ಗರುಡಾ ಮಾಲ್ನಲ್ಲಿ ವೈನ್ ಉತ್ಸವಕ್ಕೆ ಚಾಲನೆ
Team Udayavani, Apr 15, 2017, 11:54 AM IST
ಬೆಂಗಳೂರು: ದ್ರಾಕ್ಷಿ ಬೆಳೆಗಾರರ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ದ್ರಾಕ್ಷಾರಸ ಮಂಡಳಿ ಸಹಯೋಗದಲ್ಲಿ ನಗರದ ಗರುಡಾ ಮಾಲ್ನಲ್ಲಿ ಮೂರು ದಿನಗಳ ವೈನ್ ಉತ್ಸವಕ್ಕೆ ಚಲನಚಿತ್ರ ನಟಿ ಮಯೂರಿ ಶುಕ್ರವಾರ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ವೈನ್ ಮಿತವಾದ ಸೇವನೆ ಆರೋಗ್ಯದಾಯಕವಾಗಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು.
ವೈನ್ ಉತ್ಸವ ಏ.14ರಿಂದ 16ರವರೆಗೆ ನಡೆಯಲಿದ್ದು, ದೇಶದ ಪ್ರಖ್ಯಾತ ವೈನ್ ತಜ್ಞರು ವಿವಿಧ ಬ್ರಾಂಡ್ಗಳ ವೈನ್ ಪ್ರದರ್ಶಿಸಲಿದ್ದಾರೆ. ವೈನ್ ಉತ್ಸವದಲ್ಲಿ ಆಸ್ಟ್ರೇಲಿಯ, ಜರ್ಮನ್ ಸೇರಿ ಕರ್ನಾಟಕದ 10 ವೈನರಿಗಳು ಪಾಲ್ಗೊಂಡಿದ್ದು, ಸುಮಾರು 20 ವೆರೈಟಿ ವೈನ್ ಮಾರಾಟಕ್ಕೆ ಇಡಲಾಗಿದೆ. ಗ್ರಾಹಕರಿಗೆ ಟೇಸ್ಟ್ ಮಾಡಲು ಅವಕಾಶವಿದ್ದು, ವೈನ್ ಬಾಟಲ್ಗಳಿಗೆ ಶೇ.10ರಷ್ಟು ರಿಯಾಯಿತಿ ದೊರೆಯಲಿದೆ.
ವೈನ್ ಪ್ರಿಯರು ವೈನ್ ರುಚಿಯೊಂದಿಗೆ ಮನೋರಂಜನೆ ಸವಿಯಲು ಅವಕಾಶ ನೀಡಲಾಗಿದ್ದು, ಉತ್ಸವದ ಪ್ರತಿದಿನ ಸಂಜೆ ಸಂಗೀತ ಸೇರಿ ವಿವಿಧ ಮನೋರಂಜನೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗ್ರಾಹಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ. ವೈನ್ಗೆ ಹೊಂದಿಕೆಯಾಗುವ ತಿನಿಸುಗಳು ಕೂಡ ಲಭ್ಯವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
Atul Subhash Case: ಮೊಮ್ಮಗನನ್ನು ಟೆಕಿ ಅತುಲ್ ತಾಯಿಯ ಸುಪರ್ದಿಗೆ ವಹಿಸಲು ಸುಪ್ರೀಂ ನಕಾರ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.