ಗವಿಗಂಗಾಧರೇಶ್ವರನನ್ನು ಸ್ಪರ್ಶಿಸದ ಸೂರ್ಯ ರಶ್ಮಿ; ಸಹಸ್ರಾರು ಭಕ್ತರಿಗೆ ನಿರಾಸೆ
Team Udayavani, Jan 14, 2021, 7:11 PM IST
ಬೆಂಗಳೂರು: ಬೆಂಗಳೂರಿನ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಇಂದು ಬೆಳಕಿನ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಭಕ್ತರಿಗೆ ನಿರಾಸೆಯಾಗಿದೆ. ಆಗಸದಲ್ಲಿ ಮೋಡ ಅಡ್ಡ ಬಂದ ಹಿನ್ನಲೆಯಲ್ಲಿ ಐತಿಹಾಸ ಪ್ರಸಿದ್ದ ಗವಿ ಗಂಗಾಧರೇಶ್ವರನನ್ನು ಸೂರ್ಯನ ರಶ್ಮಿ ಸ್ಪರ್ಶಿಸಿದೆ ಪಥ ಬದಲಾಯಿಸಿದ್ದಾನೆ.
ಸೂರ್ಯ ದಕ್ಷಿಣಾಯ ಪಥ ಮುಗಿಸಿ ಉತ್ತರಾಯಣಕ್ಕೆ ಸಾಗುವ ವೇಳೆ ಗವಿಗಂಗಾಧರೇಶ್ವರ ದೇಗುಲದ ಶಿವಲಿಂಗವನ್ನು ಸ್ಪರ್ಶಿಸಬೇಕಿತ್ತು. ಆದರೆ, ಶಿವಲಿಂಗವನ್ನು ಸ್ಪರ್ಶಿಸಿದೆ ಭಾಸ್ಕರ ಪಥ ಬದಲಾಯಿಸಿದ್ದಾನೆ. ಆ ಮೂಲಕ ಅಗೋಚರವಾಗಿಯೇ ಗವಿಗಂಗಾಧರನನ್ನು ಭಾಸ್ಕರ ಸ್ಪರ್ಶಿಸಿದ್ದಾನೆ.
ಇದನ್ನೂ ಓದಿ: 70ರ ಅಜ್ಜಿಗೆ ಪೊಂಗಲ್ ಗಿಫ್ಟ್ ಕೊಡಿಸಿದ ಅವಳಿ ಸಹೋದದರು! ಬಾಲಕರ ಕಾರ್ಯಕ್ಕೆ ಶ್ಲಾಘನೆ
ಪ್ರತಿ ಸಂಕ್ರಾಂತಿಯಂದು ಈ ದೇಗುಲದ ಶಿವಲಿಂಗದ ಮೇಲೆ ಸೂರ್ಯರಶ್ಮಿ ಅಭಿಷೇಕವಾಗುತ್ತಿತ್ತು. ಈ ಬಾರಿ ಸಂಜೆ 5:27ಕ್ಕೆ ಸೂರ್ಯರಶ್ಮಿ ಶಿವಲಿಂಗವನ್ನು ಸ್ಪರ್ಶಿಸಲಿದೆ ಎಂದು ಸಹಸ್ರಾರು ಭಕ್ತರು ಕಾಯುತ್ತಲಿದ್ದರು. ಆದರೆ ಮೋಡ ಅಡ್ಡ ಬಂದ ಕಾರಣ ಸೂರ್ಯ ಶಿವಲಿಂಗವನ್ನು ಸ್ಪರ್ಶಿಸದೆ ಪಥ ಬದಲಿಸಿದ್ದಾನೆ.
ಆಗಸದಲ್ಲಿ ಮೋಡ ಅಡ್ಡ ಬಂದ ಹಿನ್ನಲೆಯಲ್ಲಿ ಐತಿಹಾಸ ಪ್ರಸಿದ್ದ ಗವಿ ಗಂಗಾಧರೇಶ್ವರನನ್ನು ಸೂರ್ಯನ ರಶ್ಮಿ ಸ್ಪರ್ಶಿಸಲು ಸಾಧ್ಯವಾಗಿಲ್ಲ ಎಂದು ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಆರ್ಚಕ ಸೋಮಸುಂದರ ದೀಕ್ಷಿತ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನ: ವಿಸ್ಮಯ ಕಣ್ತುಂಬಿಕೊಂಡ ಭಕ್ತರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Naxal Activity: ರಾಜ್ಯದಲ್ಲಿ ನಕ್ಸಲ್ ಚಳವಳಿ ಅಂತ್ಯಗೊಂಡೀತೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.