![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 12, 2017, 11:25 PM IST
ಬೆಂಗಳೂರು: ಇತ್ತೀಚೆಗೆ ಹತ್ಯೆಯಾದ ಉಡುಪಿಯ ಕೋಟೇಶ್ವರ ಮೂಲದ ರೌಡಿಶೀಟರ್ ಸುರೇಶ್ ಪೂಜಾರಿ ಅಲಿಯಾಸ್ ಗೋಲ್ಡನ್ ಸೂರಿಯನ್ನು ಹತ್ಯೆಗೈದಿದ್ದ ಇಬ್ಬರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದು, ಇತರ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಬಿಳೇಕಳ್ಳಿಯ ರಾಕೇಶ್ ಮತ್ತು ಸುರೇಶ್ ಬಂಧಿತರು. ಮೃತ ಸುರೇಶ್ ಹಾಗೂ ಆರೋಪಿಗಳು ಸ್ನೇಹಿತರಾಗಿದ್ದು, ಆರೋಪಿಗಳಿಂದ ಸುರೇಶ್‌ಗೆ 4 ಕೋಟಿ ರೂ. ಸಾಲ ಪಡೆದಿದ್ದರು. ಬಳಿಕ ಹಣ ಹಿಂದಿರುಗಿಸಲು ಹಿಂದೇಟು ಹಾಕಿದ್ದು, ಸಾಲ ಕೇಳಿದ ಸ್ನೇಹಿತರ ಮೇಲೆಯೇ ಹಲ್ಲೆ ನಡೆಸಿದ್ದರು. ಇದರಿಂದ ಕೋಪಗೊಂಡು ಔತಣಕೂಟದ ನೆಪದಲ್ಲಿ ಮಂಗಳವಾರ ಮೃತ ಸುರೇಶ್‌ನ ಜಯನಗರ ಅಪಾರ್ಟ್‌ಮೆಂಟ್‌ಗೆ ಬಂದು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿದ್ದೆ ಮಾತ್ರೆ ಹಾಕಿ ಕೊಲೆ: ಆರೋಪಿಗಳು ಸುರೇಶ್‌ಗೆ ಮದ್ಯದಲ್ಲಿ ನಿದ್ದೆ ಮಾತ್ರೆ ಬೆರೆಸಿಕೊಟ್ಟಿದ್ದರು. ಬಳಿಕ ಕಂಠಪೂರ್ತಿ ಮದ್ಯ ಸೇವಿಸಿದ ಸುರೇಶ್‌ನ ಬಾಯಿಗೆ ಪ್ಲಾಸ್ಟರ್ ಹಾಕಿ ಉಸಿರುಗಟ್ಟಿಸಿ ಅನಂತರ ಕತ್ತು ಸೀಳಿ ಕೊಲೆ ಮಾಡಿದ್ದರು. ನೆಲದಲ್ಲಿ ಚೆಲ್ಲಿದ್ದ ರಕ್ತವನ್ನು ಸ್ವಚ್ಛ ಮಾಡುವ ವೇಳೆಗೆ ಬೆಳಿಗ್ಗೆ ಆಗಿದೆ. ಆ ಸಮಯದಲ್ಲಿ ಹೆಣವನ್ನು ಸಾಗಿಸುವುದು ಕಷ್ಟ ಎಂದು ತಿಳಿದು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
You seem to have an Ad Blocker on.
To continue reading, please turn it off or whitelist Udayavani.