ಅಗ್ನಿದುರಂತ ದುಃಸ್ವಪ್ನ ಮರೆತು ಕಾರ್ಲ್ಟನ್ ಟವರ್ ಆರಂಭ
Team Udayavani, Jul 4, 2017, 11:51 AM IST
ಬೆಂಗಳೂರು: ಏಳು ವರ್ಷಗಳ ಹಿಂದೆ ಅಗ್ನಿ ಆಕಸ್ಮಿಕದಿಂದಾಗಿ ಒಂಬತ್ತು ಮಂದಿ ಮೃತಪಟ್ಟಿದ್ದ ನಗರದ ದೊಮ್ಮಲೂರು ಬಳಿಯ ಕಾರ್ಲ್ಟನ್ ಟವರ್ಸ್ ಇದೀಗ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಬಳಕೆಗೆ ಸಜ್ಜಾಗಿದೆ. 2010ರ ಫೆ.23ರಂದು ಅಗ್ನಿ ಅವಘಡ ಸಂಭವಿಸಿದ ನಂತರ ಬಂದ್ ಆಗಿದ್ದ ಕಟ್ಟಡ ಏಳು ವರ್ಷದ ನಂತರ ಪುನರಾರಂಭವಾಗುತ್ತಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾರ್ಲ್ಟನ್ ಟವರ್ಸ್ ಓನರ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಗಿರಿರಾಜ್ ಸದಾಶಿವ, ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಈ ಕಾಲ್‌ಟರ್ನ್ ಟವರ್ಸ್‌ನಲ್ಲಿ ವಾಣಿಜ್ಯ ವಲಯದಲ್ಲಿ ಜಾಗತಿಕ ಮಟ್ಟದ ಸೌಲಭ್ಯಗಳನ್ನು ನೀಡಲಿದ್ದೇವೆ. ಜು.1ರಂದು ಬಿಬಿಎಂಪಿ ವಾಸಯೋಗ್ಯ ಮಾನ್ಯತೆ ಪತ್ರ ನೀಡಿದೆ. ಕಾಲ್‌ಟರ್ನ್ ಟವರ್ಸ್ ಎಲ್ಲ ಸುರಕ್ಷತೆಯ ನಿಯಮಗಳನ್ನು ಅನುಸರಿಸಿದ್ದು, ವಾಸಯೋಗ್ಯಕ್ಕೆ ಸಿದ್ಧವಾಗಿದೆ. ಪ್ರಸ್ತುತ 160 ಘಟಕಗಳು ಬಹುತೇಕ ಬಳಕೆಯಾಗುತ್ತಿವೆ ಎಂದು ಹೇಳಿದರು.
ಕಟ್ಟಡಕ್ಕೆ ಪಲಾಯನ ಮಾರ್ಗಗಳು ಮತ್ತು ಅಗ್ನಿ ನಿರೋಧಕ ಬೋರ್ಡ್‌ಗಳನ್ನು ಹೊಸದಾಗಿ ಬದಲಾಯಿಸಲಾಗಿದೆ. ಹಳೆಯ ಜನರೇಟರ್‌ಗಳ ಬದಲು ಹೊಸ 3 ಶಕ್ತಿಯುತ ಮತ್ತು ಸುರಕ್ಷಿತ 1500 ಕೆವಿಎ ಸಾಮರ್ಥ್ಯದ ಜನರೇಟರ್‌ಗಳನ್ನು ಬದಲಾಯಿಸಲಾಗಿದ್ದು, ಇವುಗಳು ಕಟ್ಟಡಕ್ಕೆ ಶೇ.100ರಷ್ಟು ಬ್ಯಾಕಪ್ ನೀಡುತ್ತವೆ. ಫೈರ್ ಹೈಡ್ರೆಂಟ್, ಪಿಎ ಸಿಸ್ಟಂ, ಸೈನೇಜ್, ಅಗತ್ಯಕ್ಕೆ ತಕ್ಕಂತೆ ಗೌಂಡಿಂಗ್ ಸ್ವಿಚ್ ನೀಡಲಾಗಿದೆ.
ಬೆಂಕಿ ಅನಾಹುತದ ತುರ್ತು ಸಂದರ್ಭದಲ್ಲಿ ರಾಷ್ಟ್ರೀಯ ಕಟ್ಟಡ ನಿಯಮಾವಳಿ 30 ಮೀಟರ್‌ಗಳಲ್ಲಿ ಮೆಟ್ಟಿಲು ಲಭ್ಯವಾಗುವಂತೆ ಇದ್ದರೂ ಕೇವಲ 18 ಮೀಟರ್‌ಗಳಿಗೆ ಮೆಟ್ಟಿಲು ದೊರೆಯುವಂತೆ ಮಾಡಲಾಗಿದೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.