ದಿವ್ಯಾಂಗರಿಗೆ ಉಚಿತ ಕ್ಯಾಬ್ ವ್ಯವಸ್ಥೆ
Team Udayavani, Apr 14, 2019, 3:32 AM IST
ಬೆಂಗಳೂರು: ದಿವ್ಯಾಂಗ ಮತದಾರರಿಗಾಗಿ ಕಲ್ಪಿಸಲಾದ ಉಚಿತ ಕ್ಯಾಬ್ ಸೇವೆಗೆ ಉತ್ತಮ ಸ್ಪಂದನೆ ದೊರೆತಿದ್ದು, ಬೆಂಗಳೂರು ಜತೆಗೆ ರಾಜ್ಯದ ಇತರ ಪ್ರಮುಖ ನಗರಗಳಿಗೂ ವಿಸ್ತರಿಸಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ.
ನಗರದಲ್ಲಿ ಕಲ್ಪಿಸಿರುವ ಉಚಿತ ಓಲಾ ಮತ್ತು ಉಬರ್ ಕ್ಯಾಬ್ ಸೇವೆ ಸುಮಾರು 5,627 ದಿವ್ಯಾಂಗ ಮತದಾರರು ಈಗಾಗಲೇ ಹೆಸರು ನೋಂದಾಯಿಸಿದ್ದಾರೆ. ಈ ಸಂಖ್ಯೆ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ಇದರ ಅಗತ್ಯತೆಯನ್ನು ಮನಗಂಡು ಹೆಚ್ಚು ದಿವ್ಯಾಂಗ ಮತದಾರರು ಹಾಗೂ ಅವರಿಗೆ ಅವಶ್ಯಕತೆ ಇರುವ ಕಡೆಗಳಲ್ಲಿ ಇದೇ ಮಾದರಿಯ ಸೇವೆಯನ್ನು ಪರಿಚಯಿಸಲು ಆಯೋಗ ನಿರ್ಧರಿಸಿದೆ.
ಮೊದಲ ಹಂತದಲ್ಲಿ ಅಂದರೆ ಏಪ್ರಿಲ್ 18ರಂದು ಬೆಂಗಳೂರು ಜತೆಗೆ ಮೈಸೂರು ಮತ್ತು ಮಂಗಳೂರಿನಲ್ಲಿ ಪರಿಚಯಿಸಲಾಗಿದೆ. ಅದೇ ರೀತಿ, ಎರಡನೇ ಹಂತದಲ್ಲಿ ಏಪ್ರಿಲ್ 23ರಂದು ಬಳ್ಳಾರಿ, ಕಲಬುರಗಿ, ಬೆಳಗಾವಿ, ಧಾರವಾಡದಲ್ಲಿ ಉಚಿತ ಕ್ಯಾಬ್ ಸೇವೆ ಕಲ್ಪಿಸಲಾಗುವುದು.
ಇದಕ್ಕಾಗಿ ಆ್ಯಪ್ ಆಧಾರಿತ ಕ್ಯಾಬ್ ಸೇವೆಗಳ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ದಿವ್ಯಾಂಗ ಮತದಾರರು ಸಹಾಯವಾಣಿ 1950ಗೆ ಕರೆ ಮಾಡಿ, ಈ ಸೇವೆ ಪಡೆಯಬಹುದು ಎಂದು ಆಯೋಗದ ಅಧಿಕಾರಿಗಳು ತಿಳಿಸಿದರು.
ಎಲ್ಲೆಲ್ಲಿ ಎಷ್ಟು ಬುಕಿಂಗ್?: ಪ್ರಸ್ತುತ ಬೆಂಗಳೂರು ಉತ್ತರದಲ್ಲಿ 4,050, ದಕ್ಷಿಣದಲ್ಲಿ 1,165 ಹಾಗೂ ಕೇಂದ್ರದಲ್ಲಿ 412 ಮಂದಿ ದಿವ್ಯಾಂಗರು ಕ್ಯಾಬ್ ಸೇವೆಗಾಗಿ ಹೆಸರು ನೋಂದಾಯಿಸಿದ್ದಾರೆ. ಇವರನ್ನು ಕರೆತರಲು 350 ಒಲಾ , 40 ಉಬರ್ ನಿಯೋಜಿಸಲಾಗಿದೆ.
ಮತದಾನದ ಹಿಂದಿನ ದಿನ ರಾತ್ರಿ ವಾಹನ ಸಂಖ್ಯೆ ಹಾಗೂ ಚಾಲಕನ ಮೊಬೈಲ್ ನಂಬರ್ ಒಳಗೊಂಡ ಮೆಸೇಜ್ ಅನ್ನು ಆಯಾ ಮತದಾರರ ಮೊಬೈಲ್‌ಗೆ ಕಳುಹಿಸಲಾಗುವುದು. ಮತದಾನದಂದು ನಿಗದಿತ ಸಮಯಕ್ಕೆ ಕ್ಯಾಬ್ ಬರಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಎನ್. ಮಂಜುನಾಥ ಪ್ರಸಾದ್ ಮಾಹಿತಿ ನೀಡಿದರು.
ಮತದಾರರಿಗೆ ವಾಹನ ವ್ಯವಸ್ಥೆ: 1950ಗೆ ಕರೆ ಮಾಡಿ, ವಾಹನಕ್ಕಾಗಿ ಹೆಸರು ನೋಂದಾಯಿಸಿಕೊಂಡು ಸ್ಥಳ, ಸಮಯ ಸೇರಿದಂತೆ ಎಲ್ಲ ಮಾಹಿತಿಯನ್ನು ನೀಡಬೇಕು. ಆಗ, ನಿಗದಿತ ಸಮಯಕ್ಕೆ ಕ್ಯಾಬ್ ಮನೆ ಮುಂದೆ ಬರುತ್ತದೆ. ಮತದಾನದ ನಂತರ ಪುನಃ ಮನೆಗೆ ತಲುಪಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Namma Metro; 314 ಮನೆಗಳ ಮೇಲೆ ಹಾದು ಹೋಗಲಿದೆ ಮೆಟ್ರೋ ಮಾರ್ಗ
Gold Scam; ವೈದ್ಯ ದಂಪತಿಗೂ ₹6.2 ಕೋಟಿ ವಂಚಿಸಿದ್ದ ಐಶ್ವರ್ಯ
Gold Scam; ಪವಿತ್ರಾ ಸ್ನೇಹಿತೆ ಜತೆಗೆ ಕಾಣಿಸಿಕೊಂಡ ಚಿನ್ನ ವಂಚನೆ ಕೇಸ್ ಆರೋಪಿ ಶ್ವೇತಾ
Egg Thrown Case: 100-150 ಜನರಿಂದ ನನ್ನ ಮೇಲೆ ದಾಳಿ: ಶಾಸಕ ಮುನಿರತ್ನ ದೂರು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri: ಸೇನಾ ವಾಹನ ದುರಂತ; ಕೊಡಗಿನ ಯೋಧ ಚಿಂತಾಜನಕ
Manmohan Singh; ಭಾರತದ ಮೊದಲ ಸಿಖ್ ಪ್ರಧಾನಿ ಈ ವಿಚಾರಕ್ಕಾಗಿ ಕ್ಷಮೆಯಾಚಿಸಿದ್ದರು
Video: ಮನಮೋಹನ್ ಸಿಂಗ್ ಹೇಳುವ ಬದಲು ಮೋದಿ ನಿಧನ ಎಂದ ನ್ಯೂಸ್ ಆ್ಯಂಕರ್.!
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.