ಗಣೇಶ ಬಂದ, ಸಡಗರ ತಂದ¨
Team Udayavani, Aug 26, 2017, 9:56 AM IST
ಬೆಂಗಳೂರು: ಸ್ವರ್ಣಗೌರಿ ಪೂಜೆಯನ್ನು ಗುರುವಾರ ಭಕ್ತಿಪೂರ್ವಕವಾಗಿ ಆಚರಿಸಿದ ನಗರವಾಸಿಗಳು ಶುಕ್ರವಾರ ಗಣೇಶ ಚತುರ್ಥಿ ಆಚರಣೆಗೆ ಸಂಭ್ರಮದಿಂದ ಸಜ್ಜಾಗಿದ್ದಾರೆ. ವರ್ಣಮಯ ರಂಗೋಲಿ, ತಳಿರು, ತೋರಣ, ಬಾಳೆಕಂಬ, ಹೂಮಾಲೆಗಳಿಂದ ಮನೆ, ಕಚೇರಿಗಳನ್ನು ಅಲಂಕರಿಸಿದ್ದ ನಾಗರಿಕರು ಗೌರಿ ಹಬ್ಬವನ್ನು ವಿಶೇಷ ಪೂಜೆ, ಪುನಸ್ಕಾರ ನೆರವೇರಿಸುವ ಮೂಲಕ ಅದ್ಧೂರಿಯಾಗಿ ಆಚರಿಸಿದರು. ಹೆಣ್ಣು ಮಕ್ಕಳು ಪರಸ್ಪರ ಬಾಗಿನ ವಿನಿಮಯ ಮಾಡಿಕೊಂಡರು. ಹೊಸ ಉಡುಗೆ ತೊಟ್ಟು, ಸಿಹಿ ತಿಂಡಿ- ತಿನಿಸು ಸವಿದ ಮಕ್ಕಳು ಸಂಭ್ರಮಿಸಿದರು. ಗೌರಿ- ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮೂರ್ತಿಗಳ ಖರೀದಿ, ನಾನಾ ಅಲಂಕಾರಿಕ ಸಾಮಗ್ರಿಗಳು, ಹೂವು, ಹಣ್ಣು, ತರಕಾರಿ, ಇತರೆ ಪದಾರ್ಥಗಳ ಖರೀದಿ ಭರಾಟೆ ಜೋರಾಗಿತ್ತು. ಗೌರಿ ಮೂರ್ತಿಗಳನ್ನು ಭಕ್ತಿಪೂರ್ವಕವಾಗಿ ಮನೆಗೆ ಕೊಂಡೊಯ್ದರು. ಈ ನಡುವೆ ಹಲವು ಸಂಘ ಸಂಸ್ಥೆಗಳು, ಗಣೇಶ ಉತ್ಸವ ಸಮಿತಿ ಗಳು ಹಬ್ಬಕ್ಕೆ ಸಕಲ ತಯಾರಿ ಮಾಡಿಕೊಂಡಿವೆ. ಅಲ್ಲಲ್ಲಿ ಪೆಂಡಾ ಲ್‌ಗಳು ತಲೆ ಎತ್ತಿವೆ. ಬೃಹದಾಕಾರದ ಗಣೇಶ ಮೂರ್ತಿಗಳು ಪೆಂಡಾಲ್ ಪ್ರವೇಶಿಸಿವೆ. ಗಣೇಶ ಉತ್ಸವ
ಸಮಿತಿಗಳಿಂದ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಆಯೋಜನೆ ಮಾಡಲಾಗಿದೆ. ಗಣೇಶನ ಉತ್ಸವದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹದ್ದಿನಕಣ್ಣು ಇಡಲಾಗಿದೆ. ಗಣೇಶನ ಮೂರ್ತಿಗಳನ್ನು ವಿಸರ್ಜಿಸಲು ಪಾಲಿಕೆಯೂ ಸಕಲ ವ್ಯವಸ್ಥೆ ಮಾಡಿಕೊಂಡಿದ್ದು, ಪುಷ್ಕರಣಿಗಳನ್ನು ನಿರ್ಮಿಸಿದೆ. ಮೊಬೈಲ್ ನೀರಿನ ಘಟಕಗಳನ್ನು ವಸತಿ ಪ್ರದೇಶಗಳಲ್ಲಿ ನಿಯೋಜನೆ ಮಾಡಲಾಗಿದೆ. ಒಟ್ಟಾರೆ, ವಾರದಿಂದ ನಿರಂತರ ಮಳೆಯ ನಡುವೆಯೂ, ತಿಂಗಳಾಂತ್ಯವಾಗಿದ್ದರೂ, ಹಬ್ಬದ ಸಡಗರಕ್ಕೆ ಮಾತ್ರ ಕುಂದುಂಟಾಗಿಲ್ಲ. ಮಾರುಕಟ್ಟೆ ಖರೀದಿ ಭರಾಟೆ ಜೋರು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಗುರುವಾರ ಹೂವಿನ ದರ ದುಬಾರಿಯಾಗಿತ್ತು. ಕನಕಾಂಬರ ಹೂವು ಕೆ.ಜಿ.ಗೆ 1,200-1,300 ರೂ. ತಲುಪಿದರೆ, ಏಲಕ್ಕಿ ಬಾಳೆಹಣ್ಣು 110-120 ರೂ.ವರೆಗೆ ತಲುಪಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿತ್ತು. ಬಾಳೆಹಣ್ಣು, ಕನಕಾಂಬರ ಹೊರುತುಪಡಿಸಿ ಇತರೆ ಹೂವು, ಹಣ್ಣುಗಳ ದರ ಕೊಂಚ ಕಡಿಮೆಯಿತ್ತು. ಸೇಬು ದಾಸ್ತಾನು ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿದ್ದರಿಂದ ದರ ಕೆ.ಜಿ.ಗೆ 100 ರೂ.ಗೆ ಇಳಿಕೆಯಾಗಿತ್ತು. ದಾಳಿಂಬೆ, ಮೂಸಂಬಿ, ಸೇಬು, ಪೇರಲೆಹಣ್ಣಿನ ದಾಸ್ತಾನು ಕೂಡ ಯಥೇತ್ಛವಾಗಿರುವುದು ಕಂಡುಬಂತು. ಪೇರಲೆ ಹಣ್ಣು ಕೆಜಿಗೆ 120-130 ರೂ. ಇದ್ದು, ದುಬಾರಿಯಾಗಿತ್ತು. ಸೇವಂತಿಗೆ ಹೂವು, ಕಾಕಡ, ಸುಗಂಧರಾಜ ಮತ್ತಿತರ ಹೂವುಗಳ ಖರೀದಿಯೂ ಜೋರಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮಾವನ ಮಗನ ಕಿರುಕುಳಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
Road mishap: ಗೂಡ್ಸ್ ವಾಹನಕ್ಕೆ ದ್ವಿಚಕ್ರ ವಾಹನ ಡಿಕ್ಕಿ; ಸಿಎಆರ್ ಕಾನ್‌ಸ್ಟೇಬಲ್ ಸಾವು
Bengaluru: ಸ್ನೇಹಿತನ ಅಪ್ರಾಪ್ತ ಪುತ್ರಿ ಮೇಲೆ ರೇಪ್ ಮಾಡಿ ಗರ್ಭಿಣಿ ಮಾಡಿದ್ದ ಅಪರಾಧಿ
Bengaluru: ಅಕ್ಕನ ಬುದ್ಧಿಮಾಂದ್ಯ ಮಗಳ ಮೇಲೆಯೇ ಸತತ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ
Bengaluru: ಬಸ್ ಚಾಲಕನ ಮೇಲೆ ಹಲ್ಲೆಗೆ ಯತ್ನ; ಮೆಕ್ಯಾನಿಕ್ ಬಂಧನ
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.