Arrested: ಬಟ್ಟೆ ಖರೀದಿಸಿ ಹಣ ನೀಡದೆ ಶೋರೂಮ್‌ಗೆ ವಂಚನೆ; ಬಂಧನ
Team Udayavani, Nov 12, 2024, 10:02 AM IST
ಬೆಂಗಳೂರು: ನಗರದ ಪ್ರತಿಷ್ಠಿತ ಬಟ್ಟೆ ಶೋ ರೂಮ್‌ನಲ್ಲಿ 31 ಸಾವಿರ ರೂ. ಮೌಲ್ಯದ ಬಟ್ಟೆ ಖರೀದಿಸಿ, ವಂಚಿಸಿದ ಚಾರ್ಟೆಡ್ ಅಕೌಂಟೆಡ್ ಓದುತ್ತಿದ್ದ ಯುವತಿಯನ್ನು ಸದಾಶಿವನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬಳ್ಳಾಪುರ ಮೂಲದ ರಶ್ಮಿ (25) ಬಂಧಿತ ಯುವತಿ. ಈಕೆ ಸದಾ ಶಿವನಗರದ ಆರ್‌ಎಂವಿ ಬಡಾವಣೆ ಯಲ್ಲಿರುವ ವಸಿಷ್ಠ ಬಾಟಿಕ್ ಎಂಬ ಬಟ್ಟೆ ಶೋ ರೂಮ್‌ನಲ್ಲಿ ಅ.29ರಂದು 31,800 ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ ವಂಚಿಸಿದ್ದಳು. ಈ ಸಂಬಂಧ ಶೋರೂಮ್‌ನ ಡಿಸೈನರ್ ಸಂಪದ ಎಂಬುವರು ನೀಡಿದ್ದರು.
ಏನಿದು ಪ್ರಕರಣ?: ಆರೋಪಿತೆ ರಶ್ಮಿ ನಗರದ ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಜತೆಗೆ ಚಾರ್ಟ್‌ಟೆಡ್ ಅಕೌಂಟೆಂಟ್ ವ್ಯಾಸಂಗ ಮಾಡುತ್ತಿದ್ದಾಳೆ. ಅ.29ರಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ವಸಿಷ್ಠ ಬಟ್ಟೆ ಶೋ ರೂಮ್‌ಗೆ ಬಂದಿದ್ದಾಳೆ. ನಂತರ ಡಿಸೈನರ್ ಸಂಪದ ಅವರಿಂದ 31,800 ರೂ. ಮೌಲ್ಯದ ಬಟ್ಟೆಗಳನ್ನು ಖರೀದಿಸಿ, ಸ್ನೇಹಾ ಎಂಬ ಹೆಸರಿನಲ್ಲಿ ಬಿಲ್ ಮಾಡಿಸಿದ್ದಾಳೆ. ಬಳಿಕ ಶೋ ರೂಮ್‌ನಲ್ಲಿದ್ದ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿ ಮಾಡಿರುವುದಾಗಿ ಮೊಬೈಲ್‌ನ ಸ್ಕ್ರಿನ್ ಶಾಟ್ ತೋರಿಸಿದ್ದಾಳೆ. ಆದರೆ, ಶೋ ರೂಮ್ ಬ್ಯಾಂಕ್ ಖಾತೆಗೆ ಹಣ ಸಂದಾಯವಾಗಿರಲಿಲ್ಲ. ಅಲ್ಲದೆ, ಸಿಬ್ಬಂದಿ ಸಂಪದ ಕೂಡ ಹಣ ಪಾವತಿಯಾಗಿಲ್ಲ ಎಂದಿದ್ದಾರೆ. ಆಗ ರಶ್ಮಿ ಹಣ ಪಾವತಿಯಾಗಿದೆ ಎಂದು ಮತ್ತೂಮ್ಮೆ ತನ್ನ ಮೊಬೈಲ್‌ನಲ್ಲಿ ಫೋಟೋ ತೋರಿಸಿದ್ದಾಳೆ. ಈ ವೇಳೆ ಸಿಬ್ಬಂದಿ ಸಂಪದ ಶೋ ರೂಮ್‌ನ ಮಾಲೀಕರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಆಗ ಮಾಲೀಕರು ಸದ್ಯ ಹಣ ಸಂದಾಯವಾಗಿಲ್ಲ.
ತಡವಾಗಿ ಹಣ ಸಂದಾಯವಾಗಬಹುದು. ಗ್ರಾಹಕರ ಮೊಬೈಲ್ ಸಂಖ್ಯೆ ಪಡೆದು ಕಳುಹಿಸಿಕೊಡುವಂತೆ ಹೇಳಿದ್ದಾರೆ. ಅದರಂತೆ ಸಂಪದ, ರಶ್ಮಿ ಮೊಬೈಲ್ ಸಂಖ್ಯೆ ಪಡೆದು ಕಳುಹಿಸಿದ್ದಾರೆ.
ಸಂಜೆಯಾದರೂ ಶೋ ರೂಮ್ ಬ್ಯಾಂಕ್ ಖಾತೆಗೆ ಹಣ ಬಂದಿಲ್ಲ. ಬಳಿಕ ರಶ್ಮಿ ನೀಡಿದ್ದ ಮೊಬೈಲ್ ಸಂಖ್ಯೆಗೆ ವಾಟ್ಸ್‌ಆ್ಯಪ್ ಸಂದೇಶ ಕಳುಹಿಸಿ ದರೂ ಪ್ರತಿಕ್ರಿಯೆ ಬಂದಿಲ್ಲ. ಹಲವು ಬಾರಿ ಕರೆ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಮರು ದಿನ ಮತ್ತೂಮ್ಮೆ ಕರೆ ಮಾಡಿದಾಗ, ಪುರುಷ ನೊಬ್ಬ ಕರೆ ಸ್ವೀಕರಿಸಿ ರಾಂಗ್ ನಂಬರ್ ಎಂದು ಕರೆ ಸ್ಥಗಿತಗೊಳಿಸಿದ್ದಾನೆ. ಬಳಿಕ ತಾವು ವಂಚನೆಗೊ ಳಗಾಗಿರುವುದು ಗೊತ್ತಾಗಿ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿತೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Havyaka Mahasabha: ಡಿ.27ರಿಂದ ಬೆಂಗಳೂರಿನಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನ
Lok Adalat: ಲೋಕ್ ಅದಾಲತ್ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್ಸಿ ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.