![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, Nov 30, 2023, 10:12 AM IST
ಬೆಂಗಳೂರು: ಸ್ಟಾರ್ಟ್‌ಅಪ್ ಕಂಪನಿಯಲ್ಲಿ ಕೈ ತುಂಬ ವೇತನ ಕೊಡುವುದಾಗಿ ಭರವಸೆ ನೀಡಿ ತರಬೇತಿ ಹೆಸರಿನಲ್ಲಿ ಲಕ್ಷಾಂತರ ರೂ. ಪಡೆದು ವಂಚಿಸಿದ್ದ ಆರೋಪಿಯನ್ನು ವೈಟ್‌ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶದ ವಿಶಾಖಪಟ್ಟಣಂ ಮೂಲದ ಪವನ್ ಕುಮಾರ್(36) ಬಂಧಿತ. ಆರೋಪಿ 18 ಮಂದಿಗೆ 25 ಲಕ್ಷ ರೂ. ವಂಚಿಸಿದ್ದು, ಈ ಸಂಬಂಧ ಪವನ್ ಕುಮಾರ್ ಸೇರಿ 6 ಮಂದಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಸದ್ಯ ತನಿಖೆ ಮುಂದುವರಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಆರೋಪಿ ತನ್ನ ತಂಡದ ಇತರೆ ಸದಸ್ಯರ ಜತೆ ಸೇರಿ ನೂರಾರು ಮಂದಿಗೆ 20 ಕೋಟಿ ರೂ. ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಆರೋಪಿ ಆರೇಳು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದು, ವೈಟ್‌ಫೀಲ್ಡ್‌ನಲ್ಲಿ ಸಿಮಾಖ್ ಟೆಕ್ನಾಲಜಿ ಆ್ಯಂಡ್ ಮಾಂಟಿ ಕಾರ್ಪೊರೇಷನ್ ಎಂಬ ಸ್ಟಾರ್ಟ್ ಅಪ್ ಕಂಪನಿ ತೆರೆದಿದ್ದ. ತರಬೇತಿ ಜತೆಗೆ, ತಮ್ಮ ಅಥವಾ ಬೇರೆ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಪ್ರತಿ ಅಭ್ಯರ್ಥಿಯಿಂದ 1ರಿಂದ 2 ಲಕ್ಷ ರೂ. ವರೆಗೆ ಪಡೆದುಕೊಂಡಿದ್ದು, ಲ್ಯಾಪ್‌ಟಾಪ್ ಕೂಡ ನೀಡಿದ್ದ. ಕೆಲವರಿಗೆ ತಮ್ಮ ಕಂಪನಿಯಲ್ಲೇ ವರ್ಷಕ್ಕೆ ಐದು ಲಕ್ಷ ರೂ. ಪ್ಯಾಕೇಜ್ ನೀಡಿದ್ದ.
ಎರಡ್ಮೂರು ತಿಂಗಳು ಕಂಪನಿ ನಡೆಸಿದ ಆರೋಪಿಗಳು ಬಳಿಕ ಬಂದ್ ಮಾಡಿ ಪರಾರಿ ಆಗಿದ್ದರು. ಈ ಸಂಬಂಧ ಸದ್ಯ 18 ಮಂದಿ ದೂರು ನೀಡಿದ್ದರು. ಆರೋಪಿ ಬಂಧನ ಬಳಿಕ ದೂರುದಾರ ಸಂಖ್ಯೆ ಹೆಚ್ಚಾಗಿದ್ದು, 300ಕ್ಕೂ ಅಧಿಕ ಮಂದಿಗೆ ವಂಚಿಸಿದ ಪವನ್ ದೆಹಲಿಯಲ್ಲಿ ತಲೆಮರೆಸಿಕೊಂಡಿದ್ದ. ಇತ್ತೀಚೆಗೆ ಹಣ ಕಳೆದುಕೊಂಡುವರು, ಒಟ್ಟಾಗಿ ಆರೋಪಿಗೆ ಕರೆ ಮಾಡಿ, ಕಂಪನಿಗೆ ಸೇರಿಕೊಳ್ಳಲು 30ಕ್ಕೂ ಹೆಚ್ಚು ಮಂದಿ ಬಂದಿದ್ದಾರೆ.
ತರಬೇತಿ ಶುಲ್ಕ ಕೂಡ ಪಾವತಿ ಮಾಡುತ್ತೇವೆ ಎಂದಿದ್ದರು. ಅದನ್ನು ನಂಬಿದ ಆರೋಪಿ ದೆಹಲಿಯಿಂದ ಬೆಂಗಳೂರಿಗೆ ಬಂದು ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ. ಆಗ ಏಕಾಏಕಿ ಹತ್ತಾರು ಮಂದಿ ಯುವಕರು ತನ್ನ ಮೇಲೆ ಕೂಗಾಡಿದ್ದರಿಂದ ರಕ್ಷಣೆಗಾಗಿ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು ಸಹಾಯ ಕೋರಿದವನೇ ವಂಚಕ ಎಂದು ಗೊತ್ತಾಗಿ ಬಂಧಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.