Fraud Case: 2 ಕೋಟಿ ರೂ.ಗೆ 3.5 ಕೋಟಿ ರೂ. ಕೊಡುವುದಾಗಿ ವಂಚನೆ

Team Udayavani, Jan 13, 2025, 11:16 AM IST

895

ಬೆಂಗಳೂರು: ಮಲೇಷಿಯಾ ಮೂಲದ ಕಂಪನಿಯಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದರೆ ಒಂದೇ ದಿನದಲ್ಲಿ 3.5 ಕೋಟಿ ರೂ. ನೀಡುವುದಾಗಿ ವಂಚಿಸಿದ್ದ ಇಬ್ಬರು ಬಿಇ ಪದವೀಧರರು ಹಾಗೂ ಇಬ್ಬರು ಗುತ್ತಿಗೆದಾರರು ಸೇರಿದಂತೆ 7 ಮಂದಿ ಆರೋಪಿಗಳನ್ನು ಹಲಸೂರು ಗೇಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಶ್ಯಾಮ್‌ ಥಾಮಸ್‌ (59), ಜೋಶ್‌ ಎಂ.ಕರುವಿಲ್ಲಾ (62), ಜೆಪಿನಗರದ ಜೀನ್‌ ಕಮಲ್‌ (45), ಮುಂಬೈನ ವಿಜಯ್‌ ವಾಮನ್‌ ಚಿಪ್ಲೊಂಕರ್‌ (45), ಬೆಂಗಳೂರು ಹೆಣ್ಣೂರಿನ ಊರ್ವಶಿ ಗೋಸ್ವಾಮಿ (34), ಜಾಫ‌ರ್‌ ಸಾದೀಕ್‌ (39), ವಿದ್ಯಾರಣ್ಯಪುರದ ಅಮೀತ್‌ ಮಹೇಶ್‌ ಗಿಡ್ವಾನಿ (40) ಬಂಧಿತರು.

ಸುಂಕದಕಟ್ಟೆಯ ಶ್ರೀನಿವಾಸ ನಗರದ ನಿವಾಸಿ ನವೀನ್‌ (34) ವಂಚನೆಗೊಳಗಾದವರು. ಇನ್ನು ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ದೆಹಲಿ, ಗುಜರಾತ್‌ ಹಾಗೂ ಮಧ್ಯಪ್ರದೇಶ ಮೂಲದ ಐವರಿಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ಆರೋಪಿಗಳಿಂದ 44 ಲಕ್ಷ ರೂ. ನಗದು, ನೋಟು ಎಣಿಕೆ ಯಂತ್ರ ಹಾಗೂ 5 ಮೊಬೈಲ್‌ ಜಪ್ತಿ ಮಾಡಲಾಗಿದೆ.

ಪ್ರಕರಣದ ವಿವರ: ನವೀನ್‌ ಅವರನ್ನು ಸಂಪರ್ಕಿಸಿದ್ದ ಆರೋಪಿಗಳು ಮಲೇಷಿಯಾ ಮೂಲದ ಎಂಇಡಿಬಿ ಕ್ಯಾಪಿಟಲ್‌ ಬೇರ್‌ ಹೆಡ್‌ ಎಂಬ ಖಾಸಗಿ ಕಂಪನಿಯಲ್ಲಿ 2 ಕೋಟಿ ರೂ. ಹೂಡಿಕೆ ಮಾಡಿದರೆ, ಆ ಕಂಪನಿಯಿಂದ 3.50 ಕೋಟಿ ರೂ.ನಷ್ಟು ಆರ್‌.ಟಿ.ಜಿ.ಎಸ್‌/ಎನ್‌.ಇ.ಎಫ್.ಟಿ ಮೂಲಕ ಒಂದೇ ದಿನದಲ್ಲಿ ಲಾಭ ನೀಡುವ ಎಂಬುದಾಗಿ ನಂಬಿಸಿದ್ದರು. ಆರೋಪಿಗಳ ಸೂಚನೆ ಯಂತೆ ನವೀನ್‌ ಅವರು ಕಬ್ಬನಪೇಟೆ, 11ನೇ ಕ್ರಾಸ್‌ನಲ್ಲಿರುವ ಪಟೇಲ್‌ ಎಂಟರ್‌ ಪ್ರçಸಸ್‌ ಎಂಬ ಕಚೇರಿಗೆ ತೆರಳಿ ಹೂಡಿಕೆ ಮಾಡುವ ಸಲುವಾಗಿ ಮಲೇಷಿಯಾ ಮೂಲದ ಕಂಪನಿ ಪ್ರತಿನಿಧಿ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಗೆ 2 ಕೋಟಿ ರೂ. ನೀಡಿದ್ದರು. ಆ ಕಂಪನಿಯ ಪ್ರತಿನಿಧಿಯು ನೋಟು ಎಣಿಕೆ ಮಾಡುವ ಯಂತ್ರದಿಂದ ಹಣವನ್ನು ಎಣಿಕೆ ಮಾಡಿಕೊಂಡಿದ್ದ. ಬಳಿಕ ಬ್ಯಾಂಕ್‌ ಖಾತೆಗೆ ಕಂಪನಿ ವತಿಯಿಂದ 9,780 ರೂ. ವರ್ಗಾವಣೆ ಮಾಡಿ, ಉಳಿದ ಹಣ ಆದಷ್ಟು ಬೇಗ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ ಎಂದು ನವೀನ್‌ ಅವರನ್ನು ನಂಬಿಸಿದ್ದ. ಆ ಪ್ರತಿನಿಧಿಯು ಈ ಕಚೇರಿಯಲ್ಲಿ ಹಣ ಇಡಲು ಸುರಕ್ಷತೆ ಇಲ್ಲವಾದ್ದರಿಂದ, ಮತ್ತೂಂದು ಕಚೇರಿಯ ಲಾಕರ್‌ನಲ್ಲಿಡುವುದಾಗಿ ದೂರುದಾರರನ್ನು ನಂಬಿಸಿ ಹಣವನ್ನು ತೆಗೆದುಕೊಂಡು ಹೋಗಿದ್ದ. ನಂತರ ನವೀನ್‌ಗೆ ಯಾವುದೇ ರೀತಿಯ ಲಾಭವನ್ನಾಗಲಿ, ಹೂಡಿಕೆ ಮಾಡಿದ ಹಣವನ್ನಾಗಲಿ ವಾಪಸ್‌ ನೀಡದೇ ವಂಚಿಸಿದ್ದ. ವಂಚನೆಗೊಳಗಾದ ವ್ಯಕ್ತಿ ಈ ಕುರಿತು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಇಬ್ಬರು ಬಿ.ಇ.ಪಧವೀಧರರು: ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಬಾತ್ಮೀದಾರರಿಂದ ಖಚಿತ ಮಾಹಿತಿಯನ್ನು ಕಲೆಹಾಕಿ ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಬಳಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡಿದ್ದರು. ವಿಚಾರಣೆ ವೇಳೆ ಆರೋಪಿಗಳು ಈ ಪ್ರಕರಣದಲ್ಲಿ ವಂಚನೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದರು. ಇವರು ಕೊಟ್ಟ ಮಾಹಿತಿ ಆಧರಿಸಿ ಪ್ರಕರಣದ ಇತರ ಆರೋ ಪಿಗಳನ್ನು ಪೊಲೀಸರು ಬಂಧಿಸಿ ದ್ದಾರೆ. ಆರೋ ಪಿಗಳಾದ ಶ್ಯಾಮ್‌ ಥಾಮಸ್‌ ಹಾಗೂ ಜೀನ್‌ ಕಮಲ್‌ ಬಿ.ಇ ಪಧವೀ ಧರರಾಗಿದ್ದು, ಕೇರಳದಲ್ಲಿ ಮೆಡಿಕಲ್‌ ಸ್ಟೋರ್‌ ಇಟ್ಟುಕೊಂಡಿದ್ದರು. ಇನ್ನು ಜೋಶ್‌ ಬ್ರೋಕರ್‌ ಕೆಲಸ ಮಾಡಿಕೊಂಡಿದ್ದರೆ, ವಿಜಯ್‌ ವಾಮನ್‌ ಚಿಪ್ಲೊಂಕರ್‌ ಹಾಗೂ ಊರ್ವಶ್ವಿ‌ ಗೋಸ್ವಾಮಿ ಗುತ್ತಿಗೆದಾರರಾಗಿದ್ದಾರೆ.

ಟಾಪ್ ನ್ಯೂಸ್

Pranavananda Swamiji demands grants for backward class corporations in the budget

ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Jammu Kashmir: Prime Minister Modi inaugurated the Z-Morh tunnel in Sonmargl

Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ನಭದಲ್ಲಿ ಕಣ್ಣು-ನೆಲದಲ್ಲಿ ಕಾಲು: ಮೌನ ಕ್ರಾಂತಿ: ಭೂ ಸಾಮರ್ಥ್ಯ ವೃದ್ಧಿಸಿದ ಬಾಹ್ಯಾಕಾಶ ಶಕ್ತಿ

ಪ್ರೇಯಸಿಯ ಪತಿಯನ್ನು ಹತ್ಯೆಗೈಯಲು ಕರೆದಿದ್ದ ಬಾಡಿಗೆ ಹಂತಕರು ಕೊಂಡಿದ್ದು ರಿಕ್ಷಾ ಚಾಲಕನನ್ನು

ಹತ್ಯೆಗೈಯಲು ಹೇಳಿದ್ದು ಪ್ರೇಯಸಿಯ ಪತಿಯನ್ನು, ಬಾಡಿಗೆ ಹಂತಕರು ಕೊಂದಿದ್ದು Taxi ಚಾಲಕನನ್ನು

ಜ.17ಕ್ಕೆ ಬರಲಿದೆ ಸಂಜು ವೆಡ್ಸ್‌ ಗೀತಾ-2

Sanju Weds Geetha 2: ಜ.17ಕ್ಕೆ ಬರಲಿದೆ ಸಂಜು ವೆಡ್ಸ್‌ ಗೀತಾ-2

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

Trinadha Rao Nakkina: ನಟಿಯ ʼಸೈಜ್‌ʼ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ ನಿರ್ದೇಶಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

216

Bengaluru: ಟ್ರಕ್‌ ಡಿಕ್ಕಿ; ಜನ್ಮದಿನದಂದೇ ಬಾಲಕ ಸಾವು

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Bengaluru: ರಸ್ತೆ ಬದಿ ಮಲಗುವ ವಿಷಯಕ್ಕೆ ಜಗಳ; ಕಟ್ಟಿಗೆಯಿಂದ ಹೊಡೆದು ವ್ಯಕ್ತಿಯ ಕೊಲೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

Bengaluru: ಆನ್‌ಲೈನ್‌ ಗೇಮ್‌ನಲ್ಲಿ ಹಣ ಕಳೆದುಕೊಂಡ ಇಬ್ಬರು ಆತ್ಮಹತ್ಯೆ

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

Bengaluru: ಹಸುಗಳ ಕೆಚ್ಚಲು ಕೊಯ್ದ ಪ್ರಕರಣ: ಓರ್ವ ಆರೋಪಿ ಬಂಧನ

Manipal-mara

Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Aranthodu: A woman from Alletti village goes missing with two children

Aranthodu: ಇಬ್ಬರು ಮಕ್ಕಳೊಂದಿಗೆ ಆಲೆಟ್ಟಿ ಗ್ರಾಮದ ಮಹಿಳೆ ನಾಪತ್ತೆ

6

Hebri ಪೇಟೆಯಲ್ಲೇ ನೆಟ್ವರ್ಕಿಲ್ಲ! ಇಲ್ಲಿನ ಕೆಲವು ಕಡೆ ಮನೆಯೊಳಗೆ ಫೋನ್‌ ಬಳಸುವಂತಿಲ್ಲ!

Pranavananda Swamiji demands grants for backward class corporations in the budget

ಬಜೆಟ್‌ನಲ್ಲಿ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನಕ್ಕೆ ಪ್ರಣವಾನಂದ ಸ್ವಾಮೀಜಿ ಆಗ್ರಹ

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Tollywood: ರಿಲೀಸ್‌ ಆಗಿ ಒಂದೇ ದಿನದಲ್ಲಿ ʼಡಾಕು ಮಹಾರಾಜ್‌ʼ HD ಪ್ರಿಂಟ್‌ ಲೀಕ್

Jammu Kashmir: Prime Minister Modi inaugurated the Z-Morh tunnel in Sonmargl

Jammu Kashmir: ಸೋನ್ಮಾರ್ಗ್‌ನಲ್ಲಿ ಝಡ್-ಮೋರ್ಹ್ ಸುರಂಗವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.