ಫೇಸ್‌ಬುಕ್, ವಾಟ್ಸ್‌ಆ್ಯಪ್ ಪ್ರೋಫೈಲ್ ಪಿಕ್ಚರ್‌ನಲ್ಲಿ ಗೌರಿ
Team Udayavani, Sep 7, 2017, 11:44 AM IST
ಬೆಂಗಳೂರು: ಮಂಗಳವಾರ ರಾತ್ರಿ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರವೂ ಪರ ಹಾಗೂ ವಿರೋಧ ಚರ್ಚೆಗಳು ನಡೆದಿತ್ತು. ಬಹುತೇಕರ ಫೇಸ್‌ಬುಕ್, ವಾಟ್ಸ್ ಆ್ಯಪ್‌ಗ್ಳ ಪ್ರೋಫೈಲ್ ಚಿತ್ರಗಳು, ಡಿಪಿಗಳು ಗೌರಿ ಲಂಕೇಶ್ ಅವರ ಚಿತ್ರದ ಮೂಲಕ ರಾರಾಜಿಸುತ್ತಿದ್ದವು.
ಗೌರಿ ಲಂಕೇಶ್ ಅವರ ಹತ್ಯೆಯನ್ನು ಸಮರ್ಥಿಸಿಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದವರನ್ನು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ಗಳಲ್ಲಿ ಅವರ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡರು. ಜತೆಗೆ ಗೌರಿ ಲಂಕೇಶ್ ಅವರ ಬಗ್ಗೆ ಅತ್ಯಂತ ಕೆಟ್ಟದಾಗಿ ಹೇಳಿಕೆಗಳನ್ನು ಹಾಕಿದ ಮಧುಕರ ಆರ್ ಮಯ್ಯ ಎಂಬುವವರನ್ನು ತೀರ್ಥಹಳ್ಳಿಯಲ್ಲಿ ಬಂಧಿಸಲಾಗಿದೆ.
ಇದರೊಂದಿಗೆ ಅವಹೇಳನಕಾರಿ ಹೇಳಿಕೆಯನ್ನು ಲೈಕ್ ಮಾಡಿದ ಸಂದೇಶ್ ಎಂಬುವವರುನ್ನು ಚಿಕ್ಕಮಗಳೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮಧುಕರ ಆರ್ ಮಯ್ಯ ಅವರು, “ನೋ ಚಿಯರ್ಸ್ ನೋ ಟಿಯರ್ಸ್” ಅವರು ಸತ್ತಳು ಅಷ್ಟೇ ಎಂದು ಪೋಸ್ಟ್ ಮಾಡಿದ್ದರು.
ಗೌರಿ ಅವರ ಹತ್ಯೆಯಿಂದಾಗಿ ಸಾಮಾಜಿಕ ಜಾಲತಾಣಗಳು ಎಡ-ಬಲ ವಿಚಾರಧಾರೆಗಳ ಚರ್ಚೆಯ ಮೂಸೆಯಾಗಿ ಮಾರ್ಪಟ್ಟಿವೆ. ಸಿದ್ಧಾಂತಗಳನ್ನೂ ಮೀರಿ ಬಹುತೇಕರು ಗೌರಿ ಅವರ ಹತ್ಯೆಯನ್ನು ಖಂಡಿಸಿರುವುದು ಜಾಲತಾಣಗಳಲ್ಲಿ ಕಂಡುಬಂತು. ಇನ್ನೊಂಡೆ “ನಾನುಗೌರಿ’ ಎಂಬ ಆ್ಯಶ್ ಟ್ಯಾಕ್‌ನಡಿ ಚರ್ಚೆಗಳು ನಡೆದವು. ಅಪರಾಧಿಗಳನ್ನು ಕೂಡಲೇ ಬಂಧಿಸಬೇಕು ಎಂಬ ಒತ್ತಾಯಗಳು, ಆಗ್ರಹಗಳುಳ್ಳ ಪೋಸ್ಟರ್‌ಗಳು ಹೆಚ್ಚಾಗಿ ಕಾಣಿಸಿಕೊಂಡವು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವವರು ತಮ್ಮದೇ ಅಭಿಪ್ರಾಯಗಳನ್ನು ಹಂಚಿಕೊಂಡರು. ಹಲವರು ತಮ್ಮ ಫೇಸ್‌ಬುಕ್, ವಾಟ್ಸ್ ಆ್ಯಪ್‌ನ ಪ್ರೋಫೈಲ್ ಮತ್ತು ಡಿಪಿಗೆ ಗೌರಿ ಲಂಕೇಶ್ ಅವರ ಚಿತ್ರ ಹಾಕುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದರು. ಇನ್ನೊಂದೆಡೆ ಗೌರಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲೆಂದೇ ವಾಟ್ಸ್ ಆಪ್ ಗ್ರೂಪ್‌ಗ್ಳು ರಚನೆಗೊಂಡಿದ್ದವು. ಗ್ರೂಪ್‌ಗೆ ಆಹ್ವಾನಿಸುವ ಲಿಂಕ್‌ಗಳು ಹಲವು ಗ್ರೂಪ್‌ಗ್ಳಲ್ಲಿ ಹರಿದಾಡುತ್ತಿದ್ದವು.
ಗೌರಿ ಲಂಕೇಶ್ ಅವರು ಪತ್ರಕರ್ತರರಾಗಿದ್ದು, ಅವರ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಹುನ್ನಾರ ಎಂದು ಬಹುತೇಕ ಬರಹಗಾರರು, ಪತ್ರಕರ್ತರು ಸ್ಟೇಟಸ್ ಅಪ್‌ಡೇಟ್ ಮಾಡಿದ್ದರು. ” ವ್ಯಕ್ತಿಯನ್ನು ಕೊಲ್ಲಬಹುದೇ ವಿನಾ ಅವರ ವಿಚಾರಧಾರೆಗಳನ್ನು ಕೊಲ್ಲಲು ಸಾಧ್ಯವಿಲ್ಲ’ ಎಂಬ ಒಕ್ಕೊರಲ ಅಭಿಪ್ರಾಯ ಸಾಮಾನ್ಯವೆಂಬಂತೆ ಕಾಣುತ್ತಿತ್ತು.
ಇದರ ನಡುವೆಯೂ ಕೆಲ ಕಿಡಿಗೇಡಿಗಳು ಗೌರಿ ಅವರ ಹತ್ಯೆಯನ್ನು ಸಂಭ್ರಮಿಸುವ ರೀತಿಯಲ್ಲಿ ಸ್ಟೇಟಸ್, ಕಮೆಂಟ್‌ಗಳನ್ನು ನೀಡಿದ್ದೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಬಿಂಬಿಸುತ್ತಿತ್ತು. ಅಂಥವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದೂ ಕಂಡು ಬಂದಿತು. ಗೌರಿ ಅವರ ಅವರ ಹತ್ಯೆ ಕುರಿತ ಪೋಸ್ಟರ್‌ಗಳು, ಸ್ಟೇಟಸ್‌ಗಳು, ಅವರ ಚಿತ್ರಗಳು ಸಾಕಷ್ಟು ಸ್ಪಂದನೆಗೆ ಓಳಗಾದವು. ಚರ್ಚೆಗೆ ನಾಂದಿ ಹಾಡಿದವು.
ಅಮೆರಿಕಾ ರಾಯಭಾರ ಕಚೇರಿ ಖಂಡನೆ
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಬೆಂಬಲಿಸುತ್ತಲೇ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ತೀವ್ರವಾಗಿ ಖಂಡಿಸಲಾಗುವುದು ಹಾಗೂ ಅವರ ಕುಟುಂಬದವರು, ಸ್ನೇಹಿತರು ಹಾಗೂ ಅವರ ಸಹುದ್ಯೋಗಿಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಭಾರತದ ಅಮೆರಿಕಾ ರಾಯಭಾರ ಕಚೇರಿ ಸಂತಾಪ ಸೂಚಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Bengaluru: ಪಾಲುದಾರನ ಕಿರುಕುಳ: ಉದ್ಯಮಿ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಸಂಘ: ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.