ಗೋ ಸಂರಕ್ಷಣೆಗೆ ಸಜ್ಜನರು ಮೌನ ಮುರಿಯಬೇಕು

Team Udayavani, Jul 17, 2017, 11:50 AM IST

raghaveshwara.jpg

ಬೆಂಗಳೂರು: ದೇಶ ಹಾಳಾಗಲು ಸಜ್ಜನರ ಮೌನ ಕಾರಣ. ಗೋ ಸಂರಕ್ಷಣೆಗೆ ಈ ಮೌನ ಮುರಿಯಬೇಕಿದೆ ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.

ಮಠದ ವತಿಯಿಂದ ಆರಂಭಿಸಿರುವ  ಗೋ “ಅಭಯಾಕ್ಷರ’ ಅಭಿಯಾನದ ಅಂಗವಾಗಿ ಭಾನುವಾರ ರಾಜಾಜಿನಗರದ ರಾಮಮಂದಿರಲ್ಲಿ ನಡೆದ “ಅಭಯಾಕ್ಷರ – ಹಾಲು ಹಬ್ಬ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇಶದ ಶೇ. 99 ಮಂದಿ  ಗೋ ಸಂತತಿ ಉಳಿಯಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ, ಆ ಕುರಿತು ಜನಾಭಿಪ್ರಾಯ ರೂಪುಗೊಳ್ಳುತ್ತಿಲ್ಲ. ಹೀಗಾಗಿ ಗೋ ಉಳಿಯುವಿಕೆಯ ಜನರ ಭಾವನೆಗಳನ್ನು ದಾಖಲೆಯ ರೂಪದಲ್ಲಿ ಸಂಗ್ರಹಿಸಲು “ಅಭಯಾಕ್ಷರ’ ಆಂದೋಲನ ನಡೆಸಲಾಗುತ್ತಿದೆ ಎಂದರು. 

ಬೇಲಿಮಠದ ಶಿವರುದ್ರ ಮಹಾಸ್ವಾಮೀಜಿ ಮಾತನಾಡಿ, ಗೋವಿನ ಸಗಣಿ ಹಾಗೂ ಗಂಜಲ ಅತ್ಯಂತ ಮಹತ್ವ ಪೂರ್ಣವಾಗಿದೆ. ಬ್ರಿಟೀಷರ ಆಳ್ವಿಕೆಯಲ್ಲಿ ನಾಡಿನಾದ್ಯಂತ ಪ್ಲೇಗ್‌ ಉಲ್ಬಣಗೊಂಡಿದ್ದಾಗ, ನಡೆಸಿದ ಸಮೀಕ್ಷೆಯಲ್ಲಿ ಗೋವುಗಳಿದ್ದ ಮನೆಗಳಲ್ಲಿ ಪ್ಲೇಗ್‌ ಇಲ್ಲದಿರುವ ಸಂಗತಿ ಬೆಳಕಿಗೆ ಬಂದಿತ್ತು. ಗೋವಿನಲ್ಲಿ ಎಲ್ಲಾ ಸಮಸ್ಯೆಗೂ ಪರಿಹಾರವಿದೆ ಎಂಬುದು ಇದರಿಂದ ಸಾಬೀತಾಗುತ್ತದೆ. ಈ ನಿಟ್ಟಿನಲ್ಲಿ ಅಭಯಾಕ್ಷರ ಅಭಿಯಾನ ಉತ್ತಮ ಪ್ರತಿಫ‌ಲ ನೀಡಲಿ ಎಂದು ಹಾರೈಸಿದರು.

ಶಾಸಕ ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ಗೋಸಂರಕ್ಷಣೆಗಾಗಿ “ಅಭಯಾಕ್ಷರ’ ಅಭಿಯಾನದ ಮೂಲಕ ಮೌನಕ್ರಾಂತಿ ಆರಂಭವಾಗಿದೆ. ಗೋವನ್ನು ಕೇವಲ ಪೂಜಿಸುವುದಲ್ಲ, ಸಂರಕ್ಷಣೆಗೂ ನಾವು ಬದ್ಧರಾಗಬೇಕು. ಗೋಮಾಂಸ ಭಕ್ಷಣೆಯನ್ನು ವೈಭವೀಕರಿಸುವ ವಿಕೃತ ಮನಸ್ಸುಗಳಿಗೆ ಸಮರ್ಪಕ ಸಾತ್ವಿಕ ಉತ್ತರ ಈ ಹಾಲುಹಬ್ಬವಾಗಿದೆ. ಈ ಅಭಿಯಾನಕ್ಕೆ ರಾಜಾಜಿನಗರ ವ್ಯಾಪ್ತಿಯಲ್ಲಿ ನಾವೆಲ್ಲ ಸೇರಿ ಕನಿಷ್ಠ 3 ಲಕ್ಷ ಅಭಯಾಕ್ಷರವನ್ನು ಸಂಗ್ರಹಿಸುವ ಗುರಿ  ಹೊಂದಿದ್ದೇವೆ ಎಂದರು. 

ಸಿದ್ಧಾರೂಢ ಮಿಷನ್ನಿನ ಶ್ರೀ ಆರೂಢಭಾರತೀ ಸ್ವಾಮಿಜಿ, ಶ್ರೀಘನಲಿಂಗ ಸ್ವಾಮಿಜಿ, ಸಿದ್ಧಾರೂಢ ಮಠ ಹಾಗೂ ವನಸಿರಿ ಆಶ್ರಮದ ಶಂಕರಗುರೂಜಿ, ಪಾಲಿಕೆ ಸದಸ್ಯೆ ರೂಪಾ ನಾಗೇಶ್‌, ಸಾಮಾಜಿಕ ಕಾರ್ಯಕರ್ತರಾದ ಲಕ್ಷಿನಾರಾಯಣ, ನಟರಾದ ರೇಣುಕಾ ಸೇರಿದಂತೆ ಅನೇಕ ಗಣ್ಯರು, ಸಾರ್ವಜನಿಕರು ಅಭಯಾಕ್ಷರ ಅಭಿಯಾನಕ್ಕೆ ಬೆಂಬಲ ಸೂಚಿಸಿದರು.

ಗೋ ಸಂರಕ್ಷಣೆಗೆ ಬಿಬಿಎಂಪಿಯಿಂದ ಬೆಂಬಲ
ಗೋ ಪೂಜೆ ಮಾಡುವ ಮೂಲಕ ಅಭಯಾಕ್ಷರಕ್ಕೆ ಚಾಲನೆ ನೀಡಿದ ಬಿಬಿಎಂಪಿ ಮೇಯರ್‌ ಜಿ.ಪದ್ಮಾವತಿ ಮಾತನಾಡಿ, “ಗೋ ಸಂರಕ್ಷಣೆಗೆ ಜನಾಭಿಪ್ರಾಯ ರೂಪಿಸಲು ರಾಮಚಂದ್ರಾಪುರ ಮಠ ನಡೆಸುತ್ತಿರುವ ಗೋ “ಅಭಯಾಕ್ಷರ’ ಅಭಿಯಾನಕ್ಕೆ ಬಿಬಿಎಂಪಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

ಗೋವು ಹಾಲನ್ನು ಕೊಡುವಾಗ ಯಾವ ಜಾತಿ, ಯಾವ ಪಕ್ಷ ಎಂದು ನೋಡುವುದಿಲ್ಲ. ಗೋವು ಪಕ್ಷ – ಪಂಗಡಗಳನ್ನು ಮೀರಿದ್ದಾಗಿದೆ. ಹೀಗಾಗಿ ರಾಘವೇಶ್ವರ ಸ್ವಾಮೀಜಿಯವರು ಗೋವಿನ ವಿಷಯದಲ್ಲಿ ಮಾಡುತ್ತಿರುವ ಅಭಿಯಾನ ನಿಜಕ್ಕೂ ಶ್ಲಾಘನೀಯ.  ಗೋಸೇವೆಯ ಈ ಅಭಿಯಾನಕ್ಕೆ  ಬಿಬಿಎಂಪಿಯ 198 ಸದಸ್ಯರು ಕೈಜೋಡಿಸಲಿದ್ದೇವೆ ಎಂದರು.

ಟಾಪ್ ನ್ಯೂಸ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Kashmir: 300 ಅಡಿ ಕಮರಿಗೆ ಸೇನಾ ವಾಹನ ಬಿದ್ದು 5 ಯೋಧರ ಸಾವು; ಹಲವರಿಗೆ ಗಾಯ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

Catholic ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಭಾಗಿ: ಕೇರಳದ ಬಿಷಪ್‌ ತರಾಟೆ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

England; ಬೆನ್‌ ಸ್ಟೋಕ್ಸ್‌ಗೆ ಗಾಯ: ಚಾಂಪಿಯನ್ಸ್‌ ಟ್ರೋಫಿಗೆ ಅಲಭ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

BBK11: ಬಿಗ್ ಬಾಸ್ ರೆಸಾರ್ಟ್ ನಲ್ಲಿ ಹೆಣ್ಮಕ್ಕಳ ಬಟ್ಟೆ ಒಗೆದ ರಜತ್ – ತ್ರಿವಿಕ್ರಮ್

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗದ್ಗೀತೆಯ ಪ್ರಸ್ತುತತೆ ವಿಶೇಷ ಸಂವಾದ

ಶ್ರೀಕೃಷ್ಣ ಮಠದಲ್ಲಿ ಡಿ.25ಕ್ಕೆ ನ್ಯಾಯಾಂಗದಲ್ಲಿ ಭಗವದ್ಗೀತೆ ಪ್ರಸ್ತುತತೆಯ ವಿಶೇಷ ಸಂವಾದ

Bhalla,-VK-Singh-Gov.

New Appointment: ಐದು ರಾಜ್ಯಗಳಿಗೆ ಹೊಸ ರಾಜ್ಯಪಾಲರ ನೇಮಿಸಿದ ಕೇಂದ್ರ ಸರ್ಕಾರ

CTRavi

Derogatory Remark: ಧರ್ಮಸ್ಥಳದಲ್ಲಿ ಆಣೆ, ಪ್ರಮಾಣ ಮುಗಿದ ಕತೆ: ಸಿ.ಟಿ.ರವಿ

ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ 10, ದೆಹಲಿಯಲ್ಲಿ 11 ಮಂದಿ ಸೆರೆ

Police: ಬಾಂಗ್ಲಾದಿಂದ ಅಕ್ರಮ ವಲಸೆ: ಮುಂಬೈಯಲ್ಲಿ10,ದೆಹಲಿಯಲ್ಲಿ11 ಮಂದಿ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.