ಗಾಂಧಿ ಬದುಕು ಸಾರಲು ರಂಗ ಪಯಣ
Team Udayavani, Aug 1, 2018, 11:13 AM IST
ಬೆಂಗಳೂರು: ಮಹಾತ್ಮಾ ಗಾಂಧೀಜಿ ರಾಷ್ಟ್ರಪಿತ ಆಗಿದ್ದು ಹೇಗೆ ಎಂಬುದೂ ಒಳಗೊಂಡಂತೆ ಗಾಂಧೀಜಿಯವರ ಜೀವನದ ಪ್ರಮುಖ ಘಟ್ಟಗಳನ್ನು ಜನರ ಮುಂದೆ ತೆರೆದಿಡುವ ಪ್ರಯತ್ನಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ.
ರಾಷ್ಟ್ರಪಿತ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಪೂರ್ವಭಾವಿಯಾಗಿ ಇಲಾಖೆಯು ಗಾಂಧಿ 150 ರಂಗಪಯಣ ಯೋಜನೆ ರೂಪಿಸಿದೆ. ಬೊಳುವಾರು ಮೊಹಮ್ಮದ್ ಕುಂಞ ಅವರ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ “ಪಾಪು ಗಾಂಧಿ ಗಾಂಧಿ ಪಾಪು ಆದ ಕತೆ’ ಕಾದಂಬರಿಯನ್ನು ರಂಗರೂಪಕ್ಕಿಳಿಸಿ ಪ್ರದರ್ಶಿಸುವ ಯೋಜನೆ ಇದಾಗಿದೆ. ಡಾ.ಶ್ರೀಪಾದಭಟ್ ಅವರ ನಿರ್ದೇಶನದಲ್ಲಿ ರಂಗ ರೂಪಕ್ಕೆ ಅಳವಡಿಸುತ್ತಿರುವ ಪಾಪು ಗಾಂಧಿ ಗಾಂಧಿ ಪಾಪು ಆದ ನಾಟಕ ಧಾರವಾಡ ರಂಗಾಯಣ ನಿರ್ದೇಶಕ ಪ್ರಮೋದ್ ಶಿಗ್ಗಾಂವ್ ಅವರ ನಿರ್ವಹಣೆಯಲ್ಲಿ ಮೂಡಿಬರಲಿದೆ.
ಒಟ್ಟು ಐದು ತಿಂಗಳ ಅವಧಿಯ ಈ ರಂಗಪಯಣಕ್ಕೆ ಆ.8ರಂದು ಧಾರವಾಡದ ರಂಗಾಯಣದಲ್ಲಿ ಚಾಲನೆ ನೀಡಲಾಗುವುದು. ಬಳಿಕ ಒಂದು ತಂಡ ಉತ್ತರ ಕರ್ನಾಟಕದೆಡೆಗೆ ಹಾಗೂ ಇನ್ನೊಂದು ತಂಡ ದಕ್ಷಿಣ ಕರ್ನಾಟಕದೆಡೆ ರಂಗ ಸುತ್ತಾಟ ನಡೆಸಲಿದೆ.
ಆ.8ರಿಂದ ಡಿ.15ರವರೆಗೆ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ತಲಾ ಎರಡು ಪ್ರದರ್ಶನ ನೀಡಲಾಗುವುದು. ಬೆಳಗ್ಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಂಜೆ ವೇಳೆಗೆ ಸಾರ್ವಜನಿಕರಿಗಾಗಿ ನಾಟಕ ಪ್ರದರ್ಶಿಸಲಾಗು ವುದು.
ರಾಜ್ಯಾದ್ಯಂತ ಸುಮಾರು 450 ರಿಂದ 500 ಪ್ರದರ್ಶನಗಳನ್ನು ನೀಡುವ ಗುರಿ ಹೊಂದಲಾಗಿದೆ. ಯುವ ಸಮುದಾಯವನ್ನು ಗಮನದಲ್ಲಿ ಇರಿಸಿಕೊಂಡು ರೂಪಿಸಲಾಗಿರುವ ಈ ನಾಟಕ ಗಾಂಧೀಜಿಯ ಜೀವನ ಚರಿತ್ರೆಯ ಪ್ರಮುಖ ಘಟ್ಟಗಳನ್ನು ಒಳಗೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ.
ನಾಟಕದಲ್ಲಿ ತೆರೆ ಮೇಲೆ ಹಾಗೂ ತೆರೆ ಮರೆಯಲ್ಲಿ ಕಾರ್ಯನಿರ್ವಹಿಸುವ ಕಲಾವಿದರು, ತಂತ್ರಜ್ಞರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ಧನ ನೀಡಲಾಗುವುದು. ಪುರುಷ ಕಲಾವಿದರಿಗೆ 10 ಸಾವಿರ ರೂ. ಹಾಗೂ ಮಹಿಳಾ ಕಲಾವಿದರಿಗೆ ಮತ್ತು ತಾಂತ್ರಿಕ ಸಿಬ್ಬಂದಿಗೆ 12 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು
ಎಂದೂ ಅವರು ಹೇಳಿದ್ದಾರೆ.
ತರಬೇತಿ ಆರಂಭ: ಈಗಾಗಲೇ ನಾಟಕ ಪ್ರದರ್ಶ ನಕ್ಕೆ 2 ತಂಡಗಳಿಗೆ ತರಬೇತಿ ನೀಡಲಾಗುತ್ತಿದೆ. ಹಾವೇರಿಯ ಶೇಷಗಿರಿ ಹಳ್ಳಿಯಲ್ಲಿ ಒಟ್ಟು 30 ಕಲಾವಿದರಿಗೆ ಜು.8ರಿಂದ ತರಬೇತಿ ನೀಡಲಾಗುತ್ತಿದೆ.
ಅ.2ರಂದು ನಗರದಲ್ಲಿ ಪ್ರದರ್ಶನ
2019ಕ್ಕೆ ಗಾಂಧೀಜಿಯವರು ಹುಟ್ಟಿ 150 ವರ್ಷ ಆಗುತ್ತದೆ. ಹೀಗಾಗಿ ಅವರ ಕುರಿತು ಜನರಿಗೆ ಇನ್ನಷ್ಟು ಮಾಹಿತಿ ನೀಡುವ ಉದ್ದೇಶದಿಂದ ರಂಗ ಪಯಣ ಆಯೋಜಿಸಲಾಗಿದೆ. ಅ.2ರಂದು ಗಾಂಧಿ ಜಯಂತಿಯಂದು ಎರಡು ತಂಡಗಳು ರಾಜಧಾನಿ ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ನೀಡಲಿವೆ. ಅಂದು ಬೆಳಗ್ಗೆ ಗಾಂಧಿ ಭವನದಲ್ಲಿ ಹಾಗೂ ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನ ಇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.