ಕೌನ್ ಬನೇಗಾ ಕರೋಡ್‌ಪತಿ ಹೆಸರಿನಲ್ಲಿ ವಂಚನೆ
Team Udayavani, Jan 20, 2018, 11:33 AM IST
ಬೆಂಗಳೂರು: “ಕೌನ್ ಬನೇಗಾ ಕರೋಡ್‌ಪತಿ’ ಹೆಸರಿನಲ್ಲಿ ಕರೆ ಮಾಡಿದ ಕಳ್ಳರು ಕಾರು ಮೆಕ್ಯಾನಿಕ್‌ವೊಬ್ಬನಿಗೆ 1.15 ಲಕ್ಷ ರೂ. ವಂಚಿಸಿದ ಘಟನೆ ಶಿವಾಜಿನಗರದಲ್ಲಿ ನಡೆದಿದೆ. ಇಸೆಲ್ ಶರೀಫ್ ವಂಚನೆಗೊಳಗಾದ ವ್ಯಕ್ತಿ.
ಶಿವಾಜಿನಗರದ ರಸ್ತೆ ಬದಿಯಲ್ಲಿ ಕಾರು ಗ್ಯಾರೆಂಜ್ ನಡೆಸುತ್ತಿರುವ ಶರೀಫ್ಗೆ ವಿವಿಧ ನಾಲ್ಕು ಹೆಸರುಗಳಲ್ಲಿ ಕರೆ ಮಾಡಿದ ವ್ಯಕ್ತಿ, ನಿಮ್ಮ ಮೊಬೈಲ್ ನಂಬರ್ ಲಕ್ಕಿ ಡ್ರಾನಲ್ಲಿ ಆಯ್ಕೆಯಾಗಿದೆ. ನೀವು 35 ಲಕ್ಷ ರೂ. ಗೆದ್ದಿದ್ದೀರಿ. ನೀವು ಗೆದ್ದಿರುವ ಹಣ ಪಡೆಯಲು ನಾವು ಸೂಚಿಸಿದ ಖಾತೆಗೆ ಇಂತಿಷ್ಟು ಹಣ ಹಾಕಬೇಕು ಎಂದು ಹೇಳಿದ್ದಾರೆ. ಅದರಂತೆ ಇಸ್ಮಿಲ್ ನಾಲ್ಕೈದು ಕಂತುಗಳಲ್ಲಿ 1.15 ಲಕ್ಷ ರೂ. ಹಣ ವರ್ಗಾವಣೆ ಮಾಡಿದ್ದಾರೆ.
ಆದರೆ, ಇದೀಗ ವಂಚಕರ ನಿಜ ಬಣ್ಣ ಬಯಲಾಗಿದ್ದು, ಈ ಸಂಬಂಧ ಶರೀಫ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಜ.5ರಂದು ರಂದು ಶರೀಫ್ಗೆ ರತನ್ ದಾಸ್ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿ 35 ಲಕ್ಷ ರೂ. ಗೆದ್ದಿದ್ದೀರಿ ಎಂದು ಹೇಳಿದ್ದಾರೆ. ಆರಂಭದಲ್ಲಿ ನಿರ್ಲಕ್ಷಿಸಿ ಕರೆ ಸ್ಥಗಿತಗೊಳಿಸಿದ್ದಾರೆ. ಮರು ದಿನ ಮತ್ತೆ ಕರೆ ಮಾಡಿದ ಆರೋಪಿ, ಕೂಡಲೇ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿ ನೀಡುವಂತೆ ಹೇಳಿದ್ದಾನೆ.
ಇದನ್ನು ನಂಬಿದ ಶರೀಫ್ ಕೂಡಲೇ ತಮ್ಮ ಬ್ಯಾಂಕ್ ಖಾತೆ ಕುರಿತು ಮಾಹಿತಿ ನೀಡಿದ್ದಾರೆ. ಜ.7ರಂದು ಮತ್ತೆ ಕರೆ ಮಾಡಿದ ಆರೋಪಿ ಹಣ ವರ್ಗಾವಣೆ ಮಾಡಲು ತಾವು ಸೂಚಿಸಿದ ಖಾತೆಗೆ 25 ಸಾವಿರ ರೂ. ಜಮೆ ಮಾಡಬೇಕು ಎಂದು ಕೇಳಿಕೊಂಡಿದ್ದಾನೆ. ನಂಬಿದ ಶರೀಫ್ ಹಣ ಜಮೆ ಮಾಡಿದ್ದಾರೆ. ಎರಡು ದಿನಗಳ ಬಳಿಕ ಮತ್ತೆ ಕರೆ ಮಾಡಿದ ಆರೋಪಿಗಳು ಮತ್ತೂಮ್ಮೆ ಶರೀಫ್ ಮೂಲಕ 35 ಸಾವಿರ ರೂ. ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡಿದ್ದಾರೆ.
ವಾಟ್ಸ್‌ಆ್ಯಪ್‌ನಲ್ಲಿ ಸರ್ಟಿಫಿಕೇಟ್!: ಒಂದೆರಡು ದಿನಗಳ ಬಳಿಕ ಅನುಮಾನಗೊಂಡ ಶರೀಫ್ ಆರೋಪಿ ಕರೆ ಮಾಡಿ ಹಣದ ಕುರಿತು ಮಾಹಿತಿ ಕೇಳಿದ್ದಾರೆ. ಆದರೆ, ಇದಕ್ಕೆ ಸಮಾಜಾಯಿಶಿ ನೀಡಿದ ಆರೋಪಿ ನಾವು ಹೇಳುತ್ತಿರುವುದು ನಿಜ, ಬೇಕಾದರೆ ಪರೀಕ್ಷಿಸಿಕೊಳ್ಳಿ ಎಂದು ಶರೀಫ್ ವಾಟ್ಸ್‌ಆ್ಯಪ್‌ಗೆ, ಶರೀಫ್ ಹೆಸರಿರುವ ನಕಲಿ ಸರ್ಟಿಫಿಕೇಟ್ ಹಾಗೂ ರಾಷ್ಟ್ರೀಯ ಮಟ್ಟದ ಮನರಂಜನಾ ಖಾಸಗಿ ವಾಹಿನಿಯ ಲಾಂಛನ ಬಳಸಿ ರಿಯಾಲಿಟಿ ಶೋ ಕಾರ್ಯಕ್ರಮ ಸಿದ್ಧಪಡಿಸಿ ವಿಡಿಯೋ ಕೂಡ ಕಳುಹಿಸಿದ್ದಾರೆ.
ಈ ಶೋನಲ್ಲಿ ಶರೀಫ್ ನಂಬರ್ ಪ್ರಕಟಿಸಿದ್ದಾರೆ. ಇದರಿಂದ ಖುಷಿಯಾದ ಶರೀಫ್, ಮತ್ತೂಮ್ಮೆ ಹಣ ಕೇಳಿದ ಆರೋಪಿಗಳಿಗೆ, ತನ್ನ ಪತ್ನಿಯ ಚಿನ್ನಾಭರಣ ಗಿರವಿ ಇಟ್ಟು 20 ಸಾವಿರ ರೂ. ಹಣ ಜಮೆ ಮಾಡಿದ್ದಾರೆ. ಹೀಗೆ ನಾಲ್ಕೈದು ಕಂತುಗಳಲ್ಲಿ ಎಸ್‌ಬಿಐನ ಮೂರು ಹಾಗೂ ಸಿಂಡಿಕೇಟ್ ಬ್ಯಾಂಕ್‌ನ ಒಂದು ಖಾತೆಗೆ ಒಟ್ಟು 1.15 ಲಕ್ಷ ರೂ ಜಮೆ ಮಾಡಿದ್ದಾರೆ ಎಂದು ಸೈಬರ್ ಪೊಲೀಸರು ಮಾಹಿತಿ ನೀಡಿದರು. ಈ ಸಂಬಂಧ ಶರೀಫ್ ಜ.11ರಂದು ಸೈಬರ್ ಠಾಣೆಗೆ ದೂರು ನೀಡಿದ್ದು, ಆರೋಪಿಗಳು ಹಾಗೂ ಬ್ಯಾಂಕ್ ಖಾತೆದಾರರ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಆತ್ಮಹತ್ಯೆ ಮಾಡ್ಕೊ!: ಗೆದ್ದ ಹಣ ನೀಡದೆ ಪದೇ ಪದೆ ಹಣ ಕೇಳುತ್ತಿದ್ದ ವಂಚಕರ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಶರೀಫ್, ಆರೋಪಿಗೆ ಕರೆ ಮಾಡಿ, ನಾನು ಸಾಲ ಮಾಡಿ ಹಣ ಕಳುಹಿಸಿದ್ದೇನೆ. ಮೋಸ ಮಾಡಬೇಡಿ. ದಯವಿಟ್ಟು ಹಣ ಹಿಂದುರುಗಿಸಿ, ಇಲ್ಲವಾದರೆ, ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಷ್ಟೇ ಎಂದು ಬೇಡಿಕೊಂಡಿದ್ದಾರೆ. ಇದಕ್ಕೆ ಆರೋಪಿಗಳು ನಿಮ್ಮ ಸ್ನೇಹಿತರ ಬಳಿ 100 ರೂ. ಸಾಲ ಮಾಡಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊ ಎಂದು ಕರೆ ಸ್ಥಗಿತಗೊಳಿಸಿದ್ದಾರೆ.
ವಾಟ್ಸ್‌ಆ್ಯಪ್ ಸಮಸ್ಯೆ!: ಇತ್ತೀಚೆಗೆ ವಾಟ್ಸ್‌ಆ್ಯಪ್ ಅಪ್‌ಡೇಟ್ ಆಗಿದ್ದು, ತಾವು ಕಳುಹಿಸಿದ ಸಂದೇಶವನ್ನು ಬೇರೆಯವರಿಗೂ ಕಾಣದಂತೆ ಡಿಲೀಟ್ ಮಾಡಲು ಅವಕಾಶವಿದೆ. ಈ ಹಿನ್ನೆಲೆಯಲ್ಲಿ ವಂಚಕರು ಶರೀಫ್ ಜತೆ ವಾಟ್ಸ್‌ಆ್ಯಪ್ ಮೂಲಕ ನಡೆಸಿದ ಸಂಭಾಷಣೆಯನ್ನು ಪೂರ್ಣವಾಗಿ ಡಿಲೀಟ್ ಮಾಡಿದ್ದಾರೆ ಎಂದು ಸೈಬರ್ ಠಾಣೆ ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
Former Supreme Court Judge ವಿ.ಸುಬ್ರಹ್ಮಣಿಯನ್ ಎನ್‌ಎಚ್‌ಆರ್‌ಸಿ ಮುಖ್ಯಸ್ಥ
Shatrughan Sinha ಪುತ್ರಿ ವಿವಾಹ ಬಗ್ಗೆ ವಿಶ್ವಾಸ್ ವಿವಾದಾಸ್ಪದ ಹೇಳಿಕೆ
Maharashtra: ನಿಗದಿತ ಮಾರ್ಗ ಬಿಟ್ಟು ಬೇರೆಡೆ ಸಾಗಿದ ವಂದೇ ಭಾರತ್ ರೈಲು!
Syria ಮಾಜಿ ಅಧ್ಯಕ್ಷ ಅಸಾದ್‌ಗೆ ವಿಚ್ಛೇದನ ಕೊಡಲು ಪತ್ನಿ ಚಿಂತನೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.