Fraud: ನಕಲಿ ಪೇಮೆಂಟ್‌ ಆ್ಯಪ್‌ ಬಳಸಿ 2.29 ಲಕ್ಷ ಚಿನ್ನ ಖರೀದಿಸಿ ದೋಖಾ

Team Udayavani, Mar 18, 2024, 10:25 AM IST

Fraud: ನಕಲಿ ಪೇಮೆಂಟ್‌ ಆ್ಯಪ್‌ ಬಳಸಿ 2.29 ಲಕ್ಷ ಚಿನ್ನ ಖರೀದಿಸಿ ದೋಖಾ

ಬೆಂಗಳೂರು: ಯುಪಿಐ ಮೂಲಕ ಹಣ ಪಾವತಿಸಿ ಮೊಬೈಲ್‌ನಲ್ಲಿ ನಕಲಿ ರಶೀದಿ ತೋರಿಸಿ ಚಿನ್ನಾಭರಣ ಮಳಿಗೆ ಮಾಲೀಕನಿಗೆ ಲಕ್ಷಾಂತರ ರೂ. ವಂಚಿಸಿದ್ದ ಮಹಿಳೆ ಹಾಗೂ ಆಕೆಯ ಪ್ರಿಯಕರನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ದೇವನಹಳ್ಳಿ ನಿವಾಸಿ ನಂದನ್‌(40) ಮತ್ತು ಆಕೆಯ ಪ್ರಿಯತಮೆ ರಾಜರಾಜೇಶ್ವರಿನಗರ ನಿವಾಸಿ ಕಲ್ಪಿತಾ(35) ಬಂಧಿತರು. ಆರೋಪಿ ಗಳಿಂದ ಚಿನ್ನಾಭರಣ ವಶಕ್ಕೆ ಪಡೆಯ ಲಾಗಿದೆ. ಆರೋಪಿಗಳು ಇತ್ತೀಚೆಗೆ ಮಾಗಡಿ ಮುಖ್ಯ ರಸ್ತೆಯಲ್ಲಿರುವ ಪರಮೇಶ್ವರ ಬ್ಯಾಂಕರ್ಸ್‌ ಆ್ಯಂಡ್‌ ಜ್ಯುವೆಲರ್ಸ್‌ನಲ್ಲಿ 36 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿ, ನಕಲಿ ಆ್ಯಪ್‌ ಮೂಲಕ 2.29 ಲಕ್ಷ ರೂ. ಪಾವತಿಸಿ ವಂಚಿಸಿದ್ದರು. ಈ ಸಂಬಂಧ ಮಳಿಗೆ ಮಾಲೀಕ ಗೇರ್ವಚಂದ್‌ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.

ಆರೋಪಿ ನಂದನ್‌ಗೆ ಈಗಾಗಲೇ ಮದುವೆ ಯಾಗಿದ್ದು, ಪತ್ನಿಯಿಂದ ದೂರವಾ ಗಿದ್ದಾನೆ. ಇತ್ತ ಕಲ್ಪಿತಾ ಕೂಡ ಪತಿಯಿಂದ ದೂರವಾಗಿ ಒಂಟಿಯಾಗಿ ವಾಸವಾಗಿ ದ್ದಳು. ಸಾಮಾಜಿಕ ಜಾಲತಾಣದ ಮೂಲಕ ಪರಸ್ಪರ ಪರಿಚಯ ವಾದ ಆರೋಪಿಗಳು ಕೆಲ ತಿಂಗ ಳಿಂದ ಸಹ ಜೀವನ ನಡೆಸುತ್ತಿ ದ್ದಾರೆ. ಇಬ್ಬರು ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ.

ಈ ಮಧ್ಯೆ ಫ್ರಾಂಕ್‌ ಪೇಮೆಂಟ್‌ ಎಪಿಕೆ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು, ಚಿನ್ನಾಭರಣ ಮಳಿಗೆಗಳು, ಹೋಟೆಲ್‌, ದಿನಸಿ ಅಂಗಡಿ ಸೇರಿ ವಿವಿಧೆಡೆ ತೆರಳಿ ಅಗತ್ಯ ವಸ್ತುಗಳನ್ನು ಖರೀದಿಸಿ ಈ ಆ್ಯಪ್‌ ಮೂಲಕ ಹಣ ಪಾವತಿಸುತ್ತಿದ್ದರು. ಬಳಿಕ ತಮ್ಮ ಮೊಬೈಲ್‌ನಲ್ಲಿ ಪೇಮೆಂಟ್‌ ಆಗಿದೆ ಎಂಬ ಸಂದೇಶ ತೋರಿಸಿ, ಅಂಗಡಿ ಮಾಲೀಕರನ್ನು ವಂಚಿಸುತ್ತಿದ್ದರು. ಅಸಲಿಗೆ ಅಂಗಡಿ ಮಾಲೀಕರಿಗೆ ಹಣವೇ ಜಮೆ ಆಗುತ್ತಿರಲಿಲ್ಲ ಎಂದು ಪೊಲೀಸರು ಹೇಳಿದರು.

ಏನಿದು ವಂಚನೆ?: ಮಾ.4ರಂದು ಬೆಳಗ್ಗೆ 9.30ಕ್ಕೆ ಆರೋಪಿಗಳು ಮಾಗಡಿ ಮುಖ್ಯರಸ್ತೆ ಯಲ್ಲಿ ರುವ ಪರಮೇಶ್ವರ ಬ್ಯಾಂಕರ್ಸ್‌ ಮತ್ತು ಜ್ಯುವೆಲರ್ಸ್‌ ಅಂಗಡಿಗೆ ಹೋಗಿ, 36 ಗ್ರಾಂ ತೂಕದ ಚಿನ್ನಾಭರಣ ಖರೀದಿಸಿದ್ದಾರೆ. ಬಳಿಕ ತಮ್ಮ ಬಳಿ ನಗದು ಇಲ್ಲ. ನೆಫ್ಟ್ ಮೂಲಕ ಹಣ ಕಳುಹಿಸುತ್ತೇವೆ ಎಂದು 2,29,300 ರೂ. ನಕಲಿ ಆ್ಯಪ್‌ ಮೂಲಕ ಹಣ ಜಮೆ ಮಾಡಿದ್ದಾರೆ. ಬಳಿಕ ಒಡವೆಗಳನ್ನು ಪಡೆದು ಸ್ಥಳದಿಂದ ಪರಾರಿಯಾಗಿದ್ದಾರೆ.

ಕೆಲ ಹೊತ್ತಿನ ಬಳಿಕ ಮಳಿಗೆ ಮಾಲೀಕರು ಬ್ಯಾಂಕ್‌ ಖಾತೆಯಲ್ಲಿ ಹಣ ಜಮೆ ಆಗಿರುವ ಬಗ್ಗೆ ಪರಿಶೀಲಿಸಿದಾಗ ಹಣ ವರ್ಗಾವಣೆ ಆಗದಿರುವುದು ಕಂಡು ಬಂದಿದೆ. ಈ ಸಂಬಂಧ ಮಾಲೀಕರು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಗಳನ್ನು ಬಂಧಿಸ ಲಾಗಿದೆ ಎಂದು ಪೊಲೀಸರು ಹೇಳಿದರು.

ಆರೋಪಿಗಳು ಚಿನ್ನಾಭರಣ ಮಳಿಗೆ ಯಿಂದ ದೋಚಿದ್ದ ಚಿನ್ನಾಭರಣಗಳನ್ನು ಬೇರೆಡೆ ಅಡವಿಟ್ಟು, ಹಣ ಪಡೆದು ಐಷಾ ರಾಮಿ ಜೀವನಕ್ಕೆ ವ್ಯಯಿಸಿದ್ದಾರೆ ಎಂಬುದು ಗೊತ್ತಾಗಿದೆ. ಅಲ್ಲದೆ, ಬೇರೆ ಕಡೆಯೂ ಇದೇ ರೀತಿಯಲ್ಲಿ ವಂಚನೆ ಮಾಡಿರುವುದು ಕಂಡು ಬಂದಿದೆ. ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

WPL 2025: RCB Player Retention List Released; Major player out

WPL 2025: ಆರ್‌ ಸಿಬಿ ಆಟಗಾರರ ರಿಟೆನ್ಶನ್‌ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್

10

Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್

INDvsNZ; ಕಿವೀಸ್‌ ಆಟಗಾರನಿಗೆ ಹೇಗೆ ಸಹಾಯ ಮಾಡಿದ್ರಿ…: ಸಿಎಸ್‌ ಕೆ ವಿರುದ್ದ ಉತ್ತಪ್ಪ ಗರಂ

INDvsNZ; ಕಿವೀಸ್‌ ಆಟಗಾರನಿಗೆ ಹೇಗೆ ಸಹಾಯ ಮಾಡಿದ್ರಿ…: ಸಿಎಸ್‌ ಕೆ ವಿರುದ್ದ ಉತ್ತಪ್ಪ ಗರಂ

Ivan-Dsoza

MUDA: ಸಿಎಂ ಸಿದ್ದರಾಮಯ್ಯ ಯಾವುದೇ ತಪ್ಪು ಮಾಡಿಲ್ಲ, ಅದಕ್ಕೆ ಆತ್ಮಸ್ಥೈರ್ಯ ಹೆಚ್ಚಿದೆ: ಐವನ್‌

BIKE

Test Ride: ಟೆಸ್ಟ್ ರೈಡ್‌ಗಾಗಿ ಬೈಕ್ ಹಿಡಿದುಕೊಂಡು ಹೋದವ ಬರಲೇ ಇಲ್ಲ… ಸಿಬಂದಿ ಕಂಗಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

Cancer: ಎಳೆಯ ಮಕ್ಕಳಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್‌ ಸಮಸ್ಯೆ

Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು

Bengaluru: ರಸ್ತೆಯಲ್ಲಿ ಹೋಗುತ್ತಿದ್ದ ಯುವತಿಗೆ ಯುವಕನಿಂದ ಲೈಂಗಿಕ ಕಿರುಕುಳ; ದೂರು

Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು

Theft: ವಿದ್ಯಾಗಣಪತಿ, ಸುಬ್ರಹ್ಮಣ್ಯ ದೇಗುಲಗಳ ಹುಂಡಿ ಹಣ, 5 ಚಿನ್ನದ ತಾಳಿ ಬೊಟ್ಟು ಕಳವು

Underpass: ಅಪಾಯ ಆಹ್ವಾನಿಸುತ್ತಿದೆ ಅಂಡರ್‌ಪಾಸ್‌ ಫಾಲ್ಸ್‌ ಸೀಲಿಂಗ್‌

Underpass: ಅಪಾಯ ಆಹ್ವಾನಿಸುತ್ತಿದೆ ಅಂಡರ್‌ಪಾಸ್‌ ಫಾಲ್ಸ್‌ ಸೀಲಿಂಗ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

WPL Auction: ಎಲ್ಲಾ ಆರು ತಂಡಗಳು ಉಳಿಸಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

Udupi: ಮುನಿಯಾಲ್‌ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್‌

Udupi: ಮುನಿಯಾಲ್‌ ಅಯುರ್ವೇದ ಕಾಲೇಜಿಗೆ ರಾಷ್ಟ್ರ ಮಟ್ಟದಲ್ಲಿ “ಎ’ ಗ್ರೇಡ್‌

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

ಜೀವನ ಪರ್ಯಂತ ವೀಲ್‌ ಚೇರ್‌ನಲ್ಲೇ ಇರುವ ಪುತ್ರನಿಗೆ ಅದ್ಧೂರಿಯಾಗಿ ಮದುವೆ ಮಾಡಿಸಿದ ಖ್ಯಾತ ನಟ

WPL 2025: RCB Player Retention List Released; Major player out

WPL 2025: ಆರ್‌ ಸಿಬಿ ಆಟಗಾರರ ರಿಟೆನ್ಶನ್‌ ಪಟ್ಟಿ ಬಿಡುಗಡೆ; ಪ್ರಮುಖ ಆಟಗಾರ್ತಿ ಔಟ್

10

Madras: ಮರಿಕೋತಿಗೆ ಚಿಕಿತ್ಸೆ ನೀಡಿದ್ದ ಪಶುವೈದ್ಯರು ಮತ್ತೆ ಭೇಟಿ ಮಾಡಬಹುದು: ಹೈಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.