ವಿಕಲಚೇತನ ಮತದಾರರಿಗೆ ಉಚಿತ ಕ್ಯಾಬ್‌


Team Udayavani, Apr 4, 2019, 3:00 AM IST

vikala

ಬೆಂಗಳೂರು: ಮತದಾನದಲ್ಲಿ ಭಾಗಿಯಾಗುವ ವಿಕಲಚೇತನರಿಗೆ ಖಾಸಗಿ ಕ್ಯಾಬ್‌ಗಳನ್ನು ಕಾಯ್ದಿರಿಸಲು ಚುನಾವಣಾ ಆಯೋಗ ಮುಂದಾಗಿದ್ದು, ಆಯೋಗದಲ್ಲಿ ಹೆಸರು ನೋಂದಣಿ ಮಾಡಿಕೊಂಡ ವಿಕಲಚೇತನರಿಗೆ ಉಚಿತ ಕ್ಯಾಬ್‌ ಬಳಸಲು ಕೂಪನ್‌ ನೀಡಲಾಗುತ್ತದೆ ಎಂದು ನಗರ ಜಿಲ್ಲಾ ಚುನಾವಣಾಧಿಕಾರಿ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದ್ದಾರೆ.

ಲೋಕಸಭಾ ಚುನಾವಣೆ ಸಿದ್ಧತೆಗಳ ಕುರಿತು ಮಾಹಿತಿ ನೀಡಲು ನಗರ ಪೊಲೀಸ್‌ ಆಯುಕ್ತರೊಂದಿಗೆ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, ವಿಕಲಚೇತನರು ಮತದಾನದಲ್ಲಿ ಭಾಗವಹಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ವಾಹನ ವ್ಯವಸ್ಥೆ ಮಾಡಲಾಗುತ್ತಿದೆ. ಅದರಂತೆ ಈಗಾಗಲೇ ಆಯೋಗದ ಸಹಾಯವಾಣಿ “1950’ಗೆ ಕರೆ ಮಾಡಿ ವಾಹನ ವ್ಯವಸ್ಥೆ ಕೋರಿದ ವಿಕಲಚೇತನರಿಗೆ ಕೂಪನ್‌ ನೀಡಲಾಗುವುದು ಎಂದು ಹೇಳಿದರು.

ಈಗಾಗಲೇ ಓಲಾ ಸಂಸ್ಥೆ ಜತೆ ಒಪ್ಪಂದ ಮಾಡಿಕೊಂಡಿದ್ದು, ವಿಕಲಚೇತನ ಮತದಾರರನ್ನು ಮನೆಯಿಂದ ಮತಗಟ್ಟೆಗೆ ಕರೆತಂದು ಮತದಾನದ ಬಳಿಕ ಮತ್ತೆ ಅವರನ್ನು ಮನೆಗೆ ಬಿಡಲಾಗುವುದು. ಕ್ಯಾಬ್‌ ವೆಚ್ಚವನ್ನು ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಅಡಿಯಲ್ಲಿ ಭರಿಸುವುದಾಗಿ ಓಲಾ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ. ಏ.10ರೊಳಗೆ ವಿಕಲಚೇತನರು ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಕೋರಿದರು.

ಅಧಿಕಾರಿ ಸಿಬ್ಬಂದಿಗೆ ತರಬೇತಿ: ನಗರದ ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಪಾಲಿಕೆ ವ್ಯಾಪ್ತಿಗೆ ಬರುವ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 8514 ಮತಗಟ್ಟೆಗಳನ್ನು ನಿರ್ಮಿಸಲಾಗಿದ್ದು, ಒಟ್ಟು 42 ಸಾವಿರ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನೇಮಿಸಿಕೊಳ್ಳಲಾಗಿದೆ. ಅದರಂತೆ ಈಗಾಗಲೇ ಪಿಆರ್‌ಒ ಹಾಗೂ ಎಆರ್‌ಒಗಳಿಗೆ ಮೊದಲ ಹಂತದ ತರಬೇತಿ ನೀಡಲಾಗಿದ್ದು, ಏ.11ರಂದು ಎಲ್ಲ 42 ಸಾವಿರ ಸಿಬ್ಬಂದಿಗೆ ತರಬೇತಿ ನೀಡಲಾಗುವುದು. ಜತೆಗೆ ವೆಬ್‌ಕ್ಯಾಸ್ಟಿಂಗ್‌ ಹಾಗೂ ವಿಡಿಯೋ ಕವರೇಜ್‌ ಮಾಡಲಾಗುತ್ತಿದ್ದು, ವೀಕ್ಷಕರಿಗೂ ಏ.8 ಹಾಗೂ 16ರಂದು ತರಬೇತಿ ನೀಡಲಾಗುವುದು ಎಂದು ಹೇಳಿದರು.

ಅಂಚೆ ಮತ ಚಲಾಯಿಸಲು ಅವಕಾಶ: ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬ್ಬಂದಿಗೆ ಎಲೆಕ್ಷನ್‌ ಡ್ನೂಟಿ ಸರ್ಟಿಫಿಕೇಟ್‌ (ಇಡಿಸಿ) ಹಾಗೂ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಚುನಾವಣಾ ಕೆಲಸಕ್ಕೆ ನಿಯೋಜನೆಗೊಂಡ ಸಿಬ್ಬಂದಿ, ಅದೇ ಲೋಕಸಭಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೆ, ಅವರು ಕೆಲಸ ಮಾಡುವ ಮತಗಟ್ಟೆಯ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಿ ಮತ ಚಲಾಯಿಸಬಹುದು. ಬೇರೆ ಕ್ಷೇತ್ರದಲ್ಲಿ ನಿಯೋಜನೆಗೊಂಡಿದ್ದರೆ ಅಂಚೆ ಮೂಲಕ ಮತದಾನ ಮಾಡಬಹುದು. ಅದರಂತೆ ಈಗಾಗಲೇ ಅಧಿಕಾರಿಗಳಿಗೆ ಅಗತ್ಯವರುವ ಬ್ಯಾಲೆಟ್‌ ಪೇಪರ್‌ ಹಾಗೂ ದೃಢೀಕರಣ ಪತ್ರದ ಜತೆಗೆ ಪ್ರತ್ಯೇಕ ಲಕೋಟೆ ನೀಡಲಾಗಿದೆ ಎಂದು ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

ಮತದಾರ ಚೀಟಿ, ಗೈಡ್‌ ವಿತರಣೆ: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಏ.5ರಿಂದ ಮತದಾರರಿಗೆ ಭಾವಚಿತ್ರವಿರುವ ಮತದಾರರ ಚೀಟಿ ನೀಡಲಾಗುವುದು. ಬೂತ್‌ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಹೋಗಿ ಮತದಾರ ಚೀಟಿ ನೀಡುವರು. ಇದರೊಂದಿಗೆ ಮತದಾನದ ದಿನ ಮತಗಟ್ಟೆಯಲ್ಲಿ ಪಾಲಿಸಬೇಕಾದ ನಿಯಮಗಳು, ಮತದಾನ ವಿಧಾನ, ಚುನಾವಣೆಗೆ ಸಂಬಂಧಿಸಿದ ದೂರುಗಳನ್ನು ಯಾರಿಗೆ ನೀಡಬೇಕು ಹೀಗೆ ಹಲವು ಮಾಹಿತಿಯುಳ್ಳ ಗೈಡನ್ನು ಪ್ರತಿ ಮನೆಗೆ ನೀಡಲಾಗುವುದು ಎಂದರು.

12 ಲಕ್ಷ ಜನರಿಂದ ಅಣಕು ಮತದಾನ!: ಲೋಕಸಭೆ ಕ್ಷೇತ್ರದ ವ್ಯಾಪ್ತಿಗೆ ಬರುವ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯೋಗದಿಂದ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈವರೆಗೆ 12.30 ಲಕ್ಷ ಜನ ಅಣಕು ಮತ ಚಲಾಯಿಸಿದ್ದಾರೆ. ಆ ಮೂಲಕ ಆಯೋಗದಿಂದ ನಡೆಸಿದ ಜಾಗೃತಿ ಕಾರ್ಯಕ್ರಮಗಳಿಗೆ ಸ್ಪಂದನೆ ಸಿಕ್ಕಿದೆ. ಅದೇ ರೀತಿ 28 ವಿಧಾನಸಭಾ ಕ್ಷೇತ್ರಗಳ 6,940 ಶಾಲಾ-ಕಾಲೇಜುಗಳಲ್ಲಿ ಮತದಾನ ಸಾಕ್ಷರತಾ ಕ್ಲಬ್‌ಗಳನ್ನು ನೋಂದಣಿ ಮಾಡಿಸುವ ಮೂಲಕ ಹೊಸ ಮತದಾರರು ಮತದಾನದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

72.64 ಲಕ್ಷ ಮತದಾರರು: ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ 72,64,796 ಮತದಾರರಿದ್ದಾರೆ. ಆ ಪೈಕಿ 37,78,873 ಪುರುಷ ಮತ್ತು 34,84,702 ಮಹಿಳಾ ಮತದಾರರಿದ್ದು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳ ನಾಲ್ಕು ವಿಧಾನಸಭಾ ಕ್ಷೇತ್ರಗಳು ಸೇರಿದರೆ ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಒಟ್ಟು 90,83,554 ಮತದಾರರಿದ್ದಾರೆ ಎಂದು ತಿಳಿಸಿದರು.

ಎರಡು ಬ್ಯಾಲೆಟ್‌ ಯುನಿಟ್‌ ಬಳಕೆ: ಮೂರು ಕ್ಷೇತ್ರಗಳಲ್ಲಿ 15ಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕಣದಲ್ಲಿರುವುದರಿಂದ ಪ್ರತಿ ಮತಗಟ್ಟೆಯಲ್ಲೂ 2 ಬ್ಯಾಲೆಟ್‌ ಯುನಿಟ್‌ ಬಳಸಬೇಕಾಗುತ್ತದೆ. ಆದರೆ, ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಬ್ಯಾಲೆಟ್‌ ಯುನಿಟ್‌ಗಳು ಕಡಿಮೆಯಿದ್ದು, ಚುನಾವಣಾ ಆಯೋಗದ ಅನುಮತಿ ಪಡೆದು ಬೇರೆ ಜಿಲ್ಲೆಗಳಲ್ಲಿನ ಯುನಿಟ್‌ಗಳನ್ನು ತರಿಸಿಕೊಳ್ಳಲಾಗುತ್ತಿದೆ. ಇದರೊಂದಿಗೆ ಎಂ3 ಬ್ಯಾಲೆಟ್‌ ಯುನಿಟ್‌ಗಳನ್ನು ಹೊರ ರಾಜ್ಯಗಳಿಂದ ತರಿಸಿಕೊಳ್ಳಲು ಕೇಂದ್ರ ಚುನಾವಣಾ ಆಯೋಗದಿಂದ ಅನುಮತಿ ಪಡೆಯಲಾಗಿದೆ ಎಂದು ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

ಬಹುತೇಕ ಶಸ್ತ್ರಾಸ್ತ್ರಗಳು ವಶಕ್ಕೆ – ನಗರ ಪೊಲೀಸ್‌ ಆಯುಕ್ತ: ನಗರದಲ್ಲಿ ಪರವಾನಗಿ ಪಡೆದಿರುವ 8,556 ಶಸ್ತ್ರಾಸ್ತ್ರಗಳ ಪೈಕಿ 7,528ನ್ನು ವಶಕ್ಕೆ ಪಡೆಯಲಾಗಿದ್ದು, ಉಳಿದುವುಗಳಿಗೆ ಮನವಿ ಮೇರೆಗೆ ವಿನಾಯಿತಿ ನೀಡಲಾಗಿದೆ ಎಂದು ನಗರ ಪೊಲೀಸ್‌ ಆಯುಕ್ತ ಟಿ.ಸುನೀಲ್‌ ಕುಮಾರ್‌ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಂತಿಯುತ ಚುನಾವಣೆಗಾಗಿ 12 ಸಾವಿರ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ಜತೆಗೆ ಒಂದು ಕೇಂದ್ರ ಮೀಸಲು ಪಡೆಯಿದ್ದು, ಮತದಾನದ ವೇಳೆ ಇನ್ನೂ 12 ಪಡೆಗಳು ಬರುವ ನಿರೀಕ್ಷೆಯಿದೆ. ಜತೆಗೆ ಮತಗಟ್ಟೆಗಳಿಗೆ ನಿರಂತರವಾಗಿ ಭೇಟಿ ನೀಡುವ ಉದ್ದೇಶದಿಂದ 400 ಸೆಕ್ಟರ್‌ ಮೊಬೈಲ್‌ ತಂಡ ರಚಿಸಿದ್ದು, ಸುಮಾರು 3 ಸಾವಿರ ಪೊಲೀಸರು ಕಾರ್ಯನಿರ್ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ 1400 ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಿದ್ದು, ಮತದಾರರ ಮೇಲೆ ಪ್ರಭಾವ ಬೀರುವ 668 ಮಂದಿಯನ್ನು ಗುರುತಿಸಲಾಗಿದೆ. ಜತೆಗೆ ಈಗಾಗಲೇ 637 ಜನರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು, 1 ಲಕ್ಷದಿಂದ 5 ಲಕ್ಷದವರೆಗೆ ಬಾಂಡ್‌ ಪಡೆಯಲಾಗಿದೆ. ಸೂಕ್ಷ್ಮ ಮತಗಳ ಪ್ರದೇಶಗಳಲ್ಲಿ ಕೇಂದ್ರ ಮೀಸಲು ಪಡೆ ಪಥಸಂಚಲನ ಮಾಡಲಿದೆ ಎಂದು ಮಾಹಿತಿ ನೀಡಿದರು.

ಚುನಾವಣೆಗೆ ಅಡಚಣೆ ಮಾಡುವವರು ಹಾಗೂ ರೌಡಿಗಳ ಮೇಲೆ ನಿಗಾವಹಿಸಲಾಗಿದ್ದು, 3629 ಮಂದಿ ವಿರುದ್ಧ ಕೇಸು ದಾಖಲಾಗಿದೆ. ಜತೆಗೆ 4183 ಮಂದಿಯಿಂದ ಮುಚ್ಚಳಿಕೆ ಬರೆಸಿಕೊಂಡಿದ್ದು, 3979 ಮಂದಿ ವಿರುದ್ಧ ಜಾಮೀನು ರಹಿತ ವಾರೆಂಟ್‌ ನೀಡಲಾಗಿದೆ. ಇನ್ನು 150 ಮಂದಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, 5 ಮಂದಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ನಗರ ಜಿಲ್ಲಾಧಿಕಾರಿ ವಿಜಯಶಂಕರ್‌, ವಿಶೇಷ ಆಯುಕ್ತ ಮನೋಜ್‌ಕುಮಾರ್‌ ಮೀನಾ ಸೇರಿದಂತೆ ಪ್ರಮುಖರು ಹಾಜರಿದ್ದರು.

ಕಣದಲ್ಲಿರುವ ಅಭ್ಯರ್ಥಿಗಳ ಸಂಖ್ಯೆ
ಕ್ಷೇತ್ರ ಅಭ್ಯರ್ಥಿಗಳು
-ಬೆಂಗಳೂರು ಉತ್ತರ 31
-ಬೆಂಗಳೂರು ಕೇಂದ್ರ 22
-ಬೆಂಗಳೂರು ದಕ್ಷಿಣ 25

ಕ್ಷೇತ್ರವಾರು ನೋಂದಣಿಯಾದ ಮತದಾರರ ಸಂಖ್ಯೆ
ಕ್ಷೇತ್ರ ಪುರುಷರು ಮಹಿಳೆಯರು ಇತರೆ ಒಟ್ಟು
-ಬೆಂ.ಉತ್ತರ 1480405 1365594 491 2846490
-ಬೆಂ. ಕೇಂದ್ರ 1144855 1057255 393 2202503
-ಬೆಂ. ದಕ್ಷಿಣ 1153613 1061853 337 2215803
-ಒಟ್ಟು 3778873 3484702 1221 7264796

ಸಿ-ವಿಜಿಲ್‌ ಆ್ಯಪ್‌ಗೆ ಬಂದ ದೂರುಗಳ ವಿವರ
-ಸ್ವೀಕರಿಸಿದ ಒಟ್ಟು ದೂರುಗಳು 66
-ಕೈಬಿಟ್ಟ ದೂರುಗಳ ಸಂಖ್ಯೆ 21
-ಸತ್ಯಾಂಶವಿರುವ ದೂರುಗಳು 42

ನೀತಿ ಸಂಹಿತೆ ಜಾರಿ ಬಳಿಕ ಜಪ್ತಿ ಮಾಡಿದ ಹಣ
ಕ್ಷೇತ್ರ ಹಣ (ರೂ.ಗಳಲ್ಲಿ) ಮದ್ಯ (ಲೀ.ಗಳಲ್ಲಿ) ವಾಹನಗಳು ಎಫ್ಐಆರ್‌
-ಬೆಂ.ಉತ್ತರ 13,91,000 60,090.04 30 591
-ಬೆಂ. ಕೇಂದ್ರ 1,87,92,370 49,270.46 8 696
-ಬೆಂ. ದಕ್ಷಿಣ 9,50,000 18,055.49 7 396
-ಒಟ್ಟು 2,11,33,370 1,27,415.99 45 1,683

ಮತ ಎಣಿಕೆ ಕೇಂದ್ರಗಳು
ಕ್ಷೇತ್ರ ಮತ ಎಣಿಕೆ ಕೇಂದ್ರ
-ಬೆಂ.ಉತ್ತರ ಸೇಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌, ಮಲ್ಯ ಆಸ್ಪತ್ರೆ ಪಕ್ಕ
-ಬೆಂ.ಕೇಂದ್ರ ಮೌಂಟ್‌ ಕಾರ್ಮೆಲ್‌ ಕಾಲೇಜು, ಅರಮನೆ ರಸ್ತೆ
-ಬೆಂ.ದಕ್ಷಿಣ ಎಸ್‌ಎಸ್‌ಎಂಆರ್‌ವಿ ಕಾಲೇಜು, ಜಯನಗರ

ಟಾಪ್ ನ್ಯೂಸ್

ISRO: 100th launch in January

ISRO: ಜನವರಿ ತಿಂಗಳಲ್ಲಿ 100ನೇ ಉಡಾವಣೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು

BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು

Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್‌ ಲಸಿಕೆ!

Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್‌ ಲಸಿಕೆ!

ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್‌ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ

ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್‌ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ

Team India; 2025 ಭಾರತ ಆಡುವುದು ಹತ್ತೇ ಟೆಸ್ಟ್‌

Team India; 2025 ಭಾರತ ಆಡುವುದು ಹತ್ತೇ ಟೆಸ್ಟ್‌

ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮ

ಕಡಲ ನಗರಿಯಲ್ಲಿ ಹೊಸ ವರ್ಷದ ಸಂಭ್ರಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vidhana-Soudha

Response to Demand: ಬಿಸಿಯೂಟ ನೌಕರರಿಗೆ ಇಡುಗಂಟು: ಸರಕಾರದ ಮಾರ್ಗ ಸೂಚಿ ಪ್ರಕಟ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Imprisonment: ಸಂಘಟನೆಗಾಗಿ ದರೋಡೆ: ಜೆಎಂಬಿ ಉಗ್ರನಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Fraud: ಆಂಧ್ರ ಮಾಜಿ ಸಿಎಂ ಆಪ್ತನ ಹೆಸರ‌ಲ್ಲಿ ವಂಚನೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Arrested: ಸರ್ಕಾರಿ ನೌಕರಿ ಆಸೆ ತೋರಿಸಿ 46 ಜನಕ್ಕೆ 1 ಕೋಟಿ ವಂಚನೆ: ರೈಲ್ವೆ ಅಧಿಕಾರಿ ಸೆರೆ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

Bengaluru: ಸಿನಿಮೀಯವಾಗಿ ಬೈಕ್‌ ಕಳ್ಳನನ್ನು ಹಿಡಿದ ಜಲಮಂಡಳಿ ಅಧಿಕಾರಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ISRO: 100th launch in January

ISRO: ಜನವರಿ ತಿಂಗಳಲ್ಲಿ 100ನೇ ಉಡಾವಣೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

Mangaluru: ಅಪರಾಧಿ ಹಿತೇಶ್‌ ಶೆಟ್ಟಿಗಾರ್‌ಗೆ ಮರಣ ದಂಡನೆ ಶಿಕ್ಷೆ

BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು

BJP ರಾಜ್ಯಾಧ್ಯಕ್ಷ ಪಟ್ಟ ಗುಪ್ತ ಸಮರ ಆರಂಭ! ಸ್ಥಾನ ಉಳಿಸಿಕೊಳ್ಳಲು ಬಿವೈವಿ ಕಸರತ್ತು

Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್‌ ಲಸಿಕೆ!

Covid Vaccine: ಪತ್ನಿ ಕೊಂದಿದ್ದವನ ಪತ್ತೆಗೆ ನೆರವಾದ ಕೋವಿಡ್‌ ಲಸಿಕೆ!

ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್‌ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ

ಹೊಸ ವರ್ಷಕ್ಕೆ ಪುಷ್ಪಾಲಂಕೃತ ಧರ್ಮಸ್ಥಳ: ಒಂದು ಟನ್‌ ಹಣ್ಣು, ವಿವಿಧ ಬಗೆಯ ಹೂಗಳಿಂದ ಸಿಂಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.