Ganesh Chaturthi 2023: ಚತುರ್ಥಿ ಹಬ್ಬಕ್ಕೆ ಚಂದ್ರಯಾನ ಗಣೇಶನ ವೈಭವ

Team Udayavani, Sep 16, 2023, 10:03 AM IST

tdy-3

ಬೆಂಗಳೂರು: ಪ್ರತಿವರ್ಷ ಗಣೇಶ ಚತುರ್ಥಿಗೆ ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುವ ಗಣೇಶ, ಈ ಬಾರಿ ಚಂದ್ರಯಾನಕ್ಕೆ ಸಿದ್ಧನಾಗಿದ್ದಾನೆ.

ಇತ್ತೀಚೆಗಷ್ಟೇ “ಚಂದ್ರಯಾನ-3′ ವಿಕ್ರಂ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಪದಾರ್ಪಣೆ ಮಾಡಿ ಇಡೀ ಜಗತ್ತೇ ತಿರುಗಿನೋಡುವಂತೆ ಇಸ್ರೋ ಸಾಧನೆ ಮಾಡಿತು. ಅದಕ್ಕೆ ಅಭಿನಂದನಾ ಪೂರಕವಾಗಿ ನಗರದಲ್ಲೊಬ್ಬ ಕಲಾವಿದ ತನ್ನ ಕೈಚಳಕದಿಂದ ಗಣೇಶನ ಚಂದ್ರಯಾನವನ್ನು ತಯಾರಿಸಿದ್ದಾರೆ.

ಈ ಬಾರಿಯ ವಿಶೇಷ ಗಣಪತಿ ಆಗಿದೆ. ಸಾಮಾನ್ಯವಾಗಿ ಸಿಂಹಾಸನವೇರಿದ ಕುಳಿತಿರುವುದು, ಉಗ್ರನರಸಿಂಹ ರೂಪ, ಪಂಚಮುಖೀ ಗಣೇಶ, ತ್ರಿಶೂಲ, ಗದೆ ಹಿಡಿದು ನಿಂತಿರುವುದು ಹೀಗೆ ಪ್ರತಿವರ್ಷ ವಿಭಿನ್ನ ಅವತಾರಗಳಲ್ಲಿ ಗಣೇಶನ ಪ್ರತಿಷ್ಠಾನೆ ಆಗುತ್ತದೆ. ಕಳೆದ ವರ್ಷ ನಟ ಪುನೀತ್‌ ರಾಜ್‌ಕುಮಾರ್‌ ಜತೆಗೆ ಕಾಣಿಸಿಕೊಂಡಿದ್ದನು. ಈ ಸಲ ಚಂದ್ರಯಾನಲ್ಲೆ ರೆಡಿಯಾಗಿದ್ದಾನೆ. ನಗರದ ಯಶವಂತಪುರದ ಈಶಪುತ್ರ ಎಂಟರ್‌ ಪ್ರೈಸಸ್‌ ಸಂಸ್ಥೆಯ ನವೀನ್‌ ಆರ್ಟ್ಸ್ ಮಾಲಿಕ ಆನಂದ್‌, ಸುಮಾರು ಮೂರು ಅಡಿ ಅಗಲ ಮತ್ತು ಎರಡು ಅಡಿ ಎತ್ತರದ ವಿನ್ಯಾಸ ಚಂದ್ರನ ತೂಗುಯ್ನಾಲೆ ಮೇಲೆ ತ್ರಿವರ್ಣ ಧ್ವಜ ಹಿಡಿದು ಕುಳಿತಿದ್ದಾನೆ.

ಜತೆಗೆ ಚಂದ್ರನತ್ತ ಚಲಿಸುತ್ತಿರುವ ರಾಕೆಟ್‌ ಮತ್ತು ಚಂದ್ರನ ಮೇಲೆ ಪಾದಾರ್ಪಣೆ ಮಾಡುತ್ತಿರುವ ವಿಕ್ರಂ ಲ್ಯಾಂಡರ್‌ ದೃಶ್ಯ ರೋಮಾಂಚನಕಾರಿಯಾಗಿದ್ದು, ಚಂದ್ರಯಾನ ಕನಸು ಕಂಡ ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್‌ ಕಲಾಂ ಅವರು ಇದನ್ನು ನೋಡಿ ಸಂತಸ ವ್ಯಕ್ತಪಡಿಸುತ್ತಿರುವ ದೃಶ್ಯ ಕಟ್ಟಿಕೊಡಲಾಗಿದೆ. ಇಲ್ಲಿ ಮರದ ಹಲಗೆ, ಫೋಮ್‌ ಶೀಟ್‌, ಯುಬಿ ಲೈಟ್‌ ಹಾಗೂ ಮಣ್ಣಿನಿಂದ ತಯಾರಿಸಿದ ಗಣಪತಿ ವಿಗ್ರಹ ಸೇರಿದಂತೆ ಅಂದಾಜು 25 ಸಾವಿರ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇಷ್ಟೇ ಅಲ್ಲ, ಚಿನ್ನದ ರಥ ಏರಿ ಬರುವ ರಾಜನಿಗಿಂತ ಎತ್ತಿನಗಾಡಿ ಏರಿ ಬರುವ ರೈತನೇ ದೊಡ್ಡವನು ಎಂಬ ಸಂದೇಶ ಹಾಗೂ ಜೈ ಜವಾನ್‌ -ಜೈ ಕಿಸಾನ್‌ ಕಲ್ಪನೆಯ ರೈತ ಗಣಪತಿ, ನೈಜ ನವಿಲು ಗರಿಗಳನ್ನು ಬಳಸಿ ತಯಾರಿಸಿದ ಗಣೇಶ, ಗರುಡ ಗಣೇಶ, ವೆಂಕಟೇಶ್ವರ ಗಣೇಶ ಹೀಗೆ ನಾನಾ ರೂಪದ ಗಣಪತಿ ಮೂರ್ತಿಗಳು ಆಕರ್ಷಣೀಯವಾಗಿದ್ದು, ತುಮಕೂರು, ಮೈಸೂರು, ಮಂಡ್ಯ, ಚನ್ನಪಟ್ಟಣ, ಕೋಲಾರ, ಹೈದರಾಬಾದ್‌ ಹಾಗೂ ತಮಿಳುನಾಡು ಒಳಗೊಂಡಂತೆ ವಿವಿಧ ಭಾಗಗಳಿಂದ ಈ ಮೂರ್ತಿಗೆ ಬೇಡಿಕೆ ಬಂದಿದೆ. ಬಹುತೇಕ ಗಣಪತಿ ಮೂರ್ತಿಗಳು ಈಗಾಗಲೇ ಬುಕ್‌ ಆಗಿವೆ ಎಂದು ಹೇಳುತ್ತಾರೆ.

8 ಚಂದ್ರಯಾನ-3 ಗಣೇಶ ಗಳು ಬುಕ್‌ ಆಗಿವೆ. ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಪಿಒಪಿ ಗಣೇಶ ಕರಗಲು ಸುಮಾರು ಆರು ತಿಂಗಳು ಬೇಕು. ಮಲಿನ ತಡೆಗೆ ಮಣ್ಣಿನಿಂದಲೇ ಗಣೇಶಮೂರ್ತಿ ತಯಾರಿಸುತ್ತಿದ್ದೇವೆ. ಇದರಿಂದ ಕುಂಬಾರಿಕೆ ಮಾಡುವವರಿಗೂ ಅನುಕೂಲವಾಗುತ್ತದೆ. –ಆನಂದ್‌, ಗಣಪತಿ ವಿಗ್ರಹ ತಯಾರಕರು

 –ಭಾರತಿ ಸಜ್ಜನ್‌

ಟಾಪ್ ನ್ಯೂಸ್

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

CM-Sidda-BGV

Belagavi: ಖಾನಾಪುರ ಪೊಲೀಸ್‌ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ

u1

Udupi: ಮನೆಯೊಳಗೆ ಧರ್ಮಗ್ರಂಥ, ಹೊರಗೆ ಸಂವಿಧಾನ ಮುನ್ನೆಡೆಸಬೇಕು: ನ್ಯಾ| ಶ್ರೀಶಾನಂದ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಧ್ಯಾನ್‌ಚಂದ್‌ ಖೇಲ್‌ರತ್ನ ನನಗೇಕಿಲ್ಲ: ಹರ್ವಿಂದರ್‌ ಸಿಂಗ್‌ ಪ್ರಶ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Munirtahana–Egg

Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Varthur Prakash: ವರ್ತೂರು ಪ್ರಕಾಶ್‌ಗೆ 3 ತಾಸು ಗ್ರಿಲ್‌, 38 ಪ್ರಶ್ನೆ!

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Blackmail: ಸ್ನೇಹಿತೆಯ ವಿಡಿಯೋ, ಫೋಟೋ ಇಟ್ಟುಕೊಂಡು ಹಣಕ್ಕೆ ಬ್ಲ್ಯಾಕ್‌ಮೇಲ್

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Fraud: ಡಿಕೆಸು ಹೆಸರಲ್ಲಿ 8 ಕೋಟಿ ಸಾಲ ಪಡೆದು ವಂಚನೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

Bengaluru: ಸಾಲ ವಾಪಸ್‌ ಕೇಳಿದ್ದಕ್ಕೆ ಮಾಂಸ ಅಂಗಡಿಯಲ್ಲಿ ಭೀಕರ ಹತ್ಯೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Snowfall: ಹಿಮಾಚಲದಲ್ಲಿ ಭಾರೀ ಹಿಮಪಾತ: 4 ಸಾವು, 226 ರಸ್ತೆಗಳು ಬಂದ್‌!

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Bangladesh ಜತೆ ವಹಿವಾಟು ಇಲ್ಲ: ಆಟೋ ಮೊಬೈಲ್‌ ವ್ಯಾಪಾರಿಗಳ ಘೋಷಣೆ

Supreme Court: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

SC: ಲಾಟರಿ ಕಿಂಗ್‌ ಮಾರ್ಟಿನ್‌ ಕೇಸ್‌: ಮಾಹಿತಿ ವರ್ಗಕ್ಕೆ ಸುಪ್ರೀಂ ಕೋರ್ಟ್‌ ತಡೆ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

Malayalam ಕಥೆಗಾರ, ಸಾಹಿತಿ ವಾಸುದೇವನ್‌ ನಾಯರ್‌ ವಿಧಿವಶ

POlice

Sullia: ಬೆಳ್ಳಾರೆ ಸೊಸೈಟಿ ಚುನಾವಣೆ; ಎರಡು ಪಕ್ಷಗಳ ನಡುವೆ ಮಾತಿನ ಚಕಮಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.