E- Gaming: ಇ-ಗೇಮಿಂಗ್‌ ಯಶಸ್ಸಿನ ಬಗ್ಗೆ ತಜ್ಞರ ಅತೃಪ್ತಿ

Team Udayavani, Jan 31, 2024, 10:35 AM IST

1

ಬೆಂಗಳೂರು: ಗೇಮಿಂಗ್‌, ವಿಷುವಲ್‌ ಎಫೆಕ್ಟ್ಸ್ ಕ್ಷೇತ್ರಗಳ ಮಾರುಕಟ್ಟೆ, ಅಭಿವೃದ್ಧಿ, ಕೌಶಲ್ಯ, ವಸ್ತು ವಿಷಯಗಳಲ್ಲಿ ಅಗಾಧ ಸಾಮರ್ಥ್ಯ ಹೊಂದಿದ್ದರೂ ಪೂರಕವಾದ ತಾಂತ್ರಿಕ ಪರಿಸರ ನಿರ್ಮಾಣಗೊಳ್ಳದ ಹಿನ್ನೆಲೆಯಲ್ಲಿ ನಿರೀಕ್ಷಿತ ಯಶಸ್ಸನ್ನು ಭಾರತಕ್ಕೆ ಪಡೆಯಲು ಇನ್ನು ಸಾಧ್ಯವಾಗಿಲ್ಲ ಎಂದು ಗೇಮಿಂಗ್‌, ವಿಷುವಲ್‌ ಎಫೆಕ್ಟ್ಸ್, ಅನಿಮೇಷನ್‌ ಮತ್ತು ಕಾಮಿಕ್‌ ಕ್ಷೇತ್ರದ ದಿಗ್ಗಜರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಖಾಸಗಿ ಹೋಟೆಲ್‌ ಒಂದರಲ್ಲಿ ನಡೆಯುತ್ತಿರುವ ಅನಿಮೇಷನ್‌, ವಿಷುವಲ್‌ ಎಫೆಕ್ಟ್ಸ್, ಗೇಮಿಂಗ್ಸ್‌ ಮತ್ತು ಕಾಮಿಕ್ಸ್‌ (ಎವಿಜಿಸಿ)ಗೆ ಸಂಬಂಧಿಸಿದ ಮೂರು ದಿನಗಳ ಜಿಎಎಫ್ಎಕ್ಸ್‌ ಸಮ್ಮೇಳನದಲ್ಲಿ ಪಾಲ್ಗೊಂಡ ಹಲವು ತಜ್ಞರು ಇಂತಹ ಅನಿಸಿಕೆ ವ್ಯಕ್ತಪಡಿಸಿದರು. ಆದರೂ, ಈ ಕ್ಷೇತ್ರದಲ್ಲಿ ಭಾರತ ಭವಿಷ್ಯ ಉಜ್ವಲವಾಗಿದೆ ಎಂಬ ನಿರೀಕ್ಷೆಯೂ ಸಮ್ಮೇಳನದಲ್ಲಿ ವ್ಯಕ್ತವಾಯಿತು. ಹಾಗೆಯೇ ಇ-ಗೇಮಿಂಗ್‌ ಸಾಫ್ಟ್ ವೇರ್‌ಗಳ ಜೊತೆ ಹಾರ್ಡ್‌ವೇರ್‌ಗಳ ಅಭಿ ವೃದ್ಧಿಗೊಳ್ಳಬೇಕು, ಭಾರತದ ವಸ್ತು ವಿಷಯಗಳು ಜಗತ್ತಿಗೆ ತಲುಪಬೇಕು ಎಂಬ ಸಲಹೆಯೂ ಮೂಡಿತು. ಭಾರತ ಜಗತ್ತಿನ ಸರಕಿಗೆ ಬರೀ ಮಾರುಕಟ್ಟೆಯಾದರೆ ಸಾಲದು, ನಮ್ಮ ಸರಕು, ಪರಿಕಲ್ಪನೆಗಳು ಜಗತ್ತಿನೆಲ್ಲೆಡೆ ಬಿಂಬಿಸಲಿ ಎಂಬ ಎಚ್ಚರಿಕೆಯ ಮಾತುಗಳು ತಜ್ಞರಿಂದ ಕೇಳಿಬಂತು.

ಗೇಮಿಂಗ್‌ನಲ್ಲಿ ನಾವೀನ್ಯತೆಯ ಆವಿಷ್ಕಾರ ಎಂಬ ವಿಚಾರಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಬಿಎಐನ ಮುಖ್ಯಸ್ಥ ಬಿರೇನ್‌ ಘೋಷ್‌, ಜಾಗ ತಿಕ ಅಪ್ಲಿಕೇಷನ್‌ ಡೌನ್‌ಲೋಡ್‌ಗಳಲ್ಲಿ ಶೇ.15 ಡೌನ್‌ಲೋಡ್‌ಗಳು ಗೇಮಿಂಗ್‌ ಅಪ್ಲಿಕೇಷನ್‌ಗಳದ್ದು ಆಗಿರುತ್ತವೆ. ಸಾಮಾನ್ಯವಾಗಿ ಪ್ರತಿ ಮೊಬೈ ಲ್‌ನಲ್ಲಿ ಎರಡ್ಮೂರು ಗೇಮಿಂಗ್‌ ಅಪ್ಲಿಕೇಷನ್‌ಗಳಿ ರುತ್ತವೆ. ಇದು ಗೇಮಿಂಗ್‌ ಕ್ಷೇತ್ರಕ್ಕೆ ಉತ್ತಮ ಭವಿಷ್ಯ ಇರುವುದನ್ನು ಸೂಚಿಸುತ್ತದೆ ಎಂದು ಹೇಳಿದರು. ಗೇಮ್‌ ಸ್ಕೂಲ್‌ಗ‌ಳು ಮತ್ತು ಗೇಮ್‌ ಉದ್ದಿಮೆ ಒಟ್ಟಾಗಿ ಮತ್ತು ಪರಸ್ಪರ ಪೂರಕವಾಗಿ ಹೆಜ್ಜೆ ಇಡಬೇಕು. ನಮ್ಮ ಪ್ರತಿಭಾ ಸಂಪನ್ಮೂಲವನ್ನು ಇಲ್ಲೇ ಉಳಿಸಿಕೊಳ್ಳುವ ಸವಾಲು ಸಹ ಗೇಮಿಂಗ್‌ ಉದ್ದಿಮೆಯ ಮೇಲಿದೆ. ಮಿತವ್ಯಯ, ಕಡಿಮೆ ದರದಲ್ಲಿ ಸೇವೆ ನೀಡುವ ಸವಾಲು ಇದೆ ಎಂದು ಬಿರೇನ್‌ ಘೋಷ್‌ ಹೇಳಿದರು.

ಮತ್ತಷ್ಟು ಉದ್ಯೋಗ ಸೃಷ್ಟಿ: ಕೃತಕ ಬುದ್ಧಿಮತ್ತೆಯು ಸೃಜನಾತ್ಮಕ ಪರಿಸರದ ಉದ್ಯೋಗ ಕಸಿಯುತ್ತದೆ ಎಂಬುದು ಸುಳ್ಳು. ಇನ್ನಷ್ಟು ಉದ್ಯೋಗ ಸೃಷ್ಟಿಯಾಗುತ್ತದೆ ಎಂಬುದು ಸತ್ಯ. ಎಐಯು ವ್ಯವಸ್ಥೆಯಲ್ಲಿ ದಾಖಲಾಗಿರುವ ದತ್ತಾಂಶದ ಆಧಾರದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನಿಸಬೇಕು. ಲಯನ್‌ ಕಿಂಗ್‌ ಮೊದಲ ಬಾರಿಗೆ ಬಂದಾಗ ಎಷ್ಟು ಉದ್ಯೋಗ ಸೃಷ್ಟಿಯಾಗಿತ್ತೋ, ಅದಕ್ಕಿಂತ ಹೆಚ್ಚು ಉದ್ಯೋಗವನ್ನು ಲಯನ್‌ ಕಿಂಗ್‌ ನೀಡಬಹುದು. ಹಾಗೆಯೇ ಹೆಚ್ಚು ಹೆಚ್ಚು ಯೋಜನೆಗಳು ಬರುವುದರಿಂದ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ಬಿರೇನ್‌ ಘೋಷ್‌ ಅಭಿಪ್ರಾಯ ಪಟ್ಟರು.

ಮಸಾಯ್‌ ಸ್ಕೂಲ್‌ನ ಯೋಗೀಶ್‌ ಭಟ್‌, ಸಾಂಪ್ರಾದಾಯಿಕ ಪದವಿಗಳ ಆಚೆಗೆ ಸರ್ಟಿಫಿಕೇಷನ್‌ ಕೋರ್ಸ್‌ ಅನ್ನು ಎವಿಜಿಸಿ ಕ್ಷೇತ್ರದಲ್ಲಿ ಜಾರಿಗೆ ತರುವ ಅಗತ್ಯವಿದೆ ಎಂದು ಹೇಳಿದರು.

ಡಿಜಿಟಲ್‌ ಯುಗದಲ್ಲಿ ಕಾಪಿ ಮಾಡಬೇಡಿ :

ಅಗ್ಯುಮೆಂಟೆಡ್‌ ರಿಯಾಲಿಟಿ, ವರ್ಚುವಲ್‌ ರಿಯಾಲಿಟಿ, ಮೆಟಾವರ್ಸ್‌ ಕ್ಷೇತ್ರಗಳಿಂದ ಡಿಜಿಟಲ್‌ ಕಲಾವಿದರಿಗೆ, ಕಲಾವಿದರಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಲಿದೆ. ಆದರೆ, ಕಲಾವಿದರು ಯಾವ ಕಾರಣಕ್ಕೂ ಕಲೆಗಳನ್ನು ಕಾಪಿ ಮಾಡಬಾರದು. ತಮ್ಮ ಪ್ರತಿ ಕಲೆಗೂ ಅಧಿಕೃತತೆ ಅತಿ ಮುಖ್ಯ. ಈಗ ನಾವು ನೋಡುತ್ತಿರುವ ಮೆಟಾವರ್ಸ್‌ ಬರೀ ಆರಂಭಿಕ ಹಂತ. ನೈಜ ಮೆಟಾವರ್ಸ್‌ನ ಅನುಭವಕ್ಕೆ ಹಾರ್ಡ್‌ವೆರ್‌ ಕ್ರಾಂತಿಯಾಗುವ ಅಗತ್ಯವಿದೆ ಎಂದು ಎವಿಜಿಸಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಸಮಾಜಕ್ಕೆ ಒಳಿತು ಮಾಡುವ ಅಂಶಗಳನ್ನು ಗೇಮಿಂಗ್‌ನಲ್ಲಿ ತರುವ ಅಗತ್ಯವಿದೆ. ಗೇಮ್‌ ಉದ್ದಿಮೆಯಲ್ಲಿರುವವರು ಸದಾ ನವೋದ್ಯಮಿಯ ಮನಸ್ಥಿತಿಯನ್ನು ಹೊಂದಿರಬೇಕು. ಗೇಮರ್‌ಗಳು ಸದಾ ಕಲಿಕೆಯ ಮನೋಭಾವ ಹೊಂದಿರಬೇಕು. ಸ್ಥಳೀಯ ವಸ್ತು ವಿಷಯಗಳಿಗೆ ಹೆಚ್ಚು ಒತ್ತು ನೀಡಿ, ವಿಭಿನ್ನ ನಿರೂಪಣೆಯ ತಂತ್ರದೊಂದಿಗೆ ಅದನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಬೇಕು. -ರಾಹುಲ್‌ ಭಟ್ಟಾಚಾರ್ಯ, ಮೈಕ್ರೋಗ್ರಾವಿಟಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ.

ಸೃಜನಾತ್ಮಕತೆ ಮತ್ತು ತಂತ್ರಜ್ಞಾನ ಇ-ಗೇಮಿಂಗ್‌ ಉದ್ಯಮದಲ್ಲಿ ಅತ್ಯಗತ್ಯ. ತಂತ್ರಜ್ಞಾನದ ದೃಷ್ಟಿಯಲ್ಲಿ ನಾವು ಮುಂದುವರಿದಿದ್ದರೂ ನಮ್ಮ ವಸ್ತು ವಿಷಯಗಳನ್ನು ಸೃಜನಾತ್ಮಕವಾಗಿ ಬಿಂಬಿಸುವಲ್ಲಿ ಯಶಸ್ಸು ಕಾಣುವ ಅಗತ್ಯವಿದೆ.-ನಮೃತಾ ಬಿ.ಸ್ವಾಮಿ, ಮೊಬೈಲ್‌ ಪ್ರೀಮಿಯರ್‌ ಲೀಗ್‌ಮುಖ್ಯ ಕಾರ್ಯಾಚರಣಾಧಿಕಾರಿ.

ಟಾಪ್ ನ್ಯೂಸ್

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

Karnataka: ವೈದ್ಯ ಸೀಟು ಸಿಗದವರ ಮುಂಗಡ ಶುಲ್ಕ ವಾಪಸ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್‌ ಬಸ್‌ ನಿಲ್ದಾಣ!

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ಇವಿ ಬೈಕ್‌ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್‌ ಬಂಧನ, ಬಿಡುಗಡೆ

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

Bengaluru: ನಗರದಲ್ಲಿ ನಿಷೇಧಿತ ಕಲರ್‌ ಕಾಟನ್‌ ಕ್ಯಾಂಡಿ ತಯಾರಿಕಾ ಘಟಕ ಬಂದ್‌

3

Shobha Karandlaje: ಶೋಭಾ ಲೋಕಸಭಾ ಸದಸ್ಯತ್ವ ರದ್ದು ಕೋರಿ ಅರ್ಜಿ: ಡಿ.6ಕ್ಕೆ ವಿಚಾರಣೆ 

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

Arrested: ನಕಲಿ ದಾಖಲೆ ನೀಡಿ ಟಿಡಿಎಸ್‌ ಪಡೆಯುತ್ತಿದ್ದ ಆರೋಪಿಯ ಬಂಧಿಸಿದ ಜಾರಿ ನಿರ್ದೇಶನಾಲಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

1-sidd-nirmala

NABARD ಸಾಲ ಮಿತಿ ಹೆಚ್ಚಿಸಿ: ನಿರ್ಮಲಾಗೆ ಸಿಎಂ ಮನವಿ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾCourt: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Court: ಪ್ರಸಾದಕ್ಕೆ ವಿಷ; 17 ಭಕ್ತರ ಸಾವಿನ ಪ್ರಕರಣ: ಇಮ್ಮಡಿ ಮಹದೇವಸ್ವಾಮಿ ಅರ್ಜಿ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.