ಶ್ರೀಮಂತ ವರನಿಗಾಗಿ 36 ಲಕ್ಷ ರೂ. ಕಳೆದುಕೊಂಡ ಮಹಿಳೆ! ; ಆಗಿದ್ದೇನು ?
Team Udayavani, Jul 9, 2022, 2:49 PM IST
ಬೆಂಗಳೂರು: ಮ್ಯಾಟ್ರಿಮೊನಿ ವೆಬ್ಸೈಟ್ವೊಂದರಲ್ಲಿ ಶ್ರೀಮಂತ ವರನನ್ನು ಹುಡುಕಲು ಹೋದ ಮಹಿಳೆಯೊಬ್ಬರು 36 ಲಕ್ಷ ರೂ. ಕಳೆದುಕೊಂಡು ನ್ಯಾಯಕ್ಕಾಗಿ ಠಾಣೆ ಮೆಟ್ಟಿಲೇರಿದ್ದಾರೆ.
ಟಿಸಿ ಪಾಳ್ಯದ ನಿವಾಸಿ ಯಾಮಿನಿ ಅರನಿ ವಂಚನೆಗೊಳಗಾದ ಮಹಿಳೆ. ದೂರುದಾರ ಮಹಿಳೆ ಯಾಮಿನಿ ಮ್ಯಾಟ್ರಿಮೋನಿಯಲ್ ವೆಬ್ ಸೈಟ್ನಲ್ಲಿಶ್ರೀಮಂತ ವರನನ್ನು ಹುಡುಕುತ್ತಿದ್ದಳು. ಫೆ.27ರಂದು ಅಪರಿಚಿತ ವ್ಯಕ್ತಿಯೊಬ್ಬ ಯಾಮಿನಿಗೆ ಕರೆ ಮಾಡಿ ವಿವಾಹವಾಗುವುದಾಗಿ ಹೇಳಿದ್ದ. ಕೆಲಸದ ನಿಮಿತ್ತ ತಾನು ಕ್ಯಾಲಿಫೋರ್ನಿಯಾಗೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಹಣದ ಅವಶ್ಯಕತೆಯಿದ್ದು, ಅಲ್ಲಿಗೆ ಹೋದ ಕೂಡಲೇ ಹಣ ಹಿಂತಿರುಗಿಸುವುದಾಗಿ ನಂಬಿಸಿ ತನ್ನ ಬ್ಯಾಂಕ್ ಖಾತೆಯ ವಿವರ ಕಳುಹಿಸಿದ್ದ.
ಮುಂದೆ ವಿವಾಹವಾಗುವ ಯುವಕ ಎಂಬ ನಂಬಿಕೆ ಮೇಲೆ ಮಹಿಳೆ ಆತನ ಸೂಚನೆಯಂತೆ ಹಂತ-ಹಂತವಾಗಿ ಆರೋಪಿಯ ಖಾತೆಗೆ 36,88,994 ರೂ. ವರ್ಗಾವಣೆ ಮಾಡಿದ್ದಳು. ಇದಾದ ಬಳಿಕ ಆರೋಪಿ ಹಣವನ್ನೂ ಹಿಂತಿರುಗಿಸದೆ, ವಿವಾಹವೂ ಆಗದೇ ವಂಚಿಸಿದ್ದಾನೆ ಎಂದು ದೂರಿನಲ್ಲಿ ವಂಚನೆಗೊಳಗಾದ ಮಹಿಳೆ ಆರೋಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Illegal immigrants; ಬಂಧಿತ ಪಾಕ್ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?
Extraodinary; 3.5 ವರ್ಷಕ್ಕೇ ಎಂಜಿನಿಯರಿಂಗ್ ಪದವಿ ಕೊಡಲಿದೆ ವಿಟಿಯು!
Channapatna by-election; ನಿಖಿಲ್ ಗೆ ನಿರೀಕ್ಷೆಗೂ ಮೀರಿ ಗೆಲುವು: ಭವಿಷ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.