ಜಪ್ತಿ ಮಾಡಿದ ಕುಕ್ಕರ್ ಮೌಲ್ಯ 1.50 ಕೋಟಿ
Team Udayavani, Apr 2, 2018, 7:05 AM IST
ಬೆಳಗಾವಿ: ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳಕರ ಭಾವಚಿತ್ರವುಳ್ಳ ಕುಕ್ಕರ್ಗಳನ್ನು ತುಂಬಿದ್ದ ಲಾರಿ ವಶಪಡಿಸಿಕೊಂಡ ಬೆನ್ನಲ್ಲೇ ಕುಕ್ಕರ್, ಇಸ್ತ್ರಿ ಪೆಟ್ಟಿಗೆ, ಗ್ಯಾಸ್ ಸ್ಟೌ ಬಾಕ್ಸ್ಗಳನ್ನು ದಾಸ್ತಾನು ಮಾಡಿದ್ದ ಸ್ಥಳಕ್ಕೆ ಅಧಿಕಾರಿಗಳು ದಾಳಿ ನಡೆಸಿ ಈವರೆಗೆ ಒಟ್ಟು ಒಂದೂವರೆ ಕೋಟಿ ರೂ.ಗೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
“ಬೆಳಗಾವಿ ಗ್ರಾಮೀಣ ಕ್ಷೇತ್ರ ರಂಗೋಲಿ ಭವ್ಯ ಸ್ಪರ್ಧೆ’ ಎಂಬ ಬರಹವುಳ್ಳ ಬಾಕ್ಸ್ಗಳ ಮೇಲೆ ಲಕ್ಷ್ಮೀ ಹೆಬ್ಟಾಳಕರ ಅವರ ಭಾವಚಿತ್ರವಿದೆ. ಕುಕ್ಕರ್, ಇಸ್ತ್ರಿ ಪೆಟ್ಟಿಗೆ ಹಾಗೂ ಗ್ಯಾಸ್ ಸ್ಟೌ ಬಾಕ್ಸ್ಗಳ ಮೇಲೆ ಹೆಬ್ಟಾಳಕರ ಚಿತ್ರವಿದೆ. ರಾಜಕೀಯ ವ್ಯಕ್ತಿಗಳ ಫೋಟೋ ಇರುವ ಯಾವುದಾದರೂ ಉಡುಗೊರೆ ಇದ್ದರೆ ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಹೀಗಾಗಿ ಬೆಳಗಾವಿ ಉತ್ತರ ಮತಕ್ಷೇತ್ರದ ಚುನಾವಣಾಧಿಕಾರಿಗಳು ದಾಳಿ ನಡೆಸಿ ಭಾರೀ ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.
ಶನಿವಾರ ಬೆಳಗ್ಗೆ ಲಾರಿ ತಡೆದು ಕುಕ್ಕರ್ ಬಾಕ್ಸ್ಗಳನ್ನು ವಶಪಡಿಸಿಕೊಂಡು ವಾಹನ ಚಾಲಕನನ್ನು ವಿಚಾರಣೆ ನಡೆಸಿದಾಗ ಬೆಳಗಾವಿ ಉತ್ತರ ಮತಕ್ಷೇತ್ರದ ಹನುಮಾನ ನಗರದ ನಿರ್ಮಾಣ ಹಂತದ ಕಟ್ಟಡಕ್ಕೆ ದಾಳಿ ನಡೆಸಿ ಕೋಟ್ಯಂತರ ಮೌಲ್ಯದ ವಸ್ತುಗಳು ಪತ್ತೆಯಾಗಿವೆ. ಅಲ್ಲಿ ಅಂದಾಜು 1.01 ಕೋಟಿ ರೂ. ಮೌಲ್ಯದ 7320 ಐರನ್ ಬಾಕ್ಸ್ಗಳು, 21.24 ಲಕ್ಷ ರೂ. ಮೌಲ್ಯದ 5 ಲೀಟರ್ ಸಾಮರ್ಥ್ಯದ 1180 ಕುಕ್ಕರ್ ಹಾಗೂ ಪ್ಲೇಟ್ಗಳು, 17.29 ಲಕ್ಷ ರೂ. ಮೌಲ್ಯದ 1153 ತ್ರೀ ಬರ್ನ್ ಗ್ಯಾಸ್ ಸ್ಟೌ ಹಾಗೂ ಶನಿವಾರ ಬೆಳಗ್ಗೆ ಲಾರಿ ತಡೆದು ಶೋಧಿಸಿದಾಗ 11.7 ಲಕ್ಷ ರೂ. ಮೌಲ್ಯದ 618 ಕುಕ್ಕರ್ ಹಾಗೂ ಪ್ಲೇಟ್ಗಳು ಹಾಗೂ ವಾಹನ ಸೇರಿದಂತೆ ಒಟ್ಟು 1.56 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Vijayapura: ಕುರಿಗಾಯಿ, ಕೂಲಿಕಾರ, ರೈತರ ಮಕ್ಕಳಿಗೆ ‘ಬಂಗಾರ’ದ ಕಳೆ…
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Udupi: 2024ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಮಾಂಬಾಡಿ ಸುಬ್ರಹ್ಮಣ್ಯ ಭಟ್ ಆಯ್ಕೆ
RenukaswamyCase: ದರ್ಶನ್ ಸೇರಿ ಎಲ್ಲಾ ಆರೋಪಿಗಳು ಕೋರ್ಟ್ಗೆ ಹಾಜರು; ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.