ಇಂದಿನಿಂದ ಮೈನಿಂಗ್ ಟ್ರೇಡ್ ಶೋ
Team Udayavani, Sep 13, 2018, 12:29 PM IST
ಬೆಂಗಳೂರು: ಭಾರತೀಯ ಗಣಿ ಕೈಗಾರಿಕೆಗಳ ಒಕ್ಕೂಟವು ಸೆ.13ರಿಂದ 15ರವರೆಗೆ ನಗರದ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) ಮೈನಿಂಗ್, ಎಕ್ಷಪ್ಲೊರೇಷನ್ ಕನ್ವೆನ್ಷನ್ ಟ್ರೇಡ್ ಶೋ
(ಮೈನಿಂಗ್ ಮಜ್ಮಾ) ಹಮ್ಮಿಕೊಂಡಿದೆ.
ಕೇಂದ್ರ ಗಣಿ ಸಚಿವಾಲಯದ ಪ್ರಾಯೋಜಕತ್ವ ಹಾಗೂ ಕೆನಡಾ, ದಕ್ಷಿಣ ಆಫ್ರೀಕಾ ಮತ್ತು ಪೆರು ಮೊದಲಾದ ಖನಿಜ
ಸಮೃದ್ಧ ದೇಶಗಳ ಬೆಂಬಲದೊಂದಿಗೆ ಟ್ರೇಡ್ ಶೋ ಆಯೋಜಿಸಿದ್ದೇವೆ. ಗಣಿ ಸಂಬಂಧಿಸಿದ ನೀತಿ ನಿರೂಪಕರಿಗೆ, ತಂತ್ರಜ್ಞರಿಗೆ, ಸಂಶೋಧನಾ ಸಂಸ್ಥೆಗಳಿಗೆ, ಗಣಿಗಾರಿಕೆಗೆ ಹಾಗೂ ಸಲಕರಣೆಗಳ ಪೂರೈಕೆದಾರರ ಒಗ್ಗೂಡುವಿಕೆಗೆ ಇದು
ವೇದಿಕೆಯಾಗಲಿದೆ. ಕೇಂದ್ರ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಹಾಗೂ ಗಣಿ ಸಚಿವ ನರೇಂದ್ರ ಸಿಂಗ್ ತೋಮರ್ ಶೋಗೆ ಚಾಲನೆ ನೀಡಲಿದ್ದಾರೆ ಎಂದು ಒಕ್ಕೂಟದ ಉಪಾಧ್ಯಕ್ಷ ಆರ್.ಎಲ್.ಮೋಹಂತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಗಣಿಗಾರಿಕೆಗೆ ಸಂಬಂಧಿಸಿದ ಕಾನೂನು, ನೀತಿ ನಿಯಮದಲ್ಲಿ ಸಾಕಷ್ಟು ಬದಲಾಗಣೆಗಳಾಗಿವೆ. ಇಷ್ಟಾದರೂ ಗಣಿಗಾರಿಕೆ
ಕ್ಷೇತ್ರ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಗಣಿಗಾರಿಕೆಯ ಅಭಿವೃದ್ಧಿ ಮತ್ತು ಖನಿಜಗಳ ತ್ಪಾದನೆ ನಿಧಾನಗತಿಯಲ್ಲಿ ಸಾಗುತ್ತಿದೆ. ಚಿನ್ನ, ವಜ್ರ, ತಾಮ್ರ, ನಿಕ್ಕಲ್, ಸೀಸ ಮತ್ತು ಸತುಗಳ ಪಿಜಿಎಂ, ಆರ್‌ಇಇಎಸ್‌ಗಳ ಪರಿಶೋಧನೆಗಳಲ್ಲಿ ಭಾರತ ತೀವ್ರ ಹಿಂದಿದೆ. ಕೆನಡಾ ಮತ್ತು ಆಸ್ಟ್ರೇಲಿಯಾ ಜಾಗತಿಕ ಖನಿಜ ಪರಿಶೋಧನಾ ವೆಚ್ಚದಲ್ಲಿ ಶೇ.13-14ರಷ್ಟು ಪಾಲು ಹೊಂದಿದ್ದು, ಭಾರತದ ಪಾಲು ಅತ್ಯಲ್ಪವಾಗಿದೆ ಎಂದರು.
ಖನಿಜ ಪರಿಶೋಧನೆ ಮತ್ತು ನಿಕ್ಷೇಪದ ನಿಖರ ಮಾಹಿತಿ ಶೋಧನೆಗಳನ್ನು ಉತ್ತೇಜಿಸಲು ಕಾನೂನು ಚೌಕಟ್ಟು ಸುಗಮಗೊಳಿಸಿ, ಅನುಕೂಲಕರ ತೆರಿಗೆ ಮತ್ತು ಕಾರ್ಯವಿಧಾನದ ಆಡಳಿತವನ್ನು ಸರ್ಕಾರ ಪೂರೈಸಬೇಕು. ಹೆಚ್ಚು ನಿರ್ಬಂಧಿತ ಮತ್ತು ಗಣಿಗಾರಿಕೆ ಸ್ನೇಹಿಯಲ್ಲದ ಮಾರ್ಗಸೂಚಿಯನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆ ಇತ್ತೀಚೆಗೆ ಪ್ರಕಟಿಸಿದೆ. ಇದರಿಂದ ಗಣಿಗಾರಿಕೆ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರಲಿದ್ದು, ಸರ್ಕಾರ ಈ ಮಾರ್ಗಸೂಚಿ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.