ತೀರ್ಮಾನಿಸಲಾಗಿದೆ. ಎ ದರ್ಜೆಯ ದೇವಸ್ಥಾನಗಳಿಂದ ಬರುವ ಆದಾಯದಲ್ಲಿ ಅದರ ವ್ಯಾಪ್ತಿಯಲ್ಲಿ ಬರುವ ಸಿ ದರ್ಜೆಯ ದೇವಸ್ಥಾನಗಳ ಜೀರ್ಣೋದಾಟಛಿರಕ್ಕೆ ಬಳಸಲು ನಿರ್ಧರಿಸಲಾಗಿದೆ. ಮುಜರಾಯಿ ಇಲಾಖೆಯ ಹೊಸ
ಯೋಜನೆಗಳನ್ನು ಧಾರ್ಮಿಕ ದತ್ತಿ ಪರಿಷತ್ ಸಮಿತಿಯೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ, ಮುಜರಾಯಿ ಸಚಿವರಾದವರು ಮುಂದಿನ ಚುನಾವಣೆಯಲ್ಲಿ ಸೋಲುತ್ತಾರೆ ಎಂಬ ಮಾತು ತಳ್ಳಿ ಹಾಕಿರುವ ಅವರು, ಹುಮ್ನಾಬಾದ್ ಕ್ಷೇತ್ರದಲ್ಲಿ ನಾಲ್ಕು ಬಾರಿ ಆಯ್ಕೆಯಾಗಿದ್ದು, ಪ್ರತಿ ಬಾರಿಯೂ ಹೆಚ್ಚಿನ ಅಂತರದಿಂದ ಗೆಲುವು ಪಡೆದಿದ್ದೇನೆ. ಮುಜರಾಯಿ ಸಚಿವರಾದವರು ಸೋಲುತ್ತಾರೆ ಎನ್ನುವ ಮೂಢನಂಬಿಕೆಯನ್ನು ನಾನು ನಂಬುವುದಿಲ್ಲ. ಆದರೆ, ನಾನು ದೈವ ಭಕ್ತ ಎಂದು ಹೇಳಿದರು.
ಮಜರಾಯಿ ವಾಪಸ್ ನೀಡಲು ತೀರ್ಮಾನ
ಗಣಿ ಮತ್ತು ಭೂ ವಿಜ್ಞಾನ ಖಾತೆ ಸಚಿವ ರಾಜಶೇಖರ್ ಪಾಟೀಲ್ ತಮಗೆ ಹೆಚ್ಚುವರಿಯಾಗಿ ದೊರೆತಿರುವ
ಮುಜರಾಯಿ ಖಾತೆಯನ್ನು ವಾಪಸ್ ನೀಡಲು ತೀರ್ಮಾನಿಸಿದ್ದಾರೆಂದು ತಿಳಿದು ಬಂದಿದೆ.
ಎರಡು ಇಲಾಖೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ ಎನ್ನುವ ಕಾರಣಕ್ಕೆ ಮುಜರಾಯಿ ಇಲಾಖೆಯನ್ನು ವಾಪಸ್ ನೀಡಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯನ್ನು ಪ್ರಭಾವಶಾಲಿಯಾಗಿ ನಡೆಸಲು ನಿರ್ಧರಿಸಿದ್ದಾರೆ. ಈ ಕುರಿತು
ಈಗಾಗಲೇ ಪಕ್ಷದ ನಾಯಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.