ದೇಶದ ರೈಲು ನಿಲ್ದಾಣಗಳ ಅಭಿವೃದ್ಧಿ ಫ್ರಾನ್ಸ್ನ ನೆರವು
Team Udayavani, Jun 13, 2019, 3:00 AM IST
ಬೆಂಗಳೂರು: ದೇಶದಲ್ಲಿನ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಫ್ರಾನ್ಸ್ ನೆರವು ನೀಡಲಿದೆ. ಈ ಉದ್ದೇಶಕ್ಕಾಗಿ ಭಾರತೀಯ ರೈಲು ನಿಲ್ದಾಣ ಅಭಿವೃದ್ಧಿ ನಿಗಮ ನಿಯಮಿತ (ಐಆರ್ಎಸ್ಡಿಸಿ) ಮತ್ತು ಫ್ರಾನ್ಸ್ನ ರೈಲ್ವೆ ಇಲಾಖೆ ಸೋಮವಾರ ಒಪ್ಪಂದಕ್ಕೆ ಸಹಿ ಹಾಕಿವೆ.
ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಮತ್ತು ಫ್ರಾನ್ಸ್ನ ಐರೋಪ್ಯ ಮತ್ತು ವಿದೇಶಾಂಗ ಖಾತೆ ಸಹಾಯಕ ಸಚಿವ ಜೀನ್ ಬ್ಯಾಪ್ಟಿಸ್ಟ್ ಲಿಮೋನ್ ನಡುವಿನ ಮಾತುಕತೆ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಒಪ್ಪಂದದ ಅನ್ವಯ ಫ್ರಾನ್ಸ್ 7 ಲಕ್ಷ ಯೂರೋಗಳನ್ನು ಫ್ರಾನ್ಸ್ನ ನ್ಯಾಷನಲ್ ರೈಲ್ವೇ-ಹಬ್ ಆ್ಯಂಡ್ ಕನೆಕ್ಷನ್ಸ್ ಮೂಲ ನೀಡಲಿದೆ.
ಜತೆಗೆ ಐಆರ್ಎಸ್ಡಿಸಿ ಗೆ ತಾಂತ್ರಿಕ ನೆರವನ್ನೂ ನೀಡಲಿದೆ. ಫ್ರಾನ್ಸ್ ನೀಡುವ ನೆರವಿನಿಂದ ಭಾರತೀಯ ರೈಲ್ವೆ ಮತ್ತು ಐಆರ್ಎಸ್ಡಿಸಿಗೆ ಯಾವುದೇ ರೀತಿಯಲ್ಲಿ ವಿತ್ತೀಯ ಹೊರೆ ಉಂಟಾಗುವುದಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸುರೇಶ್ ಅಂಗಡಿ “ಭಾರತ ಮತ್ತು ಫ್ರಾನ್ಸ್ ನಡುವಿನ ಸಹಯೋಗವನ್ನು ಮತ್ತಷ್ಟು ವೃದ್ಧಿಸುವ ನಿಟ್ಟಿನಲ್ಲಿ ಈ ಒಪ್ಪಂದ ನೆರವಾಗಲಿದೆ. ಜತೆಗೆ ಭಾರತೀಯ ರೈಲ್ವೆ ವ್ಯವಸ್ಥೆಯನ್ನು ವಿಶ್ವದರ್ಜೆಗೆ ಏರಿಸುವುದಕ್ಕೆ ನೆರವಾಗಲಿದೆ’ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.