ಗಣೇಶನ ಪಿಒಪಿ ಅವತಾರ ಈ ಸಲಕ್ಕೆ ಕೊನೆಯೇ?
Team Udayavani, Aug 18, 2017, 11:29 AM IST
ಬೆಂಗಳೂರು: ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಿದ ಗಣೇಶ- ಗೌರಿ ಮೂರ್ತಿಗಳ ಮಾರಾಟವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿದ್ದು, ಇದಕ್ಕೆ ರಾಜಧಾನಿಯ ಜನತೆ ಯಾವ ರೀತಿ ಸ್ಪಂದಿಸಲಿದ್ದಾರೆ ಎಂಬುದಕ್ಕೆ ಈ ವರ್ಷದ ಹಬ್ಬದಲ್ಲಿ ಉತ್ತರ ಸಿಗಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಆಚರಿಸುವ ಧಾರ್ಮಿಕ ಆಚರಣೆಗಳಲ್ಲಿ ಗಣೇಶೋತ್ಸವ ಪ್ರಮುಖ. ಗಣೇಶೋತ್ಸವ ಮುಗಿದು ತಿಂಗಳು ಕಳೆದರೂ ವಿಜೃಂಭಣೆಯ ಆಚರಣೆ ನಡೆದೇ ಇರುತ್ತದೆ. ಆದರೆ ಈ ಧಾರ್ಮಿಕ ಆಚರಣೆಯನ್ನು ಪರಿಸಸ್ನೇಹಿಯಾಗಿ ಆಚರಿಸುವ ಮೂಲಕ ಪ್ರಜ್ಞಾವಂತಿಕೆ ಮೆರೆಯಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಪ್ರತಿವರ್ಷ ನಗರದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ 4.50 ಲಕ್ಷಕ್ಕೂ ಹೆಚ್ಚು ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಯಾಗುತ್ತವೆ. ಇದರಲ್ಲಿ ಶೇ.40ರಷ್ಟು ಪಿಒಪಿ ಮೂರ್ತಿಗಳಾಗಿರುತ್ತವೆ ಎಂಬ ಅಂದಾಜು ಇದೆ. ಅಂದರೆ 1.80 ಲಕ್ಷಕ್ಕೂ ಅಧಿಕ ಪಿಒಪಿ ಮೂರ್ತಿಗಳು ಪ್ರತಿವರ್ಷ ಪ್ರತಿಷ್ಠಾಪನೆಯಾಗುತ್ತವೆ. ಆದರೆ ಈ ಮೂರ್ತಿಗಳನ್ನು ವಿಸರ್ಜಿಸಿದಾಗ ನೀರಿನಲ್ಲಿ ಕರಗಲು ಬಹಳ ಸಮಯ ಬೇಕಾಗುತ್ತದೆ.
ಅಲ್ಲದೇ ವಿಷಯುಕ್ತ ಬಣ್ಣ ಬಳಸಿರುವುದರಿಂದ ನೀರು ಕಲುಷಿತಗೊಳ್ಳುವ ಜತೆಗೆ ದುರ್ನಾತ ಬೀರುತ್ತದೆ. ಆ ಕಾರಣಕ್ಕೆ ಪುಷ್ಕರಣಿಗಳು, ಕೆರೆ ಕುಂಟೆಗಳ ಬಳಿ ಪಿಒಪಿ ಗಣೇಶ ಮೂರ್ತಿ ವಿಸರ್ಜಿಸಿದ ಕೆಲ ಹೊತ್ತಿನಲ್ಲೇ ಸಿಬ್ಬಂದಿ ಅವುಗಳನ್ನು ತೆರವುಗೊಳಿಸಿ ಪಕ್ಕಕ್ಕಿಡುತ್ತಾರೆ. ಬಳಿಕ ವಿಕಾರಗೊಂಡ ಮೂರ್ತಿಗಳನ್ನೆಲ್ಲಾ ಎಲ್ಲೆಂದರಲ್ಲಿ ಎಸೆಯಲಾಗುತ್ತದೆ.
ಪಿಒಪಿ ಗಣೇಶ ಮೂರ್ತಿಗಳು ಪರಿಸರಕ್ಕೆ ಮಾರಕವೆನಿಸಿರುವುದರಿಂದ ಕಳೆದ ವರ್ಷವೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪಿಒಪಿ ಮೂರ್ತಿಗಳ ಮಾರಾಟವನ್ನು ನಿಷೇಧಿಸಿತ್ತು. ಆದರೆ ಈಗಾಗಲೇ ಉತ್ಪಾದನೆಯಾಗಿರುವ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಬೇಕು ಎಂದು ಉತ್ಪಾದಕರು, ಮಾರಾಟಗಾರರು ಮನವಿ ಮಾಡಿದ ಹಿನ್ನೆಲೆಯಲ್ಲಿ ಕಳೆದ ಬಾರಿ ವಿನಾಯ್ತಿ ನೀಡಲಾಗಿತ್ತು. ಬಳಿಕ ಮಂಡಳಿಯು ಪಿಒಪಿ ಮೂರ್ತಿಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.
ಇಷ್ಟಾದರೂ ನಿಯಮಬಾಹಿರವಾಗಿ ಪಿಒಪಿ ಮೂರ್ತಿಗಳನ್ನು ತಯಾರಿಸಿ ನಗರದ ಹಲವೆಡೆ ಮಾರಾಟಕ್ಕೆ ಇಡಲಾಗಿದೆ. ಪಿಒಪಿ ಮೂರ್ತಿ ನಿಷೇಧಿಸಿ ಮಂಡಳಿ ಆದೇಶ ಹೊರಡಿಸಿದ್ದರೂ ಅದನ್ನು ಮೇಲ್ವಿಚಾರಣೆ ನಡೆಸಬೇಕಾದ ಜವಾಬ್ದಾರಿ ಪಾಲಿಕೆಗೆ ಸೇರಿದೆ. ಗಣೇಶೋತ್ಸವವು ಧಾರ್ಮಿಕ ಹಾಗೂ ಭಾವನಾತ್ಮಕ ವಿಚಾರವಾಗಿರುವುದರಿಂದ ಕಾನೂನು ಕ್ರಮ, ದಂಡ, ಬಲ ಪ್ರಯೋಗಿಸಲು ಮುಂದಾಗದೆ ಅರಿವು ಮೂಡಿಸುವ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ.
ವರ್ಷಗಳು ಕಳೆದಂತೆ ಪಿಒಪಿ ಮೂರ್ತಿಗಳ ಬಳಕೆ ಕಡಿಮೆಯಾಗುತ್ತಿದೆ. ಈ ಬಾರಿ ಸಂಪೂರ್ಣ ನಿಷೇಧವಿರುವುದರಿಂದ ಸಾರ್ವಜನಿಕರು ಮಣ್ಣಿನ ಮೂರ್ತಿಗಳನ್ನೇ ಬಳಸುವ ಮೂಲಕ ಪರಿಸರ ಸಂರಕ್ಷಣೆಗೆ ಕೈ ಜೋಡಿಸಬೇಕು ಎಂಬುದು ಪರಿಸರ ಪ್ರೇಮಿಗಳ ಆಶಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.