Fraud: ಚೀಟಿ ವ್ಯವಹಾರದಲ್ಲಿ ವಂಚನೆ; ಪತಿ, ಪತ್ನಿ, ಪುತ್ರ ಬಂಧನ
Team Udayavani, Oct 6, 2024, 11:52 AM IST
ಮಹದೇವಪುರ: ಅನಧಿಕೃತವಾಗಿ ಚೀಟಿ ವ್ಯವಹಾರ ಮಾಡಿ ನೂರಾರು ಮಂದಿಗೆ ಕೋಟ್ಯಂತರ ರೂ.ವಂಚಿಸಿದ್ದ ಒಂದೇ ಕುಟುಂಬದ ಮೂವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಡುಗೋಡಿಯ ಬೆಳತ್ತೂರಿನಲ್ಲಿ ವಾಸವಾಗಿದ್ದ ಮಹದೇವಮ್ಮ ಅಲಿಯಾಸ್ ಅಶಾ, ಪತಿ ಚಂದ್ರಶೇಖರ್ ಹಾಗೂ ಪುತ್ರ ಸಾಗರ್ ಎಂಬುವರನ್ನು ಬಂಧಿಸಲಾಗಿದೆ.
ತಲಕಾಡು ಮೂಲದ ಮಹದೇವಮ್ಮ ಕುಟುಂಬ 10 ವರ್ಷಗಳಿಂದ ಬೆಳತ್ತೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿತ್ತು. ಚಂದ್ರಶೇಖರ್ ಟೀವಿ ರಿಪೇರಿ ಕೆಲಸ ಮಾಡುತ್ತಿದ್ದರೆ, ಪತ್ನಿ ಗೃಹಿಣಿಯಾಗಿ ಚೀಟಿ ವ್ಯವಹಾರ ನಡೆಸುತ್ತಿದ್ದಳು. 1 ರಿಂದ 10 ಲಕ್ಷ ರೂ.ವರೆಗೆ ಚೀಟಿ ನಡೆಸುತ್ತಿದ್ದ ಮಹದೇವಮ್ಮ ನೂರಾರು ಕೂಲಿ ಕಾರ್ಮಿಕರು ಮತ್ತು ಬಡ ಜನರ ಬಳಿ ಕೋಟ್ಯಂತರ ರೂ. ಚೀಟಿ ಕಟ್ಟಿಸಿಕೊಂಡು ರಾತ್ರೋರಾತ್ರಿ ಪರಾರಿಯಾಗಿದ್ದರು. ಹಣ ಕಳೆದುಕೊಂಡವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಮೈಸೂರಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.