Fraud: ಖಾಕಿ ಸೋಗಿನಲ್ಲಿ ಮಹಿಳಾ ಥೆರಪಿಸ್ಟ್ ಗೆ ವಂಚನೆ
Team Udayavani, Jul 23, 2024, 11:09 AM IST
ಬೆಂಗಳೂರು: ಪೊಲೀಸ್ ಅಧಿಕಾರಿ ಸೋಗಿನಲ್ಲಿ ಮಹಿಳಾ ಥೆರಪಿಸ್ಟ್‌ಗೆ ಅತ್ಯಾಚಾರದ ಬೆದರಿಕೆ ಹಾಕಿ ಆಕೆಯಿಂದ 1.50 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಯನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ರಾಮಮೂರ್ತಿನಗರದ ಮಹೇಂದ್ರ ಕುಮಾರ್ (33) ಬಂಧಿತ ಆರೋಪಿ.
ಜುಲೈ 3ರಂದು ಈ ಘಟನೆ ನಡೆದಿದೆ. ಕೋರಮಂಗಲ 6ನೇ ಬ್ಲಾಕ್ ನಿವಾಸಿ 25 ವರ್ಷದ ಮಹಿಳಾ ಥೆರಪಿಸ್ಟ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಏನಿದು ಪ್ರಕರಣ?: ಪಶ್ಚಿಮ ಬಂಗಾಳ ಮೂಲದ ಸಂತ್ರಸ್ತೆ ಕೋರಮಂಗಲದ 6ನೇ ಬ್ಲಾಕ್‌ನಲ್ಲಿ ನೆಲೆಸಿದ್ದಾರೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಪಡೆದು ಗ್ರಾಹಕರು ಕರೆಯುವ ಸ್ಥಳಕ್ಕೆ ತೆರಳಿ ಮಸಾಜ್ ಥೆರಪಿ ಮಾಡುತ್ತಾರೆ. ಜುಲೈ 3ರಂದು ರಾತ್ರಿ 9.30ಕ್ಕೆ ಆರೋಪಿ ಮಹೇಂದ್ರ ಕುಮಾರ್, ಸುರೇಶ್ ಹೆಸರಿನಲ್ಲಿ ಮಸಾಜ್‌ಗಾಗಿ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿದ್ದಾನೆ. ಬಳಿಕ ಥೆರಪಿಸ್ಟ್‌ಗೆ ಕರೆ ಮಾಡಿ ರಾಮಮೂರ್ತಿನಗರದ ನವ್ಯ ನಿಸರ್ಗ ಅಪಾರ್ಟ್ ಮೆಂಟ್ ಬಳಿ ಬರುವಂತೆ ಸೂಚಿಸಿದ್ದಾನೆ. ರಾತ್ರಿ 10.30ಕ್ಕೆ ಆರೋಪಿ ನೀಡಿದ್ದ ವಿಳಾಸಕ್ಕೆ ಮಹಿಳೆ ತೆರಳಿದ್ದಾರೆ. ಅದೇ ವೇಳೆ ಚಾಲಕನೊಂದಿಗೆ ಕಾರಿನಲ್ಲಿ ಬಂದ ಆರೋಪಿ ಥೆರಪಿಸ್ಟ್ ಅನ್ನು ಕಾರಿನಲ್ಲಿ ಕೂರಿಸಿಕೊಂಡಿದ್ದಾನೆ. ಬಳಿಕ ಸ್ವಲ್ಪ ದೂರ ಹೋಗುತ್ತಿದ್ದಂತೆ ಕಾರಿನಲ್ಲಿ ಕುಳಿತ್ತಿದ್ದ ಸಂತ್ರಸ್ತೆ ಮೇಲೆ ಆರೋಪಿ ಹಲ್ಲೆ ನಡೆಸಿ, ನಾನು ಪೊಲೀಸ್ ಅಧಿಕಾರಿ. ನನಗೆ ಹಣ ಕೊಡಬೇಕು. ಇಲ್ಲವಾದರೆ, ನಿನ್ನ ಮೇಲೆ ಅತ್ಯಾಚಾರ ಮಾಡುವುದಾಗಿ ಬೆದರಿಸಿದ್ದಾನೆ. 10 ಲಕ್ಷ ರೂ. ಕೊಡುವಂತೆ ಬೇಡಿಕೆ ಇರಿಸಿದ್ದಾನೆ. ಅದಕ್ಕೆ ಥೆರಪಿಸ್ಟ್, ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಎಂದಿದ್ದಾರೆ. ಅದರಿಂದ ಕೋಪಗೊಂಡ ಆರೋಪಿ, ಹಣ ಕೊಡಲೇಬೇಕು. ನಿನ್ನ ಸ್ನೇಹಿತರು ಅಥವಾ ಸಂಬಂಧಿಕರಿಗೆ ಕರೆ ಮಾಡಿ ಹಣ ತರಿಸು ಎಂದು ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಾರೆ.
1.50 ಲಕ್ಷ ರೂ. ಸುಲಿಗೆ: ಆರೋಪಿಯ ದೌರ್ಜನ್ಯದಿಂದ ಗಾಬರಿಗೊಂಡ ಸಂತ್ರಸ್ತೆ ತನ್ನ ಸ್ನೇಹಿತನಿಗೆ ಕರೆ ಮಾಡುತ್ತಿದ್ದಂತೆ, ಆರೋಪಿಯೇ ಮೊಬೈಲ್ ಕಸಿದುಕೊಂಡು ಮಾತಾಡಿದ್ದಾನೆ. ಬಳಿಕ ಸ್ಕ್ಯಾನರ್ ಕಳುಹಿಸಿ, ಗೂಗಲ್ ಪೇ ಮೂಲಕ ಸಂತ್ರಸ್ತೆ ಸ್ನೇಹಿತನಿಂದ 1.50 ಲಕ್ಷ ರೂ. ಅನ್ನು 2 ಬಾರಿ ಹಾಕಿಸಿಕೊಂಡಿದ್ದಾನೆ. ನಂತರ ಈ ಹಣವನ್ನು ತನ್ನ ಸಹಚರರ ಮೂಲಕ ಎಟಿಎಂನಲ್ಲಿ ಡ್ರಾ ಮಾಡಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. ನಂತರ ಆರೋಪಿಯು ನೀನು ಇಲ್ಲಿ ಇರಬೇಡ. ನಿನ್ನ ಸ್ವಂತ ಊರು ಪಶ್ಚಿಮ ಬಂಗಾಳಕ್ಕೆ ಹೋಗು. ಇಲ್ಲವಾದರೆ, ನಿನ್ನ ಮೇಲೆ ಸುಳ್ಳು ಕೇಸು ಹಾಕಿ ಜೈಲಿಗೆ ಕಳುಹಿಸುತ್ತೇನೆ ಎಂದು ಹೆದರಿಸಿದ್ದಾನೆ. ಬಳಿಕ ಅದೇ ಕಾರಿನಲ್ಲಿ ರಾತ್ರಿ ವೈಟ್μàಲ್ಡ್, ಕೋರಮಂಗಲ, ಹೆಬ್ಟಾಳ ಸೇರಿ ಇತರೆ ಸ್ಥಳಗಳಲ್ಲಿ ಸುತ್ತಾಡಿಸಿ, ಮುಂಜಾನೆ 4.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸಂತ್ರಸ್ತೆಯನ್ನು ಬಿಟ್ಟು ಪರಾರಿಯಾಗಿದ್ದಾನೆ. ಬಳಿಕ ಸಂತ್ರಸ್ತೆ ಠಾಣೆಗೆ ಬಂದು ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಮೋಜಿಗಾಗಿ ಸುಲಿಗೆ: ಡಾಗ್ ಬ್ರಿàಡಿಂಗ್ ಕೆಲಸ ಮಾಡುತ್ತಿದ್ದ ಆರೋಪಿ, ಮೋಜಿನ ಜೀವನಕ್ಕಾಗಿ ಸುಲಭವಾಗಿ ಹಣ ಸಂಪಾದಿಸಲು ವಂಚಿಸಿದ್ದಾನೆ. ಅಲ್ಲದೆ, ಈ ಹಿಂದೆ ಸಹ ಆರೋಪಿಯು ಮಾರತಹಳ್ಳಿ, ಪುಲಿಕೇಶಿನಗರ ಸೇರಿ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಹಲವರಿಗೆ ವಂಚನೆ ಮಾಡಿರುವುದು ಆತನ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಶಸ್ತ್ರಾಸ್ತ್ರ ತ್ಯಜಿಸಿ ಸಿಎಂ ಮುಂದೆ ಶರಣಾದ 6 ನಕ್ಸಲರು…
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.