ರಾಜಕೀಯವಾಗಿ ನನ್ನನ್ನು ಬಲಿಪಶು ಮಾಡಲು ಷಡ್ಯಂತ್ರ
Team Udayavani, Oct 29, 2017, 6:25 AM IST
ಸರಳ, ಸಜ್ಜನಿಕೆಯ ರಾಜಕಾರಣಿ ಎಂದೇ ಹೆಸರುವಾಸಿಯಾಗಿರುವ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಅವರು, ಪಕ್ಷದಲ್ಲಿ ತಮ್ಮನ್ನು ಕಡೆಗಣಿಸುತ್ತಾ ಪದೇಪದೆ ಹರಕೆಯ ಕುರಿ ಮಾಡುತ್ತಿರುವ ರಾಜ್ಯ ನಾಯಕರ ವಿರುದಟಛಿ ಅಸಮಾಧಾನಗೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುವ ಮೂಲಕ ಬಿಜೆಪಿ ಜತೆಗಿನ 30 ವರ್ಷಗಳ ನಂಟನ್ನು ಕಡಿದುಕೊಂಡಿದ್ದಾರೆ. ಈ ಸಂದರ್ಭದಲ್ಲಿ “ಉದಯವಾಣಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಬಿಜೆಪಿ ರಾಜ್ಯ ನಾಯಕರ ವರ್ತನೆ ವಿರುದ್ಧ ಅತೃಪ್ತಿ ವ್ಯಕ್ತಪಡಿಸಿದರು.
ಬಿಜೆಪಿ ಬಿಡಲು ತೀರ್ಮಾನಿಸಿದ್ದೇಕೆ?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪ್ರೇರಿತನಾಗಿ ಸಾರ್ವಜನಿಕ ಜೀವನದಲ್ಲಿ ಸರಳತೆ, ಸಜ್ಜನಿಕೆ, ಪ್ರಾಮಾಣಿಕತೆ ಮೈಗೂಡಿಸಿಕೊಂಡಿದ್ದೇನೆ. ಈ ಗುಣಗಳೇ ಇಂದು ನನಗೆ ಶಾಪವಾಗಿ ಪರಿಣಮಿಸಿವೆ. 6 ತಿಂಗಳ ಹಿಂದೆ ರಾಜ್ಯ ನಾಯಕರ ಮುಂದೆ ಇಟ್ಟ ಎರಡು ಸಣ್ಣ ಬೇಡಿಕೆಗಳನ್ನು ಈಡೇರಿಸಲಿಲ್ಲ. ಹೀಗಾಗಿ ನನ್ನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಪರ್ಯಾಯವನ್ನು ಕಂಡುಕೊಳ್ಳಲು 30 ವರ್ಷದಿಂದ ಇದ್ದ ಬಿಜೆಪಿಯಿಂದ ಹೊರಹೋಗಲು ಈ ನಿರ್ಧಾರ ಮಾಡಿದೆ.
ಏನದು 2 ಸಣ್ಣ ಬೇಡಿಕೆಗಳು?
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಕಚೇರಿಗೆ ಪರ್ಯಾಯವಾಗಿ ಬೆಂಗಳೂರು ಮೂಲದ
ಉದ್ಯಮಿಯೊಬ್ಬರು ಪಕ್ಷದ ಹೆಸರಲ್ಲಿ ನಡೆಸುತ್ತಿರುವ ಅನಧಿಕೃತ ಕಚೇರಿ ಮುಚ್ಚಿಸುವುದು ಹಾಗೂ ಪಿರಿಯಾಪಟ್ಟಣದಲ್ಲಿ ನಾಯಕತ್ವ ಯಾರದ್ದು ಎಂಬುದನ್ನು ಸ್ಪಷ್ಟಪಡಿಸಿ ಎಂಬ ಬೇಡಿಕೆಗಳನ್ನು 6 ತಿಂಗಳ ಹಿಂದೆ ಪಕ್ಷದ ರಾಜ್ಯ ನಾಯಕರ ಮುಂದಿಟ್ಟಿದ್ದೆ. ಈವರೆಗೆ ಈಡೇರಿಲ್ಲ. ಇದರಿಂದಾಗಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಹಾಗೂ ಕ್ಷೇತ್ರದ ಮತದಾರರಲ್ಲಿ ಗೊಂದಲಕ್ಕೆ ಕಾರಣವಾಗಿದೆ.
ಬೆಂಗಳೂರು ಮೂಲದ ಉದ್ಯಮಿ ಮಂಜುನಾಥ್‌ರನ್ನು ಪಿರಿಯಾಪಟ್ಟಣಕ್ಕೆ ಕರೆತಂದವರ್ಯಾರು?
ವರ್ಷದ ಹಿಂದೆ ಸಮಾಜಸೇವೆ ಹೆಸರಲ್ಲಿ ಪಿರಿಯಾಪಟ್ಟಣಕ್ಕೆ ಬಂದವರನ್ನು ನನ್ನ ವಿರೋಧದ ನಡುವೆ ಇಲ್ಲಿನ ಸಂಸದರು ಪಕ್ಷಕ್ಕೆ ಕರೆ ತಂದರು. ಜತೆಗೆ ಪಕ್ಷ ಸೇರಿದ 15 ದಿನದಲ್ಲೇ ರಾಜ್ಯ ಕಾರ್ಯಕಾರಿಣಿ ಸದಸ್ಯರನ್ನಾಗಿ ಮಾಡಿದರು. ನಂತರ ಪಿರಿಯಾಪಟ್ಟಣದಲ್ಲಿನ ಅವರ ಕಚೇರಿ ಬಿಜೆಪಿ ಕಚೇರಿಯಾಯಿತು. ಬೀದಿಯಲ್ಲಿ ನಿಂತು ಬಿಜೆಪಿಯಿಂದ ನಾನೇ ಅಭ್ಯರ್ಥಿ ಎಂದು ಸ್ವಯಂಘೋಷಣೆ ಮಾಡಿಕೊಳ್ಳುತ್ತಾ ಬಂದರು.
ಪಕ್ಷದ ನಾಯಕರು ನಿಮ್ಮ ಪರ ನಿಲ್ಲುತ್ತಿಲ್ಲ ಏಕೆ?
ಪ್ರಾಮಾಣಿಕ ಕಾರ್ಯಕರ್ತರಿಗಿಂತ ಹಣಬಲವೇ ಹೆಚ್ಚು ಎನಿಸಿರಬಹುದು. ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಎರಡು ಅವಧಿಗೆ ಪಕ್ಷದ ಜಿಲ್ಲಾಧ್ಯಕ್ಷನಾಗಿ, ಪಕ್ಷದ ರಾಜ್ಯ ಉಪಾಧ್ಯಕ್ಷನಾಗಿ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯನಾಗಿ, ರಾಜ್ಯ ರೈತ ಮೋರ್ಚಾ ಅಧ್ಯಕ್ಷನಾಗಿ ಎರಡು 2 ಅವಧಿಗೆ ಕೆಲಸ ಮಾಡಿದ್ದೇನೆ. ನನ್ನಂತವರ ಸೇವೆ ಬೇಡ ಎನಿಸಿರಬಹುದು.
ಪಕ್ಷದ ನಾಯಕರು ನಿಮ್ಮನ್ನು ಬಲಿಪಶು ಮಾಡಿದ್ದೆಲ್ಲಿ?
3 ವರ್ಷಗಳ ಹಿಂದೆ ಪಕ್ಷದ ಅಂದಿನ ರಾಜಾÂಧ್ಯಕ್ಷ ಪ್ರಹ್ಲಾದ್ ಜೋಶಿ ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿ.ಎಲ್.ಸಂತೋಷ್ ಅವರ ಭರವಸೆಯ ಮೇಲೆ ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಲೋಕಸಭಾ ಚುನಾವಣೆಯಲ್ಲಿ ಕೇವಲ 6,700 ಮತಗಳ ಅಂತರದಿಂದ ಸೋತಿದ್ದ ನನ್ನನ್ನು ಕಳೆದ ಬಾರಿ ಬಲವಂತವಾಗಿ ಹಾಸನದಲ್ಲಿ ದೇವೇಗೌಡರ ವಿರುದಟಛಿ ಸ್ಪರ್ಧೆ ಮಾಡಿಸಿ, ಠೇವಣಿ ಕಳೆದುಕೊಳ್ಳುವಂತೆ ಮಾಡಿದರು. ಈಗ ಸಿಎಂ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ವಿರುದಟಛಿ ಸ್ಪರ್ಧೆ ಮಾಡಿ ಎನ್ನುತ್ತಿದ್ದಾರೆ. ರಾಜಕೀಯವಾಗಿ ಬಲಿಪಶು ಮಾಡಲು ಷಡ್ಯಂತ್ರ ನಡೆದಿದೆ.
ಪಕ್ಷ ನಿಮಗೆ ಎಲ್ಲವನ್ನೂ ನೀಡಿದೆಯಲ್ಲವೇ?
ಹೌದು. ಶಾಸಕ, ಸಂಸದ, ಮಂತ್ರಿ ಏನೆಲ್ಲಾ ಆಗಿದ್ದೇನೆಯೋ ಅದು ಬಿಜೆಪಿಯಿಂದಲೇ. ಕೆ.ಎಸ್.ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ರಾಜಾÂಧ್ಯಕ್ಷರಾದ ಹಿನ್ನೆಲೆಯಲ್ಲಿ ಅದೇ ಸಮುದಾಯಕ್ಕೆ ಅವಕಾಶ ನೀಡಬೇಕಾದಾಗ ಯಡಿಯೂರಪ್ಪ ನನಗೆ ಅವಕಾಶ ಕೊಟ್ಟರು. ಅದಕ್ಕೆ ನಾನು ಆಭಾರಿ. ಆದರೆ, ಡಿ.ವಿ.ಸದಾನಂದ ಗೌಡರು ಮುಖ್ಯಮಂತ್ರಿಯಾಗುತ್ತಿದ್ದಂತೆ ನನ್ನನ್ನು ಮಾತ್ರ ಸಂಪುಟದಿಂದ ಕೈಬಿಟ್ಟರು. ಕೆಲವು ವ್ಯಕ್ತಿಗಳಿಂದ ನನಗೆ ಆಗುತ್ತಿರುವ ಅವಮಾನದ ದೃಷ್ಟಿಯಿಂದ ಈ ನಿರ್ಧಾರ
ತೆಗೆದುಕೊಳ್ಳಬೇಕಾಯಿತು.
ನಿಮ್ಮ ಮುಂದಿನ ನಡೆ ಏನು?
ಈಗಷ್ಟೇ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ. ಮುಂದಿನ ನಡೆ ಬಗ್ಗೆ ತೀರ್ಮಾನ ಮಾಡಲು ಕಾಲಾವಕಾಶ ಬೇಕು. ವಾರದೊಳಗೆ ಪರ್ಯಾಯವನ್ನು ಕಂಡುಕೊಳ್ಳುತ್ತೇನೆ.
– ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
ಮಾನಸಿಕ ಅಸ್ವಸ್ಥ ಬಾಲಕಿ ಮೇಲೆ ಲೈಂಗಿಕದೌರ್ಜನ್ಯ: ಆರೋಪಿ ವಿಚಾರಣೆ ರದ್ದತಿಗೆ ಹೈಕೋರ್ಟ್ ನಕಾರ
Dharwad; ನಾಲಿಗೆ ಹರಿಬಿಡುವ ನಾಯಕರ ಮೇಲೆ ಕ್ರಮ ಆಗಬೇಕು: ಶಾಸಕ ಬೆಲ್ಲದ್
Hubli; ಹಂದಿ ಸಾಕಾಣಿಕೆದಾರ ಕೊಲೆ ಪ್ರಕರಣ; ಮೃತನ ಅಕ್ಕನ ಗಂಡ ಸೇರಿ ನಾಲ್ವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
2024; ಜಮ್ಮು ಮತ್ತು ಕಾಶ್ಮೀರದಲ್ಲಿ 75 ಉಗ್ರರ ನಿರ್ಮೂಲನೆ: 60% ಪಾಕ್ ಮೂಲದವರು
ಸಿ.ಟಿ.ರವಿ-ಸಚಿವೆ ಲಕ್ಷ್ಮೀ ದೂರು ಪ್ರಕರಣ: ಪೊಲೀಸರ ವರದಿ ಬಳಿಕ ನಿಯಮಾನುಸಾರ ಕ್ರಮ: ಹೊರಟ್ಟಿ
Udupi: ಗೀತೋತ್ಸವದ ಮಂಗಳೋತ್ಸವ ; ಉಪೇಂದ್ರ ಸೇರಿ ಗಣ್ಯರು ಭಾಗಿ
Ambedkar ಅವರ ಸಂವಿಧಾನ ಖರ್ಗೆ ಕುಟುಂಬಕ್ಕೆ ಅನ್ವಯಿಸುವುದಿಲ್ಲವೇ?: ಬಿಜೆಪಿ
PM Modi; ಮಹಾಕುಂಭದ ಸಂದೇಶ ಏಕತೆ, ಸಮಾಜದಿಂದ ದ್ವೇಷವನ್ನು ಹೊರಹಾಕುವುದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.