ಪುತ್ರಿಯ ಅನಾರೋಗ್ಯ ನೆಪವೊಡ್ಡಿ ಮಹಿಳೆಯಿಂದ 19 ಲಕ್ಷ ದೋಚಿದ ಇನ್‌ಸ್ಟ್ರಾಗ್ರಾಂ ಸ್ನೇಹಿತ.!
Team Udayavani, Feb 28, 2022, 1:12 PM IST
ಬೆಂಗಳೂರು: ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ತನ್ನ ಪುತ್ರಿಯ ಅನಾರೋಗ್ಯ ನೆಪವೊಡ್ಡಿ ಬಸವನಗುಡಿಯ ಸುಮಾ ಎಂಬುವರಿಂದ ಮೂರು ವರ್ಷಗಳಿಂದ ಬರೋಬರಿ 19 ಲಕ್ಷ ರೂ. ದೋಚಿದ್ದಾನೆ.
ಈ ಸಂಬಂಧ ದಕ್ಷಿಣ ವಿಭಾಗದ ಸೆನ್ ಠಾಣೆಯಲ್ಲಿ ಅಪರಿಚಿತನ ವಿರುದ್ಧ ಎಫ್ಐಆರ್ ದಾಖಲಾಗಿದೆ. ಸುಮಾ ಅವರನ್ನು ಇನ್‌ಸ್ಟ್ರಾಗ್ರಾಂನಲ್ಲಿ ಪರಿಚಯ ಮಾಡಿಕೊಂಡ ಯೂಸೂಫ್ ಮ್ಯಾಥ್ಯೂ ಎಂಬ ವ್ಯಕ್ತಿ ವಿಡಿಯೋ ಕಾಲ್ ಮಾಡಿ, ತನ್ನ ಪುತ್ರಿಗೆ ಅನಾರೋಗ್ಯ ಎಂದು ತೋರಿಸಿದ್ದಾನೆ. ಬಳಿಕ ಕಸ್ಟಮ್ಸ್ ಇಲಾಖೆ ನಕಲಿ ರಶೀದಿ ಕಳುಹಿಸಿ ಕೂಡಲೇ ಹಣ ಕಳುಹಿಸುವಂತೆ ಕೋರಿದ್ದಾನೆ. ಅದನ್ನು ನಂಬಿದ ಸುಮಾ ಅವರು ತಮ್ಮ ಖಾತೆ ಹಾಗೂ ಅವರ ಸ್ನೇಹಿತರ ಖಾತೆಯಿಂದ 2019ರ ಜನವರಿ 14ರಿಂದ ಇದುವರೆಗೆ 19,03,467 ರೂ. ವರ್ಗಾವಣೆ ಮಾಡಿದ್ದಾರೆ. ಹಣ ವಾಪಸ್ ಕೊಡುವುದಾಗಿ ಹೇಳಿದ್ದ ಮ್ಯಾಥ್ಯೂ ಇದುವರೆಗೂ ಹಣ ಕೊಟ್ಟಿಲ್ಲ.
ಆತನ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಸುಮಾ ದೂರು ನೀಡಿದ್ದಾರೆ. ತನಿಖೆ ಮುಂದುವರಿದಿದೆ ಎಂದು ಸೆನ್ ಠಾಣೆ ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.