ಕೊಲೆ ಯತ್ನ ಕೇಸಲ್ಲಿ ಸಿನಿಮಾ ನಿರ್ದೇಶಕ ಸೇರಿ ನಾಲ್ವರ ಸೆರೆ
Team Udayavani, Jul 31, 2017, 11:53 AM IST
ಬೆಂಗಳೂರು: ಕೊಲೆ ಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಸಿನಿಮಾ ನಿರ್ದೇಶಕ ಹರೀಶ್ ಮತ್ತು ಇಬ್ಬರು ರೌಡಿ ಶೀಟರ್‌ಗಳನ್ನು ಬಂಧಿಸಿದ್ದಾರೆ. “ಸ್ಟೈಲ್ ರಾಜ’ ಸಿನಿಮಾ ನಿರ್ದೇಶಕ ಹರೀಶ್ ಮತ್ತು ಈತನಿಂದ ಕೃತ್ಯಕ್ಕೆ ಸುಪಾರಿ ಪಡೆದಿದ್ದ ಇಬ್ಬರು ರೌಡಿ ಶೀಟರ್‌ಗಳಾದ ಸತೀಶ್, ಸುರೇಶ್ ಮತ್ತು ಆಪ್ತ ರಾಜಶೇಖರ್ ಬಂಧಿತರು.
ಟೆಂಟ್‌ಹೌಸ್ ಅಂಗಡಿ ನಡೆಸುತ್ತಿರುವ ಅಶೋಕ್ ಎಂಬುವರ ಹತ್ಯೆಗೆ ನಿರ್ದೇಶಕ ಹರೀಶ್ ಸುಪಾರಿ ನೀಡಿದ್ದ. ಜುಲೈ 28ರಂದು ಅಶೋಕ್ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
“ಸ್ಟೈಲ್ ರಾಜ’ ಸಿನಿಮಾ ನಿರೀಕ್ಷೆ ಮಟ್ಟಕ್ಕೆ ಗೆಲುವು ಪಡೆಯಲಿಲ್ಲ. ಇದರಿಂದ ಸಿನಿಮಾಗೆ ಹಣ ಹೂಡಿದ್ದವರು ಹಣ ವಾಪಾಸ್ ಕೇಳಲು ಬಂದಾಗ ಉಂಟಾದ ಜಗಳದಿಂದಾಗಿ ಅಶೋಕ್ ಮತ್ತು ಹರೀಶ್ ನಡುವೆ ಗಲಾಟೆಯಾಗಿತ್ತು. ಇದೇ ವಿಚಾರವನ್ನು ಹರೀಶ್, ಇತರೆ ಆರೋಪಿಗಳಾದ ಸತೀಶ್, ಸುರೇಶ್ ಮತ್ತು ರಾಜಶೇಖರ್‌ಗೆ ಹೇಳಿದ್ದರು. ಬಳಿಕ ಕೃತ್ಯಕ್ಕೆ ಸುಪಾರಿ ಕೊಟ್ಟಿದ್ದರು. ಅದರಂತೆ ಆರೋಪಿಗಳು ಶನಿವಾರ ರಾತ್ರಿ ಕೊಲೆಗೈಯಲು ಯತ್ನಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಘಟನೆ?
ರಮೇಶ್ ಎಂಬುವವರ ನಿರ್ಮಾಣದಲ್ಲಿ ಆರೋಪಿ ಹರೀಶ್ “ಸ್ಟೈಲ್ ರಾಜ’ ಸಿನಿಮಾ ನಿರ್ದೇಶಿಸಿದ್ದ. ಬಿಡುಗಡೆಯೂ ಆಗಿತ್ತು. ಇದಕ್ಕಾಗಿ ನಿರ್ಮಾಪಕ ರಮೇಶ್ ಅಶೋಕ್ ಅವರ ಸಂಬಂಧಿ ಉಮಾ ಅವರಿಂದ 3.5 ಲಕ್ಷ ರೂ. ಸಾಲ ಪಡೆದುಕೊಂಡಿದ್ದರು. ಆದರೆ, ಸಿನಿಮಾ ಸೋಲು ಕಂಡಿತ್ತು. ಆ ನಂತರ ಸಿನಿಮಾಗಾಗಿ ಹೂಡಿದ ಹಣಕ್ಕಾಗಿ ಜಗಳ ಶುರುವಾಗಿತ್ತು. ಉಮಾ ತಾವು ಸಿನಿಮಾಗಾಗಿ ಹಣ ಕೊಟ್ಟಿರಲಿಲ್ಲ.
ಸಾಲವಾಗಿ ಹಣ ಕೊಟ್ಟಿದ್ದು, ಎಂದು ಆ ಹಣ ವಾಪಾಸ್ ಪಡೆಯಲು ರಮೇಶ್‌ಗೆ ಕೇಳಿದ್ದರು. ಈ ವೇಳೆ ಹಣದ ಲೆಕ್ಕ ನನಗೆ ಗೊತ್ತಿಲ್ಲ, ಹೋಗಿ ನಿರ್ದೇಶಕ ಹರೀಶ್ ಅವರನ್ನೇ ಕೇಳಿ ಎಂದು ಜಾರಿಕೊಂಡಿದ್ದರು. ಆ ನಂತರ ತಮ್ಮ ಸಂಬಂಧಿ ಅಶೋಕ್ ಮೂಲಕ ಹಣ ವಾಪಾಸ್ ಪಡೆಯಲು ಉಮಾ ಮುಂದಾಗಿದ್ದರು ಎಂದು ಸಿಸಿಬಿ ಪೊಲೀಸರು ತಿಳಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜುಲೈ 28ರಂದು ಅಶೋಕ್ ತಮ್ಮ ಟೆಂಟ್ ಹೌಸ್ ಮುಂದೆ ಹೋಗುತ್ತಿದ್ದ ಹರೀಶ್ ಅವರನ್ನು ತಡೆದು ನಿಲ್ಲಿಸಿ ಉಮಾಗೆ ಕೊಡಬೇಕಿರುವ ಹಣವನ್ನು ವಾಪಸ್ ಕೊಡುವಂತೆ ಕೇಳಿಕೊಂಡಿದ್ದಾರೆ. ಆಗ ಹಣ ಕೇಳೊದಿಕ್ಕೆ ನೀನು ಯಾರು ಎಂದು ಪ್ರಶ್ನಿಸಿದ್ದು, ಜಲಾಟೆಯಾಗಿದೆ. ಮಾರಾಮಾರಿ ಕೂಡ ನಡೆದಿದೆ. ಈ ವೇಳೆ ಹರೀಶ್ ಕೊಲೆಗೈಯುವುದಾಗಿ ಬೆದರಿಕೆ ಹಾಕಿ ಹೋಗಿದ್ದ.
ಅದರಂತೆ ಹರೀಶ್ ಸುಪಾರಿ ಕೊಟ್ಟಿದ್ದ ಮೂವರು ರೌಡಿಶೀಟರ್‌ಗಳು, ಸಂಜೆ 7 ಗಂಟೆ ಸುಮಾರಿಗೆ ಅನ್ನಪೂರ್ಣೇಶ್ವರಿನಗರದ ಹೆಲ್ತ್ ಲೇಔಟ್ ಬಳಿ ಅಶೋಕ್ ಕಾರಿನಲ್ಲಿ ಹೋಗುವಾಗ ಅಡ್ಡ ಹಾಕಿ ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದಲ್ಲದೇ, ಹರೀಶ್ ಬಳಿ ಹಣ ಕೇಳಲು ನೀನು ಯಾರು ಎಂದು ಪ್ರಶ್ನಿಸಿ ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ಅನ್ನಪೂರ್ಣೇಶ್ವರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.