ಗೋಲ್ಡನ್ ಸುರೇಶ್ ಹಂತಕರ ಬಂಧನ
Team Udayavani, May 13, 2017, 11:33 AM IST
ಬೆಂಗಳೂರು: ಉಡುಪಿಯ ಕೋಟೇಶ್ವರ ಮೂಲದ ರೌಡಿಶೀಟರ್ ಸುರೇಶ್ ಪೂಜಾರಿ ಅಲಿಯಾಸ್ ಗೋಲ್ಡನ್ ಸೂರಿಯ ಹಂತಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಬಿಳೇಕಳ್ಳಿಯ ರಾಕೇಶ್ ಮತ್ತು ಸುರೇಶ್ ಬಂಧಿತರು. ಮೃತ ಸುರೇಶ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದರು. ಆರೋಪಿಗಳಿಂದ ಸುರೇಶ್ 4 ಕೋಟಿ ರೂ. ಸಾಲ ಪಡೆದಿದ್ದ. ಬಳಿಕ ಹಣ ಹಿಂದಿರುಗಿಸಲು ನಿರಾಕರಿಸಿದ್ದ.
ಸಾಲ ಮರಳಿ ಕೇಳಿದ ಸ್ನೇಹಿತರ ಮೇಲೇ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಸ್ನೇಹಿತರು ಆತನನ್ನು ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಉಡುಪಿಯ ವಿವಿಧ ಠಾಣೆಗಳಲ್ಲಿ ಸೂರಿ ವಿರುದ್ಧ 18ಕ್ಕೂ ಹೆಚ್ಚು ಪ್ರಕರಣಗಳಿದ್ದು, ಹಲವರಿಂದ ಹಣ ಪಡೆದು ನಾಪತ್ತೆಯಾಗಿ ಬೆಂಗಳೂರಿಗೆ ಬಂದು ಅಪಾರ್ಟ್‌ಮೆಂಟ್ ಒಂದನ್ನು ಬಾಡಿಗೆ ಪಡೆದು ನೆಲೆಸಿದ್ದ.
ಇಲ್ಲಿಯೂ ಕೆಲ ರೌಡಿ ಶೀಟರ್‌ಗಳನ್ನು ಪರಿಚಯಿಸಿಕೊಂಡು ಬಡ್ಡಿ ವ್ಯಾವಹಾರ ನಡೆಸುತ್ತಿದ್ದ. ಪಡೆದ ಸಾಲವನ್ನು ಹಿಂದಿರುಗಿಸುವಂತೆ ಹೇಳಿದ್ದ ಸ್ನೇಹಿತರಿಗೆ ಪ್ರಾಣ ಬೆದರಿಕೆ ಹಾಕಿದ್ದ. ಇದರಿಂದ ಆಕ್ರೋಶಗೊಂಡಿದ್ದ ಆರೋಪಿಗಳು ಔತಣಕೂಟದ ನೆಪದಲ್ಲಿ ಮಂಗಳವಾರ ಸುರೇಶ ವಾಸವಿದ್ದ ಜಯನಗರದಲ್ಲಿರುವ ಅಪಾರ್ಟ್‌ಮೆಂಟ್‌ಗೆ ತೆರಳಿ ಹತ್ಯೆಗೈದಿದ್ದಾರೆ.
ನಿದ್ದೆ ಮಾತ್ರೆ ಹಾಕಿ ಕೊಲೆ: ಆರೋಪಿಗಳು ಸುರೇಶ್‌ಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿಕೊಟ್ಟಿದ್ದರು. ನಂತರ ಅತನ ಬಾಯಿಗೆ ಪ್ಲಾಸ್ಟರ್ ಹಾಕಿ, ಕತ್ತು ಸೀಳಿ ಕೊಲೆ ಮಾಡಿದ್ದರು. ನೆಲದ ಮೇಲೆ ಚೆಲ್ಲಿದ್ದ ರಕ್ತ ಸ್ವತ್ಛಗೊಳಿಸುವಷ್ಟರಲ್ಲಿ ಬೆಳಗಾಗಿತ್ತು. ಈ ವೇಳೆಯಲ್ಲಿ ಶವ ಸಾಗಿಸುವುದು ಕಷ್ಟ ಎಂದರಿತ ಆರೋಪಿಗಳು, ಶವವನ್ನು ಅಲ್ಲೇ ಬಿಟ್ಟು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.