ಸಿನಿಮೀಯವಾಗಿ ಮೊಬೈಲ್ ಕಳ್ಳರನ್ನು ಬೆನ್ನಟ್ಟಿ ಹಿಡಿದ ಬಿಬಿಎಂಪಿ ಮಾಜಿ ಕಾರ್ಪೋರೇಟರ್!
Team Udayavani, Dec 16, 2024, 1:17 PM IST
ಬೆಂಗಳೂರು: ಮಾರಕಾಸ್ತ್ರ ತೋರಿಸಿ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳರನ್ನು ಬೆನ್ನಟ್ಟಿದ ಮಾಜಿ ಕಾರ್ಪೋರೇಟರ್ ಗಣೇಶ್ ರೆಡ್ಡಿ ಎಂಬುವರು ಕಾರು ಗುದ್ದಿಸಿ ಮೊಬೈಲ್ ವಾಪಸ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಎಚ್‌ಬಿಆರ್ ಲೇಔಟ್‌ನಲ್ಲಿ ಮಾರಕಾಸ್ತ್ರ ತೋರಿಸಿ ವ್ಯಕ್ತಿಯೊಬ್ಬರ ಮೊಬೈಲ್ ಕದ್ದು ಪರಾರಿಯಾಗಿದ್ದರು. ಅದೇ ವೇಳೆ ಸ್ಕಾಫಿಯೋ ಕಾರಿನಲ್ಲಿ ಬಂದ ಗಣೇಶ್ ರೆಡ್ಡಿ, ಮೊಬೈಲ್ ಕಳೆದುಕೊಂಡ ವ್ಯಕ್ತಿಯನ್ನು ಕಾರಿನಲ್ಲಿ ಕೂರಿಸಿಕೊಂಡು ಆರೋಪಿಗಳ ಬೆನ್ನು ಬಿದ್ದಿದ್ದಾರೆ. ಬಳಿಕ ಸಮೀಪದಲ್ಲೇ ಆರೋಪಿಗಳ ಬೈಕ್‌ಗೆ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿದ್ದಾರೆ. ಆದರೆ, ಆರೋಪಿಗಳು ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರು. ಆದರೂ ಅಂಜದೆ ಗಣೇಶ್ ರೆಡ್ಡಿ ಆರೋಪಿಗಳಿಗೆ ಬೆದರಿಸಿ ಮೊಬೈಲ್ ವಾಪಸ್ ಪಡೆದುಕೊಂಡಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಗಣೇಶ್ ರೆಡ್ಡಿ, ಭಾನುವಾರ ಬೆಳಗ್ಗೆ 5.40ಕ್ಕೆ ನಾನು ಜಿಮ್ ಗೆ ಹೋಗುತ್ತಿದ್ದೆ. ರಸ್ತೆಯಲ್ಲಿ ಒಬ್ಬ ಹುಡುಗ ಮೊಬೈಲ್ ಕಳ್ಳತನ ಆಗಿದೆ ಎಂದು ಓಡಿ ಬಂದ. ಇಬ್ಬರು ಹುಡುಗರು ಬೈಕ್‌ನಲ್ಲಿ ಪಾಸ್ ಆಗುವುದನ್ನು ನಾನು ನೋಡಿದೆ. ತಕ್ಷಣ ಹುಡುಗನನ್ನು ಕಾರಿನಲ್ಲಿ ಕೂರಿಸಿಕೊಂಡು ಬೈಕ್ ಚೇಸ್ ಮಾಡಿದೆ. ಎಚ್‌ಬಿಆರ್ ಲೇಔಟ್ 8ನೇ ಕ್ರಾಸ್ ಬಳಿ ನನ್ನ ಕಾರು ಅವರ ಬೈಕ್‌ಗೆ ತುಗುಲಿತು. ಆ ಇಬ್ಬರು ಹುಡುಗರಲ್ಲಿ ಒಬ್ಬ ಮಾರಕಾಸ್ತ್ರ ತೆಗೆದು ಬೆದರಿಸಿದ. ಆಗ ನಾನು ಮೊಬೈಲ್ ವಾಪಸ್ ಕೊಡು, ಇಲ್ಲ ಅಂದರೆ ನಿಮ್ಮ ಬೈಕ್ ಸ್ಟೇಷನ್‌ಗೆ ತೆಗೆದುಕೊಂಡು ಹೋಗುತ್ತೇನೆಂದು ಬೆದರಿಸಿದೆ. ಬಳಿಕ ಮೊಬೈಲ್ ಎಸೆದು ಇಬ್ಬರು ಪರಾರಿಯಾದರು. ಬಳಿಕ ಆ ಹುಡುಗನಿಗೆ ಮೊಬೈಲ್ ಕೊಟ್ಟು ವಾಪಸ್ ಹೋದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Child marriage: 3 ವರ್ಷದಲ್ಲಿ ರಾಜ್ಯಾದ್ಯಂತ 1,465 ಬಾಲ್ಯ ವಿವಾಹ ಪತ್ತೆ
Indira canteen: ನಗರದಲ್ಲಿ ಶೀಘ್ರ ಹೊಸದಾಗಿ 50 ಇಂದಿರಾ ಕ್ಯಾಂಟೀನ್
Election: ಒಕ್ಕಲಿಗ ಸಂಘದ ಚುನಾವಣೆ; ಡಿ.ಕೆ.ಶಿವಕುಮಾರ್ ಬಣ ಮೇಲುಗೈ
Inner politics; ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶ ಇಲ್ಲ: ವಿಜಯೇಂದ್ರ
Bengaluru: ಶ್ರೀನಿಶ್ಚಲಾನಂದನಾಥ ಸ್ವಾಮೀಜಿ ಪಟ್ಟಾಧಿಕಾರ ಮಹೋತ್ಸವ
MUST WATCH
ಹೊಸ ಸೇರ್ಪಡೆ
Sri Lanka; ಭಾರತದ ವಿರುದ್ದ ನಮ್ಮ ಭೂಮಿಯನ್ನು ಬಳಸಲು ಬಿಡೆವು: ಲಂಕಾ ಅಧ್ಯಕ್ಷ ಡಿಸಾನಾಯಕೆ
Constitution Debate:ಸಚಿವೆ ನಿರ್ಮಲಾ Balraj,Sultanpuri ಬಂಧನ ಘಟನೆ ಉಲ್ಲೇಖಿಸಿದ್ದೇಕೆ?
Kiccha Sudeep: ಬಿಗ್ ಬಾಸ್‌ಗೆ ಗುಡ್ ಬೈ.. ನಿರ್ಧಾರದ ಹಿಂದಿನ ಕಾರಣ ಬಿಚ್ಚಿಟ್ಟ ಕಿಚ್ಚ
ಮದುವೆಯ ಮೊದಲ ರಾತ್ರಿಯೇ ಪತಿಗೆ ಹಾಲಿನಲ್ಲಿ ಮತ್ತು ಬರುವ ಔಷಧಿ ಹಾಕಿ ನಗನಗದು ದೋಚಿದ ಪತ್ನಿ
Sandalwood: ʼನೀ ನಂಗೆ ಅಲ್ಲವಾ’ ಚಿತ್ರಕ್ಕೆ ಮುರಳಿ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.