ಕಸ-ಪ್ಲಾಸ್ಟಿಕ್ ದಂಡದ ಮೊತ್ತವೇ 2 ಕೋಟಿ!
Team Udayavani, Jan 27, 2020, 10:46 AM IST
ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಸುತ್ತಿದ್ದ ವಾಣಿಜ್ಯ ಉದ್ದಿಮೆಗಳಿಂದ ಪಾಲಿಕೆಯ ಆರೋಗ್ಯಾಧಿಕಾರಿಗಳು ಕಳೆದ ಏಪ್ರಿಲ್ ನಿಂದ ಡಿಸೆಂಬರ್‌ವರೆಗೆ 1.84 ಕೋಟಿ ರೂ.ದಂಡ ಸಂಗ್ರಹಿಸಿದ್ದಾರೆ.
ಇನ್ನು ಇದೇ ಅವಧಿಯಲ್ಲಿ ಕಸ ವಿಂಗಡಣೆ ಮಾಡುವುದರಲ್ಲಿ ಲೋಪ ವೆಸಗಿದ ಹಾಗೂ ಸಮರ್ಪಕವಾಗಿ ಕಸ ನೀಡದ ನಗರದ ಬಾರ್ ಆ್ಯಂಡ್ ರೆಸ್ಟೋರೆಂಟ್, ಪಬ್, ಹೋಟೆಲ್, ಮಾಲ್ ಹಾಗೂ ವಾಣಿಜ್ಯ ಉದ್ಯಮಗಳಿಗೆ 28.95ಲಕ್ಷ ರೂ. ದಂಡ ವಿಧಿಸಲಾಗಿದೆ. 55,371 ವಾಣಿಜ್ಯ ಉದ್ದಿಮೆಗಳಿಗೆ ಪಾಲಿಕೆಯ ಆರೋಗ್ಯ ವಿಭಾಗದ ಅಧಿಕಾರಿಗಳು ಭೇಟಿ ನೀಡಿದ್ದು, ಕಸ ವಿಂಗಡಣೆ ಮಾಡದ ಆರೋಪದ ಮೇಲೆ 30.85 ಲಕ್ಷ ರೂ. ದಂಡ ವಿಧಿಸಲಾಗಿದ್ದು, ಇದರಲ್ಲಿ 28.95 ಲಕ್ಷ ರೂ. ಇಲ್ಲಿಯವರೆಗೆ ಸಂಗ್ರಹ ಮಾಡಲಾಗಿದೆ. ಅದೇ ರೀತಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದ ಹಿನ್ನೆಲೆಯಲ್ಲಿ 1.95 ಕೋಟಿ ರೂ.ದಂಡ ವಿಧಿಸಲಾಗಿದ್ದು, 1.84 ಕೋಟಿ ರೂ. ಸಂಗ್ರಹ ಮಾಡಲಾಗಿದೆ. ಅಲ್ಲದೆ, 47.8 ಸಾವಿರ ಕೆ.ಜಿ ಪ್ಲಾಸ್ಟಿಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಈ ಸಂಬಂಧ “ಉದಯವಾಣಿ’ಯೊಂದಿಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತರಾದ ರಂದೀಪ್, ವಾಣಿಜ್ಯ ಉದ್ದಿಮೆಗಳಿಂದ ಕಸ ವಿಲೇವಾರಿಯಲ್ಲಿ ಆಗುತ್ತಿರುವ ಲೋಪಗಳನ್ನು ಸರಿಪಡಿಸಲು ಪಾಲಿಕೆ ಕೆಲವು ನಿರ್ದಿಷ್ಟ ಯೋಜನೆಗಳನ್ನು ರೂಪಿಸಿಕೊಂಡಿದೆ. ಇದರಲ್ಲಿ ಘನತ್ಯಾಜ್ಯ ನಿರ್ವಹಣೆ -2016ರ ನಿಯಮಾನುಸಾರ 100 ಕೆ.ಜಿಯ ಒಳಗೆ ಕಸ ಉತ್ಪಾದನೆ ಮಾಡುವವರ ಕಸವನ್ನೂ ಇನ್ನು ಮುಂದೆ ಪಾಲಿಕೆಯೇ ಸಂಗ್ರಹಿಸಲಿದ್ದು, ಇದಕ್ಕೆ ತಿದ್ದುಪಡಿ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ಕೌನ್ಸಿಲ್ ಸಭೆಯಲ್ಲಿ ಈ ತಿದ್ದುಪಡಿಗೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎಂದರು.
ಹಿಂದಿನ ವರ್ಷದಿಂದ ನಗರದ ವಿವಿಧೆಡೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡುವವರ ಮೇಲೆ ದಂಡ ಪ್ರಯೋಗ ಅಸ್ತ್ರ ಬಳಸುತ್ತಿದೆ. ಆದರೆ, ಪಾಲಿಕೆ ಪ್ಲಾಸ್ಟಿಕ್‌ಗೆ ಬದಲಾಗಿ ಪರ್ಯಾಯವಾಗಿ ಬಟ್ಟೆಯಿಂದ ಮಾಡಿರುವ ಬ್ಯಾಗ್‌ಗಳನ್ನು ಕಡಿಮೆ ಮೊತ್ತದಲ್ಲಿ ಅಥವಾ ಉಚಿತವಾಗಿ ನೀಡುವ ಪ್ರಸ್ತಾವನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.
ದಂಡದ ಪ್ರಮಾಣ ದುಪಟ್ಟು : ಕಸ ವಿಂಗಡಣೆ ಮಾಡದ ಸಾರ್ವಜನಿಕರ ಮೇಲೂ ದುಪ್ಪಟ್ಟು ದಂಡ ವಿಧಿಸುವ ಪ್ರಸ್ತಾವನೆಯೂ ಪಾಲಿಕೆಯ ಮುಂದಿದೆ. “ಬಿಬಿಎಂಪಿ ಕಸ ನಿರ್ವಹಣೆ ಬೈಲಾ- 2019′ ಕರಡು ರೂಪಿಸಿ ಪ್ರಕಟಿಸಲಾಗಿದ್ದು, ಅಂತಿಮ ಬೈಲಾದಲ್ಲಿ ಈಗ ಇರುವ ದಂಡಕ್ಕಿಂತ ದುಪ್ಪಟ್ಟು ದಂಡ ವಿಧಿಸುವ ಬಗ್ಗೆಯೂ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಷಯ ಕೌನ್ಸಿಲ್ ನಲ್ಲಿ ಚರ್ಚೆಗೆ ಬರಲಿದೆ ಎಂದು ಬಿಬಿ ಎಂಪಿ ವಿಶೇಷ (ಘನತ್ಯಾಜ್ಯ ನಿರ್ವಹಣೆ) ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಯಾವ ವಲಯದಲ್ಲಿ ಹೆಚ್ಚು ದಂಡ? : ಕಸ ವಿಂಗಡಣೆ ಲೋಪವೆಸಗುವ ಉದ್ದಿಮೆಗಳಲ್ಲಿ ಬೆಂಗಳೂರು ಪೂರ್ವ ವಲಯ ಮುಂಚೂಣಿಯಲ್ಲಿದೆ. ಅದರಲ್ಲೂ ವಾಣಿಜ್ಯ ಉದ್ದಿಮೆಗಳಲ್ಲಿ ಲೋಪ ಹೆಚ್ಚು ಕಂಡುಬಂದಿದೆ. ಈ ಭಾಗದ ಉದ್ದಿಮೆಗಳಿಂದ ಪಾಲಿಕೆ 18.2 ಲಕ್ಷ ರೂ. ದಂಡ ಸಂಗ್ರಹಿಸಿದೆ. ಇನ್ನು ನಿಷೇಧಿತ ಪ್ಲಾಸ್ಟಿಕ್ ಬಳಕೆಯಲ್ಲಿ ಬೊಮ್ಮನಹಳ್ಳಿ ವಲಯ ಮುಂಚೂಣಿಯಲ್ಲಿದ್ದು, ನಿಷೇಧಿತ ಪ್ಲಾಸ್ಟಿಕ್ ಬಳಸಿದ ಉದ್ದಿಮೆಗಳ ಮೇಲೆ ಕಳೆದ ವರ್ಷ ಪಾಲಿಕೆ ಆರೋಗ್ಯಾಧಿಕಾರಿಗಳು 64. 84 ಲಕ್ಷ ರೂ. ದಂಡ ವಿಧಿಸಿದ್ದಾರೆ. ವಲಯವಾರು ನೋಟಿಸ್ ನೋಡಿದರೆ, ಪಶ್ಚಿಮ ವಲಯದ ಉದ್ದಿಮೆಗಳಿಗೆ 19,755 ಉದ್ದಿಮೆಗಳಿಗೆ ನೋಟಿಸ್ ನೀಡಲಾಗಿದೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.
ಗೊಂದಲಕ್ಕೆ ತೆರೆ ಎಳೆಯಲು ಪಾಲಿಕೆ ಚಿಂತನೆ: ನಗರದಲ್ಲಿ ಸಗಟು ಉತ್ಪಾದಕರು (ಹೆಚ್ಚು ಕಸ ಉತ್ಪಾದಿಸುವವರು)ಅವರು ಉತ್ಪಾದಿಸುವ ಕಸವನ್ನು ಅವರೇ ವಿಲೇವಾರಿ ಮಾಡಬೇಕು ಎಂಬ ನಿಯಮ ಇದೆ. ಈ ನಿಯಮ ತಿದ್ದುಪಡಿಗೆ ಸಿದ್ಧವಾಗಿದೆ. ರಾ ಷ್ಟ್ರೀಯ ಹಸಿರು ನ್ಯಾಯಾಧೀಕರಣ ನಿರಂತರ ವಾಗಿ ಪಾಲಿಕೆಗೆ ಚಾಟಿ ಬೀಸಿದ ಪರಿಣಾಮ ಪಾಲಿಕೆ ಎಚ್ಚೆತ್ತುಕೊಂಡಿದೆ. ಈಗ 10 ಕೆ.ಜಿ.ವರೆಗೆ ಉತ್ಪತ್ತಿಯಾಗುವ ಕಸವನ್ನು ಮಾತ್ರ ಸಂಗ್ರಹ ಮಾ ಡುತ್ತಿದೆ.ಇದಕ್ಕಿಂತ ಹೆಚ್ಚು ಕಸ ಉತ್ಪಾದನೆ ಮಾಡುವವರುತಾವೇ ಪ್ರತ್ಯೇಕವಾಗಿ ವಿಲೇವಾರಿ ಮಾಡುತ್ತಿದ್ದರು. ಸಗಟು ಉತ್ಪಾದಕರು ಎಲ್ಲೆಂದರಲ್ಲಿ ಎಸೆಯು ತ್ತಿರುವಬಗ್ಗೆ, ಬಿಬಿಎಂಪಿ ವಾಹನಗಳಿಗೇ ಕಸ ಸಾಗಿಸುತ್ತಿರುವ ಬಗ್ಗೆ ದೂರು ಕೇಳಿ ಬಂದಿದ್ದವು. ಎನ್‌ಜಿಟಿ ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ -2016ರ ನಿಯಮ ಉಲ್ಲಂ ಘನೆ ಮಾಡುತ್ತಿದ್ದು ಸರಿ ಪಡಿಸಿಕೊಳ್ಳಲು ತಿಳಿಸಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Adalat: ಲೋಕ್ ಅದಾಲತ್‌ನಲ್ಲಿ 38.8 ಲಕ್ಷ ವ್ಯಾಜ್ಯ ಇತ್ಯರ್ಥ
Bengaluru: ಒಬಾಮಾ ಭೇಟಿ ವೇಳೆ ಸ್ಫೋಟ ಸಂಚು: ಡಿ.23ಕ್ಕೆ ಶಿಕ್ಷೆ ಪ್ರಕಟ
Fraud: ಸಿಬಿಐ ಸೋಗಿನಲ್ಲಿ ವೃದ್ಧೆಗೆ 1.24 ಕೋಟಿ ರೂ. ವಂಚನೆ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
IPS officer D. Roopa: ಸಿಂಧೂರಿ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ ರೂಪಾ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.