ಬೆಂಗಳೂರಲ್ಲಿ ಗೌರಿ ದಿನ ಆಚರಣೆ

Team Udayavani, Sep 6, 2018, 6:00 AM IST

180905kpn95.jpg

ಬೆಂಗಳೂರು:  ಪತ್ರಕರ್ತೆ ಮತ್ತು ಹೋರಾಟಗಾರ್ತಿ ಗೌರಿ ಲಂಕೇಶ ಹತ್ಯೆಗೆ ಒಂದು ವರ್ಷ ಸಂದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್‌ ಬಳಗ ಮತ್ತು ಗೌರಿ ಸ್ಮಾರಕ ಟ್ರಸ್ಟ್‌ ಬುಧವಾರ ನಗರದಲ್ಲಿ ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹ ಸಮಾರೋಪಗೊಂಡಿತು.

ಆಗಸ್ಟ್‌ 30ರಂದು ಆರಂಭವಾಗಿದ್ದ ಸಪ್ತಾಹ ಬುಧವಾರ ಸಮಾರೋಪಗೊಂಡಿದ್ದು, ಈ ಅಂಗವಾಗಿ ಗೌರಿ ಸಮಾಧಿ ಬಳಿ ಶ್ರದ್ಧಾಂಜಲಿ ಗಾಯನ, ಆನಂದ ರಾವ್‌ ವೃತ್ತದ ಗಾಂಧಿ ಪ್ರತಿಮೆ ಬಳಿಯಿಂದ ರಾಜಭವನ ಚಲೋ ಸಹ ನಡೆಸಿ ಗೌರಿ ಲಂಕೇಶ್‌ ಹತ್ಯೆ ರೀತಿಯಲ್ಲೆ ಕಲುºರ್ಗಿ ಮತ್ತು ದಾಬೋಲ್ಕರ್‌ ಸೇರಿದಂತೆ ಹಲವು ಪ್ರಗತಿಪರ ಹತ್ಯೆ ನಡೆದಿದ್ದು, ಈ ಪ್ರಕರಣಕ್ಕೂ ತಾರ್ಕಿಕ ಅಂತ್ಯ ಹಾಡುವಂತೆ ಒಕ್ಕೂರಲಿನ ಆಗ್ರಹ  ಮಾಡಿದರು.

ನಂತರ  ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶದಲ್ಲಿ ಮಾತನಾಡಿದ ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ, ದೇಶದಲ್ಲಿ ದಲಿತ, ಆದಿವಾಸಿಗರ ಪರ ಹೋರಾಟ ನಡೆಸಿದವರ ಧ್ವನಿ ಅಡಗಿಸುವ ಟ್ಟಹಾಕುವ ಕೆಲಸ ಆಗುತ್ತಿದೆ. ಸಾಮಾಜಿಕ ಹಾಗೂ ಪ್ರಗತಿಪರ ಚಿಂತಕರಿಗೆ ನಗರ ನಕ್ಸಲ್‌ ಪಟ್ಟಕಟ್ಟಲಾಗುತ್ತದೆ ಎಂದು  ಆರೋಪಿಸಿದರು.

ಕಾನೂನನ್ನು ಗೌರವಿಸದೇ ಅಂಬೇಡ್ಕರ್‌ವಾದಿಗಳನ್ನು ಬಂಧಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೇಶದಾದ್ಯಂತ ಪ್ರವಾಸ ಮಾಡಿ ಜನರನ್ನು ಎಚ್ಚರಿಸುವುದಾಗಿ ಅವರು ಹೇಳಿದರು.

ದೇಶ ಹಲವು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕನ್ನಡಿಗರು ಇದಕ್ಕೆ ತಕ್ಕ ಉತ್ತರ ನೀಡಿದ್ದಾರೆ. ಕನ್ನಡಿಗರ ಈ ಹೋರಾಟಕ್ಕೆ ಧನ್ಯವಾದ ಹೇಳುತ್ತೇನೆ. ಕೆಚ್ಚದೆಯ ಈ ಹೋರಾಟಗಳು ಹೀಗೆ ಮುಂದುವರಿಯಲಿ ಆಶಿಸಿದರು.

ಸ್ವಾಮಿ ಅಗ್ನಿವೇಶ್‌ ಮಾತನಾಡಿ, ಕೇಂದ್ರದಲ್ಲಿ ಕಾರ್ಪೋರೆಟರ್‌ ಅಜೆಂಡಾ ಹೊಂದಿರುವ ಸರ್ಕಾರವಿದ್ದು, ಉದ್ಯಮಿಗಳ ಹಿತರಕ್ಷಣೆಯಲ್ಲಿ ತೊಡಗಿದೆ. ಈ ಸರ್ಕಾರಕ್ಕೆ ದೇಶದ ರೈತರ, ಯುವಕರ ಮತ್ತು ಆದಿವಾಸಿಗಳ ಸಮಸ್ಯೆ ಬೇಕಾಗಿಲ್ಲ, ಬರೀ ಸುಳ್ಳಿನ ಭರವಸೆ ನೀಡಿ ಜನರ ದಿಕ್ಕು ತಪ್ಪಿಸುವುದರಲ್ಲೇ ಕಾಲಕಳೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸೂಚನೆ ಮೆರೆಗೆ ನನ್ನ ಮೇಲೆ ಪದೇ ಪದೇ ನಡೆಯುತ್ತಿದೆ. ಈ ಹಿನ್ನೆಲೆಯಲ್ಲೇ ಹಲ್ಲೆಕೋರರ ಬಂಧನ ಇನ್ನೂ ಆಗಿಲ್ಲ ಎಂದು ದೂರಿದರು.

ಸಾಹಿತಿ ಚಂದ್ರಶೇಖರ ಪಾಟೀಲ್‌ ಮಾತನಾಡಿ ಮೂಲಭೂತವಾದ ಸಿದ್ಧಾಂತ ದೇಶಕ್ಕೆ ಅಪಾಯಕಾರಿ. ಇದರ ವಿರುದ್ಧ ಹೋರಾಟ ನಡೆಸುವ ಅಗತ್ಯವಿದ್ದು, ಇದಕ್ಕೆ ಲೇಖನಿ ಹಾಗೂ ಚಳವಳಿಗಳ ಮೂಲಕ ತಕ್ಕ ಉತ್ತರ ನೀಡಬೇಕು ಎಂದು ಹೇಳಿದರು.

ಹಿರಿಯ ಸ್ವಾತಂತ್ರ ಹೋರಾಟಗಾರ ದೊರೆಸ್ವಾಮಿ, ನಾಟಕಕಾರ ಗಿರೀಶ್‌ ಕರ್ನಾಡ್‌ , ಚಂದ್ರಶೇಖರ ಪಾಟೀಲ್‌, ನರೇಂದ್ರ ನಾಯಕ್‌, ಕವಿತಾ ಲಂಕೇಶ್‌, ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ, ಕನ್ಹಯ್ಯ ಕುಮಾರ್‌, ಸ್ವಾಮಿ ಅಗ್ನಿವೇಶ್‌, ದೇಸಿ ಪ್ರಸನ್ನ, ಎ.ಕೆ.ಸುಬ್ಬಯ್ಯ, ಚಿತ್ರ ನಟ ಪ್ರಕಾಶ್‌ರೈ ಸೇರಿದಂತೆ ಹಲವು ಗಣ್ಯರ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಎಲ್ಲರೂ ಗೌರಿ ಸ್ಮರಣೆ ಮಾಡಿದರು.

ನಾನು ನಗರ ನಕ್ಸಲಿಗ!
ಸಮಾವೇಶದಲ್ಲಿ ಕೇಂದ್ರಬಿಂದುವಾಗಿದು,ª ನಾಟಕಕಾರ ಗಿರೀಶ್‌ ಕರ್ನಾಡ್‌. ಕೊರಳಿಗೆ “ನಾನು ನಗರ ನಕ್ಸಲೀಗ’,ಎಂಬ ಅಡಿ ಬರವುಳ್ಳ ಬಿತ್ತಿ ಪತ್ರವನ್ನು ನೇತಾಕಿಕೊಂಡು ಬಂದಿದ್ದ ಕರ್ನಾಡ್‌ ಅವರನ್ನು ಎಲ್ಲರೂ ತದೇಕ ಚಿತ್ತದಿಂದ ನೋಡುತ್ತಿದ್ದ ದೃಶ್ಯ ಕಂಡು ಬಂತು. ಈ ವೇಳೆ ಮಾತನಾಡಿದ ಗಿರೀಶ್‌ ಕರ್ನಾಡ್‌, ಹಲವರ ವಿರುದ್ಧ ದೂರು ದಾಖಲಾಗುತ್ತಿರುವ ಈ ವೇಳೆ ಗೌರಿ ದಿನ ಹಮ್ಮಿಕೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗಳ ದತ್ತು.

“ಜಸ್ಟ್‌ ಆಕ್ಸಿಂಗ್‌ ತಂಡ’, ಮುಂದಿನ ದಿನಗಳಲ್ಲಿ ಸಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲಿದೆ.ರಾಜ್ಯದಾದ್ಯಂತ ಹತ್ತು ಶಾಲೆಗಳನ್ನು ದತ್ತು ಪಡೆದು ಅವುಗಳಿಗೆ ಮರುಜೀವ ನೀಡಲು ನಿರ್ಧರಿಸಿದೆ. ಗುಜರಾತ್‌ನಲ್ಲೂ ಒಂದು ಶಾಲೆಯನ್ನು ದತ್ತು ಪಡೆದು  ಜಸ್ಟ್‌ ಆಕ್ಸಿಂಗ್‌ ತಂಡ ತಾನೇನು ಎಂಬುವುದನ್ನು ತೋರಿಸಲಿದೆ ಎಂದು ಚಿತ್ರ ನಟ ಪ್ರಕಾಶ್‌ ರೈ ಹೇಳಿದರು.

ಟಾಪ್ ನ್ಯೂಸ್

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Sureje-CM-DCM

ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್‌ ಹೈಕಮಾಂಡ್‌ ತಾಕೀತು

Election-Com-State-Chief

Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

KPCC-Ministers-Report

Congress Session: ಸಚಿವರ ಸುಧಾರಣೆಗೆ ಎರಡು ತಿಂಗಳ ಗಡುವು

State-Contracters-Associ

Contractors Association: ಬಾಕಿ ಪಾವತಿಗೆ ಸರಕಾರಕ್ಕೆ ಗುತ್ತಿಗೆದಾರರಿಂದ ಪತ್ರ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Bengaluru: ಕರ್ತವ್ಯಕ್ಕೆ ತನ್ನ ಬದಲಿಗೆ ಮಗನನ್ನು ಕಳುಹಿಸಿದ ಮಹಿಳಾ ನೌಕರೆ ಅಮಾನತು

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Belagavi: ಲಕ್ಷ್ಮೀ ಹೆಬ್ಬಾಳಕರ್ ಕಾರು ಅಪಘಾತ; ಆಸ್ಪತ್ರೆಗೆ ದಾಖಲಾದ ಸಚಿವೆ

Frud

Bengaluru: 2 ಕೋಟಿ ರೂ. ಹೂಡಿದರೆ 1 ದಿನದಲ್ಲಿ 3.5 ಕೋಟಿ ಕೊಡುವುದಾಗಿ ವಂಚನೆ!

Ashok-haranahalli

Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್‌ ಹಾರನಹಳ್ಳಿ

Ranadeep-Surgewala

Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.