ನೇಪಾಳ ಮೂಲದ ನಾಲ್ವರು ಮನೆಗಳ್ಳರ ಬಂಧನ
Team Udayavani, Jan 13, 2018, 11:51 AM IST
ಬೆಂಗಳೂರು: ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತ ಪಕ್ಕದ ಮನೆಗಳಲ್ಲಿ ಕಳವು ಮಾಡುತ್ತಿದ್ದ ನೇಪಾಳ ಮೂಲದ ನಾಲ್ವರು ಕಳ್ಳರ ತಂಡವನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೇಪಾಳದ ಭಜಂಗ್ ಜಿಲ್ಲೆಯ ಭೀಮ್ ಬಹದ್ದೂರ್ ತಾಪಾ (31), ಜಯರಾಜ್ ಬಹದ್ದೂರ್ ಪೂರಿ (25), ಧರ್ಮರಾಜ್ ಬಹದ್ದೂರ್ ಬಹೋರಾ(40) ಮತ್ತು ಗಣೇಶ್ ಬಹದ್ದೂರ್ ತಾಪಾ (34) ಬಂಧಿತರು. ಇವರ ಬಂಧನದಿಂದ ಬನಶಂಕರಿ ಹಾಗೂ ಜೆ.ಪಿ.ನಗರ ಠಾಣೆಯ ಎರಡು ಪ್ರಕರಣಗಳು ಪತ್ತೆಯಾಗಿದ್ದು, 14 ಲಕ್ಷ ಮೌಲ್ಯದ 425ಗ್ರಾಂ ತೂಕದ ಚಿನ್ನಾಭರಣ, 5 ಕೆ.ಜಿ. ಬೆಳ್ಳಿ ವಸ್ತುಗಳು, ವಿದೇಶಿ ಕರೆನ್ಸಿಗಳು, ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಆರೋಪಿಗಳು ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡಿಕೊಂಡು, ಪಕ್ಕದ ಮನೆಗಳಲ್ಲಿ ಯಾರು ಇಲ್ಲದ ವೇಳೆ ಕಳವು ಮಾಡಿ ಪರಾರಿಯಾಗುತ್ತಿದ್ದರು ಎಂದು ಡಿಸಿಪಿ ಡಾ ಶರಣಪ್ಪ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬನಶಂಕರಿ 2ನೇ ಹಂತದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಕಳೆದ 6 ತಿಂಗಳ ಹಿಂದೆ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಭೀಮ್ ಬಹದ್ದೂರ್ ತಾಪಾ, ಪಕ್ಕದ ಮನೆಯಲ್ಲಿ ನೆಲೆಸಿದ್ದ ಟೆಕ್ಕಿ ಶಶಿಕಿರಣ್ ಕುಟುಂಬ ಕಳೆದ ಡಿ.13ರಂದು ತಿರಪತಿಗೆ ಹೋಗಿತ್ತು. ಈ ಮಾಹಿತಿ ಪಡೆದ ಭೀಮ್ ತನ್ನ ಇಬ್ಬರು ಸಹಚರರಾದ ಜಯರಾಜ್ ಹಾಗೂ ಧರ್ಮರಾಜ್‌ರನ್ನು ಕರೆಸಿಕೊಂಡು, ಮನೆಯ ಹಿಂಬಾಗಿಲು ಮುರಿದು ಚಿನ್ನಾಭರಣ, ನಗದು ಕಳವು ಮಾಡಿದ್ದರು.
ನಂತರ ಭೀಮ್ ಕೆಲ ಒಡವೆಗಳನ್ನು ಸುಬ್ಬಯ್ಯನಪಾಳ್ಯದ ಗಿರವಿ ಅಂಗಡಿಯಲ್ಲಿ ಮಾರಾಟ ಮಾಡಿದ್ದ. ಇನ್ನೊಂದಿಷ್ಟನ್ನು ಗಣೇಶ್ ಬಹದ್ದೂರ್‌ಗೆ ಮಾರಾಟ ಮಾಡಿದ್ದು, ಇನ್ನುಳಿದ ಚಿನ್ನಾಭರಣಗಳೊಂದಿಗೆ ನೇಪಾಳಕ್ಕೆ ಪರಾರಿಯಾಗಲು ಯತ್ನಿಸಿದ್ದ. ಈ ಮಾಹಿತಿ ಸಂಗ್ರಹಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಜಯರಾಜ್ ಬಹದ್ದೂರ್ ಹಾಗೂ ಧರ್ಮರಾಜ್ ಬನಶಂಕರಿಯ ಗಿರವಿ ಅಂಗಡಿಯಲ್ಲಿ ಚಿನ್ನಾಭರಣ ಮಾರಾಟ ಮಾಡುವ ವೇಳೆ ಮಾಲು ಸಮೇತ ಸಿಕ್ಕಿ ಬಿದ್ದಿದ್ದರು.
ಬಂಧಿತರ ಪೈಕಿ ಭೀಮ್, ಜಯರಾಜ್, ಧರ್ಮರಾಜ್ ಈ ಮೊದಲು ಜೆ.ಪಿ.ನಗರದಲ್ಲಿ ಕಳವು ಮಾಡಿದ್ದ ಚಿನ್ನಾಭರಣವನ್ನು ಗಣೇಶ್ ಬಹದ್ದೂರ್ ತಾಪಾನಿಗೆ ಮಾರಾಟ ಮಾಡಿದ್ದರು. ಈತ ತನ್ನ ಸ್ವಂತ ಊರಾದ ನೇಪಾಳಕ್ಕೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದ. ಭೀಮ್ ಬಹದ್ದೂರ್ ವಿರುದ್ಧ ಮಂಗಳೂರಿನಲ್ಲಿ ಕಳವು ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೋದಲ್ಲೆಲ್ಲ ಒಂದು ಹೆಸರು!: ಬಂಧಿತರು ಮಂಗಳೂರು, ಉಡುಪಿ ಹಾಗೂ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿನ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡಿದ್ದು, ಹೋದ ಕಡೆಗಳಲ್ಲಿ ತಮ್ಮ ಕೃತ್ಯ ನಡೆಸಲು ತಮ್ಮ ಹೆಸರನ್ನು ಬದಲಿಸಿಕೊಳ್ಳುತ್ತಿದ್ದರು.
ಈ ಹಿಂದೆ ಮಂಗಳೂರು, ಉಡುಪಿಯಲ್ಲಿ ಕೆಲಸ ಮಾಡುವಾಗ ತಮ್ಮ ಹೆಸರುಗಳನ್ನು, ಹೇಮರಾಜ್ ತಾಪಾ, ಜಯರಾಜ್ ಪೂರಿ, ಜಗದೀಶ್ ಹಾಗೂ ಗಗನ್ ತಾಪಾ ಎಂದು ಬದಲಾಯಿಸಿಕೊಳ್ಳುತ್ತಿದ್ದರು. ಆದರೆ, ಎಲ್ಲಿಯೂ ನೇಪಾಳ ಮೂಲದ ವ್ಯಕ್ತಿಗಳೆಂದು ಪರಿಚಯಿಸಿಕೊಂಡಿರಲಿಲ್ಲ ಎಂದು ಶರಣಪ್ಪ ತಿಳಿಸಿದ್ದಾರೆ.
ತಿರುಪತಿಗೆ ಹೋಗುತ್ತೇವೆ ಮನೆ ನೋಡ್ಕೊ!: ಡಿ.13ರಂದು ಟೆಕ್ಕಿ ಶಶಿಕಿರಣ್ ತಂದೆ ತಿರುಪತಿಗೆ ಹೋಗುವ ಮುನ್ನ ಪಕ್ಕದ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಭೀಮ್ ಬಹದ್ದೂರ್ ತಾಪಗೆ, “ಮನೆಯವರೆಲ್ಲ ತಿರುಪತಿಗೆ ಹೋಗುತ್ತಿದ್ದೇವೆ. ನಾವು ಬರುವವರೆಗೂ ಮನೆ ಕಡೆ ನೋಡ್ಕೊ’ ಎಂದು ಹೇಳಿದ್ದರು. ಆದರೆ, ಬರುವಷ್ಟರಲ್ಲಿ ಈತನೇ ತನ್ನ ಸಹಚರರ ಮೂಲಕ ಮನೆಗಳ್ಳತನ ಮಾಡಿದ್ದ.
ನಂತರ ಯಾರಿಗೂ ತಿಳಿಯದಂತೆ ಎಂದಿನಂತೆ ತನ್ನ ಕರ್ತವ್ಯ ನಿರ್ವಹಿಸುತ್ತಿದ್ದ. ತಿರುಪತಿಯಿಂದ ವಾಪಸ್ ಬಂದ ಶಶಿಕಿರಣ್ ಕುಟುಂಬಸ್ಥರು ಕಳ್ಳತನವಾಗಿರುವುದನ್ನು ಕಂಡು ಅಚ್ಚರಿಗೊಂಡರು ಕಳವಿನ ಬಗ್ಗೆ ಆರೋಪಿಗೆ ಕೇಳಿದಾಗ ನನಗೆ ಗೊತ್ತಿಲ್ಲ ಎಂದಿದ್ದ. ಶಶಿಕಿರಣ್ ಈ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಎಚ್ಚರ ವಹಿಸಿ..!: ಖಾಸಗಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವ ಮೊದಲು ಅವರ ಪೂರ್ವಾಪರ ಪರಿಶೀಲಿಸಬೇಕು.ಹಿನ್ನೆಲೆ ಬಗ್ಗೆ ಸ್ಥಳೀಯ ಪೊಲೀಸರಿಂದ ಪರಿಶೀಲನೆ ಮಾಡಿಸಿ, ಪರಿಶೀಲನಾ ಪತ್ರ ಪಡೆಯಬೇಕು. ನೇಮಕ ಮೊದಲು ಮೂಲ ದಾಖಲೆಗಳನ್ನು ಪರಿಶೀಲಿಸಬೇಕು.
ಖಾಯಂ ವಿಳಾಸ ಮತ್ತು ತಾತ್ಕಾಲಿಕ ವಿಳಾಸವನ್ನು ಖುದ್ದು ಪರಿಶೀಲನೆ ಮಾಡಿ ಅವರ ಸಂಬಂಧಿಕರು ಹಾಗೂ ಪರಿಚಯದವರ ವಿಳಾಸ, ಫೋನ್ ನಂಬರ್‌ಗಳನ್ನು ಪಡೆಯುವುದು ಒಳಿತು. ಈ ಹಿಂದೆ ಕಾರ್ಯ ನಿರ್ವಹಿಸಿ ಬಿಟ್ಟು ಬಂದಿದ್ದಲ್ಲಿ ನಡವಳಿಕೆಯ ಬಗ್ಗೆ ಹಾಗೂ ಕರ್ತವ್ಯ ಪಾಲನೆ ಬಗ್ಗೆ ಅವರಿಂದ ತಿಳಿದುಕೊಳ್ಳಬೇಕು ಎಂದು ಡಿಸಿಪಿ ಡಾ ಶರಣಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸಿಸಿಟಿವಿಯಲ್ಲಿ ಸೆರೆ: ಆರೋಪಿ ಭೀಮ್ ಬಹದ್ದೂರ್ ಚಲವಲನಗಳು ಟೆಕ್ಕಿ ಶಶಿಕಿರಣ್ ಮನೆ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈತ ಎರಡು ಬಾರಿ ಮನೆಯ ಬಾಗಿಲ ಬಳಿ ಬಂದು ಬೀಗ ಹಾಕಿರುವ ಬಗ್ಗೆ ಪರಿಶೀಲನೆ ನಡೆಸುತ್ತಾನೆ. ಜತೆಗೆ ಘಟನೆಗೂ ಮುನ್ನ ಈತನ ಚಲವಲನಗಳು ತೀವ್ರ ಅನುಮಾನಕ್ಕೀಡಾಗಿದ್ದವು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.