ಕ್ಯಾಬ್ ದೋಸ್ತ್ನಿಂದ ಉಚಿತ ಐಟಿ ರಿಟರ್ನ್ಸ್ ಅಭಿಯಾನ
Team Udayavani, Mar 24, 2018, 10:29 AM IST
ಬೆಂಗಳೂರು: ಟ್ಯಾಕ್ಸಿ ಚಾಲಕರು ನಿಗದಿತ ಅವಧಿಯೊಳಗೆ ತೆರಿಗೆ ಪಾವತಿ ಮಾಡುವ ಸಂಬಂಧ ಕ್ಯಾಬ್ ದೋಸ್ತ್ ಸಂಸ್ಥೆ ಉಚಿತವಾಗಿ ಆದಾಯ ತೆರಿಗೆ ಸಲ್ಲಿಕೆ (ಐಟಿ ರಿಟರ್ನ್ಸ್) ಅಭಿಯಾನ ಆರಂಭಿಸಿದೆ. ನಗರದ ವಿವಿಧೆಡೆ ಕ್ಯಾಬ್ ದೋಸ್ತ್ ಮಾ.20ರಿಂದಲೇ ಆರಂಭಿಸಿರುವ ಅಭಿಯಾನ 26ರವರೆಗೆ ನಡೆಯಲಿದೆ. ಮಾ.24 ಮತ್ತು 25ರಂದು ಮಲ್ಲೇಶ್ವರ ಆಟದ ಮೈದಾನದಲ್ಲಿ ಬೆ.10.30ರಿಂದ ಸಂಜೆ 6ರವರೆಗೆ ಅಭಿಯಾನ ನಡೆಯಲಿದೆ. ಟ್ಯಾಕ್ಸಿ ಚಾಲಕರು ಪಾನ್ ಕಾರ್ಡ್, ಆಧಾರ್ ಕಾರ್ಡ್, ಗುರುತಿನ ಚೀಟಿ, ಬ್ಯಾಂಕ್ ಸ್ಟೇಟ್‌ಮೆಂಟ್ ದಾಖಲೆಗಳನ್ನು ಕಡ್ಡಾಯವಾಗಿ ತರಬೇಕು. ತೆರಿಗೆ ಪಾವತಿ ಮಾಡುವುದರಿಂದ ಉಂಟಾಗುವ ಅನುಕೂಲಗಳು ಹಾಗೂ ಸಾಧಕ-ಬಾಧಕಗಳ ಬಗ್ಗೆ ಆದಾಯ ತೆರಿಗೆ ಇಲಾಖೆಯ ನುರಿತ ತಜ್ಞರ ಸಲಹೆ ಪಡೆಯುವ ಅವಕಾಶ ಕೂಡ ಕಲ್ಪಿಸಲಾಗಿದೆ ಎಂದು ಕ್ಯಾಬ್ ದೋಸ್ತ್ ಸಂಸ್ಥಾಪಕಿ ಯಮುನಾ ಶಾಸ್ತ್ರಿ ತಿಳಿಸಿದ್ದಾರೆ. ಮಾಹಿತಿ ಮೊ.95909 06906, 97398 85822 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.