ಇಂದಿನಿಂದ ನಗರದಲ್ಲಿ ಮಾವು -ಹಲಸು ಮೇಳ
Team Udayavani, Apr 28, 2017, 12:07 PM IST
ಬೆಂಗಳೂರು: ಹಾಪ್‌ಕಾಮ್ಸ್ ವತಿಯಿಂದ ಶುಕ್ರವಾರದಿಂದ ಆಗಸ್ಟ್ ಅಂತ್ಯದವರೆಗೆ ನಗರದ ಎಲ್ಲಾ ಹಾಪ್‌ಕಾಮ್ಸ್ ಮಳಿಗೆಗಳಲ್ಲೂ “ಮಾವು ಹಾಗೂ ಹಲಸು ಮಾರಾಟ ಮೇಳ’ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಾಪ್‌ಕಾಮ್ಸ್ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್, “ಈ ಬಾರಿಯ ಮೇಳವು “ಫ್ಲಿಪ್ ಕ್ಲಾರ್ಟ್’ನ ಅಂಗ ಸಂಸ್ಥೆ “ಫೋನ್ ಪೇ’ ಸಹಯೋಗದಲ್ಲಿ ನಡೆಯಲಿದೆ. ಸುಮಾರು 300 ಕ್ಕೂ ಹೆಚ್ಚು ಮಳಿಗೆಗಳಲ್ಲಿ 1000 ಮೆ.ಟನ್ ಮಾವು ಮತ್ತು 200 ಮೆಟ್ರಿಕ್ ಟನ್‌ಗಳಷ್ಟು ಹಲಸಿನ ಹಣ್ಣುಗಳ ಮಾರಾಟ ಮಾಡುವ ಉದ್ದೇಶವಿದೆ. ರಾಜ್ಯದ ಐದು ಜಿಲ್ಲೆಗಳಲ್ಲಿ ಮೇಳ ನಡೆಯಲಿದೆ,’ ಎಂದು ತಿಳಿಸಿದರು.
“ಫೋನ್ ಪೇ ಆ್ಯಪ್ ಬಳಸಿ ಶೇ.10 ರಷ್ಟು ರಿಯಾಯತಿ ದರದಲ್ಲಿ ಹಣ್ಣುಗಳನ್ನು ಖರೀದಿಸಬಹುದು. ಹಾಗೆಯೇ ಯಾವುದೇ ರಾಸಾಯನಿಕ ಬಣ್ಣಗಳಿಲ್ಲದ ಕಾರ್ಬೈಡ್ ಮುಕ್ತ ಮತ್ತು ರೈತರಿಂದ ನೇರವಾಗಿ ಖರೀದಿ ಮಾಡಿದಂತಹ ಸಾವಯವ ಹಣ್ಣುಗಳು ಮೇಳದಲ್ಲಿ ದೊರೆಯಲಿವೆ. ಜೊತೆಗೆ ಹಾಪ್‌ಕಾಮ್ಸ್ ಆನ್‌ಲೈನ್‌ನಲ್ಲಿ ಕೂಡ ನಿಗದಿತ ದರದಲ್ಲಿ ಖರೀದಿ ಮಾಡಬಹುದು,’ ಎಂದು ಹೇಳಿದರು.
ಹಾಪ್‌ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಡಾ.ಬೆಳ್ಳೂರು ಕೃಷ್ಣ , “ಮೇಳದಲ್ಲಿ ಬಾದಾಮಿ, ಆಲೊ#àನ್ಸೋ ಮಲಗೋವ, ಕಾಲಪಾಡ್, ರಸಪುರಿ, ಮಲ್ಲಿಕಾ, ಸಕ್ಕರೆ ಗುತ್ತಿ ಮುಂತಾದ ಮಾವಿನ ತಳಿಗಳು ಹಾಗೂ ಸಕ್ಕರಾಯಪಟ್ಟಣ ಹಲಸು, ತೂಬಿಗೆರೆ ಹಲಸು, ಚಂದ್ರ, ಜಾನಗೆರೆ, ಮುಂತಾದ ಹಲಸಿನ ತಳಿಗಳು ಸಿಗಲಿದೆ. ಮಾವಿನ ದರದಲ್ಲಿ ರೂ.30 ರಿಂದ 80 ರವರೆಗೂ ಹಾಗೂ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ 3 ಮತ್ತು 5 ಕೆಜಿ ಗಳ ಬಾಕ್ಸ್‌ನಲ್ಲಿ ಮಾರಾಟ ವ್ಯವಸ್ಥೆ ಇರಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ
Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!
Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ
Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ
Kundapura: “ಅವರು ಪ್ರತೀ ದಿನ ಫೋನ್ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.