ಇನ್ಸ್‌ಪೆಕ್ಟರ್ ಮನೆಯಲ್ಲಿ ತಂಗಿದ್ದರು
Team Udayavani, Jul 29, 2018, 6:30 AM IST
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಲೇ ಇದೆ. ಆಘಾತಕಾರಿ ಸಂಗತಿ ಎಂದರೆ ಗೌರಿಹತ್ಯೆ ಸಂಚಿನಲ್ಲಿ ಭಾಗಿಯಾದ ಆರೋಪಿಗಳು ಹಾಲಿ ಪೊಲೀಸ್ ಇನ್ಸ್‌ಪೆಕ್ಟರ್‌ವೊಬ್ಬರ ಮನೆಯಲ್ಲಿ ಬಾಡಿಗೆಗೆ ತಂಗಿದ್ದರು ಎಂಬ ಸಂಗತಿ ಬಯಲಾಗಿದೆ.
ಗೌರಿ ಹಂತಕರಾದ ಪರಶುರಾಮ್ ವಾಗೊ¾àರೆ, ಗಣೇಶ್ ಮಿಸ್ಕಿ, ಅಮೋಲ್ ಕಾಳೆ, ಮನೋಹರ್ ಯಡವೆ, ಅಮಿತ್ ದೇಗ್ವೇಕರ್, ನವೀನ್ ಕುಮಾರ್ ಹಾಗೂ ಪ್ರವೀಣ್ ಕುಮಾರ್ ಹಾಗೂ ಇತರರು ವಾಸವಾಗಿದ್ದ ಬಾಡಿಗೆ ಮನೆ ಎಸಿಬಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇನ್ಸ್‌ಪೆಕ್ಟರ್‌ವೊಬ್ಬರಿಗೆ ಸೇರಿದ್ದಾಗಿದ್ದು, ಮನೆ ಆವರ ಪತ್ನಿ ಹೆಸರಿನಲ್ಲಿದೆ. ಇದೇ ಮನೆಯಲ್ಲಿ ಕುಳಿತು ಆರೋಪಿಗಳು ಗೌರಿ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಸ್ಫೋಟಕ ಮಾಹಿತಿ ಲಭ್ಯವಾಗಿದೆ.
ಆದರೆ, ಮನೆ ಮಾಲೀಕ ಪೊಲೀಸ್ ಅಧಿಕಾರಿಗೂ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಇನ್ಸ್‌ಪೆಕ್ಟರ್‌ಗೂ ಆರೋಪಿಗಳ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಸಂಚಿನ ಬಗ್ಗೆಯೂ ತಿಳಿದಿಲ್ಲ ಎಂದು ಎಸ್‌ಐಟಿಯ ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಸಂಬಂಧ ಅಧಿಕಾರಿಯಿಂದ ಹೇಳಿಕೆ ಪಡೆದುಕೊಂಡಿದ್ದು, ಮನೆ ಪತ್ನಿ ಹೆಸರಿನಲ್ಲಿದೆ. ಅಲ್ಲದೆ, ಈ ಮನೆಗಳ ನಿರ್ವಹಣೆಯನ್ನು ಪತ್ನಿಯ ಸಂಬಂಧಿಕರಿಗೆ ವಹಿಸಲಾಗಿದೆ. ಅವರೇ ಬಾಡಿಗೆದಾರರ ಪೂರ್ವಪರ ವಿಚಾರಿಸಿ ಮನೆ ನೀಡುತ್ತಾರೆ. ಅಪರೂಪಕ್ಕೊಮ್ಮೆ ಮನೆಗಳ ಬಳಿ ಹೋಗಿ ಬರುತ್ತಿದ್ದೆ. ಹೀಗಾಗಿ ತನ್ನ ಮನೆಗಳಲ್ಲಿ ವಾಸವಿರುವ ವ್ಯಕ್ತಿಗಳ ಕುರಿತು ಸರಿಯಾದ ಮಾಹಿತಿಯಿಲ್ಲ ಎಂದು ಹೇಳಿರುವುದಾಗಿ ಎಸ್‌ಐಟಿ ಮೂಲಗಳು ತಿಳಿಸಿವೆ.
ಹತ್ಯೆಗೈದ ಬಳಿಕ 15 ದಿನ ವಾಸ
2017 ಸೆ.5ರ ರಾತ್ರಿ 8.30ರ ಸುಮಾರಿಗೆ ಪರಶುರಾಮ್ ವಾಗೊ¾àರೆ ಹಾಗೂ ಬೈಕ್ ಚಾಲಕ ಗಣೇಶ್ ಮಸ್ಕಿ ಗೌರಿಲಂಕೇಶ್‌ರನ್ನು ಹತ್ಯೆಗೈದು ಬಳಿಕ ನೇರವಾಗಿ ಸಿಗೇಹಳ್ಳಿಗೇಟ್ ಬಳಿಯ ಪೊಲೀಸಪ್ಪನ ಬಿಲ್ಡಿಂಡ್‌ನಲ್ಲಿರುವ ಬಾಡಿಗೆ ಮನೆಗೆ ಹೋಗಿದ್ದರು. ಮರು ದಿನ(ಸೆ.6) ಬೆಳಗ್ಗೆ 6.30ಕ್ಕೆ ವಾಗೊ¾àರೆ ರೈಲಿನಲ್ಲಿ ವಿಜಯಪುರಕ್ಕೆ ವಾಪಸ್ ಹೋಗಿದ್ದ. ಇನ್ನು ಅಮೋಲ್ ಕಾಳೆ ಮತ್ತು ಗಣೇಶ್ ಮಸ್ಕಿ ಹಾಗೂ ಇತರರು 15 ದಿನಗಳ ಕಾಲ ಇಲ್ಲಿಯೇ ವಾಸವಾಗಿದ್ದರು. ಪ್ರಕರಣದ ತೀವ್ರತೆ ಹೆಚ್ಚಾಗುತ್ತಿದ್ದಂತೆ ಆರೋಪಿಗಳು ಮನೆ ಖಾಲಿ ಮಾಡಿಕೊಂಡು ಪರಾರಿಯಾಗಿದ್ದರು. ಅನಂತರ ಕುಣಿಗಲ್ ಮೂಲದ ಸುರೇಶ್ ಬಂದು ವಾಸವಾಗಿದ್ದ. ಮತ್ತೂಂದು ಆಘಾತಕಾರಿ ಅಂಶವೆಂದರೆ ಸುರೇಶ್ ತನ್ನ ಹೆಸರಿನಲ್ಲಿ ಬಾಡಿಗೆ ಪಡೆದುಕೊಂಡು ಆರೋಪಿಗಳನ್ನು ಕರೆಸಿಕೊಂಡಿದ್ದ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.
ಪೊಲೀಸರಿಂದಲೇ ಉಲ್ಲಂಘನೆ
ಬೆಂಗಳೂರಿನಲ್ಲಿ ಮನೆಗಳ ಬಾಡಿಗೆ ನೀಡುವಾಗ ಬಾಡಿಗೆದಾರರ ಪೂರ್ವಾಪರ ವಿಚಾರಣೆ ನಡೆಸಬೇಕೆಂಬ ನಿಯಮವನ್ನು ಪೊಲೀಸ್ ಇಲಾಖೆಯೇ ಜಾರಿಗೆ ತಂದಿದೆ. ಆದರೆ, ಇದೀಗ ಪೊಲೀಸ್ ಅಧಿಕಾರಿಯೇ ತನ್ನ ಮನೆಯನ್ನು ಬಾಡಿಗೆ ನೀಡುವಾಗ ಪರಿಶೀಲಿಸದೆ ಹಾಗೂ ಸೂಕ್ತ ದಾಖಲೆಗಳನ್ನು ಪಡೆದುಕೊಳ್ಳದೆ ನಿಯಮ ಉಲ್ಲಂ ಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.