![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-415x249.jpg)
ಉಗ್ರ ಕಟ್ಟೆಚ್ಚರ; ಸ್ವಾತಂತ್ರ್ಯೋತ್ಸವಕ್ಕೆ ಭಯೋತ್ಪಾದಕರ ಕರಿನೆರಳು
Team Udayavani, Aug 9, 2018, 6:00 AM IST
![ban09081803medn-black-revised.jpg](https://www.udayavani.com/wp-content/uploads/2018/08/9/ban09081803medn-black-revised.jpg)
ಬೆಂಗಳೂರು: ರಾಮನಗರ ಮತ್ತು ಬೆಂಗಳೂರಿನಲ್ಲಿ ಇಬ್ಬರು ಜಮಾತ್-ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಎಂಬಿ) ಉಗ್ರರನ್ನು ರಾಷ್ಟ್ರೀಯ ತನಿಖಾ ತಂಡಗಳು ಬಂಧಿಸಿದ್ದು ಅವರು ನೀಡಿರುವ ಮಾಹಿತಿ ಆಧಾರದಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆಗೆ ಉಗ್ರರ ಕರಿನೆರಳು ಇರುವುದು ಖಚಿತವಾಗಿದೆ. ಆ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಷ್ಟ್ರದ ಪ್ರಮುಖ ನಗರಗಳಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಗೃಹ ಸಚಿವಾಲಯ ಸೂಚನೆ ನೀಡಿದೆ.
ಇದರ ಬೆನ್ನಿಗೇ, ಸೆರೆಸಿಕ್ಕ ಜೆಎಂಬಿ ಸದಸ್ಯರ ಇತರ ಸಹಚರರು ತಲೆಮರೆಸಿಕೊಂಡಿರುವ ಮಾಹಿತಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಎಚ್ಚರಿಕೆ ವಹಿಸಲು ನಿರ್ಧರಿಸಲಾಗಿದೆ. ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ನೀಲಮಣಿ ಎನ್ ರಾಜು ಅವರು ಮಹಾನಗರಗಳ ಪೊಲೀಸ್ ಆಯುಕ್ತರು, ವಲಯ ಐಜಿಪಿಗಳು, ಜಿಲ್ಲಾ ಎಸ್‌ಪಿಗಳು ಸೇರಿದಂತೆ ಅಧಿಕಾರಿಗಳ ಉನ್ನತ ಮಟ್ಟದ ಸಭೆಯನ್ನು ಗುರುವಾರ ನಡೆಸಲಿದ್ದಾರೆ. ಸಭೆಯಲ್ಲಿ ಉಗ್ರಗಾಮಿ ಚಟುವಟಿಕೆ ಮತ್ತು ಸ್ವಾತಂತ್ರ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಉಗ್ರ ಚಟುವಟಿಕೆ ನಿಗ್ರಹ ಮತ್ತು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪ್ರಧಾನ ಚರ್ಚೆ ನಡೆಯಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚರ್ಚ್ ಸ್ಟ್ರೀಟ್, ಮೈಸೂರು ಕೋರ್ಟ್ ಬಾಂಬ್ ಸ್ಫೋಟ ಘಟನೆ ಬಳಿಕ ರಾಜ್ಯದಲ್ಲಿ ಉಗ್ರರ ಸ್ಲಿàಪರ್ ಸೆಲ್‌ಗಳು ನಿಷ್ಕ್ರಿಯಗೊಂಡಿವೆ ಎಂದೇ ಭಾವಿಸಿದ್ದ ಪೊಲೀಸ್ ಇಲಾಖೆಗೆ ಇದೀಗ ರಾಜಧಾನಿಯ ಸಮೀಪದ ರಾಮನಗರದಲ್ಲಿಯೇ ಮೋಸ್ಟ್ ವಾಂಟೆಂಡ್ ಉಗ್ರನ ಬಂಧನವಾಗಿರುವುದು ಪೊಲೀಸ್ ಆತಂಕಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಉಗ್ರ ಸಂಘಟನೆಗಳ ಸ್ಲಿàಪರ್ ಸೆಲ್‌ಗಳು ಇನ್ನೂ ಬೇರುಬಿಟ್ಟಿವೆಯೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ರಾಜ್ಯ ಗುಪ್ತಚರ ಇಲಾಖೆ ಮತ್ತು ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ಕ್ರಮ ಕೈಗೊಂಡಿವೆ. ಆಯಾ ಜಿಲ್ಲೆಗಳಲ್ಲಿ ಅನುಮಾನಾಸ್ಪದ ಹಾಗೂ ಅಕ್ರಮವಾಗಿ ವಾಸವಾಗಿರುವ ವಲಸಿಗರ ಮೇಲೆ ನಿಗಾ ಇಡುವಂತೆಯೂ ಸಂದೇಶ ರವಾನಿಸಲಾಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ಮೈಸೂರು, ಮಂಗಳೂರು ಸೇರಿ ರಾಜ್ಯದ ಪ್ರಮುಖ ನಗರಗಳು ಹಾಗೂ ಪಾರಂಪರಿಕ ಸೌಧಗಳ ಬಳಿ ಕಟ್ಟುನಿಟ್ಟಿನ ಬಿಗಿ ಬಂದೋಬಸ್ತ್ ಕಲ್ಪಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ತಮಿಳುನಾಡಿಗೆ ತಂಡ ಭೇಟಿ!
ಅಲ್‌ಖೈದಾ ಸಂಘಟನೆಯ ಭಾರತೀಯ ಅಂಗ ಸಂಸ್ಥೆ ಎಕ್ಯೂಐಎಸ್ (ಅಲ್‌ಖೈದಾ ಇಂಡಿಯನ್ ಸಬ್ ಕಾಂಟಿನೆಂಟ್) ಹಾಗೂ ಅಲ್ -ಮುತ್ತಕೀನ್ – ಫೋರ್ಸ್ (ಎಎಂಎಫ್) ಸಂಘಟನೆಗಳು ಸದ್ದಿಲ್ಲದೆ ಕಾರ್ಯಚಟುವಟಿಕೆ ನಡೆಸುತ್ತಿರುವ ಬಗ್ಗೆ ಮೈಸೂರು ಕೋರ್ಟ್ ಬಾಂಬ್ ಸ್ಫೋಟ ಪ್ರಕರಣದ ತನಿಖೆ ವೇಳೆ ಎನ್‌ಐಎ ಬಯಲಿಗೆಳೆದಿತ್ತು. ಇದೀಗ, ಜೆಎಂಬಿ ಉಗ್ರರ ಬಂಧನದ ಬಳಿಕ ಮತ್ತಷ್ಟು ಎಚ್ಚೆತ್ತುಕೊಂಡಿರುವ ಗುಪ್ತಚರ ದಳ ರಾಜ್ಯದಲ್ಲಿ ಉಗ್ರ ಸಂಘಟನೆಗಳ ಸ್ಲಿàಪರ್ ಸೆಲ್‌ಗಳ ಮೂಲ ಹುಡುಕಲು ಮುಂದಾಗಿದೆ.
ತಮಿಳುನಾಡಿನ ಕೊಯಮುತ್ತೂರು ಮೂಲದ ಅಲ್ -ಮುತಾಕಿನ್ ಫೋರ್ಸ್ ಬಗ್ಗೆ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಅಲ್ಲದೆ, ಈ ಬಗ್ಗೆ ತಮಿಳುನಾಡಿನ ಪೊಲೀಸರಿಗೆ ಮಾಹಿತಿ ನೀಡುವಂತೆ ಕೋರಿ ಪತ್ರ ಬರೆದಿದೆ. ಅಲ್ಲದೆ, ಸದ್ಯದಲ್ಲಿಯೇ ಗುಪ್ತಚರ ದಳದ ತಂಡವೊಂದು ತಮಿಳುನಾಡಿಗೆ ತೆರಳಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ ಎಂದು ಉನ್ನತ ಮೂಲಗಳು ಉದಯವಾಣಿಗೆ ತಿಳಿಸಿವೆ.
– ಮಂಜುನಾಥ ಲಘುಮೇನಹಳ್ಳಿ
ಟಾಪ್ ನ್ಯೂಸ್
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ](https://www.udayavani.com/wp-content/uploads/2024/12/3-34-150x90.jpg)
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
![BGV-CM-SS](https://www.udayavani.com/wp-content/uploads/2024/12/BGV-CM-SS-150x90.jpg)
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
![Ashok-Vijayendra](https://www.udayavani.com/wp-content/uploads/2024/12/Ashok-Vijayendra-150x90.jpg)
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
![BYV-Modi](https://www.udayavani.com/wp-content/uploads/2024/12/BYV-Modi-150x90.jpg)
Internal Dissent: ಪ್ರಧಾನಿ ಮೋದಿ ಭೇಟಿಯಾದ ವಿಜಯೇಂದ್ರ ದೂರದಿದ್ದರೂ ‘ಸಂದೇಶ’ ರವಾನೆ
![Vidhana-Parishat](https://www.udayavani.com/wp-content/uploads/2024/12/Vidhana-Parishat-150x90.jpg)
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
MUST WATCH
ಹೊಸ ಸೇರ್ಪಡೆ
![Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ](https://www.udayavani.com/wp-content/uploads/2024/12/6-35-150x90.jpg)
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
![5](https://www.udayavani.com/wp-content/uploads/2024/12/5-36-150x90.jpg)
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
![Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ](https://www.udayavani.com/wp-content/uploads/2024/12/4-36-150x90.jpg)
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
![Krantiveer Brigade launched by worshipping the feet of 1008 saints: KS Eshwarappa](https://www.udayavani.com/wp-content/uploads/2024/12/kse-150x87.jpg)
Politicss; 1008 ಸಾಧುಸಂತರ ಪಾದಪೂಜೆ ಮೂಲಕ ಕ್ರಾಂತಿವೀರ ಬ್ರಿಗೇಡ್ ಗೆ ಚಾಲನೆ: ಈಶ್ವರಪ್ಪ
![BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ](https://www.udayavani.com/wp-content/uploads/2024/12/3-34-150x90.jpg)
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.