Frog: ರಾಜಧಾನಿಯಲ್ಲಿ ಬಿಲಕಪ್ಪೆ ಹೊಸ ಪ್ರಭೇದ ಪತ್ತೆ


Team Udayavani, Feb 1, 2024, 10:57 AM IST

5

ಬೆಂಗಳೂರು: ನಾಗಾಲೋಟದಲ್ಲಿ ನಗರೀಕರಣ ನಡೆಯುತ್ತಿರುವ ರಾಜ್ಯ ರಾಜಧಾನಿಯಲ್ಲಿ ಹೊಸ ಪ್ರಬೇಧದ “ಸ್ಫೆರೋಥೆಕಾ ವರ್ಷಾಬು’ ಬಿಲಗಪ್ಪೆ ಪತ್ತೆಯಾಗಿದ್ದು, ಜೀವವೈವಿಧ್ಯ ಸಂಶೋಧನೆಯಲ್ಲಿ ಮೈಲುಗಲ್ಲಾಗಿದೆ.

ಪ್ರಪಂಚದಲ್ಲಿ ಎಲ್ಲಿಯೂ ಕಾಣಸಿಗದ ” ಸ್ಫೆರೋಥೆಕಾ ವರ್ಷಾಬು’ ಬಿಲಗಪ್ಪೆಯು ಬೆಂಗ ಳೂರಿನ ರಾಜಾನುಕುಂಟೆ ಬುದುಮನಹಳ್ಳಿ ಗ್ರಾಮದಲ್ಲಿ ಗೋಚರಿಸಿವೆ. 7 ಸಂಶೋಧಕರಿದ್ದ ತಂಡವು ಎರಡು ವರ್ಷಗಳ ಸತತ ಪರಿಶ್ರಮ ನಡೆಸಿ ” ಸ್ಫೆರೋಥೆಕಾ ವರ್ಷಾಬು’ ಪತ್ತೆಹಚ್ಚಿದೆ. ಸಾಮಾನ್ಯವಾಗಿ ಸಂಶೋಧಕರಿಗೆ ಹೊಸ ಜಾತಿ ಕಪ್ಪೆಗಳು ಕಾಡಿನಲ್ಲಿ ಸಿಗುತ್ತವೆ. ಆದರೆ, ಇದೀಗ ಬೆಂಗಳೂರಿನಂತಹ ನಗರಗಳಲ್ಲೂ ಭಿನ್ನ ಮಾದರಿಯ ಅಪರೂಪದ ಕಪ್ಪೆ ಕಂಡು ಬಂದಿರುವುದು ವಿಶೇಷ.

“ಸ್ಫೆರೋಥೆಕಾ ವರ್ಷಾಬು’ ವಿಶೇಷತೆ ಏನು ?: ” ಸ್ಫೆರೋಥೆಕಾ ವರ್ಷಾಬು’ ಪ್ರಭೇದವು ಶುದ್ಧ ನೀರಿನ ಅಭಾವವಿದ್ದರೂ ನಗರದ ಪರಿಸರಕ್ಕೆ ಹೊಂದಿಕೊಂಡು ಜೀವಿಸುತ್ತಿವೆ. ಜೋರಾಗಿ ಮಳೆ ಸುರಿದಾಗ (ಈಶಾನ್ಯ ಮುಂಗಾರು)ಮಾತ್ರ ಬಿಲದಿಂದ ಹೊರ ಬರುತ್ತವೆ. ಮಳೆಗಾಲ ಹೊರ ತಾದ ಋತುಮಾನದಲ್ಲೂ ಮಣ್ಣಿನ ಒಳಗಿನ ಬಿಲಗಳಲ್ಲಿ ವಾಸಿಸುತ್ತವೆ. ಇದಕ್ಕೆ ಕಾಲಿನ ಪಾದಗಳಲ್ಲಿ ಹಾರೆ ಮಾದರಿಯ ಚಿಕ್ಕ ಅಂಗಾಗಗಳಿವೆ. ಈ ಅಂಗಾಂಗದ ಸಹಾಯದಿಂದ ಮಣ್ಣನ್ನು ಅಗೆದು ಬಿಲ ನಿರ್ಮಿಸಿಕೊಳ್ಳುತ್ತದೆ. ಇದು ಅನಿರೀಕ್ಷಿತ ನಗರೀಕರಣ ವ್ಯವಸ್ಥೆಗೂ ಹೊಂದಿಕೊಳ್ಳುವ ಗುಣ ಹೊಂದಿವೆ. ಸಾಮಾನ್ಯ ಕಪ್ಪೆಗಳಂತೆ ಕೆರೆ, ಕಟ್ಟೆಗಳ ದಂಡೆಯಲ್ಲಿ ವಾಸಿಸುವುದಿಲ್ಲ. ಮಳೆಗಾಲದಲ್ಲಿ ಬಿಟ್ಟರೆ ಬೇರೆ ವೇಳೆ ಕಾಣಸಿಗದು. ಬಿಲಗಳಲ್ಲೇ ವಾಸಿಸುತ್ತದೆ ಎಂದು ಸಂಶೋಧನಾ ತಂಡದ ರೂವಾರಿ ಡಾ.ಪಿ.ದೀಪಕ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

4 ತಿಂಗಳಷ್ಟೆ ಕಾಣ ಸಿಗುತ್ತವೆ: ” ಸ್ಫೆರೋಥೆಕಾ ವರ್ಷಾಬು’ ಕಪ್ಪೆಗಳು ಬಿಲಗಳಿಂದ ಹೊರ ಬಂದಾಗ ಕೀಟಗಳಂತಹ ಆಹಾರ ಸೇವಿಸುತ್ತದೆ. ನಂತರ ಸಂತತಿಗಾಗಿ ನಿಂತ ನೀರನ್ನು ಆಶ್ರಯಿಸುತ್ತದೆ. ಮೊಟ್ಟೆಗಳಿಂದ ಹೊರ ಬರುವ ಚಿಕ್ಕ ” ಸ್ಫೆರೋಥೆಕಾ’ ಮರಿಗಳು ಆಹಾರ ಸೇವಿಸಿ ಬಿಲದೊಳಗೆ ಸೇರಿಕೊಳ್ಳುತ್ತವೆ. ಇವುಗಳು ವರ್ಷದಲ್ಲಿ ಕೇವಲ 4 ತಿಂಗಳ ಮಳೆಗಾಲದಲ್ಲಿ ಈ ಪ್ರಕ್ರಿಯೆ ಮುಗಿಸುತ್ತವೆ. ಮಳೆಯ ಆರಂಭಿಕ ಅವಧಿಯಲ್ಲಿ ಕಾಣಸಿಗುವ ಈ ಬಿಲಕಪ್ಪೆಗೆ “ಸೆ#ರೋಥೆಕಾ ವರ್ಷಾಬು’ ಎಂದು ನಾಮಕರಣ ಮಾಡಲಾಗಿದೆ. ವರ್ಷಾಬು ಎನ್ನುವುದು ಸಂಸ್ಕೃತ ಮೂಲದ ಹೆಸರಾಗಿದೆ (ವರ್ಷಾ, ಮಳೆ; ಭೂ, ಜನಿಸುವುದು).

ಕಪ್ಪೆ ಪತ್ತೆಯಾಗಿರುವುದೇ ರೋಚಕ :

ಡಾ.ದೀಪಕ್‌ ಉಭಯವಾಸಿಗಳ ಕುರಿತು ಪಿಎಚ್‌ಡಿ ವ್ಯಾಸಂಗ ಮಾಡಲು ಸಂಶೋಧಕ ಡಾ.ಕೆ.ಪಿ.ದಿನೇಶ್‌ ಅವರನ್ನು 2018ರಲ್ಲಿ ಸಂಪರ್ಕಿಸಿದ್ದರು. ಪಶ್ಚಿಮ ಘಟ್ಟಗಳಲ್ಲಿ ಸಾಕಷ್ಟು ಜಾತಿಯ ಕಪ್ಪೆಗಳನ್ನು ಪತ್ತೆಹಚ್ಚಿರುವ ದಿನೇಶ್‌ ಅವರು, ಬೆಂಗಳೂರಿನ ರಾಜನಕುಂಟೆ ಬಳಿ ಬಿಲಕಪ್ಪೆಗಳಲ್ಲಿ ಹೊಸ ಜಾತಿಯ ಕಪ್ಪೆ ಹುಡುಕುವ ಟಾಸ್ಕ್ ಅನ್ನು ಕೊಟ್ಟಿದ್ದರು. 2019ರಲ್ಲಿ ಬೂಡುಮನಹಳ್ಳಿ ಗ್ರಾಮದಲ್ಲಿ ಒಂದು ದಿನ ದೀಪಕ್‌ ಸಂಶೋಧನೆ ನಡೆಸುತ್ತಿದ್ದಾಗ ಜೋರಾಗಿ ಮಳೆ ಸುರಿದಿತ್ತು. ಇನ್ನೇನು ಹಿಂತಿರುಗಬೇಕು ಎನ್ನುವಷ್ಟರಲ್ಲಿ ಅಲ್ಲಿ ಭಿನ್ನ ಮಾದರಿಯ ಹತ್ತಾರು ಕಪ್ಪೆಗಳು ಏಕಾಏಕಿ ಬಿಲಗಳಿಂದ ಹೊರ ಬಂದಿರುವುದನ್ನು ದೀಪಕ್‌ ಗಮನಿಸಿದ್ದರು. ನಂತರ ಏಳೂ ಜನರ ತಂಡ ಜೈವಿಕ ತಂತ್ರಜ್ಞಾನ, ಆಕೃತಿ ವಿಜ್ಞಾನದ ಅಧ್ಯಯನ, ಜೈವಿಕ ಧ್ವನಿಶಾಸ್ತ್ರದ ಮಾದರಿ ಅನುಸರಿಸಿ ಈ ಹೊಸ ಪ್ರಭೇದವನ್ನು ಪತ್ತೆ ಹಚ್ಚಿದೆ. ವಿಜ್ಞಾನ ಪ್ರಯೋಗಾಲಯಗಳನ್ನು ಒಳಗೊಂಡ ಬಹು ಸಂಸ್ಥೆಗಳ ಸಹಯೋಗದಲ್ಲಿ ” ಸ್ಫೆರೋಥೆಕಾ ವರ್ಷಾಬು’ ಆವಿಷ್ಕರಿಸಲಾಗಿದೆ ಎಂಬ ರೋಚಕ ಸಂಗತಿಯನ್ನು ಸಂಶೋಧಕ ಡಾ.ಕೆ.ಪಿ.ದಿನೇಶ್‌ ಬಿಚ್ಚಿಟ್ಟಿದ್ದಾರೆ.

ಏಳು ಮಂದಿ ಸಂಶೋಧಕರು :

ಡಾ.ದೀಪಕ್‌, ಡಾ.ಕೆ.ಎಸ್‌.ಚೇತನ್‌ನಾಗ್‌, ಡಾ.ಕಾರ್ತಿಕ್‌ ಶಂಕರ್‌, ಡಾ.ಆಶಾದೇವಿ, ವಿಶಾಲ್‌ ಕುಮಾರ್‌ ಪ್ರಸಾದ್‌, ಡಾ. ಆನ್ನೆಮರಿ ಓಹ್ಲರ್‌, ಡಾ.ಕೆ.ಪಿ.ದಿನೇಶ್‌ ನೇತೃತ್ವದ ಸಂಶೋಧನಾ ತಂಡವು ” ಸ್ಫೆರೋಥೆಕಾ ವರ್ಷಾಬು’ ಬಿಲಕಪ್ಪೆಯನ್ನು ಜಗತ್ತಿಗೆ ಪರಿಚಯಿಸಿದೆ.

ಭಾರತದಲ್ಲಿ ಕಪ್ಪೆಗಳ ಮೇಲೆ ಸಂಶೋಧನೆಗಳು ಪ್ರಾರಂಭವಾಗಿ 220 ವರ್ಷಗಳು ಕಳೆದಿವೆ. ಅಷ್ಟು ವರ್ಷಗಳಲ್ಲಿ ಪತ್ತೆಯಾಗಿರುವ ಸಾವಿರಾರು ಹೊಸ ಪ್ರಬೇಧಗಳನ್ನು ಅಧ್ಯಯನ ನಡೆಸಿ ” ಸ್ಫೆರೋಥೆಕಾ ವರ್ಷಾಬು’ ಹೊಸ ಮಾದರಿಯ ಕಪ್ಪೆ ಎಂಬುದನ್ನು ದೃಢಪಡಿಸಿಕೊಳ್ಳಲು 2 ವರ್ಷಗಳೇ ಹಿಡಿಯಿತು.-ಡಾ.ಕೆ.ಪಿ.ದಿನೇಶ್‌, ಸಂಶೋಧಕ.

ಬಿಲಕಪ್ಪೆ ಜಾತಿಗೆ ಸೇರಿದ ಕಪ್ಪೆಗಳು ಶ್ರೀಲಂಕಾ, ದಕ್ಷಿಣ ಏಷಿಯಾದಲ್ಲಿ ಸಮಾನ್ಯವಾಗಿ ಕಾಣಸಿಗುತ್ತವೆ. ಈಗಾಗಲೇ ಭಾರತೀಯ ಪ್ರಾಣಿ ಸರ್ವೇಕ್ಷಣವು ಭಾರತದಲ್ಲಿ 454 ಪ್ರಭೇದಗಳನ್ನು ದಾಖಲಿಸಿದೆ. ” ಸ್ಫೆರೋಥೆಕಾ ವರ್ಷಾಬು’ ಸಂಶೋಧಿಸಿರುವುದು ಸಂತಸ ತಂದಿದೆ.-ಡಾ.ಪಿ.ದೀಪಕ್‌, ಸಂಶೋಧಕ.

ನಿರಂತರವಾಗಿ ಹುಡುಕಾಟ ನಡೆಸಿದರೆ ನಗರಗಳಲ್ಲಿ ಬಿಲ ಕಪ್ಪೆಗಳಲ್ಲೇ ಇನ್ನೂ ಹಲವು ಜಾತಿಯ ಕಪ್ಪೆಗಳು ಸಿಗಬಹುದು. ಪ್ರತಿ ವರ್ಷ ಮಾನ್ಸೂನ್‌ ಸಮಯಗಳಲ್ಲಿ ನಮ್ಮ ತಂಡವು ಹೊಸ ಮಾದರಿಯ ಕಪ್ಪೆಗಳ ಹುಡುಕಾಟದಲ್ಲಿ ನಿರತವಾಗುತ್ತದೆ.-ಡಾ.ಕೆ.ಎಸ್‌.ಚೇತನ್‌ ನಾಗ್‌, ಸಂಶೋಧಕ

 

ಟಾಪ್ ನ್ಯೂಸ್

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

1-deee

Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?

sullia

Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ

Baduta-Mandya

Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!

1-women

ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90

Kuwait-PM

Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

virat-Hotel

BBMP Notice: ವಿರಾಟ್‌ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

8

Kundapura: ಬೋಟ್‌ ರೈಡರ್‌ ನಾಪತ್ತೆ; ಸಿಗದ ಸುಳಿವು

BY-Vijayendra

Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ

13

Kundapura: ಮನೆಗೆ ನುಗ್ಗಿ ಚಿನ್ನಾಭರಣ ಕಳವು

POlice

Brahmavar: ಬೆಳ್ಮಾರು; ಕೋಳಿ ಅಂಕಕ್ಕೆ ದಾಳಿ

dw

Kundapura: ಮಲಗಿದಲ್ಲೇ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.