ವೈದ್ಯ ಸೀಟು ಧಿಕ್ಕರಿಸಿದ ಹುಡುಗಿಗೆ ಚಿನ್ನ
Team Udayavani, Mar 26, 2019, 12:22 PM IST
ಬೆಂಗಳೂರು: ಆಕೆ ಮನಸ್ಸು ಮಾಡಿದ್ದರೆ ಕೊರಳಲ್ಲಿ ಸ್ಟೆತೆಸ್ಕೋಪ್ ಹಾಕಿಕೊಂಡು, ಜನರ ನಾಡಿಮಿಡಿತ ಪರೀಕ್ಷಿಸುವ ಡಾಕ್ಟರ್ ಆಗಬಹುದಿತ್ತು. ಆದರೆ, ಅವಳು ಆಯ್ಕೆ ಮಾಡಿಕೊಂಡಿದ್ದು ರೈತರ ಜೀವನಾಡಿ ಕೃಷಿ ಕಲಿಕೆಯನ್ನು.
ಪರಿಣಾಮ ಈಗ ಅದೇ ಕೊರಳಲ್ಲಿ ಚಿನ್ನದ ಪದಕಗಳ ಗೊಂಚಲು ಮಿನುಗುತ್ತಿವೆ. ಹೌದು, ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲೂಕಿನ ರೇಷ್ಮೆ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕೆ.ಸುಮಾ ದ್ವಿತೀಯ ಪಿಯುಸಿ ಮುಗಿಸಿಕೊಂಡು ವೈದ್ಯಕೀಯ ಪರೀಕ್ಷೆ ಬರೆದಿದ್ದರು. ಸೀಟು ಕೂಡ ಸಿಕ್ಕಿತ್ತು.
ಆದರೆ, ಅದನ್ನು ಧಿಕ್ಕರಿಸಿ ಬಿಎಸ್ಸಿ (ಕೃಷಿ) ಆಯ್ಕೆ ಮಾಡಿಕೊಂಡರು. ಈಗ ಇಡೀ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಆಕೆ “ಚಿನ್ನದ ಹುಡುಗಿ’. 53ನೇ ಘಟಿಕೋತ್ಸವದಲ್ಲಿ ಅತ್ಯಧಿಕ ಏಳು ಚಿನ್ನದ ಪದಕಗಳು ಹಾಗೂ ಐದು ಚಿನ್ನದ ಪದಕಗಳ ಪ್ರಮಾಣಪತ್ರ ಸುಮಾ ಬಾಚಿಕೊಂಡರು.
ನಂತರ “ಉದಯವಾಣಿ’ಯೊಂದಿಗೆ ಅನುಭವ ಹಂಚಿಕೊಂಡ ಅವರು, ಮೊದಲಿನಿಂದಲೂ ನನಗೆ ಕೃಷಿ ಬಗ್ಗೆ ಆಸಕ್ತಿ. ಇದಕ್ಕೆ ಸ್ವತಃ ತಂದೆ ಇದೇ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಯೋಗಾಲಯದ ಸಹಯಕರಾಗಿ ಕೆಲಸ ಮಾಡುತ್ತಿದ್ದು, ಬಿಎಸ್ಸಿ (ಕೃಷಿ) ಮಾಡಲು ತಂದೆ ಪ್ರಭಾವವೂ ಕಾರಣವಾಯಿತು.
ಹಾಗಾಗಿ, ವೈದ್ಯಕೀಯ ಸೀಟು ಸಿಕ್ಕರೂ ಅದನ್ನು ನಿರಾಕರಿಸಿದೆ. ರೈತರಿಗಾಗಿ ಏನಾದರೂ ಸೇವೆ ಮಾಡಬೇಕು ಎಂಬ ಆಸೆಯಿಂದ ಕೃಷಿಯನ್ನು ಆಯ್ಕೆ ಮಾಡಿಕೊಂಡೆ. ಆಸಕ್ತಿಯಿಂದ ಓದಿದ್ದರ ಪರಿಣಾಮ ಹೆಚ್ಚು ಚಿನ್ನದ ಪದಕಗಳು ಬಂದವು. “ಕೃಷ್ಣಪ್ಪ (ತಂದೆ)ನ ಮಗಳು ಏಳು ಚಿನ್ನದ ಪದಕ ಗಳಿಸಿದ್ದಾಳೆ’ ಎಂದು ಹೇಳುವಾಗ ಖುಷಿ ಆಗುತ್ತಿದೆ ಎಂದರು.
“ವರ್ಷದಿಂದ ವರ್ಷಕ್ಕೆ ಬರ ತೀವ್ರವಾಗಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಬರ ಸಹಿಷ್ಣುತೆ ಇರುವ ತಳಿಗಳನ್ನು ಕಂಡುಹಿಡಿದು, ರೈತರಿಗೆ ಪರಿಚಯಿಸುವುದು, ಕೃಷಿ ಎದುರಿಸುತ್ತಿರುವ ಅನೇಕ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರಗಳನ್ನು ಕಂಡುಕೊಳ್ಳುವುದು ನನ್ನ ಗುರಿ’ ಎಂದು ಹೇಳಿದರು.
ಆಕಸ್ಮಿಕ ಆಯ್ಕೆಗೆ ಆರು ಚಿನ್ನದ ಪದಕ!: ಅದೇ ರೀತಿ, ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ)ಯಲ್ಲಿ ಆರು ಚಿನ್ನದ ಪದಕ ಗಳಿಸಿದ ಬಿಬಿಎಂಪಿ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಅವರ ಪುತ್ರಿ ವೈ.ಎಲ್. ರಂಜಿತಾ, ಕೃಷಿ ಪದವಿ ಆಯ್ಕೆ ಮಾಡಿಕೊಂಡಿದ್ದು ಆಕಸ್ಮಿಕ. ಆದರೆ, ಅದರಲ್ಲೇ ಚಿನ್ನದ ಪದಕಗಳನ್ನು ಕೊಳ್ಳೆಹೊಡೆದಿದ್ದಾಳೆ.
“ಐಎಎಸ್ ಮಾಡಬೇಕೆಂಬ ಗುರಿ ಇತ್ತು. ಆದರೆ, ಅದಕ್ಕೊಂದು ಪದವಿ ಬೇಕಿತ್ತು. ಈ ಹಿನ್ನೆಲೆಯಲ್ಲಿ ಬಿಎಸ್ಸಿ (ಕೃಷಿ ಮಾರುಕಟ್ಟೆ ಮತ್ತು ಸಹಕಾರ) ಮಾಡಲು ನಿರ್ಧರಿಸಿದೆ. ಆಕಸ್ಮಿಕವಾಗಿ ಆಯ್ಕೆ ಮಾಡಿಕೊಂಡರೂ ಆಸಕ್ತಿಯಿಂದ ಓದಿದೆ. ಪರಿಣಾಮ ಆರು ಚಿನ್ನದ ಪದಕಗಳು ಬಂದವು.
ಈಗಲೂ ಐಎಎಸ್ ಆಗುವುದೇ ನನ್ನ ಗುರಿ. ಯಾಕೆಂದರೆ, ನೀತಿ-ನಿರೂಪಣೆಗಳ ರಚನೆಯಲ್ಲಿ ಇದು ಬಹುಮುಖ್ಯ ಪಾತ್ರ ವಹಿಸಲಿದೆ. ಆ ಮೂಲಕ ಕೃಷಿಗೆ ಪೂರಕವಾದ ನೀತಿಗಳನ್ನು ರೂಪಿಸಲು ನೆರವಾಗುತ್ತೇನೆ’ ಎಂದರು. ಇವರು ಬೆಂಗಳೂರು ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಆಗಿದ್ದಾರೆ.
ಬಿಎಸ್ಸಿ (ಕೃಷಿ)ಯಲ್ಲಿ ಆರು ಚಿನ್ನದ ಪದಕ ಗಳಿಸಿದ ಮಂಡ್ಯದ ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿ ಟಿ.ಡಿ.ಗೌಡ ಮಾತನಾಡಿ, “ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಇತ್ತು. ಹಾಗಾಗಿ, ಕೃಷಿಯನ್ನು ಆಯ್ಕೆ ಮಾಡಿಕೊಂಡೆ. ಒಳ್ಳೆಯ ಆಡಳಿತಗಾರ ಆಗಬೇಕು ಎನ್ನುವುದು ತಂದೆಯ ಆಸೆ. ಆ ನಿಟ್ಟಿನಲ್ಲಿ ನನ್ನ ಅಧ್ಯಯನ ನಡೆದಿದೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Bengaluru: ಶಾಸಕ ಮುನಿರತ್ನ ಕೇಸ್: ವಿಕಾಸಸೌಧದಲ್ಲಿ ಸ್ಥಳ ಮಹಜರು
Bengaluru: ಪಾನಮತ್ತ ವೈದ್ಯ, ನರ್ಸ್‌ನಿಂದ ರೋಗಿಗೆ ಬೇಕಾಬಿಟ್ಟಿ ಇಂಜೆಕ್ಷನ್ ?
Organ Donation; ಸಾವಿನ ನಂತರವೂ ನೆರವಾದ ಜೀವ: 5 ಜೀವ ಉಳಿಸಿದ ಅಂಗಾಂಗ ದಾನ
MUST WATCH
ಹೊಸ ಸೇರ್ಪಡೆ
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Hubli: ಪ್ರಿಯಾಂಕ್ ಖರ್ಗೆಗೆ ಎಫ್‌ಐಆರ್ ಹಾಕಿಸುವುದೇ ಕೆಲಸ: ತೇಜಸ್ವಿ ಸೂರ್ಯ
Bengaluru: ಮನೆಯ ಬಾಲ್ಕನಿಯಲ್ಲಿ ಗಿಡಗಳ ಮಧ್ಯೆ ಗಾಂಜಾ ಬೆಳೆದಿದ್ದ ದಂಪತಿ ಬಂಧನ
Karkala: ಸೆಲ್ಫಿ ಕಾರ್ನರ್ ಮಾಡಿದರೂ ತ್ಯಾಜ್ಯ ಎಸೆತ ನಿಂತಿಲ್ಲ!
Crime: ಸತ್ತಂತೆ ನಟಿಸಿ ಗುಂಡಿಯಿಂದ ಬದುಕಿ ಬಂದ ಬೆಂಗಳೂರಿನ ಯೋಗ ಶಿಕ್ಷಕಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.