ಜಯದೇವದಿಂದ 200 ಬಡರೋಗಿಗಳಿಗೆ ಉಚಿತ ಚಿಕಿತ್ಸೆ
Team Udayavani, Oct 19, 2018, 1:13 PM IST
ಬೆಂಗಳೂರು: ನಗರದ ಖ್ಯಾತ ಜಯದೇವ ಹೃದ್ರೋಗ ವಿಜಾnನ ಮತ್ತು ಸಂಶೋಧನಾ ಸಂಸ್ಥೆ (ಎಸ್‌ಜೆಐಸಿಆರ್) ಆಯೋಜಿಸಿದ್ದ ಆಂಜಿಯೋಪ್ಲಾಸ್ಟಿ ಕಾರ್ಯಾಗಾರದಲ್ಲಿ ಸುಮಾರು 200 ಬಡರೋಗಿಗಳಿಗೆ ಯಶಸ್ವಿಯಾಗಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಿ ಉಚಿತವಾಗಿ ಸ್ಟಂಟ್ ಅಳವಡಿಸಲಾಗಿದೆ.
ಸೋಮವಾರ ಸಂಸ್ಥೆಯ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ್ ಮಾತನಾಡಿ, 200 ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳನ್ನು ಕೇವಲ 4 ದಿವಸಗಳಲ್ಲಿ ಮಾಡುವುದು ಒಂದು ಬೃಹತ್ ಸಾಧನೆ. ಈ ಅಸಾಧಾರಣ ಕಾರ್ಯಾಗಾರವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ನಮ್ಮಲ್ಲಿರುವ ಏಳು ಕ್ಯಾತ್‌ಲ್ಯಾಬ್‌ಗಳು, 75 ನುರಿತ ವೈದ್ಯರು, ತಂತ್ರಜ್ಞರು, ಶುಶ್ರೂಷಕರು ಹಾಗೂ ನೌಕರರರು ಕಾರಣ.
ಅವರ ಕುಶಲತೆ, ಕಾರ್ಯದಕ್ಷತೆ ಮತ್ತು ಸಮರ್ಪಣಾ ಭಾವದ ಸೇವೆಯ ಜತೆ ಗುಣಮಟ್ಟದ ಮೂಲಭೂತ ಸೌಕರ್ಯಗಳ ಪೂರೈಕೆಯಿಂದ ಇದು ಸಾಧ್ಯವಾಗಿದೆ. ಚಿಕಿತ್ಸೆ ಪಡೆದವರೆಲ್ಲರೂ ಬಡರೈತರು, ದಿನಗೂಲಿ ನೌಕರರು, ಆಟೋರಿûಾ ಚಾಲಕರು, ಬೀದಿಬದಿ ಕಾರ್ಮಿಕರು ಹಾಗೂ ನಿಸ್ಸಹಾಯಕ ಹಿರಿಯ ನಾಗರಿಕರರಾಗಿದ್ದಾರೆ. ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳ, ಆಂಧ್ರ ಮತ್ತು ತೆಲಂಗಾಣದ ಹೃದ್ರೋಗಿಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದರು.
ಡಾ. ಗೋವಿಂದರಾಜು ಸುಬ್ರಮಣಿ ಹಾರ್ಟ್ ಫೌಂಡೇಷನ್, ಇಲಿನಾಯಿಸ್, ಅಮೆರಿಕ ಮತ್ತು ಮೆಡಾóನಿಕ್ ವ್ಯಾಸ್ಕಾಲರ್ ಡಿವಿಷನ್ ಕಾರ್ಯಾಗಾರಕ್ಕೆ ಸ್ಟಂಟ್‌ಗಳನ್ನು ಉದಾರವಾಗಿ ನೀಡಿರುವುದು ಶ್ಲಾಘನೀಯ. ಡಾ. ಜಿ. ಸುಬ್ರಮಣಿರವರ ದೇಶಾಭಿಮಾನ, ಸಾಮಾಜಿಕ ಕಳಕಳಿ, ಉದಾರ ಕೊಡುಗೆ ಹಾಗೂ ಕಳೆದ ಒಂಬತ್ತು ವರ್ಷಗಳಿಂದ ಬಡರೋಗಿಗಳ ಚಿಕಿತ್ಸೆಯಲ್ಲಿ ಭಾಗವಹಿಸುತ್ತಿರುವುದು,
ಇತರೆ ಅನಿವಾಸಿ ಭಾರತೀಯ ವೈದ್ಯರುಗಳಿಗೆ ಮಾದರಿಯಾಗಿದೆ. ಮೆಡಾóನಿಕ್ ಕಂಪನಿ ಸತತವಾಗಿ 11 ವರ್ಷಗಳಿಂದ ಸಹಾಯಹಸ್ತವನ್ನು ಮುಂದುವರಿಸಿರುವುದು ಹಾಗೂ ನಮ್ಮ ಜನರಿಗೆ ಸಹಾಯ ಮಾಡುವ ಅವಕಾಶ ನನಗೆ ದೊರೆತದ್ದು ನನ್ನ ಅದೃಷ್ಟ ಎಂದು ಡಾ. ಮಂಜುನಾಥ್ ತಿಳಿಸಿದರು.
ಶೇ. 35 ರಷ್ಟು ಮಹಿಳಾ ರೋಗಿಗಳು: ಕಾರ್ಯಾಗಾರದಲ್ಲಿ ಶೇ. 25 ರೋಗಿಗಳು 50ವರ್ಷಕ್ಕೂ ಕಡಿಮೆ ವಯಸ್ಕರಾಗಿದ್ದು, 28 ವರ್ಷದ ಕಿರಿಯ ಹಾಗೂ 81 ವರ್ಷದ ಹಿರಿಯ ನಾಗರಿಕರಿಗೆ ಚಿಕಿತ್ಸೆ ಮಾಡಲಾಯಿತು. ಹೆಚ್ಚಿನ ರೋಗಿಗಳಲ್ಲಿ ಧೂಮಪಾನ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡ, ಮಿತಿಮೀರಿದ ಕೊಬ್ಬಿನಾಂಶ ಕಂಡುಬಂದಿದೆ. ಚಿಕಿತ್ಸೆ ಪಡೆದ 200 ರೋಗಿಗಳಲ್ಲಿ ಶೇ. 35 ರಷ್ಟು ಮಹಿಳಾ ರೋಗಿಗಳಾಗಿದ್ದು ವಿಶೇಷ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Sangeetha Mobiles: ಜಯನಗರದಲ್ಲಿ ಸಂಗೀತಾ ಗ್ಯಾಜೆಟ್ಸ್ ನೂತನ ಮಳಿಗೆ ಲೋಕಾರ್ಪಣೆ
Bengaluru: ಎಂಬಿಎ ವಿದ್ಯಾರ್ಥಿ 3ನೇ ಮಹಡಿಯಿಂದ ಬಿದ್ದು ಸಾವು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
ISRO ಮುಂದೆ ಪ್ರಮುಖ ಕಾರ್ಯ ಯೋಜನೆಗಳಿವೆ: ನೂತನ ಅಧ್ಯಕ್ಷ ವಿ.ನಾರಾಯಣನ್
Mollywood: ನಟಿ ಹನಿ ರೋಸ್ ವಿರುದ್ಧ ಅಶ್ಲೀಲ ಪದ ಬಳಕೆ; ಖ್ಯಾತ ಉದ್ಯಮಿ ಪೊಲೀಸ್ ವಶಕ್ಕೆ
OnePlus 13 ಮತ್ತು 13R ಬಿಡುಗಡೆ: ಹೊಸ ವೈಶಿಷ್ಟ್ಯಗಳ ಪವರ್ ಹೌಸ್ ಫೋನ್
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.