ಪ್ರೇಮ ಪತ್ರಗಳ ಜಾಗ ಆವರಿಸಿದ ಫಾರ್ವರ್ಡ್‌ ಮೆಸೇಜ್‌ಗಳು

Team Udayavani, Feb 13, 2017, 12:15 PM IST

ravi.jpg

ಬೆಂಗಳೂರು: ಹಿಂದಿನ ಕಾಲದಲ್ಲಿ ಪ್ರೇಮಿಗಳು ಪತ್ರದ ಮೂಲಕ ಸ್ವಂತಿಕೆ ಬಳಸಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಪ್ರೇಮಿಗಳು ಸ್ವಂತಿಕೆ ಬಳಸದೆ ಕೇವಲ ಫಾರ್ವರ್ಡ್‌ ಸಂದೇಶಗಳನ್ನು ಕಳಿಸುತ್ತಾರೆ ಎಂದು ಪತ್ರಕರ್ತ ರವಿ ಬೆಳಗೆರೆ ಹೇಳಿದರು. 

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಅಜ್ಜೀಪುರ ಪ್ರಕಾಶನದ, ರವಿ ಅಜ್ಜೀಪುರ ಅವರ “ಪ್ರೇಮಸೂತ್ರ’ ಪುಸ್ತಕ ಲೋಕಾರ್ಪಣೆ ಮಾಡಲಾಯಿತು. ನಂತರ ಮಾತನಾಡಿದ ರವಿ ಬೆಳಗೆರೆ, “ಈಗಿನದ್ದು ಮೊಬೈಲ್‌ನಲ್ಲಿ ಆರಂಭವಾಗಿ ಅದರಲ್ಲೇ ಮುಗಿದು ಹೋಗುವ ಪ್ರೀತಿ. ಬೆಳಿಗ್ಗೆ ಎಸ್‌ಎಂಎಸ್‌ ಕಳಿಸುವ ಮೂಲಕ ಪ್ರೀತಿ ಆರಂಭವಾಗಿ, ಸಂಜೆ ವೇಳೆಗೆ ಆ ಪ್ರೀತಿ ಅಂತ್ಯವಾಗಿರುತ್ತದೆ. ಹಿಂದೆ ಪತ್ರದ ಮೂಲಕ ಪ್ರೀತಿ ಆರಂಭವಾಗುತ್ತಿತ್ತು. 

ಪತ್ರದಲ್ಲಿ ಪ್ರೇಮಿಗಳು ತಮ್ಮ ಸ್ವಂತಿಕೆ ಬಳಸಿ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ಎಸ್‌ಎಂಎಸ್‌ ಮೂಲಕ ಪ್ರೇಮ ನಿವೇದನೆ ನಡೆಯುತ್ತದೆ. ಮೊಬೈಲ್‌ ಪ್ರೀತಿಯಲ್ಲಿ ಸ್ವಂತಿಕೆ ಇರುವುದಿಲ್ಲ. ಏಕೆಂದರೆ, ಪ್ರೇಮ ಸಂದೇಶಗಳು “ಫಾರ್ವಡ್‌’ ಸಂದೇಶಗಳಾಗಿರುತ್ತವೆ. ಏನೇ ಆಗಲಿ ಪ್ರೀತಿ ಮಾಡಲು ತಾಳ್ಮೆ ಇರಬೇಕು,” ಎಂದರು.

ಶ್ವಾಸ ಸಂಸ್ಥೆಯ ವಚನಾನಂದ ಸ್ವಾಮೀಜಿ ಮಾತನಾಡಿ, “ಪ್ರತಿಯೊಬ್ಬ ಮನುಷ್ಯ ಪ್ರೀತಿ ಬಯಸುತ್ತಾನೆ. ಅದನ್ನು ಸರಿಯಾದ ದಾರಿಯಲ್ಲಿ ಪಡೆದರೆ ಮಾತ್ರ ಜೀವನ ಸುಂದರವಾಗುತ್ತದೆ. ಪ್ರೀತಿಗೆ ಲೌಕಿಕ ಜೀವನದಲ್ಲಷ್ಟೇ ಅಲ್ಲದೆ ಅಲೌಕಿಕ ಜೀವನದಲ್ಲೂ ಅಸ್ತಿತ್ವ ಇದೆ. ಮೀರಾಬಾಯಿ ಹಾಗೂ ತುಳಸೀದಾಸರು ಒಂದು ಹಂತದಲ್ಲಿ ದೇವರನ್ನೇ ಪ್ರೀತಿಸಲು ಆರಂಭಿಸಿದ್ದರು,” ಎಂದು ಉದಾಹರಣೆ ಕೊಟ್ಟರು. 

ಪುಸ್ತಕದ ಕುರಿತು ಮಾತನಾಡಿದ ಚಿತ್ರನಿರ್ದೇಶಕ ಶಶಾಂಕ್‌, “ಸಿನಿಮಾಗಳಲ್ಲಿ ತೋರಿಸುವ ಪ್ರೀತಿ ಕಾಲ್ಪನಿಕ. ಆದರೆ, ಪುಸ್ತಕಗಳಲ್ಲಿ ಕತೆಗಳ ಮೂಲಕ ಹೇಳುವ ಪ್ರೀತಿ ವಾಸ್ತವವಾಗಿರುತ್ತದೆ. ಪ್ರೇಮಸೂತ್ರ ಪುಸ್ತಕ ಪ್ರೀತಿಯ ನಿಜವಾದ ಮುಖ ತೋರಿಸುವ ಮೂಲಕ ಸತ್ಯವನ್ನು ಬಿಚ್ಚಿಡುತ್ತದೆ,” ಎಂದರು. ಲೇಖಕ ರವಿ ಅಜ್ಜೀಪುರ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

1-horoscope

Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್‌’ ವ್ಯವಸ್ಥೆ ಬಳಕೆ

KRS (2)

KRS ಈಗಲೂ ಭರ್ತಿ: 30 ವರ್ಷಗಳ ದಾಖಲೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Namma Metro; Metro services till 2 am on December 31

Namma Metro; ಡಿಸೆಂಬರ್‌ 31ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಮೆಟ್ರೋ ಸಂಚಾರ

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Robbery: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ “ಮೊಟ್ಟೆ ಗ್ಯಾಂಗ್‌”

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

High Court: ತೃತೀಯ ಲಿಂಗಿಗಳ ಜನನ, ಮರಣ ಪ್ರಮಾಣ ಪತ್ರದಲ್ಲಿ ಮಾರ್ಪಾಡು ಮಾಡಿ; ಹೈಕೋರ್ಟ್‌

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

Bengaluru: ಕಾರು ಢಿಕ್ಕಿಯಾಗಿ ಟೆಕಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

3-plane-crash

Plane Crash: ದಕ್ಷಿಣ ಕೊರಿಯಾದಲ್ಲಿ ವಿಮಾನ ಪತನ; 28 ಮಂದಿ ಮೃತ್ಯು, ಇಬ್ಬರು ಗಂಭೀರ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

PKL Season 11: ಇಂದು ಪ್ರೊ ಕಬಡ್ಡಿ ಫೈನಲ್‌… ಹರಿಯಾಣ – ಪಾಟ್ನಾ ಹಣಾಹಣಿ

2-bbk11

BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

RBI: ಯುಪಿಐ ಮೂಲಕ ಡಿಜಿಟಲ್‌ ವ್ಯಾಲೆಟ್‌ ಹಣ ಬಳಕೆಗೆ ಅಸ್ತು

arrest-woman

Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.