ಸ್ಪರ್ಶ ಆಸ್ಪತ್ರೆಯಿಂದ ಉಚಿತ ತಪಾಸಣಾ ಶಿಬಿರ
Team Udayavani, Oct 16, 2017, 12:15 PM IST
ಬೆಂಗಳೂರು: ನಗರದ ಸ್ಪರ್ಶಆಸ್ಪತ್ರೆ ಸೋಮವಾರದಿಂದ(ಅ.16) ಆರುದಿನಗಳ ಕಾಲ ತುಮಕೂರು ರಸ್ತೆಯಲ್ಲಿರುವ ಆಸ್ಪತ್ರೆಯ ಆವರಣದಲ್ಲಿ 14ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಡ ಮಕ್ಕಳಿಗೆ ಮತ್ತು ವಿವಿಧ ನ್ಯೂನತೆಯಿಂದ ಬಳಲುತ್ತಿರುವ ನಿವೃತ್ತ ಶಿಕ್ಷಕರಿಗೆ ಉಚಿತ ತಪಾಸಣಾ ಶಿಬಿರವನ್ನು ಆಯೋಜಿಸಿದೆ.
ಸ್ಪರ್ಶ ವಚನ ಮತ್ತು ಸ್ಪರ್ಶ ಗುರು ನಮನ ವೈದ್ಯಕೀಯ ಸೇವಾ ಯೋಜನೆಯಡಿ ಈ ಶಿಬಿರವನ್ನು ಹಮ್ಮಿಕೊಂಡಿದೆ.ನುರಿತ ತಜ್ಞ ವೈದ್ಯರ ತಂಡ ಉಚಿತ ಶಿಬಿರಕ್ಕೆ ಆಯ್ಕೆಯಾಗಿರು 200 ಬಡ ಮಕ್ಕಳಿಗೆ ಹಾಗೂ 100ನಿವೃತ್ತ ಶಿಕ್ಷರಿಗೆ ನ್ಯೂರೋ ಸರ್ಜರಿ,ಯುರಾಲಜಿ, ಕಾರ್ಡಿಯಾ ಲಜಿ, ಕಾರ್ಡಿಯೋ ಥೋರಾಪಿಕ್ ಸರ್ಜರಿ, ಪ್ಲಾಸ್ಟಿಕ್ ಸರ್ಜರಿ ಸೇರಿದಂತೆ ಹಲವು ತಪಾಸಣೆಯನ್ನು ನಡೆಸಲಿದ್ದಾರೆ.
ಅಭ್ಯರ್ಥಿಗಳು ತಪಾಸಣೆಯ ಶಿಬಿರದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಮುಂಚಿತವಾಗಿಯೆ ದೂರವಾಣಿ ಮೂಲಕ ಸಮಯ ನಿಗದಿಪಡಿಸಿ ಕೊಳ್ಳುವುದು ಕಡ್ಡಾಯವಾಗಿದ್ದು,ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ. 7022288700 ಅಥವಾ 080- 49108000 ಅನ್ನು ಸಂಪರ್ಕಿಸಬಹುದೆಂದು ಸ್ಪರ್ಶ ಆಸ್ಪತ್ರೆಯ ಪ್ರಕಣೆ ತಿಳಿಸಿದೆ.
ಸ್ಪರ್ಶ ಆಸ್ಪತ್ರೆ, ಸ್ಪರ್ಶ ವಚನ ಮತ್ತು ಸ್ಪರ್ಶ ಗುರು ನಮನ ವೈದ್ಯಕೀಯ ಸೇವಾ ಯೋಜನೆಯನ್ನು ಆರಂಭಿಸಿದ್ದು. ಈ ಕಾರ್ಯಕ್ರಕ್ಕೆ ಇದೀಗ ಎಂಟು ವರ್ಷ ಸಂದಿದೆ.ಇದುವರೆಗೂ 1700 ಮಕ್ಕಳಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಿದ್ದು ಈ ಸಮಾಜಿಕ ಸೇವೆಗೆ ದೇಶ ಅಲ್ಲದೆ ವಿದೇಶ ಹಲವು ವೈದ್ಯರು,ದಾದಿಯರು ಮತ್ತು ತಂತ್ರಜ್ಞರು ಸ್ವಯಂ ಸೇವಾ ಭಾವನೆಯಿಂದ ಕೈ ಜೋಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.